ಅತ್ಯಂತ ಸುಂದರ ಕಾರ್ಯಕ್ರಮ ಆಗಿದೆ ವೀಕೆಂಡ್ ವಿತ್ ರಮೇಶ್. ಪ್ರಾಯಶಃ ಆ ಕಾರ್ಯಕ್ರಮ ಹೆಚ್ಚು ಆಸಕ್ತಿ ಉಂಟು ಮಾಡುವುದರಲ್ಲಿ ರಮೇಶ್ ಅರವಿಂದ್ ಅವರ ಪಾತ್ರ ತುಂಬಾ ಹಿರಿದು ಅಂತ ಸ್ಪಷ್ಟವಾಗಿ ಹೇಳ ಬಹುದು. ಮುಖ್ಯವಾಗಿ ನಾನು ಕಂಡಂತೆ ಅಥವಾ ಕೇಳಿದಂತೆ ರಮೇಶ್ ಬಗ್ಗೆ ಒಂದಷ್ಟು ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಅವರ ಹಸನ್ಮುಖ, ಸೃಜನಶೀಲತೆ, ಆಂಗಿಕ ಭಾವ, ಜನರನ್ನು ಸೆಳೆಯುವ ಪರಿ ಎಲ್ಲವು ಇಷ್ಟ ಆಗುವಂತೆ ಇರುತ್ತದೆ . ಈ ಕಾರ್ಯಕ್ರಮಕ್ಕೆ ಅವರು ಬಿಟ್ರೆ ಮತ್ಯಾರಿಗೂ ಸಾಧ್ಯವಿಲ್ಲ ಮಾಡೋಕೆ ಪರ್ಫೆಕ್ಟ್ ಪಕ್ಕಾ ಪರ್ಫೆಕ್ಟ್.
ಕೆಲವೊಂದು ಕಾರ್ಯಕ್ರಮಗಳಿಗೆ ಇಂತಹವರೇ ಆಗ ಬೇಕು.. ಅವರನ್ನು ಬಿಟ್ರೆ ಆ ಜಾಗ ತುಂಬೋಕೆ ಕಷ್ಟ. ಸಿನಿಮಾ ನಿರ್ದೇಶನದಲ್ಲೂ ಸಹಿತ ಸ್ಟಾರ್ ಹೀರೋಗಳು ನಿರ್ದೇಶಕರ ಬಗ್ಗೆ ಹಾಗೆ ನಿರ್ದೇಶಕರು ಸ್ಟಾರ್ ಹೀರೋಗಳ ಬಗ್ಗೆ ಗಮನ ನೀಡಿರುತ್ತಾರೆ, ಅವರನ್ನು ಹೊರತು ಪಡಿಸಿದರೆ ಮತ್ಯಾರಿಗೂ ಸಹಿತ ಆ ಸ್ಥಳ ತುಂಬೋಕೆ ಸಾಧ್ಯವಿಲ್ಲ ಎನ್ನುವ ಭಾವದಲ್ಲಿ ಇರ್ತಾರೆ.. ಡಾ. ರಾಜ್ ಕುಮಾರ್ ಅಶ್ವಥ್ ಅವರಿಗಾಗಿ ಕಾಯ್ತಾ ಇರೋರಂತೆ.. ಈಗ ಹಾಸ್ಯ -ಪೋಷಕ ಕಲಾವಿದರು ಸಹಿತ ಆ ರೇಂಜ್ ನಲ್ಲಿ ಇಲ್ಲ, ಆದರು ಸಹಿತ ಒಂದಷ್ಟು ಜನಕ್ಕೆ ಹೆಸರಿದೆ!
ರಮೇಶ್ ವಿಷಯದಲ್ಲೂ ಹಾಗೆ ಆಗಿದೆ.ಜೀ ವಾಹಿನಿಯ ವೀಕೆಂಡ್ ಗೆ ರಮೇಶ್ ಗೆ ರಮೇಶ್ ಸಾಟಿ. ಒಮ್ಮೆ ಹೀಗೆ ಒಂದು ಲೇಖನ ಓದುತ್ತಿದ್ದೆ ರಮೇಶ್ ಬಗ್ಗೆ .. ಅವರು ಅತ್ಯಂತ ಸುಂದರ , ಸಂಭಾವಿತ,ಉತ್ತಮ ಕಲಾವಿದ, ಕನ್ನಡ ಹೆಣ್ಣುಮಕ್ಕಳಿಗಂತೂ ಅವರನ್ನು ಕಂಡರೆ ತುಂಬಾನೇ ಇಷ್ಟ, ಆದರೆ ಅಷ್ಟೆಲ್ಲ ಇಷ್ಟ ಪಡುವ ಹೆಣ್ಣುಮಕ್ಕಳು ಥಿಯೇಟರ್ ಗೆ ಹೋಗಿ ಅವರ ಚಿತ್ರ ನೋಡಲ್ಲ ಅಂತ ಬರೆದಿದ್ದರು. ಅದೆಷ್ಟು ಸತ್ಯವಾದ ಮಾತುಗಳು ಅಲ್ವೇ! ವೀಕೆಂಡ್ ವಿತ್ ರಮೇಶ್ ನೋಡುವಾಗ ಪ್ರತಿಬಾರಿ ಈ ಸಂಗತಿ ನೆನಪಿಗೆ ಬರುತ್ತದೆ.
