ಸೋನಿ ವಾಹಿನಿಯಲ್ಲಿ ಮಾಸ್ಟರ್ ಶೆಫ್ ಶೋ ಆರಂಭ ವಾಗಿದೆ. ತುಂಬಾ ಇಷ್ಟಪಟ್ಟು
ವೀಕ್ಷಣೆ ಮಾಡುವ ರಿಯಾಲಿಟಿ ಶೋಗಳಲ್ಲಿ ಇದೂ ಒಂದು. ರಣವೀರ್ , ವಿಕಾಸ್ ಮತ್ತು ಕುನಾಲ್ ಈ ಬಾರಿ
ಜಡ್ಜ್ ಗಳಾಗಿದ್ದಾರೆ. ಕುನಾಲ್ ಕೆಲವು ಸೀಸನ್
ಗಳಲ್ಲಿ ಮಿಸ್ಸಿಂಗ್. ಅದರಲ್ಲೂ ಇತ್ತೀಚೆಗೆ ರೀಲ್ಸ್ ಅದೂ ಎಂತಹದ್ದು ಅಂದರೆ ಅದನ್ನು ಅವರೇ ಹೇಳಬೇಕು.
ನಾನಂತೂ ಅವರ ಈ ರೀಲ್ಸ್ ಪ್ರಯೋಗವನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದೀನಿ. ರಣವೀರ್ , ವಿಕಾಸ್ ಮತ್ತು ಕುನಾಲ್ ಜೋಡಿಯ
ಮಾಸ್ಟರ್ ಶೆಫ್, ಇಡೀ ಭಾರತ ಒಂದಡಿಗೆಯ ಮನೆಯಲ್ಲಿ
ಸೇರಿ ವಿವಿಧತೆಯಲ್ಲಿ ಏಕತೆ ಎನ್ನುವುದನ್ನುಸಾಬೀತು
ಮಾಡುತ್ತದೆ.ಇದರ ಹಿನ್ನಲೆ ಸಂಗಿತ ತುಂಬಾ ಮಧುರವಾಗಿದೆ. ( ಇಂಗ್ಲಿಷ್ ಸಿನಿಮಾಗಳಲ್ಲಿ ಇರುವಂತೆ).ಈ ಬಾರಿ ವಿಶಿಷ್ಟವಾಗಿದೆ ಶೆಫ್
ಗಳ ಕಲರವ..
ಕಲರ್ಸ್ (ಹಿಂದಿ) Laughter Chefs – Unlimited Entertainment ಎನ್ನುವ ಸೆಲೆಬ್ರಿಟಿ ಅಡುಗೆ ಶೋ ಪ್ರಸಾರ ಆಗುತ್ತಿದೆ. ಹಿಂದಿ ಧಾರವಾಹಿ, ಸಿನಿಮಾ ಕಲಾವಿದರು ಇದರ ಮುಖ್ಯ ಆಕರ್ಷಣೆ ವೀಕ್ಷಕರಿಗೆ. ನನಗೆ ಹೆಚ್ಚು ಆಕರ್ಷಿತವಾಗಿರುವ ಅಂಶ ಇದರ ಮಾಸ್ಟರ್ ಹರ್ಪಾಲ್ ಸಿಂಗ್ ಸೊಖಿ ಮತ್ತು ಭಾರತಿ ಸಿಂಗ್.ಹರ್ಪಾಲ್ ಅವರ ಫ್ಯಾನ್ ದೊಡ್ಡ ಗುