ಲೈಕ್

 ಬಿಸಿಲು ಸಿಕ್ಕಾಪಟ್ಟೆ ಕಾಯ್ತಾ ಇದೆ. ಮಳೆ ಹಾಗೂ ಹೀಗೂ ಅಶ್ತೆ. ಮುಖ್ಯವಾಗಿ ನೀರಿನ ಒದ್ದಾಟ ನಮಗೆ ಇರಲಿ, ಮನುಷ್ಯರು ನಾವು, ಹೇಗೋ ಕುಡಿದು ನಮ್ಮ ಬಾಯಾರಿಕೆ ತಣಿಸಿ ಕೊಳ್ತೀವಿ ಆ  ಪಕ್ಷಿಗಳು .. ಅವುಗಳ ಬಾಯಾರಿಕೆ ನಾವು ಇನ್ಗಿಸುವುದಕ್ಕೆ ಮನೆಯ ಮುಂದಿರುವ ಸಜ್ಜೆ, ಇಲ್ಲವೇ ಅವುಗಳು ಸುಲಭ ಹಾಗು ಧೈರ್ಯವಾಗಿ ಬರಲು ಸಾಧ್ಯ ಆಗುವಂತಹ ಜಾಗಗಳಲ್ಲಿ ಪುಟ್ಟ ಬಟ್ಟಲಲ್ಲಿ ನೀರಿಡಿ .. ಇದು ಪುಕ್ಕಟೆ ಸಲಹೆಯಲ್ಲ ಪ್ಲೀಸ್.. ಎರಡು ಹನಿ ನೀರು ಸಾಕು ಅವುಗಳ ಜೀವ ಉಳಿಸಿ ಕಾಪಾಡಲು 


ಅತ್ಯಂತ ಕುತೂಹಲಕರ ಘಟ್ಟದಲ್ಲಿ ಇದೆಈ ಟೀವಿ  ಬಿಗ್ ಬಾಸ್.. ಕೂಗು ಮಾರಿ ಕಾಳಿ ಎಂಟ್ರಿ ಆಗಿದೆ.. ಒಂದರ್ಥದಲ್ಲಿ ಮನೆ ಈಗ ಮಠ ಆಗ್ತಾ ಇದೆ. ಬಿಗ್ ಬಾಸ್ ಕಾರ್ಯಕ್ರಮ ನೋಡುವವರ ಸಂಖ್ಯೆ ಸಿಕ್ಕಾಪಟ್ಟೆ ಇದೆ ಅನ್ನೋದು ಎಲ್ಲರಿಗೂ ಗೊತ್ತು. ತಮಾಷೆ ಅಂದ್ರೆ ಸುದ್ದಿಮನೆಗಳಲ್ಲಿ ಸ್ವಲ್ಪ ಅನ್ನುವುದಕ್ಕಿಂತ ಹೆಚ್ಚು ಹೆಚ್ಚು ಅದರದೇ ಸುದ್ದಿ.. ಮಾತಿನ  ನಡುವೆ! 

ತುಂಬಾ ಆಸಕ್ತಿ ತಂದಿರೋದು ನರೇಂದ್ರ ಶರ್ಮ ಅವರ ವರ್ತನೆ. ಬ್ರಹ್ಮಾಂಡ ಸ್ವಾಮಿ ಮಾತುಗಳು ಆರಂಭದಲ್ಲಿ ಕಿರಿಕಿರಿ ಅನ್ನಿಸಿದರು ಸಹ ಈಗ ಕಾಮನ್ ಆಗಿದೆ.. ಹೆಣ್ಣುಮಕ್ಕಳಿಗೆ ಇಷ್ಟ ಅದರಲ್ಲೂ  ಸಹ ಅದಕ್ಕಿಂತ ವಿಶೇಷ ಇನ್ನೇನಿದೆ. ಒಂದು ವ್ಯಕ್ತಿ ಜನಪ್ರಿಯ ಆಗುವುದಕ್ಕೆ  ಹಲವಾರು ಕಾರಣಗಳನ್ನು ಹುಡುಕುತ್ತಾನೆ. ಆದರೆ ಬ್ರಹ್ಮಾಂಡ ಸ್ವಾಮಿ ಹತ್ರ ವಿಶೇಷ ಗುಣ ಇರಬೇಕು ಬಿಡಿ ಇಲ್ಲಾಂದ್ರೆ ಹೆಮ್ಮಾರಿ ಹೆಣ್ಣುಮಕ್ಕಳು ಅಷ್ಟೊಂದು ವಿನಯ ವಿಧೇಯತೆ ... ! 

ನೇರವಾಗಿ ಹೇಳುವುದಾದರೆ ಆರಂಭದಲ್ಲಿ ಬಿಗ್ ಬಾಸ್ ಪ್ರೆಸೆ೦ಟರ್  ಕಿಚ್ಚ ಸುದೀಪ್ ಅವರ ನಿರೂಪಣೆ ಅಷ್ಟೊಂದು ಖುಷಿ ಕೊಡಲಿಲ್ಲ..
ಆದರೆ ಈಗೀಗ ಸಕತ್ ಮಜಾ ನೀಡ್ತಾ ಇದೆ.. ಅದರಲ್ಲೂ ಎರಡನೇ ಎಲಿಮಿನೇಶನ್   ಕಾರ್ಯಕ್ರಮದಲ್ಲಿ ಸಕತ್  ಲೈವ್ಲಿ .. ಅಂತಹ  ಉತ್ಸಾಹ ಇದ್ದಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಕಳೆ ಕೊಡೋದು .. ಗಂಭೀರ, ಹಾಸ್ಯ ಎಲ್ಲ  ಇದೆ. ಏನೋ ಮಿಸ್ ಆಗಿತ್ತು ಸುದೀಪ್ ಇಷ್ಟು ದಿನ ಈಗ ಅಲ್ಲಿ ರೀಚ್ ಆಗ್ತಾ ಇದ್ದಿರಿ.. ! ಕಿಚ್ಚ ಲೈಕ್    

No comments: