ಕಳೆದ ಕೆಲವು ದಿನಗಳಿಂದ ಕನ್ನಡ ದೃಶ್ಯ ಮಾಧ್ಯಮಗಳಲ್ಲಿ ಬರಿ ಅತ್ಯಾಚಾರದ್ದೇ ಸುದ್ದಿ . ಕಾಮುಕರ ರಾಜ್ಯ, ಇನ್ನೊಬ್ಬರ ರಾಜ್ಯ , ಅದೂ ಇದೂ ಅನ್ನುವ ಶೀರ್ಷಿಕೆಗಳ ಮುಖಾಂತರ ತಮ್ಮ ಆಕ್ರೋಶವನ್ನು ತೋರುತ್ತಾ ಆ ರಾಜದ ಸತ್ಪ್ರಜೆಗಳು ತಾವು ಅನ್ನೋದನ್ನು ಮರೆತುಹೋಗಿದ್ದರು ಬರೆಯುವವವರು, ಮಾತಾಡುವವರು, ಚರ್ಚಿಸಿದವರು, ಕೋಪಿಸಿ ಕೊಂಡವರು.... ಯಪ್ಪ ಯಪ್ಪಾ !
ಆದರೆ ಅತ್ಯಂತ ಸೂಕ್ಷ್ಮ ಸಂಗತಿ ಆದ ಈ ಅತ್ಯಾಚಾರ ಮಾತ್ರ ತುಂಬಾ ಖೇದ ಹಾಗೂ ಹೇಯ!ತನ್ನ ಶಕ್ತಿಯನ್ನು, ಅಧಿಕಾರ, ಅಸಂತೃಪ್ತಿ ಏನೇ ಇರಲಿ ಹೆಣ್ಣನ್ನು ಹೀಗೆ ಹಿಂಸಿಸಿ ಪ್ರತಿಕಾರ ತೋರುವ ವರ್ತನೆ ಎಂದಿಗೂ ಅಕ್ಷಮ್ಯ.
ಸಾಮಾನ್ಯವಾಗಿ ಈ ರೀತಿಯ ಸೂಕ್ಷ್ಮವಾದ ಸಂಗತಿಗಳ ಬಗ್ಗೆ ಚರ್ಚೆ ಮಾಡುವಾಗ ನಿರೂಪಕರು ಸಹ ಸೂಕ್ಷ್ಮ ಸಂವೇದಿ ಆಗಿರ ಬೇಕು ಅನ್ನುವುದು ನನ್ನ ಅಭಿಪ್ರಾಯ. ಅದನ್ನು ಹೊರೆತು ಪಡಿಸಿ ಸಿಕ್ಕಾಪಟ್ಟೆ ಕೂಗಾಡುವ, ಕಿರುಚಾಡುವ ನಿರೂಪಕರು ಇದ್ದರೆ ಅಂತಹ ಸಂಗತಿಗಳು ತಲುಪ ಬೇಕಾದ ಸ್ಥಳಕ್ಕೆ ತಲುಪದೇ ಟೀವಿ ಆರಿಸಿ ಬಿಡುವ ಅಥವಾ ಬೇರೆ ಚಾನೆಲ್ ಕಡೆಗೆ ಹೋಗುವ ಸಂಭವ ಅಧಿಕ !ಹಿಂದಿ ವಾಹಿನಿಯಲ್ಲಿ ಅಮೀರ್ ಖಾನ್ ಅವರ ಸತ್ಯಮೇವ ಜಯತೆ ಕಾರ್ಯಕ್ರಮ ಇಷ್ಟಾ ಆಗಿದ್ದು ಅವರ ಸೂಕ್ಷ್ಮ ಸಂವೇದಿ ಗುಣದಿಂದ!
ಸೂಕ್ಷ್ಮ ಸಂವೇದನೆಯ ನಿರೂಪಕರ ಸಾಲಿಗೆ ಸುವರ್ಣವಾಹಿನಿಯಲ್ಲಿ ಬದುಕು ಕಂಡುಕೊಂಡಿರುವ ಅಜಿತ್ ಹನುಮಕ್ಕನವರ್ ಸೇರ್ಪಡೆ ಆಗ್ತಾರೆ... ಅತ್ಯಾಚಾರದಿಂದ ವರ್ಷಾನುಗಟ್ಟಲೆ ನ್ಯಾಯ ಸಿಗದೇ ನಿರಪರಾಧಿ ಹೆಣ್ಣುಮಕ್ಕಳ ದುಃಖ, ಅವರ ಅಸಹಾಯಕತೆ ... ಅವರ ನೋವಿಗೆ ಸ್ಪಂದಿಸಿದ ಅಜಿತ್... !!ಕಾರ್ಯಕ್ರಮ ನಿನ್ನೆ ಪ್ರಸಾರ ಆಯ್ತು...
ಕರಾಳ ಕರ್ನಾಟಕ ಅದೂ ಇದೂ ಅಂತ ಹೇಳುತ್ತಾ ಘೋಷಣೆ ಕೂಗುವುದರಿಂದ ಏನೇನು ಪ್ರಯೋಜನ ಇಲ್ಲ ಬಿಡಿ..! ಎಷ್ಟೇ ಲಾ ಬಂದರು ನಮ್ಮಲ್ಲಿ ಬದಲಾವಣೆ ಆದರೆ ಮಾತ್ರ ಸಮಸ್ಯೆಗೆ ಪರಿಹಾರ..
@@ ಅತ್ಯಾಚಾರದ ಬಗ್ಗೆ ಒಂದು ಸಿನಿಮಾವನ್ನು ಸಾಕಷ್ಟು ವರ್ಷಗಳ ಹಿಂದೆ ನೋಡಿದ್ದೇ, ಆಂಗ್ಲ ಚಿತ್ರ, ಹೆಸರು ಮರೆತು ಹೋಗಿದೆ. ಕರಿಯರು - ಬಿಳಿಯರ ನಾಡು.ಅಲ್ಲಿ ಸುಸಂಸ್ಕೃತ ಕರಿಯರ ಕುಟುಂಬ.. ಅಪ್ಪ ಅಮ್ಮ ಇಬ್ಬರು ಮೂರುಜನ ಮಕ್ಕಳು. ಅವರಲ್ಲಿ ಹಿರಿಯಮಗಳಿಗೆ 12 ವರ್ಷ. ಆ ಹುಡುಗಿ ಮನೆಯ ಕೆಲವು ಹೊಣೆ ಹೊತ್ತವಳು.. ಎಲ್ಲವು ಚಂದ ಇತ್ತು ಸ್ವಲ್ಪ ಕಾಲದವರೆಗೂ. ಆದರೆ ಮನುಷ್ಯ ಎನ್ನುವ ಕ್ರೂರ ಮೃಗ ಇರುವ ಕಡೆ ಬದಲಾವಣೆ ಆಗಲೇ ಬೇಕಲ್ಲವೇ. ಅದೇರೀತಿ ಒಂದು ದಿನ ಆಕೆ ಸಾಮಾನು ತರಲು ಮಾರುಕಟ್ಟೆಗೆ ಹೋದಳು.ಹಿಂತಿರುಗಿ ಬರುವಾಗ ಆಕೆ ಒಂದಷ್ಟು ಕಾಮಾಂಧರು ಕುಡಿದ ಮತ್ತಿನಲ್ಲಿ ಆ ಎಳೆಯ ಹುಡುಗಿಯ ಮೇಲೆ ತೀವ್ರವಾಗಿ ಅತ್ಯಾಚಾರ ಮಾಡಿ ಬಿಡ್ತಾರೆ. ಅವರು ಬಿಳಿಯರಾಗಿರ್ತಾರೆ. ಅದೆಷ್ಟು ಕ್ರೂರವಾಗಿ ಆಕೆಯನ್ನು ಹಿಂಸಿಸಿರುತ್ತಾರೆ ಅಂದ್ರೆ ಅವಳ ಮೂತಿ ಸೊಟ್ಟಗಾಗಿ, ದೇಹದ ಭಾಗಗಳು ಒಂದರ್ಥದಲ್ಲಿ ನಿಷ್ಕ್ರಿಯೇ ಆಗಿ ಬಿಡುತ್ತದೆ.. ಕಣ್ಣನ್ನು ಸಹ ತೊಂದರೆಗೆ ಒಳಪಡಿಸಿರುತ್ತಾರೆ ಅಂತ ನೆನಪು ! ಆಕೆಯ ಪರವಾಗಿ ಬಿಳಿಯ ಲಾಯರ್ ಒಬ್ಬರು ನಿಲ್ಲುತ್ತಾರೆ. ಸಿನಿಮಾದಲ್ಲಿ ಬರಿ ಆ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ಬಿಡಿಸಿ ಹೇಳುತ್ತಾರೆ ನಿರ್ದೇಶಕರು.. ಅಂತಿಮವಾಗಿ ಆ ಹುಡುಗಿಗೆ ನ್ಯಾಯ ಸಿಗುತ್ತದೆ.. ಆ ಚಿತ್ರ ನೋಡಿದ ಅನೇಕ ತಿಂಗಳು ನನ್ನ ಮನಕ್ಕೆ ದುಃಖ ಆಗಿತ್ತು. ದೆಹಲಿಯ ನಿರ್ಭಯ ಅತ್ಯಾಚಾರ-ಸಾವು ಸಹ ಇಂತಹ ನೋವು ಕೊಟ್ಟಿತ್ತು. ಮಾಧ್ಯಮಗಳು ವಿಷಯವನ್ನು ಕೇವಲ ತಮ್ಮ ರೇಟ್ ಹೆಚ್ಚಿಸಿಕೊಳ್ಳುವ ಭರದಲ್ಲಿ ಒಂದೆರಡು ದಿನ ಇಂತಹ ಸುದ್ದಿಯನ್ನು ಕೊಟ್ಟು ಸುಮ್ಮನಾಗುತ್ತಾರೆ .. ಪ್ರತಿದಿನ ಇಂತಹ ಸುದ್ದಿ ಇರಲಿ ಅಂತಲ್ಲ ಆದರೆ ಅತಿಯಾದ ವೈಭವೀ ಕರಣಕ್ಕಿಂತ ಸಾಮಾಜಿಕವಾಗಿ ಯಾವ ರೀತಿ ಇಂತಹ ಸಮಸ್ಯೆಗಳಿಗೆ ಅಥವಾ ಪಿಡುಗು {ಏನು ಬಳಸಬೇಕೋ ತಿಳಿತಿಲ್ಲ} ಪರಿಹಾರ ನೀಡುವುದಕ್ಕೆ ಪ್ರಯತ್ನ ಪಟ್ಟರೆ , ಜನರಲ್ಲಿ ಆ ಒಂದು ಅವೇರ್ ಮೂಡಿಸುವತ್ತ ಗಮನ ನೀಡಿದರೆ ....? ಮಾಧ್ಯಮಕ್ಕಿಂತ ಪ್ರಭಾವಶಾಲಿ ಯಾವುದಿದೆ? ಹೆಣ್ಣಿಗೆ ಸಮಾನ ಹಕ್ಕು ನೀಡುವ ಮನಸ್ಸು ಸಮಾಜಕ್ಕಿಲ್ಲ ಬಿಡಿ.. ಕನಿಷ್ಠ ಆಕೆಗೆ ಬದುಕುವ ಹಕ್ಕನ್ನಾದರೂ ನೀಡಿದರೆ....!!
1 comment:
ಅಜಿತ್ ಸಾರ್, ಅವರು ಸವಿವಾರವಾಗಿ ಆದರೆ ಅತ್ಯಾಚಾರದಂತಹ ಸೂಕ್ಷ್ಮ ವಿಚಾರವನ್ನು ಹೇಗೆ ನಿಬಾಯಿಸಬೇಕೋ ಹಾಗೆಯೇ ನಿರೂಪಿಸಿದರು.
ಪುಟ್ಟ ಬಾಲಕಿಯ ಮೇಲೆ ಕಾಮಾಂಧನ ಅಟ್ಟಹಾಸವನ್ನು ಹೇಳುವಾಗ ಇಡೀ ಸ್ಟುಡಿಯೋ ಮತ್ತು ಅಜಿತ್ ಅವರೂ ಕಣ್ಣೀರಾದರು.
:(
Post a Comment