ಕನ್ನಡ ವಾಹಿನಿಗಳಲ್ಲಿ ಹಾಸ್ಯ ಕಾರ್ಯಕ್ರಮಗಳ ಬಗ್ಗೆ ಹೇಳೋದಾದರೆ ಉದಯವಾಹಿನಿಯಲ್ಲಿ ಪ್ರಸಾರ ಆಗುವಂತಹ ಫ್ಯಾಮಿಲ್ಲಿ ನಂಬರ್ ಒನ್ ಮೊದಲ ಸ್ಥಾನದಲ್ಲಿದೆ ಎನ್ನಬಹುದು.ಇದು ನನ್ನ ಅಭಿಪ್ರಾಯ . ಯಾಕೆ ಈ ಮಾತನ್ನು ಹೇಳ್ತಾ ಇದ್ದೀನಿ ಅಂದ್ರೆ ಜೀ ಟೀವಿಯಲ್ಲಿ ಪ್ರಸಾರ ಆಗ್ತಾ ಇರುವ ಶ್ರೀಮಾನ್ ಶ್ರೀಮತಿ ಹಾಸ್ಯ ಧಾರವಾಹಿ ಅಂತ ಹೆಸರನ್ನು ಗಳಿಸಿದೆ ಅಷ್ಟೇ, ತಿಳಿ ಹಾಸ್ಯವನ್ನು ಅದರಲ್ಲಿ ಜೋಡಿಸಿರುವುದು ಅಷ್ಟಾಗಿ ಕಂಡು ಬಂದಿಲ್ಲ. ಅವರವರ ಭಾವಕ್ಕೆ ಅಂತ ತಿಳಿ ಬಹುದು, ಆದರೂ ಪ್ರೇಕ್ಷಕರಿಗೆ ಖುಷಿ ಕೊಡುವುದಕ್ಕೆ ಅಗತ್ಯ ಇರುವ ಅಂಶಗಳು ಎಲ್ಲಿದ್ದರೆ ಅಲ್ಲಿ ಅವರು ಗಮನ ನೀಡುತ್ತಾರೆ.
ಫ್ಯಾಮಿಲಿ ನಂಬರ್ ಒನ್ ಧಾರಾವಾಹಿಯಲ್ಲಿ ಪಾತ್ರಧಾರಿಗಳು ಅಪರೂಪದ ಪ್ರತಿಭೆಗಳು. ಟೆನಿಸ್ ಕೃಷ್ಣ, ಸುನೇತ್ರ ,ಪ್ರಕೃತಿ, ಮಂಜುಳಾ ಅಶೋಕ್ ಅಲ್ಲದೆ ಬೇರೆ ಯಾರೇ ಆಗಿರ ಬಹುದು ಪಾತ್ರವನ್ನು ಹಾಯಾಗಿ ಕರೆದುಕೊಂಡು ಹೋಗ್ತಾ ಇದ್ದಾರೆ.
ಹಾಸ್ಯ ಪಾತ್ರಧಾರಿಗಳು ತುಂಬಾ ಸ್ಮಾರ್ಟ್ ಆಗಿ, ವಿಶೇಷವಾಗಿ, ಸ್ಟೈಲೀಶ್ ಆಗಿ ಇರ ಬೇಕೆಂದೇನೂ ಇಲ್ಲ..ಅವರ ದೇಹಸಿರಿ ಹೇಗೆ ಇದ್ರೂ ಪಾತ್ರಕ್ಕೆ ನೀಡುವ ಜೀವ ಬಹಳ ಮುಖ್ಯ..ನಾನು ಸಮಯ ಸಿಕ್ಕಾಗ ಈ ಧಾರವಾಹಿ ನೋಡಿದ್ದೇನೆ.. ಚಂದ ಇದೆ..
@ & ಟೀವಿಯಲ್ಲಿ ಪ್ರಸಾರ ಆಗುವ ಭಾಬಿಜಿ ಘರ್ ಪರ್ ಹೈ ಧಾರಾವಾಹಿಯು ಈಗ ಸ್ವಲ್ಪ ದಾರಿ ತಪ್ಪಿದೆ. ಹಾಸ್ಯ ಧಾರವಾಹಿ ನಿಧಾನವಾಗಿ ಸಾಗುವ ತಿಳಿನೀರಿನಂತೆ ಇರ ಬೇಕು. ಒಟ್ಟಾರೆ ನೋಡುವುದಾದರೆ ಧಾರವಾಹಿ ಓಕೆ ಓಕೆ ಆಗಿದೆ. ಇಲ್ಲಿನ ಪಾತ್ರಧಾರಿಗಳಾದ ಶಿಲ್ಪಿ ಶಿಂಧೆ, ಆಸಿಫ್ ಶೇಖ್, ರೋಹಿತಾಶ್ವ್ ಗೌಡ್, ಸೌಮ್ಯ ಟಂಡನ್ ಅತಿಯಾಗಿ ನಟಿಸದೆ ಆರಾಮವಾಗಿ ನಟಿಸುತ್ತಿದ್ದಾರೆ.ಆದರೆ ಪ್ರತಿದಿನ ನೀಡುವ ಕಥೆಯ ವಿಷಯದಲ್ಲಿ ಬರಹಗಾರ,ನಿರ್ದೇಶಕ ನಿಂತಲ್ಲೇ ನಿಂತಿದ್ದಾರೆ..
ಕನ್ನಡದಲ್ಲಿ ಇದೇ ಧಾರಾವಾಹಿಯು ಶ್ರೀಮಾನ್ ಶ್ರೀಮತಿ ರೂಪದಲ್ಲಿ ಬರ್ತಾ ಇದೆ. ಕೆಲವು ಅಂಶಗಳು ನೇಟಿವಿಟಿಗೆ ತಕ್ಕಂತೆ ಬದಲಾಯಿಸಲು ಪ್ರಯತ್ನ ಮಾಡಿದರೂ ಸಹಿತ ಅಷ್ಟೊಂದು ವಿಶೇಷವಾಗಿಲ್ಲ.. ಯಾವುದೇ ಭಾಷೆ ಆಗಿರಲಿ ಮೂಲ ಭಾಷೆಯಲ್ಲಿ ತಯಾರಾದ ಇಂತಹ ಧಾರವಾಹಿ , ಕಥೆಯನ್ನು ಬರೆದವರು ಕೆಲವು ಅಂಶಗಳನ್ನು ಅಲ್ಲಿನ ವಾತಾವರಣ ತಲೆಯಲ್ಲಿ ಇಟ್ಟುಕೊಂಡು ಬರೆದಿರುತ್ತಾರೆ. ಆದರೆ ಅದನ್ನೇ ಸ್ಥಳೀಯವಾಗಿ ಭಟ್ಟಿ ಇಳಿಸಲು ಹೋದರೆ ..... !
No comments:
Post a Comment