@ ಕಿಚ್ಚ ಸುದೀಪ ದಿನೇದಿನೇ ಯಂಗ್ ಆಗಿ ಕಾಣ್ತಾ ಇರೋದು ಈ ಬಿಗ್ ಬಾಸ್ ನ ಮುಖ್ಯ ಅಂಶ ಜೊತೆಗೆ ಹೊಸಬಗೆಯ ಭಿನ್ನ ರೀತಿಯ ಆಟಗಳು ಮನಸ್ಸಿಗೆ ಖುಷಿ ಕೊಟ್ಟಿದೆ. ನಂಗೆ ಸ್ಪರ್ಧಿ ವಿನಯ್ ಹೆಚ್ಚು ಇಷ್ಟ ಆಗಿದ್ದಾರೆ ಆದರೆ ಸಂಗೀತ ಅತಿ ಆಶ್ಚರ್ಯ ಉಂಟು ಮಾಡಿದ್ದಾರೆ. ಹೇಗೆ ಅಂದ್ರೆ ಕೆಲವು ಮಂದಿ ಇರ್ತಾರೆ ಅವರು ಹೇಗೆ ಅಂದ್ರೆ ಹಾಯ್ ಹವ್ ಆರ್ ಯು ಅಂತ ಕೇಳಿದೆವು ಅಂತ ಅಂದುಕೊಳ್ಳಿ ತಕ್ಷಣ ನೋ ಇಂಗ್ಲಿಸ್ ದಿಸ್ ಈಸ್ ಕನ್ನಡ ಮಂತ್ ಓನ್ಲಿ ಕನ್ನಡ !!ಹಾಗೆ ಸಂಗೀತ ಸಹ ಆಕೆ ಮಾಡೋದು ಒಂದಾದರೆ ಆಡೋದು ಬೇರೆ !! ನನಗೆ ಆಶ್ಚರ್ಯ ತರಿಸಿದ್ದು ಆಕೆಯ ಗುಣ. ಸಾಮಾನ್ಯವಾಗಿ ಎಲ್ಲ ಸೀಜನ್ ಗಳಲ್ಲೂ ನಾನು ಕಂಡಂತೆ ಸ್ನೇಹದ ವಿಷಯದಲ್ಲಿ ಪ್ರಾ ಮಾಣಿಕರಾಗಿ ಇರುತ್ತಿದ್ದರು ಮತ್ತು ಇದ್ದಾರೆ . ಆದರೆ ಈಕೆ ಮತ್ತು ತನಿಷಾ ಜೊತೆಗಿನ ಬಾಂಧವ್ಯ ನೋಡಿ ಒಳ್ಳೆಯ ಸ್ನೇಹ ಅಂದುಕೊಳ್ಳುವಷ್ಟಲ್ಲಿ ... !
@ ಕೋಲಾರ ಅದರಲ್ಲೂ ಮುಳಬಾಗಿಲಿನ ಹುಡುಗ್ರು ಹೆಚ್ಚು ತೆಲುಗು ಸಿನಿಮಾ ಪ್ರಭಾವಿತರು .ನಮ್ಮ ವರ್ತೂರು ಸಂತೋಷ್ ಇದಕ್ಕೆ ಹೊರತಲ್ಲ . ಕೋಲಾರದ ಕಡೆಯವರು ಮನೆಗಳಲ್ಲಿ ತಂದೆತಾಯಿ ತೆಲುಗು ಮಾತಾಡೋದು ಸಾಮಾನ್ಯ. ಆದರೆ ಮಕ್ಕಳ ಜೊತೆ ಕನ್ನಡಕನ್ನಡ ಸವಿಗನ್ನಡ ,,!ಹುಲಿ ಉಗುರು ಮಾತ್ರವಲ್ಲ ತೆಲುಗು ಹೀರೋಗಳ ನಟನೆ, ಡ್ರೆಸ್, ಜಾಸ್ತಿನೇ ಅನುಕರಿಸುತ್ತಾರೆ. ನಾನು ಕಂಡಂಗೆ . ಆತನ ಬದುಕಲ್ಲಿ ನಡೆದ ಘಟನೆ ನಿಜಕ್ಕೂ ಖೇದಕರ. ಯಾಕೋ ತುಂಬಾ ಗ್ರಾಂಥಿಕವಾಗಿ ಬರೀತಾ ಇದ್ದೀನಿ . ಬಹುಶಃ ಇತ್ತೀಚೆಗೆ ಮಂಗಳೂರಿಗೆ ಹೋದ ಪ್ರಭಾವ ಇರಬೇಕು :-)
No comments:
Post a Comment