ಕೆಲವು ಬಾರಿ ಕೆಲವು ಕೆಲಸಗಳನ್ನು ಮಾಡುವಾ.. ಮಾಡುವಾ ಅಂತ ಮುಂದೂಡುತ್ತಲೇ ಇರುತ್ತೇವೆ. ಪ್ರಾಯಶಃ ಆ ಕೆಲಸ ನಿಧಾನವಾದರೂ ಚಿಂತೆ ಇಲ್ಲ ಎನ್ನುವಂತೆ ಇರುತ್ತದೆ. ಆ ವಿಷಯದಲ್ಲಿ ಬ್ಲಾಗಿಂಗ್ ಸೇರಿದೆ. ಅತಿ ಪ್ರೀತಿಯ ಕೆಲಸ ನನಗಿದು. ನನ್ನ ಅನೇಕ ಮಾನಸಿಕ ಒತ್ತಡಗಳನ್ನು ದೂರ ಮಾಡಿದೆ. ಅನೇಕ ಸೋಲುಗಳಿಗೆ ಮತ್ತೆ ಪ್ರೇರಕ ಶಕ್ತಿಯಾಗಿ ನಿಂತಿದೆ.. ನಾನು ಕೆಲಸ ಇಲ್ಲದೆ ಕೈ ಚಲ್ಲಿ ಕೂತಾಗ ಬರೆಯಲು ದಾರಿ ಮಾಡಿಕೊಟ್ಟಿದೆ. ಇವೆಲ್ಲದರ ನಡುವೆ ಇದಕ್ಕೆ ನಾನು ನನ್ನ ತಂದೆಯ ಹೆಸರು ನೀಡಿರುವುದರಿಂದ ಸ್ವಲ್ಪ ಜಾಸ್ತಿನೇ ಪ್ರೀತಿ ನನಗೆ ಇದರ ಬಗ್ಗೆ.
ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಬಣ್ಣಗಳು ಬದುಕಲ್ಲಿ ಇದ್ದಾಗ ಮಾತ್ರ ಅದು ಬದುಕಾಗುತ್ತದೆ . ಬಣ್ಣಗಳು ಖುಷಿ, ವಿಷಾದ , ಮೌನ, ಸಂದೇಹ, ಅನುಕಂಪ, ಆಹ್ಲಾದ ಹೀಗೆ ಎಲ್ಲ ರೀತಿಯ ಭಾವನೆಗಳನ್ನು ಸಹಿತ ನೀಡುತ್ತದೆ. ಬದುಕು ಬಣ್ಣ ರಹಿತವಾಗಿದ್ದರೆ ಏನು ಪ್ರಯೋಜನವಿಲ್ಲ.. ಎಲ್ಲವು ಇದ್ದಾಗಲಷ್ಟೇ ಚಂದ..
@ ಸ್ಟಾರ್ ವಾಹಿನಿಯಲ್ಲಿ ನಾನು ಅತ್ಯಂತ ಇಷ್ಟ ಪಟ್ಟು ವೀಕ್ಷಿಸುತ್ತಿದ್ದ ಧಾರವಾಹಿ ಎವರೆಸ್ಟ್. ಅದು ಸಂಪೂರ್ಣವಾಗಿ ಅಪೂರ್ಣತೆಯಿಂದ ಮುಗೀತು. ಅದರ ಕಥೆ ಆ ಪಾತ್ರಗಳು ಎಲ್ಲವು ಇಷ್ಟ ಆಗಿತ್ತು. ಚಾಂದ್ ಅನ್ನೋ ಪಾತ್ರ ಅಭಯಂಕರ್ , ಖನ್ನ, ಆಕಾಶ್, ಅಂಜಲಿ, ಅರ್ಜುನ್ ಎಲ್ಲವು ಆಹಾ ! ಆದರೆ ಅದು ಮುಗೀತು, ಆ ಜಾಗದಲ್ಲಿ ಮೂರು ಹೆಣ್ಣು ಮಕ್ಕಳ ಕಥೆ ಆರಂಭವಾಗಿದೆ.. ಪರವಾಗಿಲ್ಲ ನೋಡುವಂತೆ ಇದೆ. ಆದರೆ ಆ ಕಥೆಗಳು ಬೇರೆ ದಾರಿಗೆ ನಡೆಯುವ ತನಕ ನೋಡ ಬಹುದು.
---
ಇದೆ ವಾಹಿನಿಯ ದಿ ಬೆಸ್ಟ್ ಕಾರ್ಯಕ್ರಮ ಮಾಸ್ಟರ್ ಶೆಫ್ 4 ಅವತರಣಿಕೆ. ಯಾವ ಸುಂದರ ನಿರೂಪಕಿ- ನಿರೂಪಕರು ಇಲ್ಲದೆ ಎಲ್ಲರ ಗಮನ ಸೆಳೆಯುತ್ತಿರುವ ಕಾರ್ಯಕ್ರಮ. ಶೆಫ್ ಗಳ ಯೂನಿವರ್ಸಿಟಿ ಸಂಜೀವ್ ಕಪೂರ್, ವಿಕಾಸ್ ಖನ್ನ , ರಣವೀರ್ ಎಲ್ಲರು ಇಷ್ಟ ಆಗುತ್ತಿದ್ದಾರೆ. ಆದರೆ ಈ ಬಾರಿ ನನಗೆ ಅತಿ ಇಷ್ಟ ಆಗಿರೋದು ಶಾಕಾಹಾರದ ವಿಶೇಷತೆ ಇರುವುದು. ಯಾಕೆ ಅಂದ್ರೆ ಈ ಬಾರಿ ಮಾಂಸದ ಸೋಂಕಿಲ್ಲದೇ ನನ್ನಂತಹ ವೆಜಿಟೇರಿಯನ್ ಗಳಿಗೆ ಇಷ್ಟ ಆಗುವ ಸೀಸನ್ ಆಗಿದೆ. ಆಡಿಶನ್ ನಿಂದ ಹಿಡಿದು ಪ್ರತಿ ಎಪಿಸೋಡ್ ನೋಡೇ ನೋಡ್ತಾ ಇದ್ದೀನಿ.
ನನ್ನ ಅಕ್ಕನ ಮಗಳು ಕಲ್ಪ, ನನ್ನ ಅಮ್ಮ ಸಕತ್ ಫ್ಯಾನ್ಗಳು. ಅದರಲ್ಲೂ ಕಲ್ಪ ಗೆ ಸಂಜೀವ್ ಕಪೂರ್ ಅಂದ್ರೆ ಪಂಚ ಪ್ರಾಣ, ಇಂಜಿನೀರಿಂಗ್ ಮಾಡಿಕೊಂಡು ಈಗ ಶೆಫ್ ಆಗೋ ಕನಸು :-) .. ಆದರೆ ನನ್ನ ಅಮ್ಮನಿಗೆ ರಣವೀರ್ ನನ್ನ ಅಕ್ಕನ ಇನ್ನೊಬ್ಬ ಮಗಳು ಶಿಲ್ಪಾ ಗೆ ವಿಕಾಸ್ ಅಂದ್ರೆ ಸಕತ್ ಇಷ್ಟ.. ಒಟ್ಟಾರೆ ಈ ಕಾರ್ಯಕ್ರಮ ಅತ್ಯಂತ ಖುಷಿ ಕೊಡ್ತಾ ಇದೆ.ಈ ಕಾರ್ಯಕ್ರಮದ ಲೈಕ್ ಪೇಜ್ ಫೇಸ್ಬುಕ್ ನಲ್ಲಿದೆ ಅದಕ್ಕೆ ನಾನು ಲೈಕ್ ಮಾಡಿದ್ದೇನೆ ಕಲ್ಪ ಹೇಳಿದ್ದಕ್ಕೆ :-). ಕೇರಳದ ವಿಶೇಷ ಅಡುಗೆ ಮಾಡಲು ಮಾಸ್ಟರ್ ಶೆಫ್ 4 ಗುಂಪು ಅಲ್ಲಿಗೆ ಹೋಗಿದ್ದು, ಅಲ್ಲಿನ ಅಡುಗೆ ತಯಾರಿ ವಾಹ್.. ಆದರೆ ಕರ್ನಾಟಕದಲ್ಲೂ, ಅದರಲ್ಲೂ ಬ್ರಾಹ್ಮಣ-ಲಿಂಗಾಯತ ಅಡುಗೆಗಳಲ್ಲಿ ವಿಪರೀತ ಭಿನ್ನತೆ ಇದೆ. ಯಾವ ಶೆಫ್ ಮಾಡದಷ್ಟು ವಿಶೇಷತೆ ಇದೆ. ನನಗೆ ಸಾಮಾನ್ಯವಾಗಿ ಮೆಂತ್ಯ ಫ್ಲೇವರ್ ಇರಬೇಕು. ನಾನು ಮಾಡುವ ಅಡುಗೆ ಅಂದ್ರೆ ಪಲ್ಯ , ಮತ್ತಿತರ ಕಾರದ ಖಾದ್ಯಗಳಿಗೆ ಮೆಂತ್ಯ ಬಳಸುತ್ತೇನೆ. ಆಗಾಗ ಹದ ತಪ್ಪುತ್ತೆ..ಆದರೂ ಕೇರ್ ಮಾಡದೆ ತಯಾರು ಮಾಡ್ತೀನಿ :-).
2 comments:
ಕನ್ನಡದ ಮಟ್ಟಿಗಿನ ಏಕೈಕ ಮಾದ್ಯಮ ಸಂಬಂಧೀ ಬ್ಲಾಗು ವಾಸುದೇವ. ನನಗೂ ಈ ಬ್ಲಾಗಿಗೂ ಹಳೇ ನೆಂಟಸ್ತನ. ದಯಮಾಡಿ ಬರೆಯಲು ನಿಧಾನಿಸಬೇಡಿ.
ಹೋಳಿ ಶುಭಾಶಯಗಳು ಕಣ್ರೀ. ಕಲರ್ ಫುಲ್ ಅಭಿನಂದನೆಗಳು.
ಸಂಜೀವ್ ಕಪೂರ್ ಎಲ್ಲ ವಾಹಿನಿಗಳ ಅಡುಗೆ ಕಾರ್ಯಕ್ರಮಗಳಿಗೂ ಗೌರವ ತಂದುಕೊಟ್ಟ ಮೇರು ಪ್ರತಿಭೆ.
ಅದ್ಸರಿ ಬರೀ ಬರೆಯೋದೇ ಆಯ್ತು, ಎಲ್ಲಿ ನಮ್ಮನ್ನೂ ಕರೆದು ಅದೇನು ಭಾರೀ ಅಡುಗೆ ಮಾಡಿ ಬಡಿಸುತ್ತೀರೋ ಎಂಬುದನ್ನ ಬೇಗ ತಿಳಿಸಿರಿ. ;-)
ಚೆನ್ನಾಗಿದೆ :)
Post a Comment