ಬಿಗ್ ಬಾಸ್ ಇನ್ನು ನಿನ್ನೆ ಮೊನ್ನೆಯಷ್ಟೇ ಶುರು ಆದಂಗೆ ಇದೆ. ಆಗಲೇ ಫಿನಾಲೆ ಹತ್ರ ಬಂತು.ಯಾರು ಯಾವುದೇ ರೀತಿಯ ಅಭಿಪ್ರಾಯ ಹೊಂದಿರಲಿ ನಾನು ತಪ್ಪದೆ ನೋಡಿದ, ನೋಡುವ, ನೋಡುತ್ತಿದ್ದ ಶೋಗಳಲ್ಲಿ ಇದು ಒಂದು. ಕಿಚ್ಚ ಸುದೀಪ ಬಗ್ಗೆ ಸಾಕಷ್ಟು ಸರ್ತಿ ಬರೆದು ಅಭಿಮಾನಿಸಿದ್ದೀನಿ.. ಆ ಗೌರವ ಇದ್ದೆ ಇದೆ. ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಬಗ್ಗೆ ಒಳ್ಳೆಯದನ್ನು ಹೇಳುವುದಕ್ಕಿಂತ ಕೆಟ್ಟದ್ದನ್ನು ಹರಡುವ ಮಂದಿ ಹೆಚ್ಚು. ಅದು ಅವರ ಖುಷಿ ಬಿಡಿ..! ಒಳ್ಳೆ ಮಾತು ಹೇಳಿದರೆ ನಮಗೆ ಅವರಿಂದ ಲಾಭ ಆಗ್ತಾ ಇದೆ ಅಂತ ತಿಯೋ ಮಂದಿ ಸಹ ಹೆಚ್ಚು...!
ಬಿಗ್ ಬಾಸ್ ನಲ್ಲಿ ಆದಿ ಹೊರಗೆ ಬಂದ ನಂತರ ಯಾರನ್ನು ಭೇಟಿ ಮಾಡ್ತೀರಿ.. ಯಾರ ಜೊತೆ ಸ್ನೇಹ ಇಟ್ಟು ಕೊಳ್ತಿರಿ ಎಂದು ಸಾಮಾನ್ಯವಾಗಿ ಪ್ರತಿಬಾರಿ ಬಿಗ್ ಬಾಸ್ ಮನೆಯಲ್ಲಿ ಕೇಳಿಬರುತ್ತೆ. ಆದರೆ ಹೊರ ಬದುಕು ಹೆಚ್ಚು ದಿನ ಅಂತಹ ಸ್ನೇಹ ಉಳಿಸಲ್ಲ.. ಆದರೂ ಕೆಲವೊಂದಷ್ಟು ಸ್ನೇಹ ಉಳಿದಿದೆ.. ನಮ್ಮ ವರ್ತೂರು ಸಂತೋಷ್ ಮುಗ್ಧತೆ ಬಗ್ಗೆ ಎರಡು ಮಾತಿಲ್ಲ, ಕೋಲಾರದ ಗ್ರೂಪ್ ಗಳಲ್ಲಿ ಜೈ ಹಳ್ಳಿಕಾರ್, ಜೈ ವರ್ತೂರ್ ಅನ್ನುವ ಪೋಸ್ಟರ್ ಗಳು ಸಾಮಾನ್ಯವಾಗಿ ಕಂಡು ಬರ್ತಾ ಇದೆ. ವರ್ತೂರು ಸಂತೋಷ್ ಬಗ್ಗೆ ಕೋಲಾರದವರು ಅಭಿಮಾನಿಸುವುದು ವಿಶೇಷವೇನಲ್ಲ .. ಆದರೆ ಇತ್ತೀಚಿಗೆ ಒಂದು ಸುದ್ದಿ ಕೇಳಿದ್ದು ಅಂದ್ರೆ ಚಿಕ್ಕಮಗಳೂರಿನ ಒಂದಷ್ಟು ಯೂತ್ಸ್ ಬಂದು ಬೆಟ್ಟದ ತಾಯಿ ಚಾಮುಂಡಿ ಹತ್ರ ಕೇಳಿಕೊಂಡಿದ್ದು ಹಳ್ಳಿಕಾರ್ ವರ್ತೂರ್ ಸಂತೋಷ್ ಗೆಲ್ಲಬೇಕು..
ಎನಿವೇಸ್ ಡಿಯರ್ ಸುದೀಪ ನಾವಂತೂ ಮುಖಾಮುಖಿ ಭೇಟಿ ಆಗಲ್ಲ . ನಿಮ್ಮಂತಹ ಮೇರುಶಿಖರವನ್ನು ದೂರದಿಂದ ನೋಡಿ ಗೌರವಿಸುವುದೇ ನಮ್ಮಂತಹವರು ಮಾಡುವ ಕೆಲಸ. ಹೊಗಳಿಕೆ ಅಲ್ಲ ಮನದಾಳದ ಮಾತು. ಮುಂದೆ ಎಂದಾದರೂ ದೇವರು ಅವಕಾಶ ಕೊಟ್ಟರೆ ನಿಮ್ಮನ್ನು ... ?!
ವೆಲ್ ಎಲ್ಲ ಸ್ಪರ್ಧಿಗಳಿಗೂ ಒಳ್ಳೆಯದಾಗಲಿ. ಸೋತವರು -ಗೆದ್ದವರು ಅನ್ನುವುದು ಫಿನಾಲೆ ವೀಕ್ ನಲ್ಲಿ ಆದ್ಯತೆ ಪಡೆಯಲ್ಲ.. ಮತ್ತೊಮ್ಮೆ ಗುಡ್ ಲಕ್
No comments:
Post a Comment