ಕಲರ್ ವಾಹಿನಿಯಲ್ಲಿ ಕಾಮಿಡಿ ವಿತ್ ಕಪಿಲ್ ಹೆಚ್ಚು ಜನಪ್ರಿಯ. ಆ ಲೆವೆಲ್ ನಲ್ಲೇ ಕನ್ನಡದಲ್ಲಿ ಜೋಕ್ ಮಾಡುವ ಪ್ರತಿಭಾವಂತ ಅಂದ್ರೆ ಮಾಸ್ಟರ್ ಮಿಸ್ಟರ್ ಆನಂದ್. ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರತಿರಾತ್ರಿ ಆನಂದ್ ಹಾಸ್ಯ ಧಾರವಾಹಿ ಪ್ರಸಾರ ಆಗುತ್ತದೆ. ಇರುವ ಇಪ್ಪತ್ತು ನಿಮಿಷಗಳಲ್ಲಿ ಆತ ಕಾಲುಗಂಟೆ ಉಲ್ಲಾಸವಾಗಿರುವಂತೆ ಧಾರವಾಹಿ ಸಿದ್ಧ ಮಾಡಿರುತ್ತಾರೆ ತಮ್ಮ ಟೀಂ ಜೊತೆ. ಭರಫೂರ ನಗೆ ಬರುತ್ತೆ. ಮೊದಲಿನಿಂದಲೂ ಆನಂದ್ ಧಾರವಾಹಿಗಳು, ನಟನೆ ಇಷ್ಟ ಆಗಿದೆ ನನಗೆ. ಅದರಲ್ಲೂ ಆಗಾಗ ಜಗ್ಗೇಶ್ ರೀತಿ, ಒಮ್ಮೊಮ್ಮೆ ಅಣ್ಣಾವರು, ಡಾ. ವಿಷ್ಣು ಹೀಗೆ ಅವರಂತೆ ನಟಿಸುವ ಪರಿ ಭಯಂಕರ ಮುದ ನೀಡುತ್ತದೆ. ಕನ್ನಡದ ಈ ಪ್ರತಿಭೆ ಹೈಲೆವೆಲ್ ಗೆಯಾಕೆ ಹೋಗಿಲ್ಲ ಅಂತ ಬೇಜಾರಾಗುವ ಅಗತ್ಯ ಇಲ್ಲ ಆತ ಕನ್ನಡಿಗರ ಮನದಲ್ಲಿ ಸದಾ ಶಾಶ್ವತ.
ನಾನು ಟ್ವೀಟ್ ಮಾಡೋದೆ ಕಡಿಮೆ. ಹಾಗೆ ಸುಮ್ಮನೇ ಫಾಲೋ ಮಾಡ್ತೀನಿ. ಸಲ್ಮಾನ್ ಖಾನ್ ಹತ್ರ ಇತ್ತೀಚೆಗೆ ಹೋದಾಗ ?! ಬಿಗ್ ಬಾಸ್ ನೋಡ ಬೇಡಿ ಅಂತಾನೆ ಇತ್ತು ಟ್ವೀಟ್ ನಲ್ಲಿ.. ಯಾಕ ಪಾ..ಅ ಅ.. ಅಂತ ಕೇಳೋಲ್ಲ ಸಲ್ಮಾನ್ boy. ಬಿಗ್ ಬಾಸ್ ಎಂದಿಗೂ ಬದಲಾಗದ ಕಾನ್ಸೆಪ್ಟ್ ಇರುವ ರಿಯಾಲಿಟಿ ಶೋ. ಅದರಲ್ಲಿ ಸಲ್ಮಾನ್ ಮಾತು -ನಗು ಇಷ್ಟ ವಾಗುತ್ತೇ. ಆದರೆ ಇತ್ತೀಚೆಗೆ ಅದ್ಯಾಕೋ ಅವರು ಶರ್ಟ್ ತೋಳಿನ ಬಟನ್ ಬಿಚ್ಚಿ ನೀವು ನಿಮ್ಮ ಇಷ್ಟದಂತೆ ಮಾಡಿ ನಾನು ನನ್ನ ಇಷ್ಟದಂತೆ ಇರ್ತೀನಿ ಅಂತ ಹೇಳ್ತಾರೆ. ಅವರೇನು ಮಾಡ್ತಾರೆ ಅಂತ ಹೇಳಿದ್ರೆ ನಮಗೂ ಗೊತ್ತಾಗುತ್ತೆ ಅಲ್ವಾ boy!
ಮೊಸ್ಟ್ಲಿ ಕಳೆದ ತಿಂಗಳಲ್ಲಿ ಇರಬೇಕು ಸಲ್ಮಾನ್ ಖಾನ್ ಗೆ ಸಂಬಂಧಪಟ್ಟಂತೆ ಒಂದು ಪುಟ್ಟ ಸಂದರ್ಶನ ಓದಿದೆ ಟೈಮ್ಸ್ ಆಫ್ ಇಂಡಿಯಾದಲ್ಲಿ. ಅಲ್ಲಿ ಆತ ಯಾಕೆ ಸಾಮಾನ್ಯವಾಗಿ ಶರ್ಟ್ ಬಿಚ್ಚೋದು ಅನ್ನುವುದರ ಬಗ್ಗೆ ಇತ್ತು. ಅವರಿಗೆ ಬಟ್ಟೆಗೆ ಬಳಸುವ ದಾರಗಳು (ನೇಯ್ಗೆ) ಅಲರ್ಜಿ ಉಂಟು ಮಾಡುತ್ತದೆಯಂತೆ. ಹೊಲಿಸಿದ ಬಟ್ಟೆಯನ್ನು ಒಗದೇ ಬಳಸುವುದಂತೆ. ಧರಿಸಿರುವ ಬಟ್ಟೆ ಬಿಚ್ಚುವುದು ಅದಕ್ಕೆ ಅಂತೆ. ದೇವರ ದಯೇ ಅವರಿಗೆ ಶರ್ಟ್ ಮಾತ್ರ ಅಲರ್ಜಿ !!
ಟೀವಿ ನೈನ್ ವಾಹಿನಿಯಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದ ಬಗ್ಗೆ ಉಷಾ ಹೇಳುತ್ತಿದ್ದರು ಇತ್ತೀಚೆಗೆ. ತೀರಾ ನಗು ಬಂದ ಸಂಗತಿ ಅಂದ್ರೆ ಆ ವಾಹಿನಿಯವರ ಟೆನ್ಷನ್ ಬಗ್ಗೆ. ಸಲ್ಮಾನ್ ಡೇಟಿಂಗ್ ಇಲ್ಲ, ಗರ್ಲ್ ಫ್ರೆಂಡ್ ಇಲ್ಲ, ಅದು ಮಾಡಿಲ್ಲ- ಇದು ಮಾಡಿಲ್ಲ ಅಂತ ಹೇಳಿದರೆ ಇವರು ಒದ್ದಾಡಿದ್ದೇ ಒದ್ದಾಡಿದ್ದು ಹೌದಾ ಹೌದಾ ಅಂತಾ? ಒಂದಂತೂ ಸತ್ಯ. ಯಾರ ಬಗ್ಗೆ ಯಾರಿಗೂ ಪೂರ್ಣವಾಗಿ ಗೊತ್ತಿರಲ್ಲ. ನಮಗೆ ಮಾತ್ರ ನಾವೇನು ಅಂತ ತಿಳಿದಿರೋದು. ಅದಕ್ಕೆ ಈ ಜಗತ್ತಿನಲ್ಲಿ ಇರುವ ನಿಗೂಢಗಳಲ್ಲಿ ಮನುಷ್ಯನ ವರ್ತನೆ ಮತ್ತು ಮನಸ್ಸು ಸಹ ಸೇರಿದೆ. ಸಲ್ಮಾನ್ ಬಗ್ಗೆ ಅವರಿಗಿಂತ ಯಾರಿಗೆ ಹೆಚ್ಚು ಗೊತ್ತು ? ಅಕಸ್ಮಾತ್ ಅವರು ಅವರ ಬಗ್ಗೇನೆ ಸುಳ್ಳು ಹೇಳಿದರೆ ಅವರಿಗೆ ಅವರೇ ಮೋಸ ಮಾಡಿಕೊಂಡಂತೆ ಅಲ್ಲವೇ? ಅದಕ್ಕಿಂತ ಬೇಸರದ ಸಂಗತಿ ಇನ್ನೇನಿರುತ್ತೇ??
No comments:
Post a Comment