ನಾನು ಮಾಧ್ಯಮ ಲೋಕದಲ್ಲಿ ಅದರಲ್ಲೂ ಕಿರುತೆರೆಯ ಬಗ್ಗೆ ಬರೆಯಲು ಆರಂಭ ಮಾಡಿದಾಗ ಬಹಳಷ್ಟು ಜನರಿಗೆ ನಗು ಬಂದಿತ್ತು. ನಾನು ನನ್ನ ಖುಷಿಗೆ ಬರೆಯೋದಕ್ಕೆ ಆರಂಭಿಸಿದೆ ವಿನಃ ಮತ್ಯಾವುದೇ ಅಂಶಕ್ಕೂ ಅಲ್ಲವೇ ಅಲ್ಲ. ಆದರೆ ಇಲ್ಲಿ ಬರೆಯೋಕೆ ಆರಂಭ ಮಾಡಿದ ಬಳಿಕ ಅನೇಕರ ಪರಿಚಯ ಆಯ್ತು.. ಅನೇಕರ ಬಗ್ಗೆ ಗೊತ್ತಾಯ್ತು ಹಾಗೂ ಅನೇಕರಿಗೆ ನಾನು ಗೊತ್ತಾದೆ.
ಸುವರ್ಣ ನ್ಯೂಸ್ ನಲ್ಲಿ ಕ್ಯಾಮರ ಹಿಂದೆ ಕೆಲಸ ಮಾಡುವ ನನ್ನ ಪ್ರತಿಭಾವಂತ ಗೆಳೆಯ ಪಲವಲ್ಲಿ ಬದರಿನಾಥ್. ಸಾಮಾನ್ಯವಾಗಿ ನನ್ನ ಬರಹ ಅದು ಹೆಂಗೆ ಇರಲಿ ಮೆಚ್ಚಿ ಬರೆಯುವ ಹಾಗೂ ತಾನು ಓದಿದ್ದೇನೆ ಎಂದು ಹೇಳುವಂತಹ ಉತ್ತಮ ಮನದ ಗೆಳೆಯ.. ಬರೀತಾ ಇರಿ ನಮಗೆ ನಿಮ್ಮ ಬ್ಲಾಗ್ ಜೊತೆಗೆ ಹಳೆಯ ನೆಂಟಸ್ತನ ಇದೆ ಎಂದಿದ್ದಾರೆ..ಥ್ಯಾಂಕ್ಸ್ ಬದ್ರಿ ನಿಮ್ಮ ವಿಶ್ವಾಸಕ್ಕೆ .. ಚಿರಋಣಿ ನಾನು.
ಕನ್ನಡದಲ್ಲಿ ಹೆಚ್ಚು ವಾರ್ತಾ ವಾಹಿನಿಗಳು, ಅದರಲ್ಲಿ ಕೆಲವೊಮ್ಮೆ ಅರ್ಥ ಆಗುವ , ಕೆಲವು ಬಾರಿ ಅರ್ಥವೇ ಆಗದ ಚರ್ಚೆಗಳನ್ನು ನೋಡುತ್ತಿರುತ್ತೇನೆ. ಅದನ್ನು ಹೊರೆತು ಪಡಿಸಿದರೆ ರಿಯಾಲಿಟಿ ಶೋಗಳಿಗೆ ಹೆಚ್ಚು ಗಮನ ನೀಡುವುದು. ಏಕೆಂದರೆ ಅತ್ತೆ ಸೊಸೆ ಜಗಳ, ದ್ವೇಷ, ಅಂತಹದ್ದೇನು ಇರಲ್ಲ.
ಆದರೆ ನನ್ನನ್ನು ಅತಿ ಹೆಚ್ಚು ಸೆಳೆದ-ಸೆಳೆಯುವ ಕಾರ್ಯಕ್ರಮ ಚಂದನ ವಾಹಿನಿಯ ಥಟ್ ಅಂತ ಹೇಳಿ. ಕಳೆದ ಕೆಲವು ಎಪಿಸೋಡ್ ಗಳು ಸಂಪೂರ್ಣವಾಗಿ ಶಾಲಾ ಮಕ್ಕಳಿಗೆಂದೇ ತಯಾರಿಸಲಾಗಿತ್ತು. ಅದರಲ್ಲಿ ಹೈಸ್ಕೂಲ್ ಮಕ್ಕಳು ಭಾಗವಸಿದ್ದರು. ಅತ್ಯಂತ ಸುಂದರ ಹಾಗೂ ಮನಕ್ಕೆ ಆಪ್ತವಾದ ಕಾರ್ಯಕ್ರಮ. ನಾನು ಹೈ ಸ್ಕೂಲ್ ಓದುವಾಗ ನನ್ನ ಶಾಲೆಯಿಂದ ನಾ. ಸೋಮೇಶ್ವರ್ ಸರ್ ಅವರು ನಡೆಸಿಕೊಟ್ಟಿದ್ದ ಇಂತಹದ್ದೇ ಕ್ವಿಜ್ ಕಾರ್ಯಕ್ರಮಕ್ಕೆ ನನ್ನ ಸೀನಿಯರ್ಸ್ ಹೋಗಿದ್ದರು. ಅಲ್ಲಿ ತಪ್ಪು ಉತ್ತರ ಹೇಳಿ ಸೋತು ಬಂದಿದ್ದರು ಸಹ ಅವರಿಗೆ ಸಕತ್ ಜಂಬ ಇತ್ತು (ಇದು ಬಹಳ ಹಳೆ ಕಥೆ ಬಿಡಿ ). ಆದರೆ ಅಂದಿನಿಂದ ಈ ಮೇಸ್ಟ್ರ ಜೊತೆ ಅವಿನಾಭಾವ ಬಾಂಧವ್ಯ.
