ಸುವರ್ಣ ನ್ಯೂಸ್ ನಲ್ಲಿ ಚಿದಂಬರ ರಹಸ್ಯ ಅನ್ನುವ ಕಾರ್ಯಕ್ರಮದ ನಿರೂಪಕನ ಬಗ್ಗೆ ಒಮ್ಮೆ ಬರೆಯುತ್ತ ನಾನು ಈತ ಹೆಚ್ಚು ಟೀವಿ ನೈನ್ ಹೀಗೂ ಉಂಟೆ ನಾರಾಯಣ ಸ್ವಾಮಿ ಯನ್ನು ಅನುಸರಿಸುತ್ತಾರೆ ಎಂದು ಬರೆದಿದ್ದೆ ಒಮ್ಮೆ. ಅದಾದ ಬಳಿಕ ಈ ನಿರೂಪಕ ನನ್ನ ಜೊತೆಯಲ್ಲಿ ಮಾತಾಡ ಬಯಸಿದ್ದು ,ಆ ಬಳಿಕ ತಾನು ನ್ಯಾನ್ಸಿಯನ್ನು ಯಾಕೆ ಅನುಸರಿಸಿರ ಬಹುದು ಎಂದು ಕ್ಲಾರಿಫೈ ಮಾಡಿದ್ದು ಹಳೆಯ ಕಥೆ. ಹೀಗೆ ಸಾಫ್ಟಾಗಿ ಬೆಳೆದ ನಮ್ಮಿಬ್ಬರ ವಿಶ್ವಾಸದ ಸ್ನೇಹ ದಿನೇ ದಿನೇ ಹೆಚ್ಚಾಗಿದೆ .ಆತನ ಹೆಸರು ಪ್ರದೀಪ್ ಬಡೆಕ್ಕಿಲ .
ಒಂದೊಳ್ಳೆಯ ಪ್ರಯತ್ನದಿಂದ ಸಾಧನೆ ಮಾಡಿದರೆ ಯಶಸ್ಸು ಗಟ್ಟಿ ಅನ್ನುವ ನಂಬಿಕೆ ಎಲ್ಲರಲ್ಲೂ ಇದ್ದೆ ಇದೆ,ಅ ರೀತಿಯ ಸಾಧನೆಯನ್ನು ಮಾಡಿರುವ ಪ್ರದೀಪ್ ಮಾಡಿರುವ ಸಾಧನೆಯನ್ನು ನಾನು ಗಮನಿಸುತ್ತಾ ಬಂದಿದ್ದೆ.. ಖುಷಿ ಅನ್ನಿಸುತ್ತೆ.
ಈತ ತನ್ನ ಧ್ವನಿಯ ಮೂಲಕ ಹೆಚ್ಚು ಪರಿಚಿತ. ಈ ಧ್ವನಿಗೆ ಮರುಳಾದವರು ಕೇವಲ ಹೆಣ್ಣುಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಮತ್ತು ಎಲ್ಲ ವಯೋಮಿತಿಯವರು. ಟೀವಿ ನೈನ್ , ಸುವರ್ಣ , ಸುವರ್ಣ ನ್ಯೂಸ್,...! ವ್ಯಾಪ್ತಿ ದೊಡ್ಡದು ಪುತ್ತೂರಿನ ಪ್ರದೀಪ್ ದು.
ಸುವರ್ಣ ವಾಹಿನಿಯಲ್ಲಿ ಪ್ರಸಾರ ಆದ ರಿಯಾಲಿಟಿ ಶೋಗಳಿಗೆ ಧ್ವನಿ ನೀಡುತ್ತಿದ್ದ ಪ್ರದೀಪ್ ತಮ್ಮ ವ್ಯಾಪ್ತಿಯನ್ನು ನಟನೆಯತ್ತ ತಿರುಗಿಸಿ ಕೊಂಡರು,ರಾಜಕುಮಾರಿ ಲಕುಮಿ, ಕೃಷ್ಣ ರುಕ್ಮಿಣಿ ಯಲ್ಲಿ ನಟಿಸಿದ ಬಳಿಕ ಪ್ರದೀಪ ಈಗ ತಮಿಳು ಧಾರವಾಹಿ ಸೊಂದ ಬಂಧಂ ನಲ್ಲಿ(ಸನ್ ಟೀವಿಯಲ್ಲಿ ಪ್ರಸಾರ ಆಗುತ್ತಿದೆ) ಮುಖ್ಯ ಪಾತ್ರಧಾರಿ. ಈಗ ಆತ ತಮಿಳು ಕಲಿತು ಅದೂ ಓದುವುದನ್ನು.., ಮಾತಾಡುವುದನ್ನು .. ತಾನುಎಂತಹ ಚಾಲೆಂಜ್ ಗೆ ಬೇಕಾದರೂ ಗೆಲ್ಲ ಬಲ್ಲೆ ಅನ್ನುವುದನ್ನು ಪ್ರೂವ್ ಮಾಡಿದ್ದಾರೆ.ಈಗ ಈ ಟೀವಿಯಲ್ಲಿ ಅವರ ಧ್ವನಿ ಕೇಳಿ ಬರ್ತಾ ಇದೆ..
ನನ್ನ ಫ್ರೆಂಡ್ ಎಂದು ನಾನುಹೊಗಳ್ತಾ ಇಲ್ಲ .. ಇರುವ ಸಂಗತಿ ಹೇಳ್ತಾ ಇದ್ದೀನಿ.
ಮತ್ತೊಂದು ಸಂಗತಿ ಈತ ಒಳ್ಳೆಯ ಹಾಡುಗಾರ .. ತನ್ನ ಮಿತ್ರರೊಡನೆ ಸೇರಿ ಒಂದು ಹಾಡಿನ ಸೀಡಿ ರೆಡಿ ಮಾಡಿದ್ದಾರೆ..ತುಂಬಾ ಚನ್ನಾಗಿದೆ,ಥೇಟ್ ಬಾಲಿವುಡ್ ರೀತಿಯಲ್ಲಿ. ಇದೆ ಹಾಡು , ಇಂತಹ ಹುಡುಗ ಬಿ ಟೌನ್ ನಲ್ಲಿ ಇದ್ದೀದ್ದರೆ..
ಲಿಂಕ್ ಕೆಳಗಿದೆ.ಹರಿಸಿ ಹಾರೈಸಿ ಕನ್ನಡದ ಕುಡಿಯನ್ನು ...
1 comment:
ಪ್ರದೀಪ್ ಬಡೆಕ್ಕಿಲ ದ್ವನಿಯ ಅಭಿಮಾನಿ ನಾನು. ಅವರ ಶೈಲಿ, ನಿರೂಪಣೆ ಮತ್ತು ಅದರ ಆಳ ಎಲ್ಲವೂ ಮಾದರಿ.
Post a Comment