ಡಿಯರ್ ಕಿಚ್ಚ ಸುದೀಪಾ,
ಸಾಮಾನ್ಯವಾಗಿ ಫೇರಿ ಟೇಲ್ಸ್ ಗಳಲ್ಲಿ ಏನೆಲ್ಲಾ ಕಷ್ಟಗಳನ್ನು ಎದುರಿಸಿದ್ರೂ ಸಹಿತ ಅಂತಿಮವಾಗಿ ನಾಯಕ ತನ್ನತನ ಉಳಿಸಿಕೊಂಡು ಗೆಲುವನ್ನು ಸಾಧಿಸುತ್ತಾನೆ. ಇಂತಹ ಕಥೆಗಳಲ್ಲಿ ಒಳ್ಳೆಯ ಮನದ ದೇವಮಾನವ ಇರುತ್ತಾನೆ. ಫೆರಿಟೇಲ್ ನಲ್ಲಿ ಎಲ್ಲವೂ ಚಂದ.. ಆ ಸ್ವಪ್ನಲೋಕ,ಆ ಅದ್ಭುತ ಪ್ರಪಂಚ ವಾಹ್ .. ಯಾಕೆ ಈ ಮಾತನ್ನುನಿಮಗೆ ಹೇಳ್ತಾ ಇದ್ದೀನಿ ಅಂದ್ರೆ ನೀವು ಬಿಬಾ ಮನೆಯಲ್ಲಿರುವ ಸ್ಫರ್ಧಿಗಳನ್ನು ಭೇಟಿ ಮಾಡಲು ಹೋದಾಗ ನನಗೆ ಮೇಲೆ ಹೇಳಿದ ಅಂಶಗಳು ನೆನಪಿಗೆ ಬಂತು. ಅದರಲ್ಲೂ ಮುಖ್ಯವಾಗಿ ಟಿವಿ-ಸಿನಿ ಮಂದಿ ಹೆಚ್ಚೇನೂ ಇಷ್ಟ ಪಡದ ಮುಟ್ಟಲು ಬೇಸರ ಪಡುವ ಸಮೀರನ ಜೊತೆ ನೀವು ನಡೆದುಕೊಂಡ ರೀತಿ ಅತ್ಯಂತ ಗೌರವಾನ್ವಿತ.ಇದರ ಬಗ್ಗೆ ಹೆಚ್ಚೇನೂ ಹೇಳಲ್ಲ.ಮುಂದೆ ಎಂದಾದರೂ, ಸಾಧ್ಯವಾದರೆ ಹೇಳ್ತಿನಿ... :-)
ನನಗೆ ಈ ಪಂದ್ಯದಲ್ಲಿ ಸಮೀರಾ ಗೆಲ್ಲ ಬೇಕು ಎನ್ನುವ ಆಸೆ ಇದೆ. ಈ ಬಾರಿ ಯಾಕೆ ಆತ ಗೆಲುವಿನ ಕಿರೀಟ ಹೊಂದಬೇಕು ಎನ್ನುವುದರ ಬಗ್ಗೆ ವಿವರಿಸಲ್ಲ.ಮುಂದೆ ಹೇಳ್ತಿನಿ. ದೊಡ್ಡವರ ಸಣ್ಣತನ ನೋಡಿನೋಡಿ ಬೇಸತ್ತ ನನ್ನಂತಹ ಸಾಮಾನ್ಯರಿಗೆ ನಿಮ್ಮ ದೊಡ್ಡತನ ಹೆಚ್ಚು ಗೌರವ ಮೂಡಿಸಿತು.
@ ಈ ಬಾರಿ ಕಲರ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಷೋ ಹತ್ತು ಹಲವಾರು ಕಾರಣಗಳಿಂದ ನನ್ನ ಗಮನ ಸೆಳೆದಿದೆ. ಅಂತಿಮ ಹಂತದತ್ತ ಹೆಜ್ಜೆ ಹಾಕುತ್ತಿರುವ ರಿಯಾಲಿಟಿ ಷೋನಲ್ಲಿ ಈ ಬಾರಿ ಬಿಬಾ ಆದೇಶದಂತೆ ಎಲ್ಲರು ನಾಮಿನೇಟ್ ಆಗಿರೋದು ಮತ್ತು ಐದು ಸಾವಿರ ಪಾಯಿಂಟ್ ಗಳನ್ನು ತಾವೇ ಕೈಯಾರೆ ಕಡಿಮೆ ಮಾಡಿಕೊಳ್ಳುತ್ತಿರುವ ಅಂಶವು ಸಹಿತ ಆಸಕ್ತಿಯಿಂದ ಕೂಡಿದೆ.
ದಿವಾಕರ್ ಇಲ್ಲಿ ತನಕ ಬಂದಿದ್ದು ಮಾತ್ರ ಅತ್ಯಂತ ಆಶ್ಚರ್ಯ. ತಪ್ಪು ಮಾಡಿದರು ಅಮಾಯಕತ್ವದ ಸೋಗಲ್ಲಿ ಸಮಾಧಾನ ಮಾಡಿ ಅನೇಕ ವೀಕ್ಷಕರ ಮತ್ತು ಮನೆಯವರ ಕಣ್ಣಿಗೆ ಒಳ್ಳೆಯ ಮನುಷ್ಯನಾಗಿರುವ ಈ ಸ್ಫರ್ಧಿ ಸೋಮಾರಿ ಅನ್ನುವುದು ಸ್ಪಷ್ಟವಾಗಿ ಕಾಣುತ್ತದೆ. ನಿವೇದಿತಾ ಮಾಡುವ ಪ್ರಯತ್ನದಲ್ಲಿನ ಅರ್ಧದಷ್ಟು ಸಹಿತ ಈತ ಮಾಡದೆ ಇದ್ದರೂ ಅದು ಹೇಗೋ ಇನ್ನು ಬಿಬಾ ಮನೆಯಲ್ಲಿ ಇದ್ದಾರೆ..
@@ಆಟದಲ್ಲಿ ಹೆಚ್ಚು ಆಸಕ್ತಿ ಉಂಟಾಗಬೇಕಾದರೆ ಡಬಲ್ ಎಲಿಮಿನೇಷನ್ ಆಗಬೇಕು ಮತ್ತು ಈ ಬಾರಿ ಶ್ರುತಿ ಮತ್ತು ದಿವಾಕರ್ ಎವಿಕ್ಟ್ ಆಗ ಬೇಕು .. ಆಗ ಸಖತ್ತಾಗಿರುತ್ತದೆ..
No comments:
Post a Comment