ವೆರಿ ಬ್ಯಾಡ್ ವೆರಿ ಬ್ಯಾಡ್!


ಹೀಗೆ ಲೆಕ್ಕ ಹಾಕಿಕೊಳ್ತಾ ಇದ್ದೆ ನಮ್ಮ ಕನ್ನಡದಲ್ಲಿ ಅದೆಷ್ಟು ಕನ್ನಡ ನ್ಯೂಸ್ ಚಾನೆಲ್ ಗಳಿವೆ   ಮತ್ತು ಆರಂಭ ಆಗುತ್ತಿವೆ ಅಂತ. ಆದರೆ ಅವೆಲ್ಲಕ್ಕಿಂತ ಆರಂಭ ಆಗಿರುವ ನ್ಯೂಸ್ ಚಾನೆಲ್ಗಳಲು ಅದೆಷ್ಟರ ಮಟ್ಟಿಗೆ ಜನರನ್ನು ತಲಪುತ್ತಾ ಇದೆ ಅಂತ ಲೆಕ್ಕ ಹಾಕಿದೆ... ಬೇಕಾದಷ್ಟು ಇದ್ರೂ ಕನ್ನಡ  ಜನತೆಗೆ ಮಾತ್ರ ಲೆಕ್ಕ ಹಾಕುವಷ್ಟು ಚಾನೆಲ್ಗಳು  ನೋಡುವ ಅವಕಾಶ ಇದೆ.. ವೆರಿ ಬ್ಯಾಡ್ ಅಲ್ವೇ !

ಇಂದು ವಿಶ್ವ ಎಡಚರರ ದಿನಾಚರಣೆ. ನಾನು ಲೆಫ್ಟಿ ಆದ ಕಾರಣ ನನಗೆ ನಾನೇ ವಿಶ್ ಮಾಡಿಕೊಳ್ಳುತ್ತಾ, ನನ್ನಂತಹ ಲೆಫ್ಟಿ  ಗಳಿಗೂ ನನ್ನ ಕಡೆಯಿಂದ ದೊಡ್ಡ ವಿಶ್. ಲೆಫ್ಟಿ ಗಳು ಸಕತ್ ಬುದ್ಧಿವಂತರಂತೆ, ಸಾಧಕರಂತೆ, ತುಂಬಾ ಸಾಹಸಿಗಳು, ಮಾಡ ಬೇಕಾಗಿರೋದನ್ನು ಮಾಡಿಯೇ  ತೀರುತ್ತಾರಂತೆ   :-) ಖುಷಿ ಆಯ್ತು ಅವೆಲ್ಲ ಓದಿದಾಗ .. ನಾವು ಹಾಗೆ ಇಲ್ಲದೆ ಇದ್ರೂ ಅಂತಹ ಗುಣ ಹೊಂದಿರ್ತಾರೆ ಅಂತ ಓದುವಾಗ ಖುಷಿ ಅನ್ನಿಸುತ್ತೆ. 
ಇತ್ತೀಚೆಗೆ ಪ್ರಶಂಸೆ ಅನ್ನೋ ಬಗ್ಗೆ ಓದ್ತಾ ಇದ್ದೆ.. ಪ್ರಶಂಸೆ ಮತ್ತು ಹೊಗಳಿಕೆಗೆ ಇರುವ ವ್ಯತ್ಯಾಸ ಅಪಾರ. ಬಿಡಿ ಆ ವಿಷ್ಯ. ಆದರೆ ಮನುಷ್ಯರ ಗುಣಗಳನ್ನು ಪ್ರಶಂಸೆ ಮಾಡೋದು ಹೃದಯದಿಂದ, ಹೊಗಳಿಕೆ ಹೆಚ್ಚಾಗಿ ಹೊರ ಬರುವುದರ ಬಗ್ಗೆ ನಿಮಗೆ ತಿಳಿದೇ ಇದೆ ಅದರ ಬಗ್ಗೆ ವಿವರಿಸ ಬೇಕಿಲ್ಲ.

ನನಗೆ ಪ್ರಶಂಸೆ ಮಾಡಿ ಗೊತ್ತು ... ಇತ್ತೀಚೆಗೆ ಒಂದು ಸಂಗತಿ ಓದಿದೆ ಇಲಿಯಾನ ಗೊತ್ತಲ್ಲ ದಕ್ಷಿಣ ಭಾರತದ ಸಿನಿಮಾಗಳ ಬಳಿಕ ಉತ್ತರ ಭಾರತದ ಕಡೆಗೆ ಹೊರಟ ಗೋವಾ ಹುಡುಗಿ. ಕೆಲವು ದಿನಗಳ ಹಿಂದೆ ಆಕೆ ದೆಹಲಿ ಏರ್ಪೋರ್ಟ್ನಲ್ಲಿ  ಒಬ್ಬಾಕೆ ಓಡಿ ಬಂದು ಇಲಿಯಾನ ಕೈಗೆ ಒಂದು ಪತ್ರ ನೀಡಿ ನಾನು ಹೋದ ಮೇಲೆ ಓಡಿ ಎಂದು ಹೇಳಿದಳಂತೆ. ಅದನ್ನು ಓದಿದಾಗ ಅದರಲ್ಲಿ ಆಕೆ ನೀನು ನೋಡೋಕೆ ತುಂಬಾ ಚಂದ ಇದ್ದಿ. ಸಿನಿಮಾದಲ್ಲೂ ಹಾಗೂ ನೇರವಾಗಿಯೂ ಸಹ ! ನೀನು  ಹೆಚ್ಚು ಗ್ಲಾಮರಸ್ ಪಾತ್ರಗಳಿಗೆ ಆದ್ಯತೆ ನೀಡದೆ ಸಾಮಾನ್ಯವಾಗಿ ಎಲ್ಲರಿಗೊ ಇಷ್ಟ ಆಗುವ ಪಾತ್ರಗಳಿಗೆ ಆದ್ಯತೆ ನೀಡು ಎಂದು ಬರೆದಿದ್ದರಂತೆ. ಅದನ್ನು ಓದಿದ ಆಕೆಗೆ ತಡೆಯಲಾದಷ್ಟು ಖುಷಿ ಖುಷಿ.. ಇಲಿಯಾನ ಬಗ್ಗೆ ಬರೆಯಲು ಹೊಗಳಿ ಬರೆಯಲು ಕಾದು ಕುಳಿತಿರುತ್ತಾರೆ. ಅಲ್ಲದೆ ಚಿತ್ರನಟರಿಗೆ ಇಂತಹ ಹೊಗಳಿಕೆ ಸಾಮಾನ್ಯ.. ಆದರೆ ಪ್ರಶಂಸೆ  ಮಾತುಗಳನ್ನು ಆಡುವ ಮಂದಿ ವಿರಳ..ಈ ಸಂಗತಿ ಆಕೆಗೆ ಸಕತ್ ಇಂಪ್ರೆಸ್ ಮಾಡಿತ್ತು.   ಈ ವಿಷಯದಲ್ಲಿ ಸ್ವಪ್ರಶಂಸೆ ಅಂತ ತಿಳಿ ಬೇಡಿ.. ನಾನು ತುಂಬಾ ಪ್ರಾಮಾಣಿಕವಾಗಿ   ಹೇಳೋದು ಹೇಳ್ತೀನಿ.. ದೊಡ್ಡ ದೊಡ್ಡ ಕಲಾವಿದರ ಬಗ್ಗೆ ಬರೆಯೋಕೆ ಹೋದಾಗ ಅವರಿಗೆ ಹೊಗಳಿಕೆ ಸಾಮಾನ್ಯ ನಿನ್ನದೇನು  ಮಹಾ ಅಂತ ಹೇಳಿದ ಫ್ರೆಂಡ್ಸ್ ಗಳಿದ್ದಾರೆ. ಆದರೆ ದೊಡ್ಡ ಅಭಿನೇತ್ರಿಗಳಿಗೆ ನಾನು ಹೇಳಿದ್ದು ಒಂದು ಧೂಳಿನ ಕಣ ಆದರು ತೊಂದ್ರೆ ಇಲ್ಲ.. ನನಗೆ ಅನ್ನಿಸಿದ್ದು   ಹೇಳ್ತೀನಿ..ಪ್ರಶಂಸೆ ಮಾಡ್ತೀನಿ!

@@ ಬಿಗ್ ಬಾಸ್ ಕನ್ನಡದಲ್ಲಿ ಕಿಚ್ಚ ಸುದೀಪ್ ಇಷ್ಟ ಆಗ್ತಾರೆ ಕಾರಣ ಅವರ ಒಂದು ಎನೆರ್ಜಿ ಹಾಗಿದೆ. ಮುಖ್ಯವಾಗಿ ಕೆಲವರು ತುಂಬಾ ಇಷ್ಟ ಆಗ್ತಾರೆ.. ಹಾಗಂತ ನಾವು ಅವರನ್ನು ಹೊಗಳ ಬೇಕಿಲ್ಲ.. ಪ್ರಶಂಸೆ ಮಾಡುವುದರಲ್ಲಿ ತಪ್ಪಿಲ್ಲ. ಅನೇಕ ಚಿತ್ರಗಳಲ್ಲಿ ಅನ್ನುವುದಕ್ಕಿಂತ ಅನೇಕ ಭಾಷೆಗಳಲ್ಲಿ ನಟಿಸುವ ಕೆಲಸ ನಿಜಕ್ಕೂ  ಭಿನ್ನ.. ಕಿಚ್ಚ ಬಗ್ಗೆ ಹೆಣ್ಣುಮಕ್ಕಳಿಗೆ ಸಾಕಷ್ಟು ಪ್ರೀತಿ ವಿಶ್ವಾಸ ಇದೆ. ಅದನ್ನು ವಿಶ್ವಾಸ ವಾತ್ಸಲ್ಯ ಅಂತ ಪರಿಗಣಿಸಿದರೆ ಒಳಿತು. ಬಿಗ್ ಬಾಸ್ ಅಂತ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ನಿರೂಪಿಸಿ ಜನರನ್ನು ಆಕಡೆ ಆಕರ್ಷಿಸುವ ಕೆಲಸದಲ್ಲಿ ಕಿಚ್ಚ ಪಾತ್ರ ಜಾಸ್ತಿನೇ ಇದೆ..ಅವರ ಸ್ಟೈಲ್ಸ್, ಮಾತಾಡುವಾಗ ಅಂದ್ರೆ ಹಿರಿಯ ಕಲಾವಿದರ ಜೊತೆ ಹರಟುವಾಗ ಆಗುವ ಇನ್ವಾಲ್ವ್ ಎಲ್ಲ ಇಂಪ್ರೆಸ್ಸಿವ್. 

ಬಿಗ್ ಬಾಸ್ ಮನೆಯಲ್ಲಿ ಸಂತೋಷ್ ದೊಡ್ಡ ವೆಸ್ಟ್ ಹಾಗೆ ಅಕುಲ್ ವರ್ತನೆ  ಸಹ ಅತಿ ಅನ್ನಿಸುತ್ತೆ. ಆದರೆ ಸಂತೋಷ್ ಬಚಾವ್ ಆಗಿರೋದೆ ಆಶ್ಚರ್ಯ.ಮುಖ್ಯವಾಗಿ ನೀತುಗೆ ಬಿಗ್ ಬಾಸ್ ಮನೆಯಲ್ಲಿ ಇರಬೇಕಾದ ಅಗತ್ಯ ಇದ್ದೆ ಇದೆ. ಕಾರಣ ಇಷ್ಟೇ ಆಕೆ ಸ್ವಲ್ಪ ಮಟ್ಟಿಗೆ ಡಿಪ್ರೆಸ್ ಆಗಿದ್ದಾರೆ. ಅದಕ್ಕೆ ಕಾರಣ ಆಕೆಯ ದೇಹದ ತೂಕ.. ಎಲ್ಲರಿಗು ಗೊತ್ತು ಗಾಳಿಪಟದ  ಸಣ್ಣಕ್ಕಿದ್ದ ನೀತು ದಪ್ಪ ಆಗಲು ತೆಗೆದುಕೊಂಡ ಔಷಧಿಯ ದುಷ್ಪರಿಣಾಮ ಈರೀತಿ ಮಾಡಿಸಿದೆ. ಹಾಗಂತ ಕೇಳಿದ್ದೇನೆ.. ಆ ಬೇಸರ ಮತ್ತೊಂದು ರೂಪದಲ್ಲಿ ಹೊರ ಬರ್ತಾ ಇದೆ...ದೀಪಿಕ  ಕನ್ನಡ ಕೇಳಿದಾಗ ಅಯ್ಯ ಅಯ್ಯ ಅಯ್ಯ ಅಂತ ಅನ್ನಿಸುತ್ತೆ. ಅದೇರೀತಿ ಅಕುಲ್ ಅತಿ ಮತ್ತು ಕನ್ನಡ ಕೇಳಿದಾಗ @#$%!@@#$$$$%%%^^&* ಥರದ ಭಾವ ಉಂಟಾಗುತ್ತೆ ;-)

@@ ಆಹಾ ಆಹಾ  ಸಲ್ಮಾನ್  ಖಾನ್ ಮತ್ತೆ ಬಿಗ್ ಬಾಸ್  ಕಾರ್ಯಕ್ರಮ ನಡೆಸಿಕೊಡ್ತಾ ಇದ್ದಾರೆ. ಆ ಸುದ್ದಿ ಓದಿ ಸಕತ್ ಖುಷಿ ಆಯ್ತು ನನಗೆ. ಸಲ್ಮಾನ್ ಇಲ್ಲದ ಬಿಗ್ ಬಾಸ್ ನೋ ನೋ ನೋ ಅನ್ನಿಸಿತ್ತು. ಸಲ್ಮಾನ್ ಬಗ್ಗೆ ಕಳೆದ ಹದಿನೈದು ದಿನದಿಂದ ನ್ಯೂಸ್ ಬರೀತಾನೆ ಇದ್ದೀನಿ ನನ್ನ ಆನ್ಲೈನ್ ಪೇಪರ್ ನಲ್ಲಿ ಅದರ ಬಗ್ಗೆ ಮುಂದೆ ತಿಳಿಸ್ತೀನಿ.. 

@@ ಜೀ ಹಿಂದಿಯಲ್ಲಿ ಹೊಸ ಪ್ರತಿಭೆಗಳ  ಇಂಡಿಯಾಸ್  ಬೆಸ್ಟ್ ಸಿನಿ ಸ್ಟಾರ್ ಕಿ ಖೋಜ್ ಮತ್ತು ಜಡ್ಜ್ ಗಳಾದ ವಿಜಯ್ ಕೃಷ್ಣ ಆಚಾರ್ಯ, ಅನುರಾಗ್ ಬಸು ಹಾಗು ಸೋನಾಲಿ ಬೇಂದ್ರೆ ಅವರ ಜಡ್ಜ್ಮೆಂಟ್, ಇನ್ವಾಲ್ವ್ಮೆಂಟ್ ಎಲ್ಲದಕ್ಕಿಂತ ಹೊಸ ಸ್ಪರ್ಧಿಗಳ ಬಗ್ಗೆ ಎಲ್ಲವು ಖುಷಿ ಕೊಡುತ್ತೆ. ನನಗೆ ಇಂತಹ ಹೊಸ ಪ್ರತಿಭೆಗಳು ಅಂದ್ರೆ ಜಾಸ್ತಿ ಇಷ್ಟ . ಅವರ ಬಗ್ಗೆ ಹೇಳೋಕೆ ಏನು ಇರಲ್ಲ ಲೋ ಪ್ರೊಫೈಲ್ ಆದ್ರೆ ಅತಿ ಎತ್ತರದ ಪ್ರತಿಭೆ ಆಸೆ ಇರುತ್ತದೆ..  
 ಸಾಕಷ್ಟು ಇದೆ ತಲೆಯಲ್ಲಿ ಆದ್ರೆ ಅದಾಗ ಆದಾಗ ಬರೀತೀನಿ.. 

ಕಳೆದ ವಾರವಿಡಿ ನನಗೆ ಸಕತ್ ದಿಗ್ಬ್ರಾಂತಿ ಆಗಿತ್ತು.. ಕೊಳವೆ ಬಾವಿಯಲ್ಲಿ ಆ ಮಗು ಬಿದ್ದು ಸತ್ತೆ ಹೋಯ್ತಲ್ಲ.. ಸ್ವಲ್ಪ ಇಕ್ಕಟ್ಟಾದರು   ನಮಗೆ ಇರೋಕೆ ಆಗಲ್ಲ ಅಂತಹ ಪರಿಸ್ಥಿತಿ ಯಲ್ಲಿ ಆ ಮಗು ಅದೆಷ್ಟು ಕಷ್ಟ ಪಟ್ಟಿರ ಬಹುದು? ಅದೆಷ್ಟು ಹೆದರಿರ ಬಹುದು.. ಈ ಸಾವು ನ್ಯಾಯವೇ ?

1 comment:

Badarinath Palavalli said...

ಕನ್ನಡದಲ್ಲಿ ಹಲವು ವಾರ್ತಾ ವಾಹಿನಿಗಳಿದ್ದರೂ ಅವುಗಳನ್ನು ಜನತೆ ನೋಡುವ ಭಾಗ್ಯ ಕರುಣಿಸಬೇಕಿರುವುದು ಕೇಬಲ್ ಸಹೋದರರಲ್ಲವೇ!

’ಮಾಡ ಬೇಕಾಗಿರೋದನ್ನು ಮಾಡಿಯೇ ತೀರುತ್ತಾರಂತೆ’ all the bestಊ...

ಪ್ರಶಂಸೆಗಿಂತಲೂ ಸ್ವಪ್ರಶಂಸೆ danger. ಅರ್ಧ celebrity ಗಳು ಎಡವೋದೇ ಇಲ್ಲಿ!

ಸುದೀಪರೇ ಬಿಗ್ ಬಾಸಿನ ಅಸಲೀ ಹೀರೋ...

ಇಂಡಿಯಾಸ್ ಬೆಸ್ಟ್ ಸಿನಿ ಸ್ಟಾರ್ ಕಿ ಖೋಜ್ ನೋಡಲೇಬೇಕಾದ ಕಾರ್ಯಕ್ರಮ.

ಕೊಳವೆ ಬಾವಿಗಳ್ಲಿ ಮಕ್ಕಳು ಬಿದ್ದು ಸಾಯುತ್ತಿದ್ದರೂ, ಜಿಲ್ಲಾಡಳಿತಗಳಿಗೆ ಭರ್ತೀ ನಿದ್ರೆ!
ನಮ್ಮ ವಾಹಿನಿಯಲ್ಲಿ spider cap ಬಗ್ಗೆ ವಿವರಿಸಿದರೂ ಕಾರ್ಯಾಂಗವು ತುಸುವೂ ನಿಗಾವಹಿಸಲೊಲ್ಲ!