ರಂಗಣ್ಣ ಅಂದ್ರೆ !!


ಕೆಲವು ಸಂಗತಿಗಳು ಮನದಲ್ಲಿ ಒಂಥರಾ ಭಾವನೆಗಳನ್ನು ಹೊರ ಹೊಮ್ಮಿಸ್ತಾ ಇರುತ್ತದೆ. ಅದನ್ನು ಯಾವ ರೀತಿ ವ್ಯಕ್ತ ಮಾಡ ಬೇಕೋ ಗೊತ್ತೇ ಆಗಲ್ಲ. ಆದರು ಎಲ್ಲ ಭಾವನೆಗಳನ್ನು ಹುದುಗಿಸಿಕೊಂಡು ಬದುಕ್ತೀವಿ.. ಲೈಫ್ ಅಂದ್ರೆ ಇಷ್ಟೇ ಅನ್ನಿಸುತ್ತೆ.
ಕಿರುತೆರೆಯಲ್ಲಿ ತಮ್ಮ ಧ್ವನಿ ಮೂಲಕ ಬಾಲಕೃಷ್ಣ ಕಾಕತ್ಕರ್ ಎಲ್ಲರ ಗಮನ ಸೆಳೆದಿದ್ದರು. ವಯಕ್ತಿವಾಗಿ ಏನೇ ಇರಲಿ ಆದರೆ ಬದುಕಲ್ಲಿ ಅವರು ಪಟ್ಟ ಪಾಡು ಕೇಳಿ, ಓದಿ ತುಂಬಾ ಒಂಥರಾ  ಆಯ್ತು. ಹೀಗೆ ಅವರು ಸಾಯುವ ದಿನ ನನ್ನ ಪಾಡಿಗೆ ನಾನು ಆಫೀಸಲ್ಲಿ ಬರೀತಾ ಇದ್ದೆ. ಮೆಸೇಜ್ ಬಂತು ಹಿರಿಯ ಜರ್ನಲಿಸ್ಟ್ ಒಬ್ಬರಿಂದ. ಕಾಕತ್ಕರ್ ಸತ್ತು ಹೋದನಂತೆ...! ಒಂದು ಕ್ಷಣ ಯಾವ ರೀತಿ ರಿಸೀವ್ ಮಾಡಿಕೊಳ್ಳ ಬೇಕೋ ಗೊತ್ತೇ ಆಗಲಿಲ್ಲ. 
ಆಗ ನಾನು ಛೆ ಅಯ್ಯೋ ಪಾಪ ಅಂತ ಮೆಸೇಜ್ ಮಾಡಿದೆ. ತಕ್ಷಣ ನೀ ನೋಬ್ಬಳೆ ಪಾಪ ಅಂತಾ ಇರೋದು ಬೇರೆಯವರೆಲ್ಲ ನಿನ್ನ ರೀತಿ ಅನ್ನಲಿಲ್ಲ, ಬಿಡು ಅದು ನಿನ್ನ ಒಳ್ಳೆ ಗುಣ ಅಂದ್ರು.  ಅದು ಸಹ ಮನದಲ್ಲಿ ಕೊರಿತಾ ಇತ್ತು. ಸತ್ತ ಬಳಿಕವು ಆ ವ್ಯಕ್ತಿಯನ್ನು ದ್ವೇಷಿಸುವುದಾದರೆ ಆ ವ್ಯಕ್ತಿ ನಿಜಕ್ಕೂ ಎಂತಹ ಗುಣ ಅಥವಾ ವರ್ತನೆ ಹೊಂದಿರ ಬಹುದು ಅಂತ ಅನ್ನಿಸಿತ್ತು. ಆದರೆ ಆ ಸತ್ತ ಜೀವದ ಬಗ್ಗೆ ಪತ್ರಕರ್ತ ಮಿತ್ರರು ತುಂಬಾ ಚಂದ ಬರೆದಿದ್ದರು. ಅವರ ಮೆಚ್ಚಿನ ಕಾಕಗೆ ಸರಿಯಾದ ರೀತಿಯಲ್ಲಿ ನಮನ ಸಲ್ಲಿಸಿದ್ದರು. 
