ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಝಲಕ್ ದಿಕ್ಲಾಜ ಡ್ಯಾನ್ಸ್ ಕಾರ್ಯಕ್ರಮ ಬಗ್ಗೆ ಹೇಳುವಷ್ಟಿಲ್ಲ. ಸ್ಪರ್ಧಿಗಳ ಪ್ರಯತ್ನ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಸಹಿತ ಪ್ರಯತ್ನ ಇದ್ದೆ ಇರುತ್ತದೆ. ಆದರೆ ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಜಡ್ಜ್ ಗಳು ಮಲೈಕಾ ಅರೋರಾ, ಫರಾ ಖಾನ್ ಮತ್ತು ಅರ್ಷದ್ ವಾರ್ಸಿ . ಮಲೈಕಾ ಬಗ್ಗೆ ನನಗೆ ಇಷ್ಟ ಆಗುವುದು ಆಕೆಯ ಅರೋಗ್ಯ ರಕ್ಷಣಾ ವಿಧಾನ ಮತ್ತು ಕ್ಯಾಮರಾಗಳು ಎಷ್ಟೇ ಆಕೆಯ ಸುತ್ತಮುತ್ತ ತಿರುಗಾಡಿದರು ತುಂಬಾ ಡಿಗ್ನಿಫೈ ಮುಗುಳ್ನಗು ( ರೀಲ್ ಗಳಲ್ಲಿ ನೋಡ್ತಾ ಇದ್ದೀನಿ/ಇರ್ತೀನಿ ) ಹಂಚುತ್ತಾ ಪೋಸ್ ಕೊಡ್ತಾರೆ. ವಿವಾದಗಳಿಗೆ ಆಸ್ಪದ ಇಲ್ಲದಂತೆ , ಅರ್ಷದ್ ಮತ್ತು ಫರಾ ಸಹ ಇಷ್ಟ ಪಟ್ಟು ನೋಡುವ ಪ್ರತಿಭಾವಂತರು. ಸರ್ಕುಟ್ ,, ನಿಮ್ಮ ಜಡ್ಜ್ಮೆಂಟ್ ಚೆನ್ನಾಗಿರಲಿ..
ಇಂಡಿಯನ್ ಐಡಲ್ ಸಂಗೀತ ಕಾರ್ಯಕ್ರಮ ಪ್ರಸಾರ ಆಗ್ತಾ ಇದೆ. ಶ್ರೇಯ ಘೋಷಾಲ್ ಮತ್ತೊಬ್ಬ ಜಡ್ಜ್ ಹೆಸರು ಮರೆತಿದೆ ಮತ್ತೊಮ್ಮೆ ಬರೀತೀನಿ.. ಕಳೆದವಾರ ಕನ್ನಡ ವಾಹಿನಿ ಯಲ್ಲಿ ಒಂದು ವಿಶೇಷ ಇತ್ತು. ಅದಕ್ಕೆ ಹೊಂದುವಂತೆ ಸೋನಿ ವಾಹಿನಿಯ ಸಂಗೀತ ಕಾರ್ಯಕ್ರಮದಲ್ಲೂ ಇತ್ತು. ಕಲ್ಯಾಣ್- ಆನಂದ್ ಸಂಗೀತ ನಿರ್ದೇಶನದ ಚಂದನ್ ಸ ಬದನ್ ಚಂಚಲ್ ಚಿತ್ವನ್ ಎನ್ನುವ ಹಾಡನ್ನು ದೃಷ್ಟಿ ವಿಕಲಚೇತನ ಹುಡುಗಿ ತುಂಬಾ ಸುಮಧುರವಾಗಿ ಹಾಡಿದಳು. ನನಗೆ ಯಾರ ನ್ಯೂನ್ಯತೆ ಬಗ್ಗೆ ಬರೆಯೋಕೆ ಇಷ್ಟ ಇಲ್ಲ. ಆದರೆ ವಿಶೇಷ ಇರೋದು ಈ ಅಂಶದಲ್ಲಿಯೇ. ಆಕೆ ಅದೆಷ್ಟು ಮಧುರವಾಗಿ ಹಾಡಿದಳು ವಾಹ್.. ಕನ್ನಡ ವಾಹಿನಿಯ ವಿಶೇಷ ಮುಂದಿನ ಪೋಸ್ಟ್ ನಲ್ಲಿ ಬರೀತಿನಿ .... ಖಂಡಿತಾ
No comments:
Post a Comment