PC: Prakash hegde |
ಹುಚ್ಚ ವೆಂಕಟ್ ವಿಷಯ ಅದಕ್ಕಿಂತ ಭಿನ್ನ ಆಗಲಿಲ್ಲ ಬಿಡಿ. ಆತನು ತಿಂದ- ಕುಡಿದ ಕಥೆಯಿಂದ ಹಲ್ಲುಜ್ಜುವ ತನಕ ಎಲ್ಲರ ಗಮನ ಸೆಳೆದು ಕೊನೆಗೆ ಮದುವೆ ಆಗಿರುವ ವಿಷಯದ ಮೂಲಕ ಕೆಳಗೆ ಬಿದ್ದದು ...!
ಆತನ ಬಗ್ಗೆ ಹೇಳಿದಷ್ಟು ಕಡಿಮೆ ಆಗದಂತಹ ಅಭಿಮಾನದ ಮಾತುಗಳು ಹುಟ್ಟಿದ್ದು ಸತ್ಯ. ಎಲ್ಲಾ ಸೋಶಿಯಲ್ ನೆಟ್ ವರ್ಕ್ ಗಳಲ್ಲೂ ಹುಚ್ಚನದ್ದೆ ಕಥೆ, ಅಷ್ಟೊಂದು ಪಾಪ್ಯುಲರ್ ಆಗಿತ್ತು ಆತನ ವರ್ತನೆ.
ಈ ಟೀವಿಯಲ್ಲಿ ಆತನ ಮದುವೆ ಸಂಗತಿ ಪ್ರಸಾರ ಆಗಿದ್ದು , ಅದಕ್ಕೂ ಮುನ್ನ ಆತನ ಮಾತಿಗೆ ಜನರ ಕೆಂಗಣ್ಣಿನ ಪರಿಣಾಮ ಇವೆಲ್ಲಾ ಆದ ಬಳಿಕ ಪೊಲೀಸ್ ಅದೂ ಇದು..ಕಥೆ ಇನ್ನು ಮುಂದುವರೆಯುತ್ತಲೇ ಇದೆ.
ಈ ಟೀವಿ ಕನ್ನಡ ವಾಹಿನಿಯಲ್ಲಿ ಒಂದು ಸಂಗತಿ ನನ್ನನ್ನು ಆಕರ್ಷಿಸಿತು. ಇತ್ತೀಚಿನ ಕೆಲವು ದಿನಗಳಿಂದ ನಮಗೆ ಆ ಚಾನೆಲ್ ಪ್ರಸಾರ ಆಗ್ತಾ ಇದೆ. ಸಂಜೆ ಐದು ಗಂಟೆಯ ಸುದ್ದಿ ಇರಬೇಕು , ಇಬ್ಬರು ಸುದ್ದಿಯನ್ನು ಓದುತ್ತಿದ್ದರು. ಇಷ್ಟ ಆಯ್ತು ಇಬ್ಬರು ಓದುವ ಆ ಅಂಶಕ್ಕೆ. ಅಂದರೆ ಒಬ್ಬರೇ ಸುದ್ದಿ ಓದಿದಾಗಲು ಇಷ್ಟವಾಗುತ್ತದೆ , ಅದೇರೀತಿ ಇಬ್ಬರು ಓದುವಾಗಲು ಸಹ ಇಷ್ಟವಾಗುತ್ತದೆ. ಸ್ಪೀಡ್ ನ್ಯೂಸ್ ಅಂತ ಓದುತ್ತಾರಲ್ಲ ಅದರಲ್ಲಿ ಮಾತ್ರ ಕೆಲವು ನ್ಯೂಸ್ ಗಳು ಏನು ಅಂತ ಅರ್ಥ ಆಗೋದೇ ಇಲ್ಲ ಬಿಡಿ.ಆ ವಿಷಯದಲ್ಲಿ ಉದಯ, ಚಂದನ ಬೆಟರ್ ಅಂತ ಅನ್ನಿಸುವುದುಂಟು. ಸುದ್ದಿ ಅಷ್ಟು ಹೊಸತು ಅಲ್ಲದೆ ಇದ್ರೂ ಓದುವ ಶೈಲಿ ..
ಪಬ್ಲಿಕ್ ಟೀವಿಯಲ್ಲಿ ರಂಗಣ್ಣನ ಮತ್ತು ಅವರ ಸಹೋದ್ಯೋಗಿ ಜೊತೆಯ ವಾರ್ತಾ ವಿಶ್ಲೇಷಣೆ ವಿಧಾನ ಇಷ್ಟವಾಗುವ ಒಂದು ಸಂಗತಿ. ದೃಶ್ಯ ಮಾಧ್ಯಮದಲ್ಲಿ ಯಾವುದೇ ಟ್ರೈನಿಂಗ್ ಇಲ್ಲದೆ ಈಗ ಮಾಸ್ಟರ್ ಆಗಿರುವ ರಂಗಣ್ಣ ಇಂತಹ ಅನೇಕ ವಿಷಯಗಳ ಮೂಲಕ ವಿಶೇಷ ಎಂದೆನ್ನಿಸುತ್ತಾರೆ.
ಆದರೆ ಹುಚ್ಚ ವೆಂಕಟ್ ವಿಷಯದಲ್ಲಿ ಅದ್ಯಾಕೆ ರಂಗಣ್ಣನ ಸಹೋದ್ಯೋಗಿಗಳು ಅಷ್ಟು ಒದ್ದಾಡಿದರು ಎನ್ನುವ ಸಂಗತಿ ಮಾತ್ರ ನನಗೆ ಮಾತ್ರವಲ್ಲ ಸಾಕಷ್ಟು ವೀಕ್ಷಕರಿಗೆ ಅರ್ಥ ಆಗಿಲ್ಲ.
No comments:
Post a Comment