Courtesy : Prakash Hegde |
Anger comes alone and takes away all our good qualities with unwanted & unruly words.
Patience too comes alone and brings all good qualities of us, depicting our civilisation.
@ K S Gurulingaswamy
ಮೇಲೆ ಹಾಕಿರುವ ಕೋಟ್ ನನ್ನ ಎಫ್ಬಿ ಮಿತ್ರರು, ಸತ್ಸಂಗ್ ಗುರು..ಅವರು ಪ್ರತಿದಿನ ಒಂದೊಂದು ಈ ರೀತಿಯ ಆಧ್ಯಾತ್ಮಿಕ ಸಂದೇಶಗಳನ್ನು ನೀಡ್ತಾ ಇರ್ತಾರೆ. ಬದುಕಿಗೆ ಸಂಪೂರ್ಣವಾಗಿ ಅಳವಡಿಸಿಕೊಳ್ಳ ಬಲ್ಲ, ಹಾಗೂ ಅದನ್ನು ಜೀವಾಳವನ್ನಾಗಿ ಮಾಡಿಕೊಂಡು ಗೆಲ್ಲಲು ಸಾಧನವಾಗುವ ಅತ್ಯುತ್ತಮ ಮಾತುಗಳು. ನನಗೆ ಸದ್ಗುರು ಜಗ್ಗಿ ವಾಸುದೇವ್ ಅವರ ಬರಹಗಳ ಬಗ್ಗೆ ಅತಿ ಹೆಚ್ಚಿನ ಇಷ್ಟ. ಅದ್ಭುತರೀತಿಯಲ್ಲಿ ಅವರು ಅನಲೈಸ್ ಮಾಡಿರುತ್ತಾರೆ. ಸಕತ್ ಸರಳ ಹಾಗೂ ಸಕತ್ ವಿಶೇಷವಾಗಿರುತ್ತದೆ .
ಈಗ ಈ ಸಂಗತಿ ಯಾಕೆ ಬಂತು ಅಂದ್ರೆ ಶನಿವಾರದಿಂದ ಹುಚ್ಚನ ಕಥೆಯನ್ನು ನಮ್ಮ ಕನ್ನಡ ಮಾಧ್ಯಮಿಗಳು ಪೈಪೋಟಿ ಮೇಲೆ ಹರಡುತ್ತಿದ್ದಾರೆ. ಹುಚ್ಚ ವೆಂಕಟ್ ಎನ್ನುವ ಮೆಂಟಲ್ ಮನುಷ್ಯನನ್ನು ಕೂರಿಸಿ ಆತನ ಬಳಿ ಮಾತನಾಡಿಸಿ ಆತನ ಹುಚ್ಚು ಕಲ್ಪನೆಗಳನ್ನು ವೀಕ್ಷಕರ ಮೆದುಳಿನ ತಳಕ್ಕೆ ದೂಕುವ ಪ್ರಯತ್ನದಲ್ಲಿ ನಿರತರಾಗಿದ್ದ ಮಾಧ್ಯಮಗಳ ಸಹನೆಗೆ ನಮಸ್ತೆ . ಆರಂಭದಲ್ಲಿ ಹುಚ್ಚ, ಆತನ ಸಹೋದರ , ಆತನ ಅಭಿಮಾನಿಗಳು ಎಲ್ಲರ ಜೊತೆ ಮಾತುಕತೆ ನಡೆಸಿದ ಟೀವಿ ನೈನ್ ಆಂಕರ್ ರಾಧಿಕ ಅವರ ಮಾತು, ಆ ಹಿಡಿತ, ನಡೆದುಕೊಂಡ ರೀತಿ ತುಂಬಾ ಅದ್ಭುತವಾಗಿತ್ತು.
ನಾನು ಇಷ್ಟಪಡುವ ಕೆಲವೊಂದು ಆಂಕರ್ ಗಳಲ್ಲಿ ರಾಧಿಕ ಸಹ ಒಬ್ಬರು. ಆ ಹೆಣ್ಣುಮಗಳ ಬ್ಯಾಲೆನ್ಸ್ಡ್ ಮಾತುಗಳು, ಸೂಪರ್ ಲೈಕ್..
courtesy: Raghupathi Sringeri |
ಕಲರ್ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಷೋ ನಿಂದ ಹೊರದಬ್ಬಲ್ಪಟ್ಟ ವೆಂಕಟ್ ಎನ್ನುವ ಸ್ಪರ್ಧಿಯನ್ನು ಕುಳ್ಳರಿಸಿ ಆತನ ಮಂಗಾಟಕ್ಕೆ ಮತ್ತಷ್ಟು ಮದ್ದು ( ನಮ್ಮಲ್ಲಿ ಸಾರಾಯಿಗೆ ಮದ್ದು ಅಂತಾರೆ ) ನೀಡಿ ವೈದ್ಯ ಮಾಡಿದ್ದ ಮಾಧ್ಯಮ ಮಂದಿ ಕಂಡು ಸಕತ್ ಆಶ್ಚರ್ಯ ಆಗಿದ್ದು ಸತ್ಯ. ಇದು ನನ್ನ ಒಬ್ಬಳ ಅಭಿಪ್ರಾಯವಲ್ಲ ಬಹುತೇಕ ಎಲ್ಲಾ ವೀಕ್ಷಕರದ್ದು ಎನ್ನುವುದು ಸತ್ಯ.
ಡಿಯರ್ ಸುದೀಪ್,
ಸಾಮಾನ್ಯವಾಗಿ ಒಂದು ಸಂಗತಿ ಬಗ್ಗೆ ನಿಮ್ಮ ಬಳಿ ಹೇಳೋಕೆ ಇಷ್ಟ ಪಡ್ತೀನಿ ಹುಚ್ಚ ವೆಂಕಟ್ ಅತಿರೇಕದ ವರ್ತನೆ, ಆತ ರವಿ ಮೂರೂರ್ ಎನ್ನುವ ಸ್ಪರ್ಧಿಯ ಮೇಲೆ ದಾಳಿ ಮಾಡಿದ್ದು ತಪ್ಪು. ನಿಮ್ಮ ಎದುರು ನಡೆದ ಇಂತಹ ದುರ್ಘಟನೆಯನ್ನು ನೀವು ಸರಿಯಾದ ರೀತಿಯಲ್ಲಿ ನಿಭಾಯಿಸಿದ್ದಿರಿ. ವೆಂಕಟ್ ಎನ್ನುವ ವ್ಯಕ್ತಿ ಪಾಪುಲಾರಿಟಿಗಾಗಿ ಪರದಾಡುವ ಹುಮ್ಮಸ್ಸಿನಲ್ಲಿ ಯುಟ್ಯೂಬ್ ನಲ್ಲಿ ಮಾಡಿರುವ ಮಾತಿನ ಪ್ರವಾಹವೇ ಸಾಕ್ಷಿ. ಆತ ಮಾತು ಆರಂಭಿಸುವ ಮುನ್ನವೇ ರೆಕಾರ್ಡ್ ಮಾಡುವ ಸಾಹಸದಲ್ಲಿ ಆತನ ಸೇನೆಯು ಮಗ್ನರಾಗಿದ್ದು ಸಹ ಕೆಲವೊಂದು ಕಡೆ ರೆಕಾರ್ಡ್ ಆಗಿದೆ.
ಡಾ. ವಿಷ್ಣುವರ್ಧನ್ ಅವರ ವಿಷ್ಣುಸೇನೆ ಬಗ್ಗೆ ಎಲ್ಲರಿಗೂ ಗೌರವ ಪ್ರೀತಿ ಇದೆ, ಇದ್ಯಾವುದು ಇದು ಹುಚ್ಚ ಸೇನೆ ?ಆತನನ್ನು ಸಹಿಸೋಕೆ ನಮಗೆ ಶನಿವಾರದಿಂದ ಸಾಧ್ಯ ಆಗ್ತಾ ಇಲ್ಲ, ಅಂತಹುದರಲ್ಲಿ ಬಹಳಷ್ಟು ದಿನಗಳಿಂದ ಅಲ್ಲಿನ ಸ್ಪರ್ಧಿಗಳು ಸಹಿಸಿದ್ದಾರಲ್ಲ, ಅವರಿಗೆ ಬಿಗ್ ಬಾಸ್ ಕಡೆಯಿಂದ ವಿಶೇಷ ಬಹುಮಾನ ನೀಡ ಬೇಕು..
ಮಾಧ್ಯಮಗಳು ನಿಮ್ಮ ನಿರ್ಧಾರವನ್ನು , ಬಿಗ್ ಬಾಸ್ ಮನೆಯವರ ನಿರ್ಧಾರವನ್ನು ಸರಿ ಎಂದು ಜಗತ್ತಿಗೆ ತಿಳಿಸುವಲ್ಲಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಅವರು ಆತನನ್ನು ಕರೆಯಿಸಿ ಸಂದರ್ಶನ ಮಾಡದೆ ಇದ್ದಿದ್ದರೆ ಹುಚ್ಚ ವೆಂಕಟ್ ಎನ್ನುವ ಹುಂಬನ ಬಗ್ಗೆ ಗೊತ್ತೇ ಆಗ್ತಾ ಇರಲಿಲ್ಲ.. ಆತನು ಯಾವ ಕಾರಣಕ್ಕೆ ಹೊರ ಬಂದಿರಬೇಕು ಎನ್ನುವ ಕಾರಣವನ್ನು ಯಾರು ಕೇಳೋಲ್ಲ ಬಿಡಿ ಅಷ್ಟೋ ನಿಚ್ಚಳವಾಗಿ ಆತ ಬೆತ್ತಲಾಗಿ ಬಿಟ್ಟಿದ್ದಾರೆ ತಮ್ಮ ಮಾತುಗಳಿಂದ, ವರ್ತನೆಯಿಂದ.
ನಿರ್ದೇಶಕ, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಇಂತಹವರನ್ನು ಯಾಕೆ ಬೆಳೆಸ್ತೀರಿ ಎನ್ನುವ ಮಾತನ್ನು ಪದೇಪದೇ ಹೇಳಿದ್ದರು, ಆದರೆ ನಮ್ಮ ಚಾನೆಲ್ ಗಳು ಬಿಡ ಬೇಕಲ್ಲ...! ಟೀವಿ ನೈನ್ ನಂತರ ನಮ್ಮ ಕನ್ನಡದ ಎಲ್ಲಾ ಚಾನೆಲ್ ಗಳಿಗೂ ಹುಚ್ಚಾಪಟ್ಟೆ ಜ್ವರ ಬಂತು.. ಬಂತು ಬಂತು...!
ಒಂದಂತೂ ಸತ್ಯ ಕಿಚ್ಚ ನಮ್ಮ ಸುನಾಮಿ ಕಿಟ್ಟಿಗೆ ಇಷ್ಟು ದಿನ ಕಿಚ್ಚನ್ನ ನಮ್ಮ ಉಚ್ಚನ್ನ ಹಂಗೆ , ನಮ್ಮ ಉಚ್ಚನ್ನ ಹೀಗೆ ಎಂದು ಹೇಳ್ತಾ ಇದ್ರು ಇನ್ನು ಅದು ಸಾಧ್ಯವಿಲ್ಲ, ಕನಿಷ್ಠ ಯಾವಾಗಲಾದರೂ ಚಿತ್ರಾನ್ನ ತಿನ್ನೋಕೆ, ಕೇಳೋಕೆ ಚಿತ್ರಾನ್ನ ಹಾಡಾದ್ರೂ ಹಾಕಿ :)
ಹುಚ್ಚ ವೆಂಕಟ್ ಕೇವಲ ಒಂದು ಸೀಸನ್ ನಲ್ಲಿ ಜನಕ್ಕೆ ಅದೂ ಸ್ವಲ್ಪ ಜನಕ್ಕೆ ಗೊತ್ತಾಗಿರ ಬಹುದೇನೋ.. ಆದರೆ ಕಿಚ್ಚ ವಿಷಯ ಹಾಗಲ್ಲ ಅಲ್ವೇ .. :) . ಜನ ನೋಡೋದು .. ನೋಡ್ತಾ ಬಂದಿರೋದು ಕಿಚ್ಚನ ಮೇಲಿನ ಪ್ರೀತಿಯಿಂದ..ಬಿಗ್ ಬಾಸ್ ನಲ್ಲಿ ಕಿಚ್ಚನ ಪ್ರಭೆ ಇರುತ್ತೆ..ಯಾಕೇಂದ್ರೆ ವಿ ಲವ್ ಯು ಎನಿ ಟೈಮ್ ಸುದೀಪ್.
ಕೊನೆ ಪಂಚು ನಮ್ಮ ವಿಕ್ರಮ್ ಜೋಷಿ ಕಡೆಯಿಂದ ...
ಇನ್ನೂ ಬಾಕಿ ಇದೆ ...ನೋಡುತ್ತಿರಿ...
ಹುಚ್ಚ ವೆಂಕಟ್ T-Shirts 😜
ಹುಚ್ಚ ವೆಂಕಟ್ ಬೊಂಬೆಗಳು 😄
ಹುಚ್ಚ ವೆಂಕಟ್ Quotes ಪುಸ್ತಕಗಳು 😜
ಹುಚ್ಚ ವೆಂಕಟ್ ದಾಡಿ ಸ್ಟೈಲ್ 😂
ಹುಚ್ಚ ವೆಂಕಟ್ ಹೇರ್ ಸ್ಟೈಲ್ 😜
ಹುಚ್ಚ ವೆಂಕಟ್ ಡೈಲಾಗ್ಸ್ 😂
ಹುಚ್ಚ ವೆಂಕಟ್ ಚಪ್ಪಲ್ಲು (ಎಕ್ಕಡ) 😂 😂
ಹುಚ್ಚ ವೆಂಕಟ್ ಬೊಂಬೆಗಳು 😄
ಹುಚ್ಚ ವೆಂಕಟ್ Quotes ಪುಸ್ತಕಗಳು 😜
ಹುಚ್ಚ ವೆಂಕಟ್ ದಾಡಿ ಸ್ಟೈಲ್ 😂
ಹುಚ್ಚ ವೆಂಕಟ್ ಹೇರ್ ಸ್ಟೈಲ್ 😜
ಹುಚ್ಚ ವೆಂಕಟ್ ಡೈಲಾಗ್ಸ್ 😂
ಹುಚ್ಚ ವೆಂಕಟ್ ಚಪ್ಪಲ್ಲು (ಎಕ್ಕಡ) 😂 😂
No comments:
Post a Comment