ಇತ್ತೀಚಿಗೆ ಫೇಸ್ ಬುಕ್ ನಲ್ಲಿ ನನ್ನ ಕಿರಿಯ ಮಿತ್ರ ರಾಜೇಶ್ ಒಂದು ಹಣ್ಣು ಚಿತ್ರ ಹಾಕಿದ್ದರು . ಅದ್ಯಾವುದು ಗುರುತಿಸಿ ಅಂತ ಆತ ಎಲ್ಲರನ್ನು ಕೇಳಿದ್ದರು. ನಮ್ಮ ಮೇಸ್ಟ್ರು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದರು. ಯಪ್ಪಾ ಎಷ್ಟು ಜಾಣರು ಸರ್ ನೀವು !!
@@ ಶಂಕರ ವಾಹಿನಿಯಲ್ಲಿ ಸಂಗೀತ ಪ್ರಿಯರಿಗೆ ಅದರಲ್ಲೂ ಶಾಸ್ತ್ರೀಯ ಸಂಗೀತ ಪ್ರಿಯರಿಗೆ ಪುಟ್ಟ ಮಕ್ಕಳ ಸಂಗೀತ ಸ್ಪರ್ಧೆಯ ಕಾರ್ಯಕ್ರಮ ನಡೀತಾ ಇದೆ. ತುಂಬಾ ವಿಶೇಷವಾಗಿದೆ ಆ ಕಾರ್ಯಕ್ರಮ. ಯಾಕೇಂದ್ರೆ ಶಾಸ್ತ್ರಿಯ ಸಂಗೀತ ಸ್ಪರ್ಧೆ ಹೇಗಿರುತ್ತದೆ ಎನ್ನುವುದು ಇದರಿಂದ ತಿಳಿಯುತ್ತದೆ. ಪಕ್ಕ ಶಾಸ್ತ್ರೀಯ ಸಂಗೀತ ಪ್ರಿಯರಿಗೆ ಇಷ್ಟ ಆಗುವ ಕಾರ್ಯಕ್ರಮ. ಆ ಕಾರ್ಯಕ್ರಮ ನೋಡಿ ನಾನು ಒಂದೆರಡು ಕೀರ್ತನೆಗಳನ್ನು ಡೌನ್ ಮಾಡಿಕೊಂಡು ಕೇಳ್ತಾ ಇದ್ದೀನಿ..ಆದರೆ ಶಾಸ್ತ್ರೀಯ ಸಂಗೀತ ಇಷ್ಟ ಪಡದವರಿಗೆ ಲೈಕ್ ಆಗಲ್ಲ.. !
1 comment:
ನಿಮ್ಮ ಬರವಣಿಗೆಯು ಸುಲಲಿತ ಮತ್ತು ಸುಲಭ ಜೀರ್ಣಕಾರಿ!
ಬಹುಶಃ ಮಾದ್ಯಮ ಸಂಬಂಧೀ ಬ್ಲಾಗ್ ಮಾಡಬಹುದು ಎನ್ನುವ ಪರಿಕಲ್ಪನೆ ಇದೇ ಮಾದ್ಯಮದಲ್ಲಿ ಊಟ ಕಂಡಿರುವ ಗೆಳೆಯರಿಗೂ ಹೊಳೆದಿರಲಿಲ್ಲ.
ತಾವು ಉಲ್ಲೇಖಿಸಿದ ನಂತರ ನಾನು ಹಲವು ಕಾರ್ಯಕ್ರಮಗಳನ್ನು ನೋಡಿದ್ದೇನೆ.
ನನ್ನಂತಹ ಸಾಮನ್ಯ ಓದುಗನನ್ನು ಹೆಸರಿಸಿ, ಮೆಚ್ಚಿಗೆ ವ್ಯಕ್ತಪಡೆಸಿದ ತಮ್ಮ ಒಲುಮೆಗೆ ಶರಣು. ತಮ್ಮ ಬ್ಲಾಗು ಮತ್ತೂ ವಿಸ್ತರಿಸಲಿ.
ಏಳ್ಗೆಯನ್ನು ಹೊಗಳಿ
ಎಡವಿದಾಗೊಮ್ಮೆ ನೀರಿಳಿಸಲಿ.
ಥಟ್ ಅಂತ ಹೇಳಿ ಕಾರ್ಯಕ್ರಮವು ಪುಸ್ತಕ ಪ್ರೀತಿಯನ್ನು ಹುಟ್ಟು ಹಾಕುತ್ತಿದೆ. ಅದು ಮೌಲ್ಯಾಧಾರಿತ ಮತ್ತು ಮಾಹಿತಿಪೂರ್ಣ.
ನಾ.ಸೋ ಅವರ ಶ್ರಮಕ್ಕೆ ನಮ್ಮ ನಮನ.
ಶ್ರೀಶಂಕರವು ಆದ್ಯಾತ್ಮಿಕ ವಾಹಿನಿಗಳಲ್ಲೇ ಮೈಲುಗಲ್ಲಾದ ಸಂಸ್ಥೆ.
Post a Comment