ನಿನ್ನೆ ಬೆಳಿಗ್ಗೆ ಸುವರ್ಣ ನ್ಯೂಸ್ ನಲ್ಲಿ ಪ್ರಸಾರ ಆಗ್ತಾ ಇದ್ದ ಕಾರ್ಯಕ್ರಮ ಗಮನ ಸೆಳೆಯಿತು. ಉತ್ತಮ ಆಂಕರ್ ಗಳಲ್ಲಿ, ನನಗೆ ಇಷ್ಟವಾದ ಒಂದಷ್ಟು ಆನಕರ್ಗಳಲ್ಲಿ ಒಬ್ಬರಾದ ಸಹನಾ ಭಟ್ ಆ ಕಾರ್ಯಕ್ರಮ ನಡೆಸಿ ಕೊಡ್ತಾ ಇದ್ರು. ಸಿಟಿ ಟ್ಯಾಕ್ಸಿ ಥರ ಈಗ ಸಿಟಿ ಬೈಕ್ ಅಂತ ನಗರದಲ್ಲಿ ತನ್ನ ಸೇವೆ ಆರಂಭ ಮಾಡಿದೆಯಂತೆ.. ಇಂತಿಷ್ಟು ನಿಗದಿತ ದಾರಿ ಕ್ರಮಿಸಿದರೆ ಇಂತಿಷ್ಟು ಮೊತ್ತ ಹಾಗೂ ಆ ಬಳಿಕ ಅದರ ಮೊತ್ತ ಹೆಚ್ಚುತ್ತದೆ... ಹೀಗೆ ಪ್ರತಿಯೊಂದು ಸಂಗತಿ ಬಗ್ಗೆ ಇತ್ತು ಕಾರ್ಯಕ್ರಮ.. ಆಟೋ, ಟ್ಯಾಕ್ಸಿ ಬೇಡ ಅನ್ನೋರಿಗೆ ಇದು ಹೆಚ್ಚು ಸೂಕ್ತ ಅನ್ನುವ ಮಾತನ್ನು ಹೇಳ್ತಾ ಇದ್ರು. ಈಗ ಸಧ್ಯಕ್ಕೆ ಗಂಡಸರು ಮಾತ್ರ ಇದರ ಸೌಲಭ್ಯ ಪಡೆಯುವಂತಿದ್ದು, ಇಷ್ಟರಲ್ಲೇ ಹೆಣ್ಣುಮಕ್ಕಳಿಗೂ ಆ ಸೌಲಭ್ಯ ಕೊಡ್ತಾರಂತೆ ಮಂದಿ.ಸಂತೋಷ ಆಯ್ತು ಬಿಡಿ ಕೇಳಿ..
ಆದರೆ ಈ ರೀತಿಯ ಸೌಲಭ್ಯ ಇದೇ ಮೊದಲಲ್ಲ.ಏಕೆಂದರೆ ಶಿರಸಿಯಲ್ಲಿ ಈಗಾಗಲೇ ಇಂತಹ ಸೌಲಭ್ಯ ಆರಂಭವಾಗಿ ತುಂಬಾ ಸಮಯವಾಗಿದೆ ಅಲ್ವ ಭಟ್ರೇ :-) ಅದರೂ ಬೆಂಗಳೂರಿನಲ್ಲಿ ಸಾಕಷ್ಟು ಜನ ಬಿಟ್ಟಿ ಲಿಫ್ಟ್ ತಗೊಳೋರು ಆದರೆ ಈಗ ಪೈಸೆ ನೀಡ ಬೇಕು ಅಷ್ಟೇ !
@ ಈ ಬೇಸರ , ಗೊಂದಲ, ಆತಂಕ, ಯೋಚನೆ, ಪ್ರಶ್ನೆ, ಏನು ಬೇಕಾದರೂ ಅನ್ನಿ ನನ್ನ ಎಫ್ ಬಿ ಮಿತ್ರರು ಆಗಿರುವ, ಹಿಸ್ಟರಿ ಪ್ರೊಫೆಸರ್ ಆದ, ಪುರಾಣ ಪುಣ್ಯಕಥೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ ಅಶೋಕ್ ಶೆಟ್ಟರ್ ಅವರು ತಮ್ಮ ಈ ಮನದ ಮಾತನ್ನು ಎಫ್ ಬಿ ಗೋಡೆ ಮೇಲೆ ಹರಡಿದ್ದಾರೆ.. ಅವರ ಮನದ ಭಾವದ ಮಾತಿನ, ನೋವಿನ, ಗೊಂದಲದ, ಅಚ್ಚರಿಯ, ಆಸಕ್ತಿಯ ಇನ್ನು ಹಲವಾರು ಅಂಶಗಳ ಮುಖ್ಯ ವ್ಯಕ್ತಿ ಅರ್ನಬ್ ಗೋಸ್ವಾಮಿ .. ಅಶೋಕ್ ಅವರ ಮನದ ಮಾತು ಯಥಾವತ್ ಕಾಪಿ ಪೇಸ್ಟ್ ಮಾಡಿ ಇಲ್ಲಿ ಹಾಕಿದ್ದೇನೆ.. ಜೊತೆ ಬಂದಿರುವ ಕಾಮೆಂಟ್ ಗಳನ್ನೂ ಸಹಿತ.. ನಿಮ್ಮಲ್ಲಿ ಯಾರಾದರು ಉತ್ತರ ಹೇಳಿ ಅಶೋಕ್ ಅವರ ಗೊಂದಲ ದೂರ ಮಾಡಿ ಪುಣ್ಯ ಕಟ್ಟಿಕೊಳ್ಳಿ . ;-)
..Over to Ashok Shettar ...
ಭಾರತದ ಪುರಾಣ, ದಂತಕಥೆ, ಐತಿಹ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದವರಿದ್ದರೆ ದೇವರು ನಾರದನಿಗೆ "ನೀನು ಮುಂದಿನ ಜನ್ಮದಲ್ಲಿ ಅರ್ನಬ್ ಗೋಸ್ವಾಮಿಯಾಗಿ ಹುಟ್ಟು" ಎಂದು ಶಾಪ ಕೊಟ್ಟ ಪ್ರಸಂಗವೇನಾದರೂ ತಮ್ಮ ಗಮನಕ್ಕೆ ಬಂದಿದ್ದರೆ ದಯವಿಟ್ಟು ನಮ್ಮ ಗಮನಕ್ಕೆ ತರುವದು..
*G.V.Jayashree
Journalist
No comments:
Post a Comment