ನೇರ ಹಸಿಬಿಸಿ ಕ್ರೈಂ ಕಾರ್ಯಕ್ರಮಗಳಿಗಿಂತ ಸಂಬಂಧಪಟ್ಟ ಘಟನೆಗಳನ್ನು ಸಿನಿಮೀಕರಿಸಿ ತಿಳಿಸುವ ಕ್ರೈಮ್ ಪ್ಯಾಟ್ರೋಲ್ ನಂತಹ ಧಾರಾವಾಹಿಗಳನ್ನು ಆರಾಮವಾಗಿ ವೀಕ್ಷಿಸ ಬಹುದು. ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ ಈ ಕ್ರೈಮ್ ಧಾರವಾಹಿಯು ಸತ್ಯಘಟನೆಗಳನ್ನು ಆಧರಿಸಿ ಸಿದ್ಧವಾಗಿದೆ. ಅನೂಪ್ ಸೋನಿ ಅವರ ನಿರೂಪಣೆ ಇದರ ಮುಖ್ಯ ಆಕರ್ಷಣೆಗಳಲ್ಲಿ ಒಂದು.
ಪೊಲೀಸರು ಅಪರಾಧಿಗಳನ್ನು ಹಿಡಿಯುವಾಗ ಪಡುವ ಕಷ್ಟಗಳು,ಎದುರಿಸುವ ಸಮಸ್ಯೆಗಳು ಪ್ರತಿಯೊಂದು ಅದ್ಭುತ ರೀತಿಯಲ್ಲಿ ಪಿಕ್ಚರೈಸ್ ಮಾಡಿರುವ ಧಾರವಾಹಿ ಇದಾಗಿದೆ.
....
ಸೋನಿ ವಾಹಿನಿಯಲ್ಲಿ ಪ್ರಸಾರ ಆಗುವ ಸಿಐಡಿ ಧಾರವಾಹಿ ಇತ್ತೀಚಿಗೆ ವೀಕ್ಷಿಸಲು ಆಗಲೇ ಇಲ್ಲ ಎಂದು ಕೊಳ್ಳುತ್ತಾ ಚಾನೆಲ್ ಗಳನ್ನೂ ತಿರುಗಿಸುವಾಗ ಸೋನಿ ಫಲ್ ವಾಹಿನಿಯಲ್ಲಿ ಸಿಐಡಿ ಧಾರಾವಾಹಿಯ ಹಳೆಯ ಕಥೆ ಪ್ರಸಾರ ಆಗ್ತಾ ಇತ್ತು. ಕನ್ನಡದ ತುಳು ಮ್ಯಾನ್ ದಯಾನಂದ್ ಶೆಟ್ಟಿ ಕಷ್ಟಪಟ್ಟು ಅಪರಾಧಿಯನ್ನು ಹಿಡಿತಾ ಇದ್ರು . ಹಲವಾರು ಕಾರಣಗಳಿಂದ ಈ ಧಾರವಾಹಿ ನನ್ನ ಆಲ್ ಟೈಮ್ ಫೆವರಿಟ್ :-)
@ @ ಸಾವಧಾನ್ ಇಂಡಿಯಾ ಎನ್ನುವ ಹೆಸರಿನ ಕ್ರೈಮ್ ಧಾರವಾಹಿ ಲೈಫ್ ಓಕೆ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಇದು ಸಹ ಸತ್ಯ ಘಟನೆಗಳನ್ನು ಆಧರಿಸಿ ಸಿದ್ಧಗೊಂಡ ಧಾರವಾಹಿಯಾಗಿದೆ. ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತದೆ, ಅದನ್ನು ಪರಿಹರಿಸಿಕೊಳ್ಳುವಾಗ ಎದುರಾಗ ಸಮಸ್ಯೆಗಳು, ಪರಿಹಾರಗಳು....
ಕ್ರೈಮ್ ಅಂದ್ರೆ ಕೇವಲ ಕೊಲೆ ಅಲ್ಲ.. ಮೋಸ, ತೊಂದರೆ ನೀಡುವುದು ಹೀಗೆ ಹಲವಾರು ಅಂಶಗಳು ಸಹ ಇರುತ್ತದೆ ಎನ್ನುವ ಸಂಗತಿಯನ್ನು ಸಾಮಾನ್ಯರಿಗೆ ಅರ್ಥವಾಗುವಂತೆ ಈ ಕಾರ್ಯಕ್ರಮದಲ್ಲಿ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಆ ಧಾರವಾಹಿ ಟೀಮ್.
No comments:
Post a Comment