ಭೀಕರ ಹಾಸ್ಯ

 

ಬಿಗ್ ಬಾಸ್  ಛೆ...  ಅಂತಹ ಕಾರ್ಯಕ್ರಮ ನಾನು ನೋಡೋದೇ ಇಲ್ಲ ಎಂದು  ಒಂದು ಕಡೆ , ಬಿಗ್ ಬಾಸ್ ,  ಸ್ಪರ್ಧಿಗಳು, ಅವರ  ವರ್ತನೆ, ಅವರ ಉಡುಗೆ ತೊಡುಗೆ ಹತ್ತು ಹಲವಾರು ಅಂಶಗಳ ಬಗ್ಗೆ   ಚರ್ಚೆ,ಜಗಳ , ಸಪೋರ್ಟ್ ಮಾಡುವ ಮಂದಿ ಒಂದಷ್ಟು  ಇರ್ತಾರೆ.  ಅಂತಹವರು ಸೀಜನ್ ನಿಂದ  ಸೀಜನ್ ಗೆ ಬದಲಾಗುತ್ತಾರೆ. ಆದರೆ ವೀಕ್ಷಕರು ಸದಾ ತಮ್ಮ ಆಸಕ್ತಿಯನ್ನು ಹೊಂದಿರುವುದು ಆ ಕಾರ್ಯಕ್ರಮದ  ಪ್ರೆಸೆಂಟರ್  ಕುರಿತಂತೆ. ನಮ್ಮ ಕನ್ನಡದ ನಮ್ಮ ಕಿಚ್ಚ ಸುದೀಪಾ ಸಹ  ಆಸಕ್ತಿ ಉಳಿಸಿಕೊಂಡು ಇರುವಲ್ಲಿ ಸಫಲ ಆಗಿದ್ದಾರೆ ಅಂತ ಈ ಸಂದರ್ಭದಲ್ಲಿ ಹೇಳೋಕೆ ಇಷ್ಟ ಪಡ್ತೀನಿ ಪ್ರೆಂಡ್ಸ್ (ಪ್ರತಾಪ್ ಶೈಲಿಯಲ್ಲಿ ಓದಿಕೊಳ್ಳಿ ). ಪರ್ಸನಲಿ  ನನಗು ಅಷ್ಟೇ. .... 
ಸಾಮಾನ್ಯವಾಗಿ ಒಂದಷ್ಟು ವಯಸ್ಸಾದ ಬಳಿಕ ಹೆಣ್ಣು ಮತ್ತು ಗಂಡು  ಮಕ್ಕಳ  ವರ್ತನೆ, ಅವರ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಕಂಡು ಬರುತ್ತದೆ. ಆದರೆ ಕಿಚ್ಚಾ ವಾಟ್ ಐಸ್ ಡಿಸ್ ಯಾ ದಿನೇ ದಿನೇ  ಹೆಚ್ಚೆಚ್ಚು   ಯಂಗಿ ಬಾಯ್ ಆಗ್ತಾ ಇದ್ದೀರಿ.. ಟಚ್ ವುಡ್ .. 

ಈ  ಬಾರಿಯ  ಬಿಗ್ ಬಾಸ್ ನಲ್ಲಿ  ಹೆಣ್ಣುಮಕ್ಕಳು ಸ್ಟ್ರಾಂಗ್ ಆಗಿದ್ದಾರೆ. ಅದೆಷ್ಟೋ ವರ್ಷಗಳ ಬಳಿಕ ಒಳ್ಳೆಯ  ಸ್ಪಾರ್ಕ್. . ನಮ್ರತಾ ಸಿನಿಮಾ ಇಂಡಸ್ಟ್ರಿಗೆ  ಒಳ್ಳೆ ಅಸೆಟ್. ಯಾಕೆಂದ್ರೆ ಈ ರಂಗಕ್ಕೆ ಬೇಕಾದ ಒನಪು,  ವೈಯಾರ,ಪ್ರತಿಭೆ ಇದೆ. ಆಕೆ ಬಿಗ್ ಬಾಸ್ ನಲ್ಲಿ ಗೆಲ್ತಾರೋ , ಸೋಲ್ತಾರೋ ಒಟ್ಟಿನಲ್ಲಿ ಭವಿಷ್ಯ ಚೆನ್ನಾಗಿದೆ. ಬೀ ನ್ ಬ್ಯಾಗ್ ಬಾಯ್ಸ್   ನಲ್ಲಿ ತುಕಾಲಿಗೆ ರಿಯಲ್ಲೂ ಸಹ ರಿಯಾಲಿಟಿ ಷೋ ನಂತೆ ಅನ್ನಿಸಿರಬೇಕು. ಕಾಮಿಡಿ ಶೋಗಳ ಲ್ಲಿ  ಭೀಕರ ಹಾಸ್ಯ ದ  ಪ್ರವಾಹ ಹರಿಸಿದವರಿಗೆ ಸೆನ್ಸಿಬಲ್ ಆಗಿ ಮಾತಾಡೋಕೆ ಬರಲ್ಲ ಅನ್ನುವ ಅಂಶ ಮತ್ತೆ ಸಾಬೀತಾಯಿತು. . 


 

No comments: