ಚಿರತೆ (Leopard ). ಬಂಡೀಪುರದಲ್ಲಿ ಗುರು ತೆಗೆದ ಚಿತ್ರ. |
ಸಾಮಾನ್ಯವಾಗಿ ಕೆಲವು ಪದಗಳ ಬಳಕೆ ಮಾಡುವಾಗ ಅದರ ಅರ್ಥ ತಿಳಿಯುವುದಕ್ಕೆ ಹೋಗಿರಲ್ಲ. ವಿಬ್ ಗಯಾರ್ ಚಿರತೆ ಅನಾಹುತಗಳ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ತಪ್ಪು ಹೆಸರು ಹೇಳಿದ್ದು ಈಗ ಹಳೆ ಸುದ್ದಿ. ಆದರೆ ಮೈಸೂರು ನಿವಾಸಿಯಾಗಿರುವ ಪತ್ರಕರ್ತ ಮಿತ್ರ ಗುರುಪ್ರಸಾದ್ ತುಂಬಸೋಗೆ ಅವರು ಅರಣ್ಯ, ಕಾಡು ಪ್ರಾಣಿಗಳು,ಪ್ರಕೃತಿ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವಂತಹವರು. ಅವರು ನಮ್ಮ ಚಿರತೆಯನ್ನು ಚೀತಾ ಎಂದು ಕರೆದ ಮಾಧ್ಯಮ ಮಿತ್ರರ ತಪ್ಪಿನ ಬಗ್ಗೆ ಹೇಳುತ್ತಾ ಚೀತಾ ಮತ್ತು ಚಿರತೆ ನಡುವಿನ ವ್ಯತ್ಯಾಸ ಹೇಳಿದ್ದಾರೆ. ಒಪ್ಪಿಸಿಕೊಳ್ಳಿ.. ಇದು ಮುಂದೆ ನಿಮಗೆ ಸಹಾಯ ಆಗಬಹುದು ಎನ್ನುವ ದೃಷ್ಟಿಕೋನದಿಂದ ಇಲ್ಲಿ ಅಂಟಿಸಿದ್ದೇನೆ..ಅಂದಂಗೆ ಅವರು ಇದನ್ನು ಬರೆದು ಎರಡು ದಿನಗಳಾಗಿದೆ.. ನಾನು ಈಗ ನಿಮ್ಮ ಮುಂದೆ ಇಡಲು ಸಾಧ್ಯವಾಗಿದೆ. ಅದಕ್ಕೆ ಕ್ಷಮೆ ಇರಲಿ.
ಚೀತಾ (Cheetah ) ನಮ್ಮ ದೇಶದಲ್ಲಿ ಸಿಗುವುದಿಲ್ಲ. ----
ಚಿತ್ರ ಇಂಟರ್ ನೆಟ್
ವಿಬ್ ಗಯಾರ್ ಚಿರತೆ ಹೊಕ್ಕ ಘಟನೆಗೆ ಸಂಬಂಧಪಟ್ಟಂತೆ ಸುದ್ದಿಗಳು ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ವರದಿಯಾದವು. ಹಲವರು ಅದನ್ನು ಚೀತಾ ದಾಳಿ ಎಂಬ ಪದ ಬಳಕೆ ಮಾಡುತ್ತಿದ್ದಾರೆ. (ನಾನು ಅವರು ಇವರು ಎಂದು ಬೊಟ್ಟ ಮಾಡುತ್ತಿಲ್ಲ.) ಆದರೆ ನಮ್ಮ ದೇಶದಲ್ಲಿ ಈಗಾಗಲೇ ಚೀತಾ ಎಂಬ ಪ್ರಭೇದ ನಿರ್ನಾಮವಾಗಿದೆ ಎಂದು ವನ್ಯಜೀವಿ ವಿಜ್ಞಾನಿಗಳು ದೃಢಪಡಿಸಿದ್ದಾರೆ. ಭಾರತದಲ್ಲಿ ಇರುವುದು ಚಿರತೆಯೇ ಹೊರತು ಚೀತಾವಲ್ಲ. leopard ಎಂದರೆ 'ಚಿರತೆ'. Cheetah ಅಂದರೆ ಚೀತಾ
ಚೀತಾ ಮತ್ತು ಚಿರತೆ ಎರಡೂ ಬೆಕ್ಕಿನ ಜಾತಿಗೆ ಸೇರಿದ್ದರೂ ಆಫ್ರಿಕಾ ಖಂಡದಲ್ಲಿ ಚೀತಾ ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ ಸ್ವಾತಂತ್ರಪೂರ್ವದಲ್ಲಿ ಚೀತಾ ಇತ್ತೆಂದು ಕೆಲವು ಹೇಳುತ್ತಾರೆ ಚೀತಾ ದೇಹಕ್ಕೆ ಹೋಲಿಸಿದರೆ ಮುಖ ಸಣ್ಣದು. ದೇಹವೂ ನೀಳವಾಗಿ ಚಾಚಿದಂತೆ ಉದ್ದವಾಗಿದೆ. ವೇಗಕ್ಕೆ ಹೆಸರುವಾಸಿಯಾಗಿದೆ, ಆದರೆ ಮರ ಏರುವ ಸಾಮರ್ಥ್ಯದ ಕೊರತೆ ಇದೆ.
ಆದರೆ ಚಿರತೆ ಎದುರಾಳಿಯ ಮೇಲೆ ಮಿಂಚಿನ ವೇಗದಲ್ಲಿ ದಾಳಿ ಮಾಡುತ್ತದೆ. ಜತೆಗೆ ಮರವನ್ನು ಅಷ್ಟೇ ವೇಗದಲ್ಲಿ ಹತ್ತುತ್ತದೆ. ಜತೆಗೆ ಬೇಟೆಯನ್ನು ಕಚ್ಚಿಕೊಂಡು ಮರ ಹತ್ತುವುದು ವಿಶೇಷ.
Guru Prasad Thumbasoge (ವಿಕ ಪತ್ರಕರ್ತರು )
ಬಹಳ ಹಿಂದೆ ಓದಿದ್ದ ನೆನಪು ರಂಗಭೂಮಿಯಲ್ಲಿ ಬದುಕನ್ನು ಕಂಡುಕೊಂಡಿದ್ದ ಕಲಾವಿದರು ಸಿನಿರಂಗದಲ್ಲಿ ಸ್ಥಾನ ಪಡೆಯಲು ಮಾಡಿದ ಕಸರತ್ತು ಅಷ್ಟಿಷ್ಟಲ್ಲ. ಅಂತಹ ಕಲಾವಿದರ ಪಟ್ಟಿಗೆ ಮುಸರಿ ಕೃಷ್ಣ ಮೂರ್ತಿ, ರತ್ನಾಕರ್, ಉಮೇಶ್ ಇನ್ನು ಅನೇಕರು ಸೇರ್ಪಡೆ ಆಗುತ್ತಾರೆ. ಮುಸರಿ ಕೃಷ್ಣ ಮೂರ್ತಿಯವರು ತಮ್ಮ ಧ್ವನಿ , ಆಂಗಿಕ ಶೈಲಿಯನ್ನು ಬದಲಾಯಿಸಿ ಜನರ ಮನದಲ್ಲಿ ಉಳಿದರು. ಅನೇಕರಿಗೆ ಗುರುವಾದರು.ವೀಕೆಂಡ್ ವಿತ್ ರಮೇಶ್ ಅತ್ಯಂತ ಸುಂದರ ಕಾರ್ಯಕ್ರಮ. ಸದಭಿರುಚಿಯ, ಮನಸೋಲ್ಲಾಸ ಹೆಚ್ಚಿಸುವ ಕಾರ್ಯಕ್ರಮ ಇದು. ಕನ್ನಡದ ಅತ್ಯುತ್ತಮ ನಟ, ನಿರ್ದೇಶಕ, ನಿರೂಪಕ........ ರಮೇಶ್ ಅರವಿಂದ್ ಈ ಕಾರ್ಯಕ್ರಮಕ್ಕೆ ಹೆಚ್ಚು ಕಳೆ ಕಟ್ಟಿದ್ದಾರೆ..
ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆ ಸಾಧುಕೋಕಿಲ ಅವರ ಬದುಕಿನ ಅನಾವರಣ ನಡೆಯಿತು. ಶನಿ ಹಾಗೂ ಭಾನುವಾರ ತಪ್ಪದೆ ವೀಕ್ಷಿಸುವಂತೆ ಮಾಡಿದ ಕಾರ್ಯಕ್ರಮ. ಸಾಧು ಅವರ ಧ್ವನಿ ಸಾಕಷ್ಟು ಅಭಿಮಾನಿಗಳಿಗೆ ಇಷ್ಟ.. ಮುಸರಿ ಕೃಷ್ಣ ಮೂರ್ತಿ ಅವರ ಧ್ವನಿ, ನಟನೆಯಿಂದ ಪ್ರೇರೇಪಿತರಾದ ಬಗ್ಗೆ ಸಾಧು ಮಹಾರಾಜ್ ಹೇಳಿದಾಗ ನನಗೆ ಮೇಲಿನ ವಾಕ್ಯಗಳು ನೆನಪಿಗೆ ಬಂತು . ಎಂತಹ ಕಂಠಸಿರಿ ಹೊಂದಿದ್ದಾರೆ ಸಾಧು ಅವರ ಕುಟುಂಬದ ಸದಸ್ಯರು..
ಸಾಧು ಅವರು ಕಾಣದ ಕಡಲಿಗೆ ಭಾವಗೀತೆ ಹಾಡುವಾಗ ಕಣ್ಣೀರು ಬಂತು.
ಎಂತಹ ಸಂಗೀತ ಸಂಯೋಜನೆ, ಗಾಯಕ ..ಸಿ ಅಶ್ವಥ್ ಅವರು ಕನ್ನಡದ ಹೆಮ್ಮೆ..ಕರ್ನಾಟಕ ಹಿರಿಮೆ ...
ಎಸ್ ಪಿ ಬಾಲಸುಬ್ರಮಣ್ಯಂ ಅವರು ಸಾಧು ಅವರ ಸಂಗೀತ ಪ್ರತಿಭೆ ಬಗ್ಗೆ ಆಗಾಗ ತಮ್ಮ ಕಾರ್ಯಕ್ರಮಗಳಲ್ಲಿ ನೆನಪಿಸಿಕೊಳ್ಳುತ್ತಿರುತ್ತಾರೆ.. ಇಂತಹ ಅಪರೂಪದ ಸಂಗೀತ ನಿರ್ದೇಶಕ, ಹಾಡುಗಾರ ನಟನೆಯತ್ತ ಮನ ಸೋತಿರುವ ಬಗ್ಗೆ ಸ್ವಲ್ಪ ಖೇದವಿರುತ್ತದೆ ಅವರ ಮಾತಲ್ಲಿ.. !
ವೆಲ್ ಅವೆಲ್ಲ ಎಸ್ಪಿಬಿ ಅವರು ನಡೆಸಿಕೊಡುವ ಟೀವಿ ಕಾರ್ಯಕ್ರಮಗಳಲ್ಲಿ ಕೇಳಿರೋದು ಮಾರ್ರೆ !
1 comment:
ಇದಕ್ಕೆಲ್ಲ ಮೊದಲ ಕಾರಣ ಸುದ್ದಿ ನಿರೂಪಕರ ಪೂರ್ವ ತಯಾರಿ ಮತ್ತು ಗ್ರಹಿಕೆಯ ಕೊರತೆ!
ವ್ಯತ್ಯಾಸ ಸರಳವಾಗಿ ಇಲ್ಲಿ ನಿರೂಪಿತವಾಗಿದೆ.
ಸಾಧು ಅವರ ಜೊತೆ ಒಂದೆರಡು ಸಿನಿಮಾಗಳಲ್ಲಿ ಕೆಲಸ ಮಾಡುವ ಅದೃಷ್ಟ ನನಗೂ ದೊರೆತಿತ್ತು. ಮೃದು ಹೃದಯೀ ಸರಳ ಬಹುಮುಖ ಪ್ರತಿಭೆ ಆತ.
ರಮೇಶ್ ಅರವಿಂದರ ಎಲ್ಲ ಕಾರ್ಯಕ್ರಮಗಳೂ ಪರಿಪೂರ್ಣವೇ.
Post a Comment