ವೀಕೆಂಡ್

ಕೆಲವು ಕಾರ್ಯಕ್ರಮಗಳು ಜನಪ್ರಿಯತೆಯನ್ನು ಕಳೆದುಕೊಳ್ಳುವುದೇ ಇಲ್ಲ. ಅಂತಹ ಕಾರ್ಯಕ್ರಮಗಳಲ್ಲಿ ವೀಕೆಂಡ್ ವಿತ್ ರಮೇಶ್ ಸಹ ಒಂದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಈ ಕಾರ್ಯಕ್ರಮದ ಈ ಬಾರಿಯ ಸರಣಿ ತುಂಬಾ ಇಷ್ಟವಾಯ್ತು. ಸಾಮಾನ್ಯವಾಗಿ ಸಿನಿ  ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಂದಿಯನ್ನು ಹೆಚ್ಚಾಗಿ ಕರೆಯುವ ಪರಿಪಾಠ ಇರುವ ಈ ರಿಯಾಲಿಟಿ ಟಾಕ್ ಶೋ ನಲ್ಲಿ ಈ ಬಾರಿ ಎಲ್ಲಾ ಕ್ಷೇತ್ರದ ಸಾಧಕರನ್ನು ಕರೆಯಿಸುವುದರ ಮೂಲಕ ತಾವು ಭಿನ್ನವಾಗಿ ಜನರಮುಂದೆ ಬಂದಿದ್ದೇವೆ ಎಂದು ವೀಕ್ಷಕರಿಗೆ ತಿಳಿಸಿ ಕೊಟ್ಟರು ಈ ಟೀಮ್. ರಮೇಶ್ ಅರವಿಂದ್ ಅವರ ನಿರೂಪಣೆ.. ಅವರ ಸ್ಟೈಲಿಷ್ ವರ್ತನೆ.. ಜ್ಞಾಪಕ ಎಲ್ಲವೂ ದಿನೇದಿನೇ ಪ್ರಜ್ವಲವಾಗುತ್ತಲೇ ಇದೆ.. ನಿಮ್ಮ ಸೌಂದರ್ಯದ ರಹಸ್ಯವೇನು ರಮೇಶ್ ಅರವಿಂದ್ ;-)
ಈ ಬಾರಿ  ದೇವೇ ಗೌಡ್ರು, ಸಂತೋಷ್ವಿ ಹೆಗ್ಡೆ, ಡಾ.ವಿಜಯ್  ಸಂಕೇಶ್ವರ್, ಬಿ. ಜಯಶ್ರೀ, ಕಾಶಿನಾಥ್, ಕಣ್ಣನ್ ಮಾಮ, ಶೃತಿ ಸ್ವಲ್ಪ ಜಾಸ್ತೀನೆ ಇಷ್ಟ ಆದ್ರೂ.. ವೀಕೆಂಡ್ ಕಾರ್ಯಕ್ರಮಕ್ಕಾಗಿ ಕಾಯುವಂತೆ ಮಾಡುವ ಕೆಲವು ಶೋಗಳಲ್ಲಿ ರಮೇಶ್ ಮತ್ತು ಟೀಮ್ ನಡೆಸಿಕೊಡುವ ವೀಕೆಂಡ್ ಸಹ ಒಂದು... 

ಕಜರಾರಾರೆ..

Image result for pink flowers
ಕೆಲವು ಧಾರವಾಹಿಗಳು ವರ್ಷಾನುಗಟ್ಟಲೆ ಪ್ರಸಾರ ಆದರೂ ವೀಕ್ಷಕರು ತಪ್ಪದೇ ವೀಕ್ಷಿಸುತ್ತಾರೆ. ಅಂತಹ ಧಾರವಾಹಿಗಳನ್ನು ನಿರ್ಮಿಸುವವರು, ಕಥೆ-ಸಂಭಾಷಣೆ ಬರೆದವರು, ನಿರ್ದೇಶನ ಮಾಡುವವರು ವೀಕ್ಷಕರ ಆಸಕ್ತಿಯನ್ನು ಅರಿತವರಾಗಿರುತ್ತಾರೆ. ಅಂತಹ ಧಾರವಾಹಿಗಳಲ್ಲಿ ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಮೇರೆ ಆಂಗನ್ ಮೇ ಸಹ ಒಂದು. ಶಾಂತಿನಿವಾಸದ ಹಿರಿಯ ಹೆಣ್ಣು ಮಗಳು (ಅಜ್ಜಿ) ಶಾಂತಿ, ಆಕೆಯ ಆಡಳಿತ, ಆಕೆಯ ಪೆದ್ದು-ಮುಗ್ಧ ಸೊಸೆ ಖುಷಿ, ಮಗ ರಾಘವ್, ಮೊಮ್ಮಕ್ಕಳಾದ ಶಿವಮ್ ,ನಿಮ್ಮಿ, ಪ್ರೀತಿ, ಪರಿ, ಅಮಿತ್ ..ರಾಣಿ,ನಂದು, ಆರತಿ..
ಪ್ರತಿಯೊಂದು ಪಾತ್ರಗಳು ವೀಕ್ಷಕರಿಗೆ ಸಕತ್ ಮಜ ಕೊಡುತ್ತದೆ. 
ಹಿರಿಯ ಹೆಣ್ಣುಮಗಳು (ಅಜ್ಜಿ) ಪಾತ್ರಧಾರಿಯಾಗಿ ಕೃತಿಕ ದೇಸಾಯಿ ನಟಿಸಿದ್ದಾರೆ. ಕೆಲವು ಬಾರಿ ಆಕೆಯ ನಟನೆ ಅದೆಷ್ಟು ಖುಷಿ ನೀಡುತ್ತದೆ ಅಂದ್ರೆ ಅದನ್ನು ಅನುಭವಿಸಿದಾಗಲೇ ಗೊತ್ತಾಗುವುದು..
ಅತ್ಯಂತ ಲವಲವಿಕೆಯ ಅಜ್ಜಿಯಾಗಿರುವ ಕೃತಿಕ ಎಂಬ ಈ  ದೈತ್ಯ ಪ್ರತಿಭೆ ನಿನ್ನೆ ಎಪಿಸೋಡ್ ನಲ್ಲಿ  ಬಂಟಿ ಔರ್ ಬಬ್ಲಿ ಚಿತ್ರದ ಕಜರಾರಾರೆ...ಹಾಡಿಗೆ ಮಾಡಿದ ನೃತ್ಯ ಅದ್ಭುತ. ಸದಾ ಉಯ್ಯಾಲೆ ಮೇಲೆ ಕುಳಿತಿರುವ ಅಜ್ಜಿ ಅಷ್ಟೊಂದು ಫ್ಲೆಕ್ಸಿಬಲ್ ಆಗಿ ಡ್ಯಾನ್ಸ್ ಮಾಡೋಕೆ ಸಾಧ್ಯನಾ ಅನ್ನುವ ಗೊಂದಲ ಉಂಟಾಗುವುದು ಸಹಜ. ಈಗಾಗಲೇ ಕನ್ನಡದ ಹಿರಿಯ  ಹಾಸ್ಯ ನಟಿ ಜಯಮ್ಮ ಜೋಕೆ ನಾನು ಬಳ್ಳಿಯ ಮಿಂಚು ಎಂದು  ನರ್ತಿಸಿ ವಯಸ್ಸಲ್ಲ ಮುಖ್ಯ ಮನಸ್ಸು ಎನ್ನುವುದು ಸಾಬೀತು ಮಾಡಿದ್ದಾರೆ.ಅದನ್ನು ಕಂಡಿರುವ ಕನ್ನಡಿಗರಿಗೆ ಈ ಬಿಹಾರಿ/ಯುಪಿ  ಅಜ್ಜಿ ಶಾಂತಿ ಸಹ  ಮೆರ ಚೈನ್ ವೈನ್ ಸಬ್ ಉಜಡಾ ಜಾಲಿಮ್ ನಜರ್ ಹಟಾ ಲೆ  ಎಂದು ಡ್ಯಾನ್ಸ್ ಮಾಡಬಲ್ಲರು  ಎಂಬುದನ್ನು ಒಪ್ಪಿಕೊಂಡಿದ್ದಾರೆ.
ತಮ್ಮ ವಯಸ್ಸಿಗಿಂತ ಅದೆಷ್ಟೋ ವರ್ಷಗಳಷ್ಟು ಹಿರಿಯರಾಗಿ ನಟಿಸಿರುವ  ರಂಗಭೂಮಿ ಕಲಾವಿದೆ ಕೃತಿಕ ದೇಸಾಯಿ ಖಾನ್ ನನ್ನ ಇಷ್ಟದ ನಟಿಗಳಲ್ಲಿ ಒಬ್ಬರು. 

ಅಮಲಾ-ಅಬೀರ್ ದೇವ್

Image result for red flower images

ಪರಿಸ್ಥಿತಿಗಳು ಯಾವ ರೀತಿ ಬದಲಾಗುತ್ತದೆ ಎಂದು ಹೇಳಲಾಗದು. ಎಲ್ಲವೂ ಸರಿಯಾಗುತ್ತದೆ.. ಬದುಕು ಸುಂದರವಾಗುತ್ತದೆ ಎಂದು ಬಯಸುವುದು ತಪ್ಪಲ್ಲ. ಆದರೇ ಬಯಸಿದಂತೆ ನಡೆಯಬೇಕು ಎಂದೇನೂ ಇಲ್ಲ.ಈ ಅಂಶ ಅಮಲಾ ಬದುಕಲ್ಲೂ ನಡೆಯುತ್ತದೆ.
ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿ ಕ್ಯಾ ಕುಸೂರ್ ಹೈ ಅಮಲಾ ಕ? 
 ಮದುವೆ, ಮನೆ ಗಂಡ , ಮಕ್ಕಳು ಎಂಬಂತಹ ಕನಸುಗಳನ್ನು ಹೊಂದಿದ್ದ ಅಮಲಾ ಎನ್ನುವ ಸುಂದರ ಹುಡುಗಿ ಶ್ರೀಮಂತ ಹುಡುಗರ ಕೈಗೆ ಸಿಕ್ಕಿ  ಹಾಕಿಕೊಂಡು ಮಾನಭಂಗಕ್ಕೆ ಒಳಗಾಗುತ್ತಾಳೆ. ಅವಳ ಬದುಕು ಆನಂತರ ಯಾವ ರೀತಿ ಏರುಪೇರುಗಳನ್ನು ಕಾಣುತ್ತದೆ..ಆಕೆಯ ಮನಸ್ಥಿತಿ, ಮನೆಯವರೇ  ಅವಳ ಜೊತೆ ವ್ಯವಹರಿಸುವ ರೀತಿ...
ಅದೇರೀತಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ  ಅಬೀರ್ (ಅತ್ಯಾಚಾರದ ಬಳಿಕ ಮದುವೆಯಾದ ಯುವಕ),ಆಕೆ ಅತ್ತಿಗೆ ಮಂದಾಕಿನಿ, ಅಬೀರ್ ತಾಯಿ  ಕರುಣ, ಅಮಲಾ ಪ್ರಿಯಕರ ದೇವ್  ಸೇರಿದಂತೆ  ಪ್ರತಿಯೊಬ್ಬರೂ  ಪಾತ್ರಗಳಿಗೆ ಜೀವ ತುಂಬಿದ್ದಾರೆ.ಅಮಲಾ ಪಾತ್ರಧಾರಿ ಪಂಕುರಿ ಅವಸ್ಥಿ, ಅಬೀರ್ ಆನಂದ್ ಪಾತ್ರಧಾರಿ ರಾಜವೀರ್ ಸಿಂಗ್.
ಅಬೀರ್  ಹಾಗೂ ದೇವ್ ಪಾತ್ರಧಾರಿಗಳು ಥೇಟ್ ಗ್ರೀಕ್ ದೇವತೆಗಳಂತೆ  ಸುಂದರವಾಗಿದ್ದಾರೆ. ಅತ್ಯಂತ ಸೂಕ್ಷ್ಮ ಅಂಶದಡಿಯಲ್ಲಿ ತಯಾರಾಗಿರುವ ಈ ಕಥೆ ಟರ್ಕಿಶ್ ಮೂಲದ್ದು. 
ಸೂಕ್ಷ್ಮ ಸಂವೇದನೆಯ ಕಥಾಹಂದರ ಹೊಂದಿರುವ ಈ ಧಾರವಾಹಿ ಎಲ್ಲರೂ ನೋಡಲೇ ಬೇಕಾಗಿರುವಂತಹದ್ದು....

ಸಾವಧಾನ್-ಕ್ರೈಮ್


Image result for saffron and orange flowersನೇರ  ಹಸಿಬಿಸಿ ಕ್ರೈಂ ಕಾರ್ಯಕ್ರಮಗಳಿಗಿಂತ ಸಂಬಂಧಪಟ್ಟ ಘಟನೆಗಳನ್ನು ಸಿನಿಮೀಕರಿಸಿ ತಿಳಿಸುವ ಕ್ರೈಮ್ ಪ್ಯಾಟ್ರೋಲ್ ನಂತಹ ಧಾರಾವಾಹಿಗಳನ್ನು ಆರಾಮವಾಗಿ ವೀಕ್ಷಿಸ ಬಹುದು. ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ ಈ ಕ್ರೈಮ್ ಧಾರವಾಹಿಯು ಸತ್ಯಘಟನೆಗಳನ್ನು ಆಧರಿಸಿ ಸಿದ್ಧವಾಗಿದೆ. ಅನೂಪ್ ಸೋನಿ ಅವರ ನಿರೂಪಣೆ ಇದರ ಮುಖ್ಯ ಆಕರ್ಷಣೆಗಳಲ್ಲಿ ಒಂದು.
ಪೊಲೀಸರು ಅಪರಾಧಿಗಳನ್ನು ಹಿಡಿಯುವಾಗ ಪಡುವ ಕಷ್ಟಗಳು,ಎದುರಿಸುವ ಸಮಸ್ಯೆಗಳು ಪ್ರತಿಯೊಂದು ಅದ್ಭುತ ರೀತಿಯಲ್ಲಿ ಪಿಕ್ಚರೈಸ್ ಮಾಡಿರುವ ಧಾರವಾಹಿ ಇದಾಗಿದೆ.
....
ಸೋನಿ ವಾಹಿನಿಯಲ್ಲಿ ಪ್ರಸಾರ ಆಗುವ  ಸಿಐಡಿ ಧಾರವಾಹಿ  ಇತ್ತೀಚಿಗೆ ವೀಕ್ಷಿಸಲು ಆಗಲೇ ಇಲ್ಲ ಎಂದು ಕೊಳ್ಳುತ್ತಾ ಚಾನೆಲ್ ಗಳನ್ನೂ ತಿರುಗಿಸುವಾಗ ಸೋನಿ ಫಲ್  ವಾಹಿನಿಯಲ್ಲಿ ಸಿಐಡಿ  ಧಾರಾವಾಹಿಯ ಹಳೆಯ ಕಥೆ ಪ್ರಸಾರ ಆಗ್ತಾ ಇತ್ತು. ಕನ್ನಡದ ತುಳು ಮ್ಯಾನ್ ದಯಾನಂದ್ ಶೆಟ್ಟಿ ಕಷ್ಟಪಟ್ಟು ಅಪರಾಧಿಯನ್ನು ಹಿಡಿತಾ ಇದ್ರು . ಹಲವಾರು ಕಾರಣಗಳಿಂದ ಈ ಧಾರವಾಹಿ ನನ್ನ ಆಲ್ ಟೈಮ್ ಫೆವರಿಟ್ :-)
Image result for saffron and orange flowers
@ @ ಸಾವಧಾನ್ ಇಂಡಿಯಾ ಎನ್ನುವ ಹೆಸರಿನ ಕ್ರೈಮ್ ಧಾರವಾಹಿ ಲೈಫ್ ಓಕೆ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಇದು ಸಹ ಸತ್ಯ ಘಟನೆಗಳನ್ನು ಆಧರಿಸಿ ಸಿದ್ಧಗೊಂಡ ಧಾರವಾಹಿಯಾಗಿದೆ. ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತದೆ, ಅದನ್ನು ಪರಿಹರಿಸಿಕೊಳ್ಳುವಾಗ ಎದುರಾಗ ಸಮಸ್ಯೆಗಳು, ಪರಿಹಾರಗಳು....
ಕ್ರೈಮ್ ಅಂದ್ರೆ ಕೇವಲ ಕೊಲೆ ಅಲ್ಲ.. ಮೋಸ, ತೊಂದರೆ ನೀಡುವುದು ಹೀಗೆ ಹಲವಾರು ಅಂಶಗಳು ಸಹ ಇರುತ್ತದೆ ಎನ್ನುವ ಸಂಗತಿಯನ್ನು ಸಾಮಾನ್ಯರಿಗೆ ಅರ್ಥವಾಗುವಂತೆ ಈ ಕಾರ್ಯಕ್ರಮದಲ್ಲಿ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಆ ಧಾರವಾಹಿ ಟೀಮ್.

ಪಂಚ್-ಭಾಬೀಜಿ

Image result for green and orange flowers
ಹಾಸ್ಯ ಧಾರಾವಾಹಿಗಳು ಅದರಲ್ಲೂ ಕನ್ನಡ ವಾಹಿನಿಯಲ್ಲಿ ಫ್ಹಾಸ್ಯ ಧಾರಾವಾಹಿಗಳ ರುಚಿ ತೋರಿಸಿದ್ದು ಸಿಹಿಕಹಿ ಚಂದ್ರು ಗ್ರೂಪ್ . ಆ ಗ್ರೂಪ್ ಅನೇಕ ಉತ್ತಮ ಕಲಾವಿದರಿಗೆ ಜೀವದಾನ ಮಾಡಿದ್ದು ಗೊತ್ತೇ ಇದೆ. ಈಗ ಬೇರೆಯವರು ಹಾಸ್ಯಪ್ರಧಾನ ಧಾರಾವಾಹಿಗಳನ್ನು ಪ್ರಸಾರಿಸುತ್ತಿದ್ದಾರೆ. ಆದರೆ ನಾನು ಸ್ವಲ್ಪ ಆಸಕ್ತಿಯಿಂದ ಆಗಾಗ ನೋಡುವ ಹಾಸ್ಯ ಧಾರವಾಹಿ ಉದಯವಾಹಿನಿಯಲ್ಲಿ   ಪ್ರಸಾರ ಆಗುವ ಪಂಚ್ ಕಜ್ಜಾಯ. ಅದರಲ್ಲಿ ಅತ್ತೆ ಮಾವ, ಲಂಬೂ ಪಾತ್ರಧಾರಿ ವೀಕ್ಷಕರಿಗೆ ಹಳೆಯಮುಖಗಳು. ಉಳಿದ ಪಾತ್ರಧಾರಿಗಳು ಹೊಸಬರಾದರೂ ಇಷ್ಟ ಆಗುವಂತೆ ನಟಿಸುತ್ತಿದ್ದಾರೆ.  ಅತ್ತೆ ಮಾವ ಮಗ ಸೊಸೆ ಮಗಳು ಇರುವ ಒಂದ್ದು ಪುಟ್ಟ ಕುಟುಂಬ.ಅದರಲ್ಲಿ ದಿನಕ್ಕೊಂದು ಕಥೆ.ಪ್ರತಿದಿನವೂ ವೀಕ್ಷಕ ನಗುವಂತೆ ಮಾಡುವ ಕಥೆಯನ್ನು ಹಣೆದಿರುತ್ತಾರೆ ತಂಡದವರು.
