ಕಳೆದ ವಾರ ಅಲ್ಲ ಸುಮಾರು ಹತ್ತು ದಿನಗಳಿಂದ ಜ್ವರ, ಸುಸ್ತು.. ಜೊತೆಗೆ ರಾಶಿ ರಾಶಿ ಆಫೀಸ್ ವರ್ಕ್ .. ಬ್ಯಾಡ ಅಂದ್ರು ಬಿಡದ ಜವಾಬ್ದಾರಿ.. ಅವುಗಳ ನಡುವೆ ಮಾಡಿದ ಕೆಲಸಕ್ಕೆ ಪುರಸ್ಕಾರ ನೀಡೋದು ಬೇಡ ತಮ್ಮ ತಪ್ಪು ಮುಚ್ಚಿಟ್ಟು ಕೊಳ್ಳೋಕೆ ನಮ್ಮನ್ನೇ ಹೊಣೆ ಮಾಡುವ ಮಂದಿ.. ಇಷ್ಟು ಅಂಶಗಳ ನಡುವೆ ದೇಹ ಮತ್ತು ಮನಸ್ಸು ಎರಡು ದಣಿದಿತ್ತು. ಹಾಗಂತ ಈಗ ಚೇತರಿಕೆ ಆಗಿದೆ ಎಂದು ಅಲ್ಲ ಇದರ ಅರ್ಥ. ಆದರೆ ಚೇತರಿಸಿ ಕೊಳ್ಳಲೇ ಬೇಕು.. ಮಾಧ್ಯಮದಲ್ಲಿ ಕೆಲಸ ಮಾಡುವವರು ಕೊಚ್ಚೆಯಲ್ಲಿರುವ ಎಮ್ಮೆ ಥರ ಇದ್ದಾಗ ಮಾತ್ರ ಏನೇ ಆದರೂ ನಿರ್ಲಿಪ್ತವಾಗಿ ಇರ ಬಹುದು..
ಏನೇ ಆದರು ಟೀವಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ತಪ್ಪದೆ ನೋಡೋ ಪದ್ಧತಿ ಹಾಗೆ ಮುಂದುವರೆದಿದೆ. ಬ್ಲಾಗ್ ಬರೆಯೋಷ್ಟು ಮನಸ್ಸು ಇಲ್ಲದೆ ಇದ್ದರು ಸಹಿತ ಟೀವಿ ನೋಡುವಷ್ಟು ಸಹನೆ ಇತ್ತು ಮತ್ತು ಇದೆ.
ಸಾಮಾನ್ಯವಾಗಿ ನ್ಯೂಸ್ ಚಾನೆಲ್ಗಳು ನೋಡಲು ಹೆಚ್ಚಾಗಿ ಆದ್ಯತೆ ನೀಡುತ್ತೀನಿ. ರಿಯಾಲಿಟಿ ಶೋಸ್ ಅದರಲ್ಲೂ ಸ್ವಲ್ಪ ಮಜಾ ಕೊಡ ಬೇಕು, ನನಗೆ ಇಷ್ಟ ಆಗುವ ಕಲಾವಿದರು ಅಥವಾ ಆಂಕರ್ ಗಳು ಇರ ಬೇಕು ಹೀಗೆ ಹತ್ತು ಹಲವಾರು ಸಂಗತಿ.
ಮೂಡ್ ಇರಲಿ ಬಿಡಲಿ ಇದ್ರೂ ಕಲರ್ ವಾಹಿನಿಯಲ್ಲಿ ಬಿಗ್ ಬಾಸ್ ಅದರಲ್ಲೂ ಸಲ್ಮಾನ್ ಖಾನ್ ನೋಡೋದಕ್ಕೆ ತಪ್ಪದೆ ಶನಿವಾರ ಭಾನುವಾರ ಕಾಯ್ತೀನಿ. ಅದೇರೀತಿ ಕಪಿಲ್ ಕಾರ್ಯಕ್ರಮ ಸಹಿತ.ಗುತ್ತಿ,ಪಲಕ್ ಮತ್ತು ದಾದಿ, ಸಿದ್ದುಜಿ ಅಂದರೆ ಜಾಸ್ತಿ ಲೈಕ್!
ಎಲ್ಲಾ ಹೆಣ್ಣುಮಕ್ಕಳಿಗೂ ಸಲ್ Man Boy .. ಬಗ್ಗೆ ನನಗೂ ಇಷ್ಟ.. ಹಾಗೂ ಒಂದು ಸ್ವಲ್ಪ ಜಾಸ್ತಿನೆ ಹೊಟ್ಟೆಕಿಚ್ಚು.. ನಮಗೆ ವಯಸ್ಸಾಗ್ತಾ ಇದೆ ಆದ್ರೆ ಸಲ್ಮಾನ್ ಗೆ ಯಾಕಿನ್ನು ಆಗಿಲ್ಲ ವಯಸ್ಸು ಅನ್ನೋ ಕುತೂಹಲ :-) ಒಟ್ಟಾರೆ ಸಲ್ಮಾನ್ ಬಗ್ಗೆ ಹೇಳೋದು ಬರೆಯೋದು ಜಾಸ್ತಿ ಇದೆ..
ಸಾಮಾನ್ಯವಾಗಿ ನಾನು ಆನ್ಲೈ ಪತ್ರಿಕೆಯಲ್ಲಿ ಸಲ್ಮಾನ್ ಬಗ್ಗೆ ಅಲ್ಲದೆ ಯಾರ ಬಗ್ಗೆ ಆಗಿರಲಿ ಬರೆಯುವಾಗ ಜಾಸ್ತಿ ಓದಿರ್ತೀನಿ. ಆದರೆ ಒಂದಷ್ಟು ಸಂಗತಿಗಳನ್ನು ಮಾತ್ರ ಬರೆದರೂ ಅಗತ್ಯ ಇರುವಾಗ ಬೇರೆ ಬೇರೆ ಸಂಗತಿಗಳನ್ನು ಬಳಸಿಕೊಳ್ತಿನಿ..ಒಬ್ಬರ ಬಗ್ಗೆ ಬರೆಯುವಾಗ ಹತ್ತು ಲೇಖನಕ್ಕೆ ಆಗುವಷ್ಟು ಮಾಹಿತಿ ಇಟ್ಟುಕೊಂಡಿರ್ತಿನಿ.. ಅದೇ ನನ್ನ ಪದ್ಧತಿ...ಸಲ್ಮಾನ್ ಖಾನ್ ಬಗ್ಗೆ ಅಯ್ಯೋ ಪಾಪ ಅಂತ ಅನ್ನಿಸುತ್ತೆ ನನಗೆ. ಯಾವುದೇ ಹೊಸ ಹೀರೋಯಿನ್ ಗಳು ಇರಲಿ ಸಲ್ಮಾನ್ ಭುಜಕ್ಕೆ ರಪ್ಪ ರಪ್ಪ ಅಂತ ಹೊಡೆದೆ ತೀರುತ್ತಾರೆ. ಬೇಕಾದ್ರೆ ನೋಡಿ ಯಾವುದೇ ಚಿತ್ರದ ಪ್ರಮೋಶನ್ ಆಗಿರಲಿ ಆ ಚಿತ್ರದ ಹೀರೋಯಿನ್ ಒಂದೆರಡು ಏಟು ಹಾಕಿರ್ತಾಳೆ.ಇತ್ತೀಚೆಗೆ ಬಿಡುಗಡೆ ಆದ ಕಿಕ್ ಪ್ರಮೋಶನ್ ಸಮಯದಲ್ಲೂ ಸಹ.. ಜಾಕ್ವಲಿನ್ ಸಹ ರಪ್ಪ ರಪ್ಪ ಅಂತ ಒಂದೆರಡು ಏಟು ಹಾಕಿ ನೋಡಿ ನಾನು ಸಲ್ಮಾನ್ ಖಾನ್ ಅವರನ್ನು ಹೇಗೆ ಕಂಟ್ರೋಲ್ ನಲ್ಲಿ ಇಟ್ಟುಕೊಂಡಿದ್ದೇನೆ ಅಂತ ತೋರಿಸಿದಳು..
ನನಗೆ ತುಂಬಾ ಫ್ರೆಂಡ್ಸ್ ಇದಾರೆ ಸಲ್ಮಾನ್.. ಆಪ್ತರು ಇದ್ದಾರೆ, ಸಾಮಾನ್ಯವಾಗಿ ಅವರ ಬಳಿ ಹೀಗೆಲ್ಲಾ ಆಡಿದ್ರೆ ನಾನು ಅಯ್ಯೋ ಸುಮ್ಮನೆ ಇರು , ಅಯ್ಯೋ ಗೊತ್ತು ಬಿಡಪ್ಪ ಅಂತ ಹೇಳ್ತಾ ಇರ್ತೀನಿ.. ಸಲ್ಮಾನ್ ನೀವೇನಾದರೂ ನನ್ನ ಫ್ರೆಂಡ್ ಆಗಿದ್ದಿದ್ದರೆ ಸಲ್ಮಾನ್ ನೀನು ನಿನ್ನ ಕಥೆ !! ಇದಕ್ಕೇನು ಕಡಿಮೆ ಇಲ್ಲ ಬಿಡು ಅಂತ ಬೈದೆ ಇರ್ತಾ ಇದ್ದೆ.. so you missed it ! ನಾನು ಒಳ್ಳೆ ಫ್ರೆಂಡ್ ಗೊತ್ತ.ನನ್ನ ಸ್ನೇಹ ಯಾರು ಯಾವ ರೀತಿ ಸ್ವೀಕರಿಸುತ್ತಾರೋ ಆ ರೀತಿ ನಾ ಇರ್ತೀನಿ.. ಜಾಸ್ತಿ ಉಬ್ಬಿಸಲ್ಲ ಸೆಲಬಿಗಳನ್ನೂ ಅಂದ್ರೆ ಫ್ರೆಂಡ್ ಆಗಿರೋರ ಜೊತೆ ಸಹ ಸರಳ ಹಾಗೂ ಸಾಧಾರಣವಾಗಿರ್ತೀನಿ. ಆ ಕಾರಣದಿಂದ ನಾನು ತುಂಬಾ ಕಂಫರ್ಟಬಲ್ .
ಈಬಾರಿ ಬಿಗ್ ಬಾಸ್ನಲ್ಲಿ ಅಬ್ಬ ಎಂತಹ ಪ್ರಾಡಕ್ಟ್ ಗಳು...! ಅವರು ಮಾತನಾಡುವ ರೀತಿ ಉಫ್ ಉದಾಹರಣೆಗೆ ಸೋನಾಲಿ ಅನ್ನೊ ಹೆಣ್ಣುಮಗಳ ಹೆಸರು ಕರೆಯೋದು ಭಿನ್ನವೇ ಸ್ಸುನ್ನಾಲ್ಲಿ ! ಅವರ ವೇಷಭೂಷಣ.. ಉಫ್ ...!ಅವರ ಮುಂದೆ ಸಲ್ಮಾನ್ ಸಕತ್ ಖಾಲಿ.. ;-) ಅದಲ್ಲದೆ ಅವರಂತೆ ಹೆಸರನ್ನು ವಿಶೇಷವಾಗಿ ಕರೆಯಲ್ಲ. ನೀಟಾಗಿ ನಮ್ಮಂತೆ ಕರೀತಾರೆ.. ಅಂದಂಗೆ ನಿನ್ನೆ ಬ್ಲಾಕ್ ಟೀ ಶರ್ಟ್ ನಲ್ಲಿ ಇರುವ ಸಲ್ಮಾನ್ very pretty cool..! ಟೀ ಶರ್ಟ್ ಅಥವಾ ಶರ್ಟ್ ಅಂತೂ ಏನಾದರೊಂದು ಹಾಕಿಕೊಂಡು ಬನ್ನಿ. ನೀವು ಆಮೀರ್ ಪಿಕೆ ಸಿನಿಮಾದಲ್ಲಿ ರೈಲ್ವೆ ಟ್ರಾಕ್ ಮೇಲೆ ನಿಂತಿರುವಾಗ ಹಾಕಿದ್ದಂತಹ ಡ್ರಸ್ ಹಾಕಿ ಬಿಡಬೇಡಿ ;-)
@@ ಅತ್ಯಂತ ಸುಂದರ ಕಾರ್ಯಕ್ರಮ ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗುವ ಸತ್ಯಮೇವ ಜಯತೆ. ಆದರೆ ಆಮೀರ್ ನ್ನು ನೋಡಿದಾಗ ಪೀಕೆ ಸಿನಿಮಾದ ಮೋಶನ್ ಪೋಸ್ಟರ್ ನೆನಪಿಗೆ ಬಂದು ಬಿಡುತ್ತೆ.. ;-) ಆಮೀರ್ ಏನ್ ಮಾಡಿದ್ರು ಭಿನ್ನ ನಿಜ ಆದರೆ ಇಷ್ಟೆಲ್ಲಾ ಭಿನ್ನಾ ನಾ ಆ...? ಯಪ್ಪಾ ! ಯಪ್ಪಾ
1 comment:
ಸಲ್ಮಾನ್ ಇನ್ನು ಹದಿನೈದು ವರ್ಷಗಳಿಗೂ ever green heroನೇ ಸರಿ, ಅಲ್ಲವಾ?
ಅಮೀರ್ ಖಾನ್ ಅವರ ಯಾವುದೇ ಕೃತಿ ಇರಲಿ, ಅದು simply perfect.
Post a Comment