ಚಂದನ ವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಆಕರ್ಷಣೆ ಯಾವ ಪುಸ್ತಕಗಳು ಈಗ ಜನರ ಮುಂದೆ ಬರುತ್ತಿದೆ. ನಾ. ಸೋಮೇಶ್ವರ್ ಅವರು ಯಾವ ಪುಸ್ತಕಕದ ಬಗ್ಗೆ ವಿವರಣೆ ನೀಡುತ್ತಾರೆ ಅನ್ನೋದು! ಅನೇಕ ಬಾರಿ ಅವರು ಹೇಳುವ ರೀತಿಗೆ ಕೊಳ್ಳುವ ಮನಸ್ಸು ಆಗುತ್ತದೆ. ನಮ್ಮ ಅಮ್ಮನ ಮೆಚ್ಚಿನ ಕಾರ್ಯಕ್ರಮಗಳಲ್ಲಿ ಇದು ಒಂದು. ಅವರು ಇಷ್ಟಪಟ್ಟು ನೋಡ್ತಾರೆ. ಒಂದು ದಿನ ನೀನು ಒಂದಾದರು ಪುಸ್ತಕ ಬರಿ.. ಅದು ಥಟ್ ಅಂತ ಹೇಳಿಗೆ ಕಳುಹಿಸು ಅಂತ ಅಂದ್ರು,ಅಲ್ಲದೆ ಅದರ ಹೆಸರು ನನ್ನ ಕಥೆ ಅಂತ ಇರ್ಲಿ ಎಂದು ಸಹ ಹೇಳಿದ್ರು.. ಅಲ್ಲಿಯೇ ಇದ್ದ ನನ್ನಕ್ಕ ಅಕಸ್ಮಾತ್ ಅಲ್ಲಿ ಬಂದಿರುವ ಸ್ಪರ್ಧಿಗಳು ಪ್ರಶ್ನೆಗೆ ಉತ್ತರ ಹೇಳದೆ ಇದ್ದರೇ ಜಯಶ್ರೀ ಅವರ ನನ್ನ ಕಥೆ ನನ್ನಲ್ಲೇ ಉಳಿಯಿತು ಅಂತಾರೆ ಮೇಷ್ಟ್ರು ಅಂತ ನಕ್ಳು. ಹೆಚ್ಚು ಸಾಕಷ್ಟು ವೀಕ್ಷಕರಿಗೆ ಕಾರ್ಯಕ್ರಮ, ಧಾರವಾಹಿ, ಪಾತ್ರ,ನಿರೂಪಕರು ಹೀಗೆ ಕೆಲವೊಂದು ಸಂಗತಿಗಳು ಹೆಚ್ಚು ಆಪ್ತ ಆಗುತ್ತದೆ, ಅದರಲ್ಲಿ ಮೇಸ್ಟ್ರ ಇಂತಹ ಶೈಲಿ ಹೆಚ್ಚು ಖುಷಿ ಕೊಡುತ್ತದೆ. ಎಂದಿಗೂ ಬೋರ್ ಹೊದಿಸದ ಕಾರ್ಯಕ್ರಮ ಇದು..
@@ ಬರೆಯುವ ಪ್ರಪಂಚ ನನಗೆ ಹೊಸತಲ್ಲ ಆದರೆ ಇದನ್ನೇ ಬದುಕಾಗಿ ತಗೋತೀನಿ ಅಂತ ನಾನು ಒಂದು ದಿನವೂ ತಿಳಿದಿರಲಿಲ್ಲ. ಓದಿದ ವಿಷಯ ಬೇರೆ, ಕನಸುಕತ್ತಿದ್ದು ಬೇರೆ ಸಂಗತಿಗೆ ಆದರೆ ಅಂತಿಮವಾಗಿ ನೆಲೆ ಕಂಡಿದ್ದು ಇಲ್ಲಿ! ಆದರೆ ಇದನ್ನೇ ವೃತ್ತಿಯಾಗಿ ತೆಗೆದುಕೊಳ್ಳ ಬೇಕು ಅಂತ ನಿರ್ಧಾರ ಮಾಡಿದಾಗ ಒಂದು ಸಂಗತಿ ಹೆಚ್ಚು ಹೆದರಿಕೆ ಉಂಟು ಮಾಡಿತ್ತು. ಅದು ಸಿಲ್ಲಿಲಲ್ಲಿ ಸಂಗತಿ. ಅದರಲ್ಲಿ ಸಿಲ್ಲಿಗೆ ಸದಾ ಬರೆಯುವ ಹುಚ್ಚು.. ಆದರೆ ಒಂದೂ ಪಬ್ಲಿಶ್ ಆಗಲ್ಲ. ಅದೇರೀತಿ ನನ್ನ ಕಸಿನ್ ಒಬ್ಬನಿಗೆ ಸಿಕ್ಕಾಪಟ್ಟೆ ಬರೆಯುವ ಹುಚ್ಚು, ಒಂದೇಒಂದು ಬಾರಿಯೂ ಪಬ್ಲಿಶ್ ಆಗಿರಲಿಲ್ಲ.ಸಿಲ್ಲಿ ಲಲ್ಲಿ ಯನ್ನು ಈಟಿವಿಯಲ್ಲಿ ನೋಡುವಾಗ ನನ್ನ ಸಾಹಸ ನೆನಪಾಗುತ್ತಿತ್ತು.
ಮತ್ತೆ ಪ್ರಸಾರ ಆಗ್ತಾ ಇದೆ.. ಒಂದು ಸಂಗತಿ.. ಆಗಷ್ಟೇ ಸಿಲ್ಲಿಲಲ್ಲಿ ಪ್ರಸಾರ ಆಗ್ತಾ ಇತ್ತು. ಆಗ ನಾನು ವಾರಪತ್ರಿಕೆ ಒಂದಕ್ಕೆ ಹೋಗಿದ್ದೆ, ಅಲ್ಲಿನ ಎಡಿಟರ್ ಮಾತಿನ ಮಧ್ಯೆ ಹೆಚ್ಚು ಮೆಚ್ಚಿಕೊಂಡಿದ್ದು ಸಿಲ್ಲಿಲಲ್ಲಿಯನ್ನು. ಆಗ ಪಾಪ ಪಾಂಡು ಕಾಲ .. ಈ ಪಾಂಡುಗಿಂತ ಸಿಲ್ಲಿ ಚೆನ್ನಾಗಿ ಮಾಡ್ತಾಳೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದರು !
@@
ಸಾಧ್ಯ ಆದ್ರೆ ಅಸ್ಸಾಮಿ ಚಾನೆಲ್ ನೋಡಿ ರಾಮಧೇನು ಅಂತ ಹೆಸರು.. ಸಕತ್ತಾಗಿರುತ್ತೆ ಅದರಲ್ಲಿ ಪ್ರಸಾರ ಆಗುವ ಹಾಡುಗಳು. ಅಸಮಾನ್ಯ ಸಂಗೀತ ನಿರ್ದೇಶಕರು ಈಶಾನ್ಯ ಭಾರತದಿಂದ ಬಂದಿದ್ದಾರೆ, ಆಹಾ ಸಕತ್ .. ಆದ್ರೆ ಅನೇಕ ಸಂಗತಿಗಳು ಅಂದ್ರೆ ಪಿಕ್ಚರೈಸ್ ಆಗಿರುವ ಸಂಗತಿಗಳು ಹೆಚ್ಚಾಗಿ ಎಂಬತ್ತರ ದಶಕದ ಸಮೀಪದಲ್ಲೇ ಇತ್ತು. ಆದರೆ ನಾನು ಹಳೆಯ ಹಾಡುಗಳನ್ನು ನೋಡಿದೆನೇನೋ ಗೊತ್ತಿಲ್ಲ, ಆದರೆ ಎಂತಹ ಮೆಲೋಡಿ ಹಾಡುಗಳು ಗೊತ್ತೇ! ಭಾಷೆ ಅರ್ಥ ಆಗದೆ ಇದ್ರೂ ಸಂಗೀತಕ್ಕೆ ಭಾಷೆ ಗೊಡವೆ ಇಲ್ಲ!
@@ ಸುವರ್ಣ ಸುದ್ದಿ ವಾಹಿನಿಯಲ್ಲಿ ಮಿತ್ರ ಬದರಿನಾಥ್ ಪಲವಳ್ಳಿ ಕೆಲಸ ಮಾಡೋದು.. ಕೈಲಿ ಕ್ಯಾಮರ ಹಿಡಿದು ಬೇಕು ಬೇಡದ ದೃಶ್ಯಗಳನ್ನು ಸೆರೆ ಹಿಡಿಯುವ ಈ ಗೆಳೆಯ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಅರಿವನ್ನು ಹೊಂದಿರುವ ಪ್ರತಿಭಾವಂತ. ಬರೆಯುವ ಮತ್ತು ಬರೆಯುವವರನ್ನು ಪ್ರೋತ್ಸಾಹಿಸುವ ಮನಸ್ತತ್ವ ಹೊಂದಿರುವ ಮಿತ್ರ. ಬ್ಲಾಗ್ ಬರೆಯಿರಿ ಅಂತ ಹೆಚ್ಚು ಹೇಳೋದು ಈತನೇ.. ನನಗೆ ಬ್ಲಾಗ್ ಓದೋಕೆ ಇಷ್ಟ ಅಂತ ಹೇಳುವ ಬದರಿ ಸಹನೆ ಎಲ್ಲರಿಗು ಕೊಡು ತಂದೆ ಅಂತಾ ಕೇಳಿಕೊಳ್ತೀನಿ... ತಪ್ಪದೆ ಓದಿ ತಮ್ಮ ಅನಿಸಿಕೆ ಹೇಳುವ ಈ ಗೆಳೆಯನಿಗಿರುವ ಗೆಳೆಯರ ಗುಂಪು ಅಪಾರ. ಚಾನೆಲ್ ಒಂದರಲ್ಲಿ ಕೆಲಸ ಮಾಡುವಾಗ ಅಲ್ಲಿಂದ ಹೊರ ಬರ ಬೇಕಾದ ಪರಿಸ್ಥಿತಿ . ಅವರ ಆ ನೋವಿನ ಕ್ಷಣಗಳು ಇನ್ನು ಕಣ್ಣಿಗೆ ಕಟ್ಟಿದಂತಿದೆ. ಸುವರ್ಣ ನ್ಯೂಸ್ ನಲ್ಲಿ ಈಗ ಬದುಕು ಕಾಣುತ್ತಿರುವ ಬದರಿ ತಮ್ಮ ಗುರು ಸುಬೋಧ್ ಜೋಷಿ ಮತ್ತು ಟೀಮ್ ನೊಂದಿಗೆ ಹಾಯಾಗಿದ್ದಾರೆ {ಹಾಗಂತ ಗೆಸ್ ಮಾಡ್ತಾ ಇದ್ದೀನಿ } ಒಟ್ಟಾರೆ ಕಾಯಕವೇ ಕೈಲಾಸ ಎಂದು ಜೊತೆಗೆ ಬ್ಲಾಗ್ ಓದೋದು ನನ್ನ ಹವ್ಯಾಸ ಎಂದು ಬದುಕನ್ನು ವಿಭಿನ್ನ ರೀತಿಯಲ್ಲಿ ಸಾಗಿಸುತ್ತಿರುವ ಗೆಳೆಯ ಬದರಿಗೆ ನಮೋನ್ನಮಃ
2 comments:
ಮೊದಲು ಚಂದನ ವಾಹಿನಿಗೆ ಕೃತಜ್ಞತೆಗಳು. ಈಗೀಗ ಯಾವುದೇ ಕಾರ್ಯಕ್ರಮ ನೂರು ಕಂತು ತಲುಪೋದು ಸಹ ಅಚ್ಚರಿಯೇ!
ನಾ. ಸೋಮೇಶ್ವರ್ ಅವರ ಪುಸ್ತಕ ಪ್ರೀತಿಗೆ ನಮಃ. ಜಯಶ್ರೀಯವರೇ ಇವರೂ ಸಹ ನಮ್ಮ ಅವಿಭಜಿತವಾಗಿದ್ದ ಕೋಲಾರ ಜಿಲ್ಲೆಯವರೇ.
ಫೈನಲ್ ಕಟ್ ಎಂದರೆ ಹಾಗೆ ಅವರು ಸಿಹಿ ಕಹಿಗೂ ಸೈ... ಬೊಂಬಾಟ್ ಭೋಜನಕ್ಕೂ ಜೈ.
ಸಂಗೀತಕಿಲ್ಲ ಭಾಷೆಯ ಹಂಗು. ಅದಕಾಗಿಯೇ ನಮಗೆ ದೂರದರ್ಶನ ಪ್ರಸಾರ ಮಾಡುತ್ತಿದ್ದ ಲೋಕ ಸಂಗೀತ ಮತ್ತು ಮಿಲೇ ಸರ್ ಮೇರಾ ತುಮ್ಹರ ಅಷ್ಟು ಇಷ್ಟವಾಗುತ್ತಿದ್ದು.
ಇನ್ನು ತಾವು ನನ್ನನ್ನು ಹೊಗಳಿ ಬರೆದದ್ದರಿಂದ ನಾನು ಮತ್ತಷ್ಟು ದುಂಡಗಾಗಿರಬೇಕು ಹೋದೆ!
ನೀವೆ ಬರೆದಂತೆ ನಾನು ಅಮಿತ ಬ್ಲಾಗ್ ಪ್ರೇಮಿ.
ಸತ್ಯ ಹೋದ ಜ್ಯೋಷಿಯವರ ದಯೆಯಿಂದನನಗೆ ಛಾಯಾಗ್ರಹಣ ಮತ್ತು ಸಾಹಿತ್ಯ ಸತ್ಸಂಗ ದೊರೆಯುತ್ತಿದೆ.
ಕನ್ನಡದ ಏಕೈಕಮಾದ್ಯಮ ಸಂಬಂಧೀ ಬ್ಲಾಗ್ ಪ್ರವರ್ತಕರಾದ ನಿಮಗೂ ಅಭಿನಂದನೆಗಳು.
Post a Comment