ಗಣರಾಜ್ಯೋತ್ಸವ ... ಅತಿ ಹೆಚ್ಚು ಖುಷಿ ನೀಡುವ ರಾಷ್ಟ್ರೀಯ ಹಬ್ಬ ಇದು. ದೂರ ದರ್ಶನದಲ್ಲಿ ನೇರ ಪ್ರಸಾರದ ಕಾರ್ಯಕ್ರಮ ವೀಕ್ಷಿಸುವಾಗ ಬಾಲ್ಯದ ನೆನಪು ಕಾಡಿದ್ದು ಸತ್ಯ. ಶಾಲೆಯಲ್ಲಿ ಗ್ರೂಪ್ ಸಾಂಗ್ ಹೇಳುವ ವಿದ್ಯಾರ್ಥಿನಿಗಳಲ್ಲಿ ನನ್ನ ಹೆಸರು ಖಾಯಂ . ಸೈಡ್ ಆಕ್ಟರ್ ಥರ ನಾನು ಇರಲೇ ಬೇಕು.. ಅದರಲ್ಲೂ ಇಂತಹ ರಾಷ್ಟ್ರೀಯ ಹಬ್ಬದ ಸಮಯದಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವಿಕೆ ಇರುತ್ತಿತ್ತು.
ದೂರದರ್ಶನದಲ್ಲಿ ಇಂದು ತುಂಬಾ ಖುಷಿಯಿಂದ ಗಣತಂತ್ರ ದಿನದ ಕಾರ್ಯಕ್ರಮ ವೀಕ್ಷಿಸಿದೆ. ಸಾಕಷ್ಟು ಸರ್ತಿ ಇಂತಹ ಖುಷಿಗಳಿಂದ ದೂರಾಗಿರುತ್ತೇವೆ, ಆ ಸ್ಥಿರ ಚಿತ್ರಗಳು, ರಾಜ್ಯಗಳ ಪ್ರತಿನಿಧಿಸುವ ಆ ವಿಷಯಗಳು ಎಲ್ಲವು ಚಂದ. ಎ ಆರ್ ರೆಹಮಾನ್ ಅವರ ವಂದೇ ಮಾತರಂ ಅತ್ಯಂತ ಮುದ ನೀಡಿದ ಅಂಶ.. ಭಾರತದ ಬಗ್ಗೆ ಹೆಚ್ಚು ಹೆಚ್ಚು ಹೆಮ್ಮೆ ಆಗುತ್ತದೆ.
ಟೀವಿ ಹಾಕಿದರೆ ಸಾಕು ಬರೀ ಚರ್ಚೆ.. ಆಪ್ತ ಅನ್ನಿಸುವ ಕಾರ್ಯಕ್ರಮಗಳೇ ಇಲ್ಲವೇನೋ ಎಂದು ಅನ್ನಿಸುವಂತೆ ಮಾಡುತ್ತದೆ. ಆದರೆ ಚಂದನ ವಾಹಿನಿ ಮಾತ್ರ ಅಂತಹ ಅಂಶಗಳಿಂದ ಕಿರಿಕಿರಿ ಉಂಟು ಮಾಡದು.. ವೀಕ್ಷಕರಿಗೆ ನೀಡುವ ಕಾರ್ಯಕ್ರಮಗಳು ತುಂಬಾ ಚೆನ್ನಾಗಿರುತ್ತದೆ. ಥಟ್ ಅಂತ ಹೇಳಿ, ಮಧುರ ಮಧುರವೀ ಮಂಜುಳ ಗಾನ, ಸವಿರುಚಿ, ಬೆಳಗಿನ ಸಂದರ್ಶನ ಚೊಕ್ಕ.. ಸುಂದರ.. :-)
No comments:
Post a Comment