ಕ್ವಶ್ಚನ್

Image result for ಹೂವುಗಳು
ಬೇರೆ ಯಾವ  ವಿಷಯದ ಬಗ್ಗೆಯಾದರೂ ಸರಿಯೇ ಕೇಂದ್ರದ ಬಗ್ಗೆ ವಿರೋಧ ಮಾಡಿದರೂ ಸಹ ಯೋಗಾ ದಿವಸ್ ಮತ್ತು ಸ್ವಚ್ ಭಾರತ್ ಬಗ್ಗೆ  ಮೂಗು ಮುರಿಯುವ ಹಾಗಿಲ್ಲ. ಯಾಕೇಂದ್ರೆ ಇವೆರಡೂ ಎಲ್ಲರ ಬದುಕಲ್ಲೂ ಬಹು ಮುಖ್ಯ ಪಾತ್ರ ನಿರ್ವಹಿಸುತ್ತದೆ. ಆರೋಗ್ಯ ಇಲ್ಲದ ಬದುಕಲ್ಲಿ ಬೇರೆಯಾವ ಸಿರಿಗೂ ಬೆಲೆ ಇರಲ್ಲ ಅಲ್ವೇ!
ಈಗ ಬಹು ಸಂಖ್ಯೆಯಲ್ಲಿ ಯೋಗ ಬಗ್ಗೆ  ಮಂದಿ ಆಸಕ್ತಿ ವಹಿಸುತ್ತಿದ್ದಾರೆ.ಕೇವಲ ಯೋಗಾ ದಿವಸ್ ಗೆ ಮಾತ್ರ ಯೋಗಾಭ್ಯಾಸ ಮಾಡುವುದಕ್ಕೆ ಆದ್ಯತೆ ನೀಡುವುದಕ್ಕಿಂತ ಬದುಕಿನ ಭಾಗವಾಗಿ ಮಾಡಿಕೊಂಡರೆ ನಾವು ಸಹಿತ ತಾವೋ ಲಿಂಚ್ ಮತ್ತು ನಾನಮ್ಮಾಳ್ ರಂತೆ 90+ ತನಕ ಬದುಕ ಬಹುದು..
ಟಿವಿ ನೈನ್  ವಾಹಿನಿಯಲ್ಲಿ ಪ್ರಸಾರವಾದ ಯೋಗಾ ದಿವಸ್ ಪ್ರಯುಕ್ತ  ನಡೆದ  ಹಿರಿಯ ಹೆಣ್ಣುಮಕ್ಕಳ  ಯೋಗ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ.

** ಇದೇ ವಾಹಿನಿಯಲ್ಲಿ ಪ್ರಸಾರವಾಗುವ ನಾರಾಯಣ ಸ್ವಾಮಿ ಅವರ  ಹೀಗೂ ಉಂಟೆ ಕಾರ್ಯಕ್ರಮದ ಬಗ್ಗೆ ನನಗಿನ್ನೂ ಆಶ್ಚರ್ಯ ಕಡಿಮೆ ಆಗಿಲ್ಲ. ಯಾಕೇಂದ್ರೆ ಸಾಕಷ್ಟು  ಕಾರ್ಯಕ್ರಮಗಳು ಆರಂಭಿಕ ಹಂತದಲ್ಲಿ ಇದ್ದ ಆಸಕ್ತಿ ಕ್ರಮೇಣ ಕಳೆದುಕೊಳ್ಳುವಂತೆ ಮಾಡುತ್ತದೆ. ಆದರೇ ನಾರಾಯಣ ಸ್ವಾಮಿ ಮಾತ್ರ ಹೆಣ್ಣುಮಕ್ಕಳ ಅದರಲ್ಲೂ ಹಿರಿಯ ಹೆಣ್ಣುಮಕ್ಕಳ ಡಾರ್ಲಿಂಗ್ ಆಗಿದ್ದಾರೆ .. ಇದನ್ನು ಕಂಡಾಗ ನಮ್ಮ ಮನದಲ್ಲಿ ಮೂಡುವ ಕಟ್ಟ ಕಡೆಯ ಕ್ವಶ್ಚನ್ ಹೀಗೆಲ್ಲಾ ಉಂಟೆ ! ;-)

No comments: