ಸುಂದರ ಕಾರ್ಯಕ್ರಮ...


ಉದಯ ವಾಹಿನಿಯಲ್ಲಿ ನಿರೂಪಕಿ ಶಾಲಿನಿ ನಡೆಸಿಕೊಡುವ ಕಾರ್ಯಕ್ರಮ ಒಂದು ಪ್ರಸಾರ ಆಗುತ್ತದೆ. ಅದೂ ಮಕ್ಕಳ ಕಾರ್ಯಕ್ರಮ. ಅತ್ಯಂತ ಚಂದದ ಕಾರ್ಯಕ್ರಮ. ಪುಟ್ಟಪುಟ್ಟ ಮಕ್ಕಳ ಜೊತೆ ನಡೆಸುವ ಮಾತುಕತೆ ಅದ್ಭುತ. ಆ ಮಕ್ಕಳ ಸಂಪೂರ್ಣವಾಗಿ ಮುಗ್ಧತೆಯಿಂದ ಹೇಳುವ ಮಾತುಗಳು ಪರಮಾದ್ಭುತ.  ಪ್ರತಿ ಭಾನುವಾರ ಮುಂಜಾನೆ ಪ್ರಸಾರ ಆಗುತ್ತದೆ. ಅತ್ಯಂತ ಸುಂದರ ಕಾರ್ಯಕ್ರಮ. ಯಾಕೆ ಈ ಮಾತು ಪದೇಪದೇ  ಹೇಳ್ತಾ ಇದ್ದೀನಿ ಅಂದ್ರೆ ಕಳೆದವಾರ ಮಕ್ಕಳು ಯಾವ ಆಟ ಇಷ್ಟ ಅಂತ ಹೇಳುವಾಗ ತಮಗೆ ಕ್ರಿಕೆಟ್ ಇಷ್ಟ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಅವರ ಮಾತುಗಳ ನಡುವೆ ಎಲ್ಲ ವಿಷ್ಯ ಬಂತು. ತಮ್ಮ ತಾಯಿತಂದೆಯ ಬಗ್ಗೆ ,ಕಡೆಗೆ ರಾಜಕೀಯ ಧುರೀಣ ಯಡಿಯೂರಪ್ಪನವರ ಬಗ್ಗೆ...! ಅವರ ಮುಂದೆ ತಾಯಿತಂದೆ ಆಡಿದ ಮಾತುಗಳು ಕಾರ್ಯಕ್ರಮದಲ್ಲಿ ಹೊರ ಬಂತು.  ಮಕ್ಕಳ ಮುಂದೆ ಎಚ್ಚರವಾಗಿರ ಬೇಕು ಅನ್ನೋ ಸತ್ಯವನ್ನು ಮಕ್ಕಳು  ಮತ್ತೆ ತೋರಿಸಿ ಕೊಟ್ಟರು.. ತುಂಬಾ ಚಂದದ ಕಾರ್ಯಕ್ರಮ.  ಬೆಳಗಿನ ಸಮಯದಲ್ಲಿ ಪ್ರಸಾರ ಆಗುತ್ತೆ.. ಸಾಧ್ಯ ಆದರೆ, ಹಾಗೆನ್ನುವುದಕ್ಕಿಂತ   ತಪ್ಪದೆ ನೋಡ ಬಹುದಾದ ಸುಂದರ ಕಾರ್ಯಕ್ರಮ.

@ ಶಂಕರ ವಾಹಿನಿಯಲ್ಲಿ ಡಿವೈನ್ ಪಾರ್ಕ್  ಮುಖ್ಯಸ್ಥರಾದ   ಚಂದ್ರ ಶೇಖರ  ಉಡುಪರ ಮಾತುಗಳು  ಅದ್ಭುತ. ಈಗ ನಮ್ಮ ಕಣ್ಣ ಮುಂದೆ ಸಾಕ್ಷಿ ಆಗಿರುವ ಮಹಾನ್ ಗುರು.. ಆಧ್ಯಾತ್ಮದ ಬಗ್ಗೆ ಆಸಕ್ತಿ ಇರುವವರಿಗೆ ಅತ್ಯುತ್ತಮ ಮಾರ್ಗದರ್ಶಕರು. ಧನ್ಯತೆ, ಭಗವಂತನ ಜೊತೆಗೆ ಬೆಳಸಿಕೊಳ್ಳ ಬೇಕಾದ ಅನುಬಂಧ, ಪ್ರೀತಿ ಇಂತಹ ಸಂಗತಿಗಳ ಬಗ್ಗೆ ತುಂಬಾ ಚಂದ ವಿವರಿಸಿದರು ಇಂದಿನ ಕಾರ್ಯಕ್ರಮದಲ್ಲಿ. ಅಪರೂಪ ಅನ್ನಿಸುವ ಇವರ ವಾಗ್ಜರಿ ..ಅದ್ಭುತ.ನೋಡಲೇ ಬೇಕಾದ ಕಾರ್ಯಕ್ರಮ ..

 ಇಂದು ಬರೆಯುವಾಗ ದೇಹವನ್ನು ಸತ್ತ ಬಳಿಕ ದಾನ ಮಾಡುವ ಬಗ್ಗೆ ಇರುವ ಲೇಖನ  ಬರೆಯುವಾಗ ಅರಿಯದ ಭಾವ ಉಂಟಾಗಿತ್ತು. 83  ವರ್ಷದ  ಸಂಪ್ರದಾಯ ಬದ್ಧ   ಹಿರಿಯ ಮಹಿಳೆಯೊಬ್ಬರು ಇತ್ತೀಚೆಗೆ   ಮರಣ ಅಪ್ಪಿದರು. ಅವರು ದೇಹದಾನ ಮಾಡುವುದಕ್ಕೆ  ಸಮ್ಮತಿ ನೀಡಿದ್ದರು.ಹಿಂದೂ ಧರ್ಮದಲ್ಲಿ ಇರೋದು  ಗೊಡ್ಡು ಸಂಪ್ರದಾಯ, ಕಂದಾಚಾರ ಅನ್ನುವವರು ಇಂತಹ ಹೆಣ್ಣುಮಕ್ಕಳ ನಿರ್ಧಾರಕ್ಕೆ ಏನು ಹೇಳ್ತಾರೋ.. ಬೆಳಗಿನಿಂದ ಆ ಗುಂಗಲ್ಲೇ ಇದ್ದೀನಿ ನಾನು..! ವಿದೇಶಗಳಲ್ಲಿ ಸತ್ತ ಬಳಿಕ ತಮ್ಮ ದೇಹವನ್ನು ದಾನ ಮಾಡುವ ಆಶಯ ಬಹುತೇಕ ಜನರು ಹೊಂದಿರುತ್ತಾರಂತೆ.. ಅವರುಗಳ ನಿರ್ಧಾರ ಕಂಡಾಗ ನೀನ್ಯಾರಿಗಾದೆಯೋ ಎಲೆ ಮಾನವ ಎಂದು ಹೇಳುವ ಕಾಲ ದೂರ ಆಗ್ತಾ ಇದೆ ಅಂತ ಕಾಣುತ್ತೆ..

1 comment:

Badarinath Palavalli said...

ಪಾಚೂ ಒಳ್ಳೆಯ ನಿರೂಪಕಿ. ಕಾರ್ಯಕ್ರಮವೂ ಚೆನ್ನಾಗಿದೆ.

ಎ. ಶ್ರೀನಿವಾಸ ಉಡುಪ ಅವರ ಉಪನ್ಯಾಸಗಳು ನನಗೂ ಇಷ್ಟವೇ.
ದೇಹ ದಾನದಿಂದ ನಮ್ಮ ಮುಂದಿನ ಪೀಳಿಗೆಯ ವೈದ್ಯರು ತಯಾರಾಗುತ್ತಾರೆ.