ಜೀ ಟೀವಿಯಲ್ಲಿ ಡ್ರಾಮೆಬಾಜ್ ರಿಯಾಲಿಟಿ ಷೋ ಕಳೆದ ಕೆಲವು ವಾರಗಳಿಂದ ಪ್ರಸಾರ ಆಗುತ್ತಿದೆ. ಮುಖ್ಯವಾಗಿ ನಾನು ಆ ಕಾರ್ಯಕ್ರಮದ ಆಡಿಶನ್ನಿಂದ ಕಾಡು ವೀಕ್ಷಿಸಿದೆ. ಬೊಂಬಾಟ್ .. ! ಪ್ರಸಿದ್ಧ ನಿರ್ದೇಶಕ ಅನುರಾಗ್ ಬಸು ಅವರ ಕಸೌಟಿ ಜಿಂದಗಿ ಕಿ ಭಯಂಕರ ಇಷ್ಟ ಆದ ಧಾರಾವಾಹಿ ನನಗೆ ಮಾತ್ರವಲ್ಲ ಭಾರತ ಹೆಣ್ಣುಮಕ್ಕಳ ಹೃದಯ ಗೆದ್ದ ಧಾರವಾಹಿ . ಬಿಡಿ ಹಳೆ ಕಥೆ ಈಗ್ಯಾಕೆ ;-).ಈಗ ಬರ್ಫಿ ಹಂಚಿ ಜನಮನ ಗೆದ್ದಿದ್ದಾರೆ.
ಮುಖ್ಯವಾಗಿ ಈ ಬರ್ಫಿ ನಿರ್ದೇಶಕ ಡ್ರಾಮೆ ಬಾಜ್ನಲ್ಲಿ ಮತ್ತೊಮ್ಮೆ ಮಗುವಾಗಿದ್ದಾರೆ. ಯಾಕೆಂದ್ರೆ ಅಷ್ಟೊಂದು ಅದ್ಭುತ ಪ್ರತಿಭೆಗಳು ಅಲ್ಲಿವೆ. ಪುಟ್ಟ ಪುಟ್ಟ ಕೂಸುಗಳ ಜೊತೆ ಮಗುವಾಗುವ ಅನುರಾಗ್ ಕೆಲವು ವಿಷಯಗಳು ಬಂದಾಗ ಎಮೋಷನಲ್ ಆಗ್ತಾ ಇರ್ತಾರೆ. ಆದರೆ ನಿನ್ನೆ ಪ್ರಸಾರವಾದ ಷೋನಲ್ಲಿ ಅನುರಾಗ್ ತುಂಬಾ ಭಾವೋದ್ವೇಗಕ್ಕೆ ಒಳಗಾದರು . ಅದು ಸಹಜ ಬಿಡಿ . ಕ್ಯಾನ್ಸರ್ ಪೀಡಿತರ ವಿಷಯ. ತುಂಬಾ ಹೃದಯ ಸ್ಪರ್ಶಿ ವಿಷಯ.ಈ ಕಾಯಿಲೆಯಿಂದ ಬಳಲುತ್ತಿರುವವರು, ಅವರ ಮನೆಯವರು ಎಲ್ಲರಿಗೂ ಒಂದು ದೊಡ್ಡ ಸವಾಲಿದು.
ನಮ್ಮ ಮೇಡಂ ಅವರು ಈ ಕಾಯಿಲೆಯಿಂದ ಬಳಲುವಾಗ , ಅವರಿಗೆ ಅಪರೇಷನ್ ಆದಾಗ ನಂತರ ಅವರು ಮತ್ತೆ ಕೆಲ್ಸಕ್ಕೆ ಬಂದ ಬಳಿಕ ಅವ್ರು ಅನುಭವಿಸಿದ ಕಿರಿಕಿರಿ ,ಆತಂಕ ಎಂದಿಗೂ ಮರೆಯಲಾಗದ್ದು .
ಈ ರಿಯಾಲಿಟಿ ಷೋ ಸ್ಟ್ರಿಕ್ಟ್ ಜಡ್ಜ್ ಸೊನಾಲಿ ಬೇಂದ್ರೆ ಮತ್ತು ನಮ್ಮೂರ ಅಳಿಯ ( ಕರ್ನಾಟಕದ) ವಿವೇಕ್ ಒಬೆರಾಯ್ ಅದೆಷ್ಟು ಕೈಂಡ್ ಹಾರ್ಟೆಡ್ ಅಂದ್ರೆ ಮಕ್ಕಳಿಗೆ ಕಡಿಮೆ ಅಂಕ ಕೊಡೋಕೆ ಹೊಗಲ್ಲ. ಕನ್ನಡ ಮಣ್ಣಿನ ಗುಣ ಅಂದ್ರೆ ಅದೇ ಕಣ್ರೀ .
ಇದರಲ್ಲಿ ನಿರೂಪಕಿ ರಾಗಿಣಿ ಖನ್ನ ನಗು ನನಗೆ ಸಕತ್ ಲೈಕ್ .
ಸ್ಟಾರ್ ವಾಹಿನಿಯಲ್ಲಿ ಇಷ್ಟು ದಿನ ಪ್ರಸಾರ ಆದ , ಈಗ ಅಂತಿಮ ಘ ಟ್ಟ ತಲುಪಿರುವ ರಿಯಾಲಿಟಿ ಷೋ ನಚ್ ಬಲಿಯೆ. ಶಿಲ್ಪ ಶೆಟ್ಟಿ, ಸಾಜಿದ್ ಮತ್ತು ಟೆರ್ರೆನ್ಸ್ ಅವರ ಜಡ್ಜ್ಮೆಂಟಿನ ರಿಯಾಲಿಟಿ ಷೋ ಸಹ ಹೆಚ್ಚು ಖುಷಿ ಕೊಟ್ಟಿತ್ತು . ಕಳೆದ ಕೆಲವು ತಿಂಗಳಿಂದ ಸಕತ್ ಬ್ಯುಸಿ. ನೋಡುವ ,ಖುಷಿ ಪಡುವುದಷ್ಟೇ ಮಾಡಿದ್ದು. ಬರೆಯೋಕೆ ಸಮಯ
No comments:
Post a Comment