ಢೀ..ಢೀ

Image result for purple flowers


ಈ ಟೀವಿ  ತೆಲುಗು ವಾಹಿನಿಯಲ್ಲಿ ಢೀ ಎನ್ನುವ ಹೆಸರಿನ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರವಾಗುತ್ತದೆ. ಅದನ್ನು ನೀವು ನೋಡ ಬೇಕು. ಆ ಕಾರ್ಯಕ್ರಮ ಸಹ ಮಕ್ಕಳ ಡ್ಯಾನ್ಸ್ ಕಾರ್ಯಕ್ರಮ.ಕಳೆದವಾರ ಮನೋಜ್ ಎನ್ನುವ ಕೊರಿಯಾಗ್ರಾಫರ್ ಮಾಡಿದ ಡ್ಯಾನ್ಸ್ , ಅಂದ್ರೆ ಶಿವರೂಪಿಯಾದ ಮಗುವಿನ ಡ್ಯಾನ್ಸ್ ಅದೆಷ್ಟ ಚೆಂದ ಇತ್ತು ಅಂದ್ರೆ, ಅದ್ಭುತ, ಪರಮಾದ್ಭುತ.ನಟಿ  ಸದಾ, ತರುಣ್ ಮಾಸ್ಟರ್  ಮತ್ತು ಶೇಖರ್ ಅವರು ತೀರ್ಪುಗಾರರಾಗಿರುವ ಈ ಕಾರ್ಯಕ್ರಮದ ಪ್ರತಿ ಎಪಿಸೋಡ್ ಹೊಸತನಗಳಿಂದ ನಿಹಾರಿಕ, ಲಾಸ್ಯ, ರವಿ ಇವರ ಜೊತೆ ಆಗಿದ್ದಾರೆ. ಆದರೆ ಮಕ್ಕಳ ಈ ಕಾರ್ಯಕ್ರಮದ ಬಗ್ಗೆ ನಾನು  ಹೇಳೋಕ್ಕಿಂತ ನೀವು ಒಮ್ಮೆ ನೋಡ ಬೇಕು ಅದ್ಭುತ ಕಣ್ರೀ . ಪ್ರತಿ ಬುಧವಾರ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ. ಅದೂ ರಾತ್ರಿ 9:30 ಕ್ಕೆ.
Image result for purple flowers

 ಚಂದನವಾಹಿನಿಯಲ್ಲಿ   ಡಾ . ನಾ . ಸೋಮೇಶ್ವರ್  ಅವರು  ನಡೆಸಿಕೊಡುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಅತ್ಯಂತ ಇಷ್ಟವಾಗುವ ಕಾರ್ಯಕ್ರಮ ಶುಕ್ರವಾರದ ದಿನ. ಅಂದು ಬರುವ ವಿಶೇಷ ಅತಿಥಿಗಳು, ಅವರ ಸಾಧನೆ ಎಲ್ಲವೂ ಖುಷಿ ನೀಡುವ ಸಂಗತಿ. ಈ ಬಾರಿ ಕಾರ್ನಾಟಿಕ್  ಕ್ಲಾಸಿಕಲ್  ಸಿಂಗರ್ ಮತ್ತು ಜಾನಪದ ಕಲಾವಿದರು . ಆದರೆ ಇಲ್ಲಿ ಕಾಂಬಿನೇಶನ್ ಅಷ್ಟೊಂದು ಹೊಂದಿಕೆ ಆಗಲಿಲ್ಲ. ಯಾಕೇಂದ್ರೆ ಜಾನಪದ ಶೈಲಿಯೇ ಒಂದು ತೆರನಾದ ವೈಶಿಷ್ಠ್ಯ ಹೊಂದಿದೆ.. ಅದೇ ರೀತಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅದರದ್ದೇ ಆದ ವಿಶೇಷತೆ ಇದೆ.  ಒಟ್ಟಾರೆ ಕಲಾವಿದರ ಬಳಿ ಇನ್ನು ಒಂದಷ್ಟು ಗೀತಗಾಯನ ಮಾಡಿಸ ಬೇಕಿತ್ತು. ಚಿಂತನಪಲ್ಲಿ ಕುಟುಂಬಕ್ಕೆ ಸೇರಿದ ಗುರುಗಳು ನನಗೂ ಕೆಲವು ವರ್ಷಗಳ ಹಿಂದೆ ಸಂಗೀತ ಪಾಠ ಮಾಡಿದ್ದರು. ಅವರು ಹೇಳಿಕೊಟ್ಟ, ಅವರ ಕೈ ಬರಹದ ಪುಸ್ತಕ ನನ್ನ ಬಳಿ ಇದೆ. ಕೆಲವು ದಾಸರ ಕೆಲವು ರಚನೆಗಳಿಗೆ ರಾಗ ಸಂಯೋಜನೆ ಮಾಡಿದ್ದರು. ಅದ್ಭುತವಾಗಿದೆ ಗೊತ್ತಾ. ಶುಕ್ರವಾರ ಮಾತ್ರ  ಕೇವಲ ಅರ್ಧ ಗಂಟೆಗೆ ಮೀಸಲಿಡದೆ ಒಂದು ಗಂಟೆಗಳ ಕಾಲ ಮಾಡಿದರೆ ಎಷ್ಟು ಚಂದ. ಇದರ ಮೇಡಮ್ಮು ಹೆಚ್ . ಎನ್.  ಆರತಿ ಇದರ ಬಗ್ಗೆ ಗಮನ ಹರಿಸಿದರೆ ಚಂದ ಅಲ್ವ ?
Image result for purple flowers
ಡಾ . ಚಂದ್ರಶೇಖರ ಉಡುಪ ಅವರು ಡಿವೈನ್ ಪಾರ್ಕ್ ಬಗ್ಗೆ ಶಂಕರ ವಾಹಿನಿಯ ಎಲ್ಲ ವೀಕ್ಷಕರಿಗೂ  ಹಾಗೂ ಆಧ್ಯಾತ್ಮಿಕ ಪ್ರಿಯರಿಗೂ ಗೊತ್ತೇ ಇದೆ. . ಡಾಕ್ಟರ್ ಜೀ ಎಂದು ಕರೆಸಿಕೊಳ್ಳುವ ಉಡುಪರು ಆಧ್ಯಾತ್ಮ ಇಷ್ಟ ಪಡುವ ವೀಕ್ಷಕರಿಗೆ ಹೆಚ್ಚು ಆಪ್ತರಾಗುತ್ತಾರೆ. ಪ್ರತಿ ಗುರುವಾರ 9 :30 ಕ್ಕೆ ಸರಿಯಾಗಿ ಪ್ರಸಾರವಾಗುವ ಈ ಕಾರ್ಯಕ್ರಮ  ಸ್ವಲ್ಪ ಗಮನ ಕೊಟ್ಟು ವೀಕ್ಷಿಸ ಬೇಕು. ಸಾಮಾನ್ಯವಾಗಿ ಅಬ್ಬರದ ಕಾರ್ಯಕ್ರಮಗಳ ನಡುವೆ ಗುಪ್ತ ಗಾಮಿನಿಯಂತೆ ಹರಿಯುವ ಕಾರ್ಯಕ್ರಮ. ಇತ್ತೀಚೆಗೆ  ಡಾಕ್ಟರ್ ಜೀ ಅವರು ಒಂದು ವಿಷಯ ಹೇಳಿದರು. ಅದು ಸ್ವಲ್ಪ ಹೆಚ್ಚೇ ಮನಕ್ಕೆ ಸೇರಿತು. ಯಾರೇ ಆಗಲಿ ದೇವರಿಗೆ ಹೂವಿನ ಪೂಜೆ ಸೇವೆ ಮಾಡಿಸಿದರೆ ಆ ಇಡೀ ದಿನ ತನ್ನ ಇಷ್ಟ ದೇವರನ್ನು ಧ್ಯಾನಿಸುತ್ತಾ ಇರಬೇಕು. ನಾನು ದುಡ್ಡು ಕೊಟ್ಟಿದ್ದೇನೆ ಸೊ ನನ್ನ ಕೆಲಸ ಮುಗಿದು ಹೋಯಿತು ಎನ್ನುವಂತಿಲ್ಲ. ರೈತ ಬೆಳೆದ, ನೀ ಕೊಂಡೆ. ಆದರೆ ಅದರಿಂದ ಸಾರ್ಥಕತೆ ನಿನ್ನದೇನು ಆಗದು, ಧ್ಯಾನದ ಮೂಲಕ ನೀನು ನಿನ್ನ ಸೇವೆಯನ್ನು  ನಿನ್ನ ಮೆಚ್ಚಿನ ದೇವನಿಗೆ ತಲುಪಿಸ ಬಹುದು ಎಂದರು. ತುಂಬಾ ವಿಶೇಷ ಅನ್ನಿಸಿತು ನನಗೆ ಆ ವಿಷಯ. ನಾವು ಮಾಡಿದ ಅಲ್ಪ ಕಾರ್ಯಕ್ಕೆ ಹೆಮ್ಮೆ ಪಡ್ತೀವಿ. ಆದರೆ ಅದು ಸಲ್ಲದು ಎನ್ನುವುದು ಇಲ್ಲಿನ ಗೂಢಾರ್ಥ.  

1 comment:

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ಢೀ ಜೂನಿಯರ್ .. 'ಈ' ಟೀವಿ ತೆಲುಗು ಕಾರ್ಯಕ್ರಮದಲ್ಲಿ ನಮ್ಮ ಡ್ಯಾನ್ಸ್ ಸ್ಕೂಲಿನ ಇಬ್ಬರು ಮಕ್ಕಳು ಭಾಗವಹಿಸಿದ್ದಾರೆ .. ಶಿವಮಣಿ ಮತ್ತು ಲೇಖನ .. !! ಹಾಗೆಯೇ ಪುಟಾಣಿ ಪಂಟ್ರು ಸುವರ್ಣ ಚಾನಲ್ ಕನ್ನಡ .. ಅದರಲ್ಲಿ ಕೃತಿಕ್ ನಮ್ಮ ಡ್ಯಾನ್ಸ್ ಸ್ಕೂಲ್ ಸ್ಟೂಡೆಂಟ್ .. !!
ಜೊತೆಯಲ್ಲಿ ನೀವು ಇಲ್ಲಿ ಹೇಳಿದ ಕಾರ್ಯಕ್ರಮಗಳ ವೀಕ್ಷಿಸಲು ನಮ್ಮ ಮನೆಯಲ್ಲಿ ಅಮ್ಮ ಎಂದಿಗೂ ತಪ್ಪಿಸೋಲ್ಲ .. !! ತುಂಬಾ ತುಂಬಾ ಚೆಂದ ಇರುತ್ತೆ ಚಂದನದ ನಿರೂಪಣೆ .. :)