ಇಂತಹದ್ದೇ ಸರಳ ಹಾಗೂ ಸಾಧಾರಣ ಕಥಾಹಂದರ ಇದ್ದ  ಹಾಸ್ಯಧಾರಾವಾಹಿ ಸುವರ್ಣ ಪ್ಲಸ್ ವಾಹಿನಿಯಲ್ಲಿ ಕೆಲವು ವರ್ಷಗಳ ಹಿಂದೆ ಪ್ರಸಾರ ಆಗ್ತಾ ಇತ್ತು. ಅದರ   ಹೆಸರು ಎಸ್ಎಸ್ ಎಲ್ ಸಿ ನನ್ ಮಕ್ಕಳು. ಮಾಸ್ಟರ್ ಆನಂದ್ ಮುಖ್ಯ ಆಕರ್ಷಣೆ ಆಗಿದ್ರೂ ಸಹ ಉಳಿದ ಪಾತ್ರಧಾರಿಗಳು ಸಹಿತ ಅಷ್ಟೇ ಸಮರ್ಥವಾಗಿ  ನಿಭಾಯಿಸಿದ್ದರು. ಈಗ ಪಂಚ್ ಕಜ್ಜಾಯದ ಗ್ರೂಪ್ ಸಹ ಅಷ್ಟೇ ಸಮರ್ಥವಾಗಿ ಕೊಟ್ಟ ಪಾತ್ರವನ್ನು ನಿಭಾಯಿಸ್ತಾ ಇದ್ದಾರೆ.
Image result for green and orange flowers
@ಇಂತಹ ಮಜಾ ಕೊಡುವ ಹಾಸ್ಯಧಾರಾವಾಹಿ ಭಾಬೀಜಿ ಘರ್ ಪರ್  ಹೈ . ಅಂಡ್ ಟಿವಿಯಲ್ಲಿ ಪ್ರಸಾರ ಆಗುವ ಈ ಹಾಸ್ಯಧಾರಾವಾಹಿಯಲ್ಲಿ ಪ್ರತಿಯೊಂದು ಸಣ್ಣಪುಟ್ಟ ಪಾತ್ರಗಳು ಅದ್ಭುತ ವಾಗಿದೆ. ಭರಪೂರ ಹಾಸ್ಯ ಇದರ ಮುಖ್ಯ ಆಕರ್ಷಣೆ.ಆ ಧಾರಾವಾಹಿಯಲ್ಲಿ ನಟಿಸಿರುವ ಅಷ್ಟೂ ಪಾತ್ರಧಾರಿಗಳು ತುಂಬಾ ಇಷ್ಟ ಆಗುವಂತೆ ನಟಿಸಿ ಧಾರವಾಹಿ ತಪ್ಪದೆ ನೋಡುವಂತೆ ಮಾಡಿದ್ದಾರೆ. ಈ ಧಾರವಾಹಿ ಗೆಲುವಿಗೆ ನಿರ್ದೇಶಕ-ಕಥೆಗಾರ ಮತ್ತು ತಂಡಕ್ಕೆ ಯಾವ ರೀತಿ ಪ್ರಶಂಸೆ  ತಲುಪಬೇಕೋ ಅಷ್ಟೇ ಪ್ರಶಂಸೆ ಪ್ರತಿಯೊಂದು ಪಾತ್ರಕ್ಕೂ ಸಲ್ಲಬೇಕು..