ಸಾವಿನ ಮುಂಚೆ ಏನೇ ಇರಲಿ ಸತ್ತ ಬಳಿಕ ಕನಿಷ್ಠ ಒಂದು ಒಳ್ಳೆ ಮಾತು ಹೇಳಿದರೆ ಸಾಕು ಎನ್ನುವ ಮಂದಿ ಬದುಕಿರುವಾಗ ಒಂದಷ್ಟು ಒಳ್ಳೆ ಮಾತು ಹೇಳಿದರೆ  ? ಅದೇ ನಾವು ಮಾಡಲ್ಲ. 
@ ಲೈಫ್ ಸೂಪರ್ ಗುರು ರಿಯಾಲಿಟಿ ಷೋ ಪ್ರಸಾರ ಆಗ್ತಾ ಇದೆ ಜೀ ಕನ್ನಡ ವಾಹಿನಿಯಲ್ಲಿ ಗುರು ಮತ್ತು ಲೂಸ್ ಮಾದ ಜೋಡಿ ಜೊತೆಯಲ್ಲಿ ಸೀನಿಯರ್ ಮತ್ತು ಜೂನಿಯರ್ ಸಿಟಿಜನ್ ಇಂಡಿಯಾ ಆಟಗಳು ಹೆಚ್ಚು ಗಮನ ಸೆಳೆಯದೆ ಇದ್ರೂ ಕಳೆದ ವಾರದ  ಎಪಿಸೋಡ್ ಸ್ವಲ್ಪ  ಖುಷಿ ಕೊಡ್ತು. ಸ್ಪರ್ಧಿಗಳಾಗಿರುವ ಹಿರಿಯ ನಾಗರೀಕರು ಈಗಿನವರಂತೆ ಡೈನಮಿಕ್ ಆಗಿ ಡ್ರಸ್ ಧರಿಸಿ.. ತುಂಟತನದ ಮಾತುಗಳನ್ನು ಆಡುತ್ತ.. :-) 
ಈ ಕಾರ್ಯಕ್ರಮವನ್ನು ಕೇವಲ ಎಂಜಾಯ್ ಮಾಡುವ ದೃಷ್ಟಿಯಿಂದ ವೀಕ್ಷಿಸಿದರೆ ಒಳಿತು. ಇತ್ತೀಚಿಗೆ ಪ್ರಸಾರವಾದ ಷೋ ನಲ್ಲಿ ಒಂದು ಜೋಕ್ ಸೆಳೆಯಿತು. ಮೇಸ್ಟ್ರು ಕೇಳ್ತಾರೆ ಕೈ ಕೆಸರಾದರೆ  ಬಾಯಿ ಮೊಸರು ಎಂದು ಹೇಳ್ತಾರೆ ಆಗ ತಕ್ಷಣ ಉತ್ತರ ನೀಡಿದ ಹಿರಿಯ ನಾಗರೀಕ ಸ್ಟೂಡೆಂಟ್  ಕೈ ಕೆಸರಾದರೆ ತೊಳೋಕೋ ಬೇಕು  ಕೈ  ಕೊಳೆಯಾಗಿರುತ್ತೆ ಎಂದು ಉತ್ರ ನೀಡಿದರು!
ಇಂತಹ ಬಿಂದಾಸ್ ಉತ್ರಗಳು ಕನ್ನಡದಲ್ಲಿ ಸಾಧು ಕೋಕಿಲ, ತೆಲುಗಲ್ಲಿ ಬ್ರಹ್ಮಾನಂದಂ  ಮತ್ತು ಅಲಿ ನೀಡೋದು.. ಖುಷಿ ಆಯ್ತು.  ಇನ್ನು ನನಗೆ ಆ ಕಾರ್ಯಕ್ರಮ ಅರ್ಥ ಆಗಿಲ್ಲ, ಆದರು ಸಹಿತ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಇದ್ದೇನೆ..
@@ ಥಟ್ ಅಂತ ಹೇಳಿ ಕನ್ನಡದ ಕಿರುತೆರೆಯಲ್ಲಿ ಅತ್ಯದ್ಭುತವಾದ ಕಾರ್ಯಕ್ರಮ. ಪುಸ್ತಕಗಳು, ಮಾಹಿತಿಗಳು ಮತ್ತು ನಾ . ಸೋಮೇಶ್ವರ ಮೇಸ್ಟ್ರು ಎಲ್ಲವು ಚಂದನ ವಾಹಿನಿಯ ಆ ಸಮಯವನ್ನು ಸುಂದರವಾಗಿಡುತ್ತದೆ. ನನಗೆ ಇನ್ನು ವಿಸ್ಮಯ ಆಗಿರುವ ಸಂಗತಿ ಎಂದರೆ ಗೃಹಿಣಿಯರು ಅಂದ್ರೆ ಕೇವಲ ಕೆಲವೇ ಬಗೆಯ ಧಾರಾವಾಹಿಗಳಿಗೆ ಆದ್ಯತೆ ನೀಡುತ್ತಾರೆ ಎನ್ನುವ ಕೆಟ್ಟ ಹೆಸರನ್ನು ಹೊಂದಿದ್ದಾರೆ. ಆದರೆ ಬಹುತೇಕರು ಇಷ್ಟ ಪಡುವ ಕಾರ್ಯಕ್ರಮ ಥಟ್ ಅಂತ ಹೇಳಿ. 
ಮುಖ್ಯವಾಗಿ ಕೆಲವು ಬಾರಿ ಬರುವ ಸ್ಪರ್ಧಿಗಳನ್ನು ಕಂಡಾಗ ಮೇಸ್ಟ್ರ ಸ್ಥಿತಿಗೆ ಅಯ್ಯೋ ಅಂತ ಅನ್ನಿಸಿಬಿಡುತ್ತದೆ. :-)

ಸಾಮಾನ್ಯವಾಗಿ ನಾನು ಮುಖ್ಯವಾಗಿ ನಮ್ಮ ಅಮ್ಮ ಶುಕ್ರವಾರ ಥಟ್ ಅಂತ ಹೇಳಿ ಕಾರ್ಯಕ್ರಮ ವೀಕ್ಷಿಸುತ್ತಾರೆ. ಅಂದು ವಿಶೇಷ ಅತಿಥಿಗಳು   ಯಾರು ಎನ್ನುವ ಕುತೂಹಲ ಅವರಿಗೆ.  ನಿಜವಾಗಿ ಎಷ್ಟೊಂದು ಒಳ್ಳೊಳ್ಳೆ ಪ್ರತಿಭೆಗಳು ಕಂಡು ಬರ್ತಾರೆ. ಈ ವಿಷಯದಲ್ಲಿ ಖಂಡಿತ ಚಂದನ ವಾಹಿನಿಗೆ ಧನ್ಯವಾದ. 
@ ದುನಿಯಾ ವಿಜಯ್ ದಾಂಪತ್ಯ ಮುರಿಯದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆದಾಗ ಹೆಚ್ಚು ಖುಷಿ ಅನ್ನಿಸಿತ್ತು. ಯಾಕೇಂದ್ರೆ ಆ ಹೆಣ್ಣುಮಗಳ ಅತಂತ್ರತೆ, ಆ ಸುದ್ದಿ ಬರೆಯುವಾಗ ಪ್ರತಿಬಾರಿ ನನಗೆ ಬೇಸರ ಆಗ್ತಾ ಇತ್ತು. ವಿಜಯ್ ಸಂಸಾರ ಉಳಿಸುವಲ್ಲಿ ಪಬ್ಲಿಕ್ ಟೀವಿ ರಂಗಣ್ಣ ನ ಪಾತ್ರ ಜಾಸ್ತಿ ಇತ್ತು ಅನ್ನೋ ಸುದ್ದಿ ಕೇಳಿದಾಗ ಸಕತ್ ಖುಷಿ ಆಯ್ತು.. ರಂಗಣ್ಣ  ಅಂದ್ರೆ ಸೂಪರ್ ರಂಗ :-)

No comments: