ನಿರ್ಭಯ ಕೇಸ್ ನ ಒಬ್ಬ ಅಪರಾಧಿ ಹೊರ ಬರುತ್ತಿರುವ ಸಂಗತಿ ಸಾಕಷ್ಟು ದುಃಖ ನೀಡಿದೆ. 20 ವರ್ಷದ ಅತ್ಯಾಚಾರಿ, ಅಮಾಯಕ ಹೆಣ್ಣು ಮಗಳ ಸಾವಿಗೆ ಕಾರಣವಾದವ, ಒಂದು ಕುಟುಂಬವನ್ನು ಶಾಶ್ವತವಾಗಿ ದುಃಖಕ್ಕೆ ಈಡು ಮಾಡಿದವರ ಗುಂಪಿಗೆ ಸೇರಿದವ ಈಗ ಆರಾಮವಾಗಿ ಹೊರ ಬರುತ್ತಿದ್ದಾನೆ..!! ಅತ್ಯಂತ ನೋವಿನ ಸಂಗತಿ..ಆ ತಾಯಿಯ ಕಣ್ಣೀರಿಗೆ ಬೆಲೆ ಇಲ್ಲ ..ಛೇ !
ನನ್ನ ಈ ಬ್ಲಾಗ್ ಸಂಪೂರ್ಣವಾಗಿ ಟೀವಿ ಕಾರ್ಯಕ್ರಮಗಳಿಗೆ ಸಂಬಂಧ ಪಟ್ಟಿದುದಾಗಿದೆ. ಅದರಲ್ಲಿ ನಾನು ನೋಡಿದ ಕಾರ್ಯಕ್ರಮಗಳ ಬಗ್ಗೆ ಬರೀತೀನಿ, ಜೊತೆಗೆ ಒಂದಷ್ಟು ಪೂರಕ ಅಂಶಗಳನ್ನು ಬರೆಯುವ ಒಂದು ಅಭ್ಯಾಸ. ಯಾವುದೇ ಕಾರ್ಯಕ್ರಮ ನೋಡಿದ ಬಳಿಕ ಇಷ್ಟ ಆಗ ಬಹುದು, ಆಗದೆ ಇರ ಬಹುದು, ಆದರೆ ನೋಡಿದ್ದನ್ನು ಬರೆಯುವ ಅಭ್ಯಾಸ ಇದೆ. ಏನ್ ಮಾಡೋಕು ಆಗಲ್ಲ :)
ಇತ್ತೀಚಿಗೆ ನಾನು ಸುವರ್ಣ ನ್ಯೂಸ್ ನಲ್ಲಿ ನೇತಾಜಿ ಸುಭಾಶ್ ಚಂದ್ರ ಭೋಸ್ ಅವರು ಅರವತ್ತರ ದಶಕದ ತನಕ ಬದುಕಿದ್ದರು ಎನ್ನುವ ಅಂಶ ಅನ್ವಯ ಆಗುವಂತೆ ಕಾರ್ಯಕ್ರಮ ಪ್ರಸಾರವಾಗಿತ್ತು. ಅದನ್ನು ವೀಕ್ಷಿಸಿದ ಬಳಿಕ ಆ ರೀತಿಯ ಅಂಶಗಳನ್ನು ಹೋಲುವಂತಹ ಒಂದು ಲೇಖನವನ್ನು ಓದಿದ್ದರ ಬಗ್ಗೆ ಲಿಂಕ್ ಕೊಟ್ಟು ಹೇಳಿದ್ದೆ. ಸಾಕಷ್ಟು ಓದುಗರಿಗೆ ಈ ಪೋಸ್ಟ್ ಇಷ್ಟ ಆಗಿಲ್ಲ. ಅದು ಸಹಜ. ಕೆಲವು ಅಂಶಗಳ ಬಗ್ಗೆ ಒಪ್ಪಲಾಗದು. ಆ ಸಮಯದಲ್ಲಿ ಆ ಕಾರ್ಯಕ್ರಮ ಹೀಗಿತ್ತು, ಆ ಲೇಖನ ಈ ರೀತಿ ಬರೆದಿತ್ತು ಅಂತ ಹೇಳಿದ್ದೆ..ಹೀಗೆಲ್ಲ ಉಂಟೆ ಎಂಬ ನೋವು ಬೇಸರ ಅಂತಹ ಸಮಯದಲ್ಲಿ ಆಗುವುದನ್ನು ನಾನು ಮೆನ್ಶನ್ ಮಾಡಿದ್ದೆ..
ಬರೆಯುವವರಿಗೆ, ಓದುವವರಿಗೆ ಯಾವುದೇ ಒಬ್ಬರ ಬಗ್ಗೆ ಪ್ರೀತಿ ಅಭಿಮಾನ ಇದ್ದರೆ ಅದರಿಂದ ಎದುರಾಗುವ ಅನಾಹುತಗಳು ಏನು ಅಂತ ನನಗೆ ಗೊತ್ತು. ಮುಖ್ಯವಾಗಿ ಅಂತಹ ಯಾವುದೇ ಪೂರ್ವಾಗ್ರಹಪೀಡಿತಳು ನಾನಲ್ಲ.
ನರೇಂದ್ರ ಮೋದಿ ಅವರು ಮಾಡಿದ ಒಳ್ಳೆಯ ಕೆಲಸಗಳು ಇಷ್ಟವಾಗುವಂತೆ ಅವರಿಂದ ತಪ್ಪು ನಡೆದಾಗ ಬೇಜಾರಾಗುತ್ತೆ.. ಯಾಕೆ ಅಧಿಕಾರ ಹೀಗೆ ಮಾಡಿಸುತ್ತೆ ಅಂತ.. ಅದೇರೀತಿ ಸಿದ್ದರಾಮಯ್ಯನವರು ಮಾಡಿದ ಒಳ್ಳೆಯ ಕೆಲಸಗಳು, ಅವರ ನಿರ್ಧಾರಗಳು ಎರಡರ ಬಗ್ಗೆ ಓಪನ್ ಆಗಿ ನೋಡುವ ಅಭ್ಯಾಸ. ನೆರೆಯ ರಾಜ್ಯ ತಮಿಳು ನಾಡಿನಲ್ಲಿ ಜಯಲಲಿತಾ ಅವರನ್ನು ದುರಹಂಕಾರಿ ಎಂದು ಮಂದಿ ಕರೆದರೂ ಆಕೆ ತನ್ನ ರಾಜ್ಯದ ಜನತೆಗೆ ಮಾಡಿರುವ - ನೀಡಿರುವ ಸವಲತ್ತುಗಳ ಬಗ್ಗೆ ಅಪಾರ ಗೌರವವಿದೆ.
ಇತ್ತೀಚೆಗೆ ನನ್ನ ಅಣ್ಣ ರವಿ ಪಕ್ಕದ ರಾಜ್ಯ ವಿಭಜಿತ ಆಂಧ್ರಕ್ಕೆ ಸೆಮಿನಾರ್ ಗೆ ಹೋದಾಗ ಅಲ್ಲಿ ನೀರಿನ ಸಮಸ್ಯೆಗಳ ಬಗ್ಗೆ , ಸೂಕ್ತ ಕ್ರಮಗಳಿಲ್ಲದೆ ಸೊರಗುತ್ತಿರುವ ಸಾಮಾನ್ಯನ ಬದುಕಿನ ಬಗ್ಗೆ ಹೇಳುತ್ತಾ ಅಲ್ಲಿನ ತಜ್ಞರು ನೆರೆಯ ಕರ್ನಾಟಕ ಮತ್ತು ತಮಿಳು ನಾಡಿನಲ್ಲಿ ಈ ರೀತಿ ಕ್ರಮ ಕೈಗೊಂಡಿದ್ದಾರೆ, ನಮ್ಮವರು ಅಲ್ಲಿ ಹೋಗಿ ಅಭ್ಯಾಸಿಸಿ ಬಂದು ಸೂಕ್ತ ಕ್ರಮ, ಬದಲಾವಣೆಗೆ ಆದ್ಯತೆ ನೀಡಬೇಕು ಎಂದು ಅವರು ಅಂದರಂತೆ .. ನಮ್ಮ ರಾಜ್ಯದ ಬಗ್ಗೆ ಖುಷಿ ಆಗುತ್ತೆ ಇವೆಲ್ಲ ಕೇಳಿದಾಗ ..
ನನಗೆ ಹಿಸ್ಟರಿ ನೆಹರುಅವರ ಬಗ್ಗೆ ಮಾತ್ರ ಹೇಳಿಲ್ಲ...! ಬಿಡಿ ಆ ವಿಷ್ಯ :) ಯಾಕೇಂದ್ರೆ ಸುಳ್ಳನ್ನು ನಿಭಾಯಿಸುವುದೆಷ್ಟು ಕಷ್ಟವೋ ಅಷ್ಟೇ ಕಷ್ಟ ನಿಜವನ್ನು ಮರೆ ಮಾಚುವುದು ಅಲ್ವೇ !!
@ಜೀ ಹಿಂದಿವಾಹಿನಿಯಲ್ಲಿ ಡ್ರಾಮೆ ಬಾಜ್ ಆರಂಭವಾಗಿದೆ ಮತ್ತೆ. ಕ್ಯೂಟಿ ಕ್ಯೂಟ್ ಮಕ್ಕಳು.ಮುಗ್ಧ ಪ್ರಪಂಚದಲ್ಲಿ ನಾವು ಸಹ ಸದಸ್ಯರಾಗುವುದು ಅತ್ಯಂತ ಖುಷಿ ಕೊಡುವ ಸಂಗತಿ..ಪತ್ರಿಕೆಗಳು ಬರೆಯುವಂತೆ ಕರ್ನಾಟಕದ ಅಳಿಯ ವಿವೇಕ್ ಒಬೆರಾಯ್ , ನಮ್ಮ ಉಪ್ಪಿ - ಉಪೇಂದ್ರ ಅವರಲ್ಲಿ ಪ್ರಶ್ನೆಗಳನ್ನು ಮೂಡಿಸಿದ ಚೆಲುವೆ ಸೊನಾಲಿ ಬೇಂದ್ರೆ (ಯಾರಿಟ್ಟರು ಚುಕ್ಕಿ?.. ಯಾಕಿಟ್ಟರು ಚುಕ್ಕಿ ?? ;-) ).ದೊಡ್ಡವರಿಗೆ ಡ್ಯಾನ್ಸ್ ಹೇಳಿ ಕೊಟ್ಟು ಅವರ ಬಳಿ ಸೈ ಎನಿಸಿಕೊಂಡು , ದೊಡ್ಡವರನ್ನು ನಗಿಸುತ್ತಾ , ಸಿನಿಮಾ ನಿರ್ದೇಶನ ಮಾಡುತ್ತಾ ಎಲ್ಲ ಕ್ಷೇತ್ರದಲ್ಲಿ ಇದ್ದರೂ ಈಗ ಮಕ್ಕಳ ಬಳಿ ಶಿಷ್ಯರಾಗಿದ್ದಾರೆ ಸಾಜಿದ್ ಖಾನ್.
ಈ ಕಾರ್ಯಕ್ರಮದ ಬಗ್ಗೆ ಹೇಳುವುದಕ್ಕಿಂತ ನೋಡಿದರೆ ಮಜಾ ಸಿಗುವುದು.. ಪುಟ್ಟ ಪುಟ್ಟ ಪುಟಾಣಿಗಳು .. ಪ್ರತಿ ಶನಿವಾರ - ಭಾನುವಾರ ಪ್ರಸಾರ ಆಗುತ್ತೆ .
@ ತುಂಬಾ ವಿನೂತನವಾಗಿ ಪ್ರಸಾರ ಆಗ್ತಾ ಇರುವ ಧಾರವಾಹಿ ಸಿಯಾ ಕೆ ರಾಮ್ . ಸ್ಟಾರ್ ವಾಹಿನಿಯ ಈ ಧಾರವಾಹಿ ಹೆಚ್ಚು ಮನಸೆಳೆದಿದೆ ನನಗೆ. ಬೇರೆಯ ರಾಮಾಯಣದ ಸೀರಿಯಲ್ ಗಳಿಗಿಂತ ಇದರಲ್ಲಿ ವಾಸ್ತವ ಅಂಶಗಳನ್ನು ಜೋಡಿಸಿ ನಿರ್ಮಿಸಿದ್ದಾರೆ.
ರಾಮನ ಪಾತ್ರಧಾರಿ ಆಶಿಶ್ ಶರ್ಮ, ಸೀತೆಯಾಗಿ ಮದಿರಾಕ್ಷಿ ಮುಂದ್ಲೆ, ಜನಕನ ಪಾತ್ರಧಾರಿ ಬಿಜಯ್ ಆನಂದ್ ಸೇರಿದಂತೆ ಎಲ್ಲರೂ ಖುಷಿ ಕೊಡುವ ಅದ್ಭುತ ಪ್ರತಿಭೆಗಳು.
ಆದರೆ ಒಂದು ಸಂಗತಿ ಅಂದ್ರೆ ಈ ಧಾರವಾಹಿ ನಿರ್ದೇಶಕ, ಕಥೆಗಾರ ಇಂಗ್ಲೀಷ್, ಫ್ರೆಂಚ್, ಸ್ಪಾನಿಶ್ ನಂತಹ ವಿದೇಶಿ ಭಾಷೆಗಳ ಸಿನಿಮಾ ಹೆಚ್ಚು ನೋಡುವ ಅಭ್ಯಾಸ ಇದೆ ಅಂತ ಕಾಣುತ್ತೆ.. ಅದರ ಅನೇಕ ಕಾನ್ಸೆಪ್ಟ್ ಇದರಲ್ಲಿ ಎದ್ದು ಕಾಣುತ್ತೆ. ಎನಿವೆಸ್ ತುಂಬಾ ವಿಭಿನ್ನವಾಗಿದೆ.
No comments:
Post a Comment