ಮಾತಿನ ನಡುವೆ ಅವ್ ನೋ ಅನ್ನುವ ಧ್ವನಿ ಉಲ್ಲಾಸ ನೀಡುತ್ತ ದೆ. ಸದಾ ರಾಜಕೀಯ ಜನರ ಬಗ್ಗೆ ಆಡಿಕೊಂಡು-ಪಾಡಿಕೊಂಡು ಇರುವ ವಾಹಿನಿಗಳು ಸಿನಿಮಾದವರ ಬಗ್ಗೆ ಹೆಚ್ಚು ಇಂತಹ ವಿಡಂಬನೆ ಮಾಡೋಕೆ ಹೋಗಲ್ಲ .ಸಿನಿಮಾದವರು ರಾಜಕೀಯದತ್ತ ಹೊರಟರೆ ಅವ್ .. ಬಿಡೋದೇ ಇಲ್ಲ. ಪೂಜಾ ಗಾಂಧೀ ಅನ್ನುವ ಸಂಜನಾ ಗಾಂಧೀ ಅಕ್ಕೋರು ನದಿ ದಡ ನದಿ ದಡ ನದಿ ದಡ ಅಮ್ತ ಒಂದು ಪಾರ್ಟಿ ಬಿಟ್ಟು ಮತ್ತೊಂದಕ್ಕೆ, ಮತ್ತೊಂದು ಬಿಟ್ಟು ಮಗದೊಂದಕ್ಕೆ ಜಂಪಿಂಗ್ ಜಂಪಿಂಗ್ ಮಾಡಿದ ಕಥನ ನೀವು ಕೇಳಿದ್ದು ಕಾರ್ಯಕ್ರಮದಲ್ಲಿ ಪ್ರಸಾರ ಆಯ್ತು .. ಸಧ್ಯಕ್ಕೆ ಅವರ ಬಿಟ್ ಇವರ ಬಿಟ್ಟು, ಇನ್ನೊಬ್ಬರ ಬಿಟ್ಟು ... ಯಾರು ಯಾರು ಅಂತ ನಾವೆಲ್ಲಾ ಅಂದ್ರೆ ಕಾಮನ್ ಜನರು ವೈಟಿಂಗ್ ವೈಟಿಂಗ್ ... ನೋಡುಮ ಪೂಜಾ ಅಂಬೋ ಸಂಜನಾ ಗಾಂಧೀ ನೆಕ್ಟ್ ಪಾರ್ಟಿ ಪ್ಲಾನಿಂಗ್..
ಈ ಕಾರ್ಯಕ್ರಮದ ಸ್ಕ್ರಿಪ್ಟ್ , ಹಿನ್ನೆಲೆ ಧ್ವನಿ ಎಲ್ಲವೂ ಅವ್.. ಅವ್ :-)
ಸುವರ್ಣ ನ್ಯೂಸ್ ನಲ್ಲಿ ಪ್ರಸಾರ ಆಗುವ ಬೆಳಗಿನ ಕಾರ್ಯಕ್ರಮ .. ಅಂದ್ರೆ ಪ್ಯಾಕೇಜ್ ಚೆನ್ನಾಗಿದೆ. ಇಲ್ಲಿ ಏನೇನು ಇಲ್ಲ..! ಎಲ್ಲವೂ ಇದೆ..! ಅಡುಗೆ ,ನ್ಯಾಯ-ಕಾನೂನು ,ಹಣ-ಪಾಲಿಸಿ .. ಆರೋಗ್ಯ, ... ನಿಜ ಹೇಳ ಬೇಕೂಂದ್ರೆ ಕೇವಲ ಒಂದು ನಿಮಿಷದಲ್ಲಿ ಲಾಯರ್ ಸಾಹೇಬರು ಕಾನೂನನ್ನು ಬಿಚ್ಚಿಟ್ಟರೆ, ಪತ್ರಕರ್ತ ರು ಹಣ ಮಾಡೋದು, ಪಾಲಿಸಿ ಪ್ರಯೋಜನ ಅದಕ್ಕೆ ಪೂರಕ ಸಂಗತಿ ತಿಳಿಸಿ ಬಿಡ್ತಾ ರೆ. ವೆರಿ ಇಂಟರೆಸ್ಟಿಂಗ್ .
ಲಾಯರ್ -ಜರ್ನಲಿಸ್ಟ್ ಇಬ್ರು ಒಂದು ಗಳಿಗೆಯಲ್ಲಿ ಪ್ರಪಂಚ ಕಟ್ಟಬಲ್ಲರು,ಅರ್ಧ ಗಳಿಗೆಯಲ್ಲಿ ...... :-)!
ಒಟ್ಟಾರೆ ಎಲ್ಲ ಸಂಗತಿಗಳು ಬೆಳಗಿನ ಪ್ಯಾಕೇಜ್ನಲ್ಲಿ ಖುಷಿ ಕೊಡು ವಂತಹದ್ದು . ಸುಂದರ ನಿರೂಪಕಿಯರ ಕಿಲಕಿಲ ನಗು ಸಹ ವೀಕ್ಷಕರಿಗೆ ಮುಫಾತ್ತಾಗಿ ಸಿಗುತ್ತೆ ;-)
ನೇರವಾಗಿ ಹೇಳುವುದಾದರೆ ಒಂದೊಳ್ಳೆಯ ಪ್ಯಾಕೆಜ್ ಹೆಣ್ಣುಮಕ್ಕಳಿಗೆ ..!
No comments:
Post a Comment