ಚಂದನ ವಾಹಿನಿಯಲ್ಲಿ ನಿನ್ನೆ ಒಂದು ಸಂಗೀತ ಕಾರ್ಯಕ್ರಮ ವೀಕ್ಷಿಸಿದೆ. ಭಾರತೀಯ ಸಾಮಗಾನ ಸಭಾ ಅವರ ಮೈಸೂರು ಆಸ್ಥಾನ ಸಂಗೀತೋತ್ಸವ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಶಾಸ್ತ್ರೀಯ ಸಂಗೀತ ಮನಕ್ಕೆ ಅದರಲ್ಲೂ ವಾದ್ಯ ಸಂಗೀತ ಹೆಚ್ಚು ಇಷ್ಟ. ಮತ್ತೊಂದು ಸಂಗತಿ ಅಂದ್ರೆ ನನಗೆ ಅಂದ್ರೆ ಒಂದು ಕೀರ್ತನೆಯನ್ನು ವೀಣೆ, ವಯೊಲಿನ್, ಕೊಳಲು,ಸ್ಯಾಕ್ಸೋ ಫೋನ್ ಹೀಗೆ ವಾದ್ಯಗಳಲ್ಲಿ ಆಲಿಸುವ ಹವ್ಯಾಸ. ಸಕತ್ ಖುಷಿ ಕೊಡುತ್ತದೆ. ನಿನ್ನೆ ವೀಣಾವಾದನ ಪ್ರಸಾರವಾಗುತ್ತಿತ್ತು. ಪ್ರತಿದಿನ ಪ್ರಾಯಶಃ ಸಂಜೆ ವೇಳೆ ಈ ಕಾರ್ಯಕ್ರಮ ಇರುತ್ತದೆ ಅನ್ನಿಸುತ್ತದೆ (ಸಮಯದತ್ತ ಗಮನ ಹರಿಸಲು ಆಗಲಿಲ್ಲ ) ಸಂಗೀತಾಸಕ್ತರು ಇದನ್ನು ವೀಕ್ಷಿಸ ಬಹುದು.
@ ಈ ವಾಹಿನಿಯಲ್ಲಿ ಪ್ರಸಾರವಾಗುವ ಶುಭೋದಯ ಕಾರ್ಯಕ್ರಮವನ್ನು ಇತ್ತೀಚೆಗೆ ವೀಕ್ಷಣೆ ಮಾಡಿದಾಗ ವಾಸು ದೀಕ್ಷಿತ್ ಅವರ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಭಿನ್ನಶೈಲಿಯಿಂದ ಕ್ಲಾಸಿಕಲ್ ಮತ್ತು ರಾಪ್ ಎರಡನ್ನು ಮೇಳೈಸಿ ಕೀರ್ತನೆಗಳು , ವಚನಗಳ ಮೂಲಕ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ವಾಸು. ಅವರ ಶೈಲಿ ಖುಷಿ ಕೊಡ್ತು. ಎಲ್ಲಾ ವಾಹಿನಿಗಳಿಗಿಂತ ಚಂದನ ಸದಾ ಭಿನ್ನ ಎನ್ನುವಂತೆ ಮಾಡುತ್ತದೆ ಇಂತಹ ವಿಶಿಷ್ಟವಾದ ಕಾರ್ಯಕ್ರಮಗಳಿಂದ ಮತ್ತು ಈ ರೀತಿಯ ವಿಶೇಷವಾದ ಕಲಾವಿದರಿಂದ..
No comments:
Post a Comment