ಜೀ ಹಿಂದಿ ವಾಹಿನಿಯಲ್ಲಿ ಜಿಂದಗಿಕಿ ಮೆಹೆಕ್ ಅನ್ನುವ ಧಾರವಾಹಿ ಪ್ರಸಾರ ಆಗ್ತಾ ಇದೆ. ಅಡುಗೆ ಆಸಕ್ತಿ ಇರುವ ಮಧ್ಯಮವರ್ಗದ ಹೆಣ್ಣುಮಗಳ ಕಥಾಹಂದರ ಹೊಂದಿರುವ ಧಾರವಾಹಿ. ಮೆಹೆಕ್ ಶರ್ಮ ಪಾತ್ರಧಾರಿಯಾದ ಸಮೀಕ್ಷಾ, ಶೌರ್ಯ ಪಾತ್ರಧಾರಿ ಕರಣ್ ಅವರು ನಟಿಸಿದ್ದಾರೆ. ಈ ಕಥೆಯಲ್ಲಿ ಮಧ್ಯಮವರ್ಗದ ಹೆಣ್ಣುಮಗಳು ಪ್ರತಿಷ್ಠಿತ ರಿಯಾಲಿಟಿ ಷೋ ನಲ್ಲಿ ಭಾಗವಹಿಸುತ್ತಾಳೆ..ಆಗ ಎದುರಾಗುವ ಸಮಸ್ಯೆಗಳು,ನಾಯಕ ಶೌರ್ಯನ ವರ್ತನೆ ಪ್ರತಿಯೊಂದು ಇಂತಹ ಧಾರಾವಾಹಿಗಳಲ್ಲಿ ಸಾಮಾನ್ಯ. ಆದರೂ ಸಹ ಕಥೆಯು ವಿಭಿನ್ನ ಅಂಶದ ಅಡಿಯಲ್ಲಿ ಇರುವುದು, ಮಧ್ಯಮವರ್ಗದ ಅವಿಭಕ್ತ ಕುಟುಂಬ.. ಹೈ ಕ್ಲಾಸ್ ಜನಗಳ ಮನಸ್ಥಿತಿ ಎಲ್ಲವೂ ಚೆನ್ನಾಗಿ ತಿಳಿಸುತ್ತಾ ಸಾಗುತ್ತಾರೆ ನಿರ್ದೇಶಕರು.ಬೋರ್ ಹೊದಿಸದ ಧಾರವಾಹಿ ಅದು ... ಅದರಲ್ಲೂ ನನ್ನಂತಹ ಮಧ್ಯಮವರ್ಗದ ಹೆಣ್ಣುಮಕ್ಕಳಿಗೆ ನಿಜವಾಗಿಯೂ ಇಷ್ಟ ಆಗುವಂತಹ ಧಾರವಾಹಿ ಅಂತ ಮಾತ್ರ ಧೈರ್ಯವಾಗಿ ಹೇಳೋಕೆ ಇಷ್ಟ ಪಡ್ತೀನಿ :-)
@ಅಂಡ್ ಟಿವಿಯಲ್ಲಿ ಬಡೋ ಬಹು ಎನ್ನುವ ಹೆಸರಿನ ಧಾರವಾಹಿ ಪ್ರಸಾರ ಆಗ್ತಾ ಇದೆ. ದಪ್ಪಗಿರುವ ಹೆಣ್ಣುಮಗಳ ಕಥೆ ಅದು. ಒಂದು ಹಳ್ಳಿಯಲ್ಲಿ ಪ್ರಾಮಾಣಿಕವಾಗಿದ್ದು, ಕಷ್ಟಪಟ್ಟು ದುಡಿದು, ತನ್ನ ಮನೆ ಕೆಲಸ ಅಲ್ಲದೆ ಬೇರೆಯವರ ಮನೆ ಕೆಲಸವನ್ನು ಸಹ ಬೇಸರ ಇಲ್ಲದೆ ಮಾಡುವ ಒಳ್ಳೆಯ ಮನಸ್ಥಿತಿಯ ಹೆಣ್ಣುಮಗಳು ಕೋಮಲ್. ಆಕೆಯ ಆ ಸ್ಥೂಲದೇಹ ಕಂಡು ಯಾವ ಗಂಡು ಸಹ ಮದುವೆ ಆಗಲು ಒಪ್ಪಲ್ಲ . ಕೊನೆಗೆ ಅದೇ ಊರಿನ ಮುಖಂಡ ಕೋಮಲ್ ಳನ್ನು ತನ್ನ ಸೊಸೆಯಾಗಿ ಮಾಡಿಕೊಳ್ಳುತ್ತಾರೆ . ರಿಟಾಶಾ, ಪ್ರಿನ್ಸ್ ಇದರಲ್ಲಿ ಮುಖ್ಯ ಪಾತ್ರಧಾರಿಗಳು.ಪಂಕಜ್ ಧೀರ್ ಅವರು ಸಹ ಮುಖ್ಯಪಾತ್ರಧಾರಿ. ನಿಜ ಚೆನ್ನಾಗಿದೆ ...
No comments:
Post a Comment