ಅನೇಕ ಸಂಗತಿಗಳು ಹೆಚ್ಚಿನ ತ್ರಾಸು ಉಂಟು ಮಾಡುತ್ತದೆ. ಅದರಲ್ಲು ಈ ಸಾವಿನ ಸಂಗತಿ ಇದೆಯಲ್ಲ ಅದರಷ್ಟು ಬೇಸರದ ಸಂಗತಿ
ಮತ್ತೊಂದಿಲ್ಲ. ನಿಜ ಹುಟ್ಟಿದವ ಸಾಯಲೇ ಬೇಕು ಆದರೆ ಅಕಾಲಿಕ ಮರಣ ಇರುತ್ತದಲ್ಲ ಅದರಷ್ಟು ನೋವಿನ ಸಂಗತಿ
ಮತ್ತೊಂದಿಲ್ಲ ಬಿಡಿ.
ಕಳೆದ ಹದಿನೈದು ದಿನಗಳಿಂದ ಅತ್ಯಂತ ಖೇದ ಅನ್ನಿಸುವ ಸಂಗತಿಗಳೇ..
ಹೈದರಾಬಾದ್ ಗೆ ಹೋಗುತ್ತಿದ್ದ ಬಸ್
ನ ಪ್ರಯಾಣಿಕರ ದುರ್ಮರಣ ಅತ್ಯಂತ ನೋವನ್ನು ಉಂಟು ಮಾಡಿತ್ತು. ಅದಾದ ಸ್ವಲ್ಪ ದಿನಗಳಲ್ಲೆ ನನ್ನ ಕಸಿನ್ ಮಗ ನದಿಯಲ್ಲಿ ಕಾಲು ಜಾರಿ ಮರಣಹೊಂದಿದ.ಅವನಿಗೆ
ಕೇವಲ 18 ವರ್ಷ ಮಾತ್ರ. ಅದೆಲ್ಲಕ್ಕಿಂತ ಮನಸ್ಸಿಗೆ ತ್ರಾಸ ಅನ್ನಿಸಿದ್ದು ಆ ಹುಡುಗನ ಅಮಾಯಕ ತಾಯಿ ತಂದೆಯರ ಸ್ಥ್ತಿತಿ. ಹಳ್ಳಿಯಲ್ಲಿರುವ ಪಾಪದವರು..
ನಿನ್ನೆ ಮತ್ತೆ ಬಸ್ ನಲ್ಲಿ ದುರ್ಮರಣ ಕ್ಕೆ ತುತ್ತಾದ
ಮಂದಿ...
ಇನ್ನೊಂದು ವಿಷ್ಯಾ ಹೇಳೋದಿದೆ. ಕಳೆದವಾರ ಕೋಲಾರದ ಹತ್ತಿರ ಇರೋ ನಮ್ಮ ನೇಟಿವ್ ನಲ್ಲಿ ಶಾಲೆ
ಬಸ್ಸು ಪಲ್ಟಿ ಹೊಡೆಯಿತು. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಯಿತು. ಆ ಬಸ್ ನಲ್ಲಿ ನಮ್ಮ ಸೋದರ ಮಾವನ
ಮೊಮ್ಮಕ್ಕಳು ಸಹ ಇದ್ರು. ಆ ಗ್ರೂಪ್ ನಲ್ಲಿ ಅವರೇ ದೊಡ್ಡ ಮಕ್ಕಳು. ಟಿವಿ ನೈನ್ ವಾಹಿನಿಯಲ್ಲಿ ಅದರದ್ದೇ ಕಾರುಬಾರು. ನಾವು ಆ ವಾರ್ತೆ ನೋಡಿರಲಿಲ್ಲ. ನಮಗೆ ಆ ವಿಷ್ಯ ಗೊತ್ತೂ ಆಗಲಿಲ್ಲ.
ಆ ಬಳಿಕ ತಿಳಿಯಿತು. ಎಲ್ಲರೂ ಕ್ಷೇಮ ಅನ್ನೋ ಸುದ್ದಿ ತಿಳಿದು ನಮ್ಮ ಅಮ್ಮ ಮಾವನಿಗೆ ಫೋನ್ ಮಾಡಿದಾಗ ಮಾವ ಟಿವಿ
ನೈನ್ ನೋಡ್ತಾ ಇರಮ್ಮ ಒಳ್ಳೆ ಸುದ್ದಿಗಳು
ಇರುತ್ತೆ ಅಂದ್ರು.. ಹೀಗೂ ಉಂಟೆ?
ಇಂತಹ ಪ್ರಸಂಗಗಳನ್ನು ನೋಡುವಾಗ ಬದುಕೆಷ್ಟು
ಅನಿಶ್ಚಿತ ಅಂತ ಅನ್ನಿಸುತ್ತೆ. ಅಂತಹುದರಲ್ಲಿ ಕಲರ್ ವಾಹಿನಿಯಲ್ಲಿ ಬಿಗ್ ಬಾಸ್
ಆಟಗಾರರನ್ನು ಗಮನಿಸುವಾಗ ಆಶ್ಚರ್ಯ ಆಗುತ್ತದೆ. ಎಲ್ಲದಕ್ಕೂ ಜಗಳ ಎಲ್ಲಕ್ಕೂ..!
ಕುಶಾಲ್ ತಂಡನ್ ನನಗೆ ಅತ್ಯಂತ ಆಶ್ಚರ್ಯ ತಂದ ವ್ಯಕ್ತಿ. ಅದೇ ರೀತಿ ಅರ್ಮಾನ್..
ಕುಶಾಲ್ ನಾಗರೀಕ ಅಸಭ್ಯ ಪ್ರಾಣಿಗೆ ಮತ್ತೊಂದು ಹೆಸರು ಅಂತ ಹೇಳ ಬಹುದು ಬಿಡಿ. ಈಗ ಆತ ಇಲ್ಲ ಆದರೂ…ಆ ಅಸಭ್ಯ ಪ್ರಾಣಿಗಾಗಿ
ಗೌಹರ್ ಒದ್ದಾಡ್ತಾ ಇರೋದು ನೋಡಿದ್ರೆ ಪ್ರೀತಿ ಕುರುಡು ಅಂತ ಪಕ್ಕಾ ಅನ್ನಿಸುತ್ತೆ.
ನೇರವಾಗಿ ಹೇಳ್ತೀನಿ ಸಲ್ಮಾನ್ ಕನ್ನಡದ
ಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ ಬಿಡಿ!
ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಿ ಕೊಡುವಾಗ ಪ್ರೆಸೆಂಟರ್ಸ್ ಗಳು ತೆಗೆದು ಕೊಳ್ಳುವ ಮೊತ್ತದ ಕಡೆಗೆ ಮಾತ್ರ ಎಲ್ಲರ ಗಮನ ಇರುತ್ತದೆ,
ಆದರೆ ಅವರು ಅನುಭವಿಸುವ ಕಿರಿಕಿರಿ!
ನನಗೆ ಕಳೆದ ವಾರ ಸಲ್ಮಾನ್ ಖಾನ್ ಒಂದು
ಅಂಶ ಜಾಸ್ತಿ ಇಷ್ಟ ಆಯ್ತು.. ಪ್ರತಿವಾರ ಒಬ್ಬ ವೀಕ್ಷಕರಿಗೆ ಫೋನ್ ಮಾಡುವ ಅವಕಾಶ ಇರುತ್ತೆ. ಕಳೆದ ವಾರ ಹಾಗೆ ಮಾಡಿದ
ವ್ಯಕ್ತಿಗೆ ಸಲ್ಮಾನ್ ಜೊತೆ ಮಾತನಾಡುತ್ತಿರುವುದು ಗೊತ್ತೆ ಆಗಲಿಲ್ಲ. ಆಗ ಸಲ್ಮಾನ್ ಏನ್ ಮಾಡಿದ್ರು ಅಂದ್ರೆ ಮೈ ಅಮಿತಾಬ್ ಬಚ್ಚನ್ ಕೌನ್ ಬನೆಗಾ ಕರೋಡ್ ಪತಿ ಸೆ ಎಂದು
ಆ ಕಾಲರ್ ಗೆ ಕಾಲ್ ಎಳೆದರು. ಅದು ಮಾತ್ರ ಆ ವಾರದ ದಿ ಬೆಸ್ಟ್ ಅನ್ನಿಸಿತು ಸಚ್ಚಿ!
1 comment:
ನಿಜ ಹೇಳಬೇಕಾದರೆ ಸಾವಿನ ಸುದ್ದಿಗಳ ಚಿತ್ರೀಕರಣ ಮಾಡುವಾಗಲೂ ಒಬ್ಬ ಛಾಯಾಗ್ರಾಹಕನಾಗಿ ನಮಗೂ ಅತೀವ ದುಖವೇ. ಒಂದು ಸಾವು ಒಂದು ಕುಟುಂಬದ ದೀಪವೇ ಆರಿಸಿಹಾಕಿರುತ್ತದೆ! :(
Post a Comment