ಸಾಮಾನ್ಯವಾಗಿ
ಅಡುಗೆ ಕಾರ್ಯಕ್ರಮದ ಬಗ್ಗೆ ವೀಕ್ಷಕರಿಗೆ ಎಷ್ಟು ನಿರಾಸಕ್ತಿ ಇದೆಯೋ ಅಷ್ಟೇ ಆಸಕ್ತಿಯೂ ಸಹ ಇದೆ.
ಈಗ ಸಾಮಾನ್ಯವಾಗಿ ಪುರುಷ-ಸ್ತ್ರೀ ಅನ್ನದೇ
ಎಲ್ಲರೂ ಇಷ್ಟ ಪಡುವ ಕಾರ್ಯಕ್ರಮವಾಗಿಯೂ ಸಹ ಮಾರ್ಪಟ್ಟಿದೆ. ಅದರಲ್ಲೂ ಮಾಸ್ಟರ್ ಶೆಫ್ ಕಾರ್ಯಕ್ರಮ
ಆರಂಭವಾದ ಬಳಿಕ ಅಡುಗೆ ಕಾರ್ಯಕ್ರಮಕ್ಕಿರುವಂತಹ ಜನಪ್ರಿಯತೆ ಹೆಚ್ಚಾಯಿತೆ ವಿನಃ ಕಡಿಮೆ ಆಗಲಿಲ್ಲ.
ಆವರೆಗೂ ಕೇವಲ ಚಾನೆಲ್ಗಳು ಗೃಹಿಣಿಯರಿಗೆ ಅವಕಾಶ ಕಲ್ಪಿಸಿ ಅವರಿಗೆ ಅಡುಗೆ ಮಾಡುತ್ತಿತ್ತು. ಅವಧಿ
ಕೇವಲ ಕಾಲು ಇಲ್ಲವೇ ಅರ್ಧಗಂಟೆ. ಆದರೆ ಸ್ಟಾರ್ ವಾಹಿನಿಯು
ಮಾಸ್ಟರ್ ಶೆಫ್ ಕಾರ್ಯಕ್ರಮವನ್ನು ವಿದೇಶದಿಂದ ಎರವಲು ತಂದು ಸ್ಥಳೀಯವಾಗಿ ಮಾರ್ಪಡಿಸಿದಾಗ ಅಡುಗೆ ಬಗ್ಗೆ ಇನ್ನೂ
ಒಲವು ಹೆಚ್ಚಾಯಿತು ಅನ್ನ ಬಹುದು. ಈ ಬಾರಿ ಸ್ಟಾರ್ ವಾಹಿನಿಯಲ್ಲಿ ಪುಟ್ಟ ಮಕ್ಕಳದ್ದೇ ಕಾರುಬಾರು.
ಅವರುಗಳಿಗೆ ಅಡುಗೆ ದಿನಸಿ ಬಗ್ಗೆ ಇರುವ ಜ್ಞಾನ
ಅನನ್ಯ. ಎಷ್ಟೋ ಸಾಂಬಾರು ಪದಾರ್ಥಗಳ ಬಗ್ಗೆ ದೊಡ್ಡವರಿಗೆ ತಿಳಿಯಲಾಗದೇ ತಬ್ಬಿಬ್ಬು ಆಗಿ
ಬಿಡುತ್ತಾರೆ. ಆದರೆ ಮಕ್ಕಳು ಯಾವುದೆ ಅಳುಕಿಲ್ಲದೇ ತಮಗೆ ಗೊತ್ತಿರುವುದನ್ನು ಹೇಳುವ ಪರಿ ನಿಜಕ್ಕೂ ಖುಷಿ
ನೀಡುತ್ತದೆ.
ಸೋನಿ ವಾಹಿನಿಯಲ್ಲಿ ಪ್ರತಿದಿನ ಎಂಟು ಗಂಟೆಗೆ ಇಂತಹ ರಿಯಾಲಿಟಿ ಸೋ ಪ್ರಸಾರ ಆಗುತ್ತದೆ. ಅದರ ವಿಶೇಷತೆ
ಅಂದ್ರೆ
ಅದರಲ್ಲಿ ಮುಖ್ಯವಾಗಿ ಮಾಸ್ಟರ್ ಪ್ರೊಫೆಸರ್ ಸಂಜೀವ್
ಕಪೂರ್ ಮುಖ್ಯ ತೀರ್ಪುಗಾರರು.
ಅದರಲ್ಲಿ ಸಾಮಾನ್ಯ ಗೃಹಿಣಿ ಮತ್ತು ಎಕ್ಸ್ ಪರ್ಟ್
ಶೆಫ್ಗಳು ಭಾಗವಹಿಸಿರುತ್ತಾರೆ. ಹಿರಿಯ
ಹೆಣ್ಣುಮಕ್ಕಳು ಮಾಡುವ ಅಡುಗೆ, ಅವರು ಅಂದಾಜಿನಿಂದ ಕೈ ಬಳಸಿ ಹಾಕುವ ಸರಿಯಾದ ಅಳತೆ , ಎಲ್ಲವೂ ಮಾಸ್ಟರ್ ಪ್ರೊಫೆಸರ್ ಗೆ ಸಾಕಷ್ಟು ಬಾರಿ ಆಶ್ಚರ್ಯ ತರಿಸುತ್ತದೆ.
ಭಾರತೀಯ ಹೆಣ್ಣುಮಕ್ಕಳು ಅಂದ್ರೆ ಸುಮ್ನೇನಾ?
No comments:
Post a Comment