@ ಸುವರ್ಣ ವಾಹಿನಿಯ ಬಿಗ್ ಬಾಸ್ ನಲ್ಲಿ ಒಮ್ಮೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಜೊತೆ ಸುದೀಪ್ ಮಾತನಾಡಿದ ಕಾರ್ಯಕ್ರಮ ನನ್ನ ಮನದಲ್ಲಿ ಹೆಚ್ಚು ಪ್ರಭಾವ ಬೀರಿದೆ. ಕನ್ನಡದ ಪ್ರಸಿದ್ಧ ನಟರ ಮಗನಾಗಿ ಅರ್ಜುನ್ ತಮ್ಮ ಬದುಕನ್ನು ನೆರೆಯ ಭಾಷೆಯಲ್ಲಿ ಕಂಡುಕೊಂಡಿದ್ದು, ಅದಕ್ಕೆ ಕಾರಣ ಕನ್ನಡಿಗರು ಅವರನ್ನು ಸ್ವಿಕರಿಸದೇ ಇರುವ ಬಗ್ಗೆ ಅವರಲ್ಲಿ ಇರುವ ನೋವು ಎಲ್ಲವೂ ಮನ ಸೆಳೆಯಿತು.ಅರ್ಜುನ್ ಐವತ್ತರ ಹರೆಯದವರು ಅಂತ ಅನ್ನಿಸೋದೇ ಇಲ್ಲ, ಮುಖ್ಯವಾಗಿ ಅವರ ಶೈಲಿ ಸ್ವಲ್ಪ ಜಾಸ್ತಿ ತಮಿಳು ಭಾಷಿಗರನ್ನು ಹೋಲ್ತ ತುಂಬಾ ವಿಭಿನ್ನ ಅನ್ನಿಸಿ ಖುಷಿ ಕೊಡ್ತು ನನಗೆ. ಸುದೀಪ್ ಸಹ ಅವರನ್ನು ಸಕತ್ತಾಗಿ ಸಂದರ್ಶಿಸಿದರು. ಅರ್ಜುನ್ ಅವರನ್ನು ಕನ್ನಡದವರು ಕೈಹಿಡಿಯಲಿ ಎನ್ನುವ ಹಾರೈಕೆ...
ಅದೇರೀತಿ ರಮೇಶ್ ಕಾರ್ಯಕ್ರಮದಲ್ಲಿ ಅರ್ಜುನ್ ಪತ್ನಿ ಮುಗ್ಧತೆ , ಅವರ ಮಗಳು ಐಶು ತುಂಟತನ ಸಹಿತ ಹೆಚ್ಚು ಆಸಕ್ತಿ ಮೂಡಿಸಿತ್ತು. ಎಷ್ಟು ಸರಳ ಅನ್ನಿಸಿತು ಅರ್ಜುನ್ ಪತ್ನಿಯನ್ನು ಕಂಡಾಗ..
@@ ಉದಯ ನ್ಯೂಸ್ ನಲ್ಲಿ ವಾರ್ತಾವಾಚಕರ ಬಗ್ಗೆ ಹೇಳುವಾಗ ನನಗೆ ಒಂದು ಸಂಗತಿ ಸದಾ ಇಂಪ್ರೆಸ್ ಮಾಡುತ್ತೆ. ಅದು ಅವರ ಭಾಷೆ, ಶೈಲಿ, ಸರಳತೆ ಎಲ್ಲದಕ್ಕೂ ಜಾಸ್ತಿ ನಂಬರ್. ಕಿರಿಯ ವಾರ್ತಾ ವಾಚಕರಿಂದ ಹಿರಿಯರ ತನಕ ವೆರಿ ಗುಡ್ಡು....
1 comment:
ಈ ಹಿಂದೆ ಕಸ್ತೂರಿ ವಾಹಿನಿಯಲ್ಲಿ ಕೆಲಸಕ್ಕೆ ಇದ್ದಾಗ, ರಮೇಶ್ ಅರವಿಂದರ 'ಪ್ರೀತಿಯಿಂದ ರಮೇಶ್' ಕಾರ್ಯಕ್ರಮದ ಎಲ್ಲ ಕಂತುಗಳನ್ನೂ ಚಿತ್ರೀಕರಣ ಮಾಡಿದ ಗಿರಿಮೆ ನನ್ನದು. ರಮೇಶ್ ಅವರು ತುಂಬಿದ ಕೊಡ. There is no match for him!
ಅವರ ಚಿತ್ರಗಳು ಇನ್ನಾದರೂ ಬಾಕ್ಸಾಫೀಸಿನಲ್ಲಿ ಲೂಟಿ ಹೊಡೆಯಲಿ ಎಂಬುದು ಆಶಯ.
ಅರ್ಜುನ್ ಸರ್ಜಾ ಅವರು ಬಹು ಭಾಷಾ ಕಲಾವಿದ. ಅವರ ಪತ್ನಿ ಆಶಾ ರಾಣಿಯವರು, ಹಿರಿಯ ನಟ ರಾಜೇಶರ ಪುತ್ರಿ. ಅವರು ಶಿವಣ್ಣನ ಎರಡನೇ ಚಿತ್ರ ರಥ ಸಪ್ತಮಿಯ ನಾಯಕಿ.
ಉದಯ ಟೀವಿಯ ವಾರ್ತಾ ವಾಚಕಿಯರಾದ ರಾಧಾ ಹೀರೇ ಗೌಡರ್, ಸ್ವಪ್ನ, ದಿವ್ಯ ಶ್ರೀ ಮತ್ತಿತರರು ಇದೀಗ ಇತರ ವಾಹಿನಿಗಳಲ್ಲಿ ಮಿಂಚುತ್ತಿದ್ದಾರೆ.
Post a Comment