ತುಂಟತನ

Image result for red flowers
ಮೊನ್ನೆ 'ವೀಕೆಂಡ್ ವಿತ್ ರಮೇಶ್' ಲಕ್ಷ್ಮೀ ಎಪಿಸೋಡ್ ನಲ್ಲಿ 'ಪಲ್ಲವಿ ಅನುಪಲ್ಲವಿ' ಚಿತ್ರದಲ್ಲಿ ಶ್ರೀನಾಥ್ ಮಗ ರೋಹಿತ್ ಜೊತೆ ಅಭಿನಯದ ಸನ್ನಿವೇಶದ ಉಲ್ಲೇಖವಿತ್ತು. ...ಬಹುಶಃ ಅದು 'ನಗು ಎಂದಿದೆ ಮಂಜಿನ ಬಿಂದು ..... ನಲಿ ಎಂದಿದೆ ಗಾಳಿ ಇಂದು' ಹಾಡಿನ ಊಟಿ ಚಿತ್ರೀಕರಣದ ಬಗ್ಗೆ ..... ಎಪಿಸೋಡ್ ಉದ್ದಕ್ಕೂ ಆ ಚಿತ್ರದ ಹಾಡಿನ ಟ್ಯೂನ್ .....1983ರಲ್ಲಿ ಮೈಸೂರಿನ ಪ್ರಭಾ ಟಾಕೀಸ್ ನಲ್ಲಿ ಈ ಚಿತ್ರ ನೋಡಿದ ನೆನಪು ಮರಕಳಿಸಿತು.....ಹಾಗಾಗಿ ಆ ಚಿತ್ರದ ಸಿಡಿ ತೆಗೆದು ಮತ್ತೊಮ್ಮೆ ಆ ಚಿತ್ರ ನೋಡಿದೆ.....
ನಗುವ ನಯನ ಮಧುರ ಮೌನ...ಮಿಡಿವಾ ಹೃದಯಾ ಇರೆ ಮಾತೇಕೆ?
ಹೊಸ ಭಾಷೆಯಿದು ರಸ ಕಾವ್ಯವಿದು.... ಇದ ಹಾಡಲು ಕವಿ ಬೇಕೇ?.........
ಆರ್.ಎನ್. ಜಯಗೋಪಾಲ್ ರಚಿಸಿರುವ ಅತಿ ಸುಮಧುರ ಹಾಡು.....
ಹಸಿರು ವನಸಿರಿಯಲ್ಲಿ ಇದರ ಚಿತ್ರಣವೂ ಅಷ್ಟೇ ಸುಂದರವಾಗಿತ್ತು...
ಪರಭಾಷೆಯ ಅನಿಲ್ ಕಪೂರ್, ವಿಕ್ರಂ, ಲಕ್ಷ್ಮೀ, ಕಿರಣ್ ವರೇಲ್ ಇವರೊಂದಿಗೆ ಕನ್ನಡದ ಸುರೇಶ್ ಹೆಬ್ಲೀಕರ್, ಶಿವಾನಂದ್, ವಾಸುದೇವ ರಾವ್, ಸುಂದರ ರಾಜ್, ಭಾರ್ಗವಿ ನಾರಾಯಣ, ಉಮಾ ಶಿವಕುಮಾರ್ ನಟಿಸಿರುವ ಈ ಚಿತ್ರಕ್ಕೆ ಮಣಿರತ್ನಂ ಅವರ ಸಮರ್ಥ ನಿರ್ದೇಶನ, ಬಾಲು ಮಹೇಂದ್ರ ಸುಂದರ ಹೊರಾಂಗಣ ಛಾಯಾಗ್ರಹಣ, ಇಳೆಯರಾಜಾ ಅವರ ರಾಗಸಂಯೋಜನೆ.......
ಹೆಚ್ಚಾಗಿ ಅನ್ಯಭಾಷಿಕರೇ ಆಗಿದ್ರೂ ಇದು ಒಂದು ಸುಂದರ ಕನ್ನಡ ಚಿತ್ರ... ಚಿತ್ರಕ್ಕೆ ಅಪ್ಪಟ ಕನ್ನಡದ ಹೆಸರು...ಕಂಗ್ಲೀಷ್ ಸೋಂಕೂ ಇಲ್ಲದ ಹಾಡುಗಳು....ಸಂಫೂರ್ಣವಾಗಿ ಭಾರತದಲ್ಲಿಯೇ ಚಿತ್ರೀಕರಣ....
ಇತ್ತೀಚಿನ ಕನ್ನಡ ಚಿತ್ರಗಳಲ್ಲಿ ಇದೆಲ್ಲವೂ ಬಹಳ ಅಪರೂಪ...
@Dinakar Rao

Image result for red flowers
ವೀಕೆಂಡ್ ವಿಥ್ ರಮೇಶ್  ಕಾರ್ಯಕ್ರಮದಲ್ಲಿ ಲಕ್ಷ್ಮಿ ಅವರ ಕಾರ್ಯಕ್ರಮ ಕಂಡು ನನ್ನ ಎಫ್ ಬಿ ಮಿತ್ರರಾದ ದಿನಕರ್ ರಾವ್ ಸರ್ ಬರೆದದ್ದು ಹೀಗೆ.
ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಅತ್ಯುತ್ತಮವಾಗಿದೆ ಅಂತ ಬಹಳಷ್ಟು ಮಂದಿ ಹೇಳ್ತಾ ಇದ್ದಾರೆ. ಅದರಲ್ಲಿ ದಿನಕರ್ ರಾವ್ ಸಹ ಒಬ್ಬರು. ಪ್ರತಿಬಾರಿ ಅವರು 'ವಿವಿರ' (wwr) ಬಗ್ಗೆ ತಮ್ಮ   ಅಭಿಪ್ರಾಯ ಹೇಳ್ತಾ ಇರ್ತಾರೆ. ಆದರೆ ಕಳೆದ ಒಂದೂವರೆ  ತಿಂಗಳಿಂದ ನಾನು ಮಂತ್ರಾಲಯ, ನನ್ನ ಊರಿನ ಜಾತ್ರೆ ಅದು ಇದು ಅಂತ ಬ್ಯುಸಿ ಆಗಿದ್ದೆ. ಯಾರೇ ಬರೆದರೂ ಓದಿ ಸುಮ್ಮನಾಗುತ್ತಿದ್ದೆ. ಇವತ್ತು ಸ್ವಲ್ಪ ಬಿಡುವಾಯಿತು   .. ಸರಿ ಹಾಗೆ ಕಣ್ಣಾಡಿಸಿದಾಗ ಈ ಸಂಗತಿ ಕಂಡು ಬಂತು.
ಭಾರತದ ಅತ್ಯಂತ ಸುಂದರ- ಪ್ರತಿಭಾವಂತ ನಟಿಯರಲ್ಲಿ ಲಕ್ಷ್ಮಿ ಸಹ ಒಬ್ಬರು. ಕಾರ್ಯಕ್ರಮದಲ್ಲಿ ನನಗೆ ಹೆಚ್ಚು ಖುಷಿ ಕೊಟ್ಟಿದ್ದು ಲಕ್ಷ್ಮಿ ಅವರ ತುಂಟತನ. ಸಾಮಾನ್ಯವಾಗಿ ಈ ರೀತಿಯ ಹ್ಯುಮರಸ್ ಸ್ವಭಾವ ತಮಿಳು ಮಂದಿಯಲ್ಲಿ ಹೆಚ್ಚು ಕಾಣುತ್ತದೆ. ಅವರು ಕಲಾವಿದರಾಗಿಯೇ  ಇರಬೇಕಿಲ್ಲ. ಆ ಮಣ್ಣು, ರಕ್ತದ , ಕಣಕಣದಲ್ಲಿ ಹಾಸ್ಯದ ಗುಣ ಕರಗಿದೆ. ಲಕ್ಷ್ಮಿ ಅವರ ಕಾರ್ಯಕ್ರಮ ವೀಕ್ಷಿಸುವಾಗ  ಅದೇ ಆನಂದ ನೀಡಿತ್ತು.
----ಇದೇ ಕಾರ್ಯಕ್ರಮದಲ್ಲಿ ಡಾ. ಎಸ್ಪಿ ಬಾಲಸುಬ್ರಮಣ್ಯಮ್, ದೊಡ್ಡಣ್ಣ, ಅನಂತ್ ನಾಗ್ ಎಲ್ಲ ಕಾರ್ಯಕ್ರಮಗಳು ಸಕತ್ತಾಗಿತ್ತು.. ಒಂದೊಳ್ಳೆ ಪುಸ್ತಕ ಓದಿದ ಅನುಭವ ಆಯ್ತು.  ತಪ್ಪದೆ ಕಾದು ನೋಡುವ ಕಾರ್ಯಕ್ರಮಗಳಲ್ಲಿ ಇದು ಒಂದು ಅಂತ ನಾನು ಮಾತ್ರವಲ್ಲ ತುಂಬಾ ಜನರು ಹೇಳುತ್ತಿದ್ದಾರೆ.
ಏನೇ ಹೇಳಿ ವಿವಿರ  ದಲ್ಲಿ ಹೆಣ್ಣುಮಕ್ಕಳ ಸಾಧನೆಯನ್ನು ಪ್ರಸಾರಿಸೋದು ಕಡಿಮೆ. ನಮ್ಮ ಕನ್ನಡ ನಾಡಲ್ಲಿ ಸ್ತ್ರೀ ಸಾಧಕರಿಲ್ಲವೇ ರಮೇಶ್ ಅರವಿಂದ್ ಅಂಡ್ ಟೀಂ ?
@ ಕಲರ್  ಕನ್ನಡ ವಾಹಿನಿಯಲ್ಲಿ  ಪ್ರಸಾರವಾಗುವ ವೀಕೆಂಡ್ ಕಾರ್ಯಕ್ರಮ ಸೂಪರ್ ಮಿನಿಟ್ ನಟ- ನಿರೂಪಕ  ಗಣೇಶ್ ಅವರ ಮಾತಿನಶೈಲಿ ಮತ್ತು ಅವರ ಸ್ಟೈಲ್ಸ್ ನಿಂದ ಹೆಚ್ಚು ಇಷ್ಟ ಆಗಿದ್ದಾರೆ. ಸುಪರ್ ಮಿನಿಟ್ ಮೊದಲ ಭಾಗವನ್ನು ಅಧಿಕ ಪ್ರಮಾಣದಲ್ಲಿ ಹೆಣ್ಣುಮಕ್ಕಳೇ ನೋಡಿದ್ದು.. ಎರಡನೆಯ ಭಾಗವನ್ನು ಸಹ ! ನಾನು ಸಾಕಷ್ಟು ದಿನ ನೋಡಿರಲಿಲ್ಲ.. ನನ್ನ ಪರಿಚಿತ ಹೆಣ್ಣುಮಗಳು ಏ ಬಾಳ ಚೆನ್ನಾಗಿದೆ ನೋಡು.. ಏ ಸಕತ್ತಾಗಿದೆ ಕಾರ್ಯಕ್ರಮ ಎಂದು ಹೊಗಳಿದ್ದೇ ಹೊಗಳಿದ್ದು.. ಕುತೂಹಲ ತಡೆಯದೆ ವೀಕ್ಷಿಸಿದೆ.
ಗಣೇಶ್ ಅವರ ಬಗ್ಗೆ ಯಾಕೆ ಇಷ್ಟ ಆಗೋದು ಅಂದ್ರೆ ಈ ಕಲಾವಿದ  ಗ್ರಾಸ್ ರೂಟ್ ಲೆವೆಲ್ ನಿಂದ ಬಂದವರು. ಅವ್ರು ಅಂದು ಉದಯ ಟೀವಿ ಕಾಮಿಡಿ ಟೈಮ್, ಈ ಟೀವಿ, ಉದಯದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳಲ್ಲಿ ತೋರಿದ ಪ್ರತಿಭೆ, ಆ ಪ್ರಯತ್ನ ಈಗ ಈ ಮಟ್ಟಕ್ಕೆ ಬೆಳೆಸಿದೆ. ಕನ್ನಡದ ಅತ್ಯುತ್ತಮ ನಿರೂಪಕ , ಒಳ್ಳೆಯ ನಟ ಗಣೇಶ್ ...

1 comment:

Unknown said...

ನನ್ನ ಸ್ಟೇಟಸ್ ನೀವಿ ನಿಮ್ಮ ಬ್ಲಾಗ್ ನಲ್ಲಿ Share ಮಾಡಿದ್ದೀರಿ... ತುಂಬಾ ಖುಷಿಯಾಯ್ತು.... ನೀವು ಕಾರ್ಯಕ್ರಮಗಳನ್ನು ವಿಶ್ಲೇಷಿಸುವ ರೀತಿ ಚೆನ್ನಾಗಿದೆ... ಮತ್ತೊಮ್ಮೆ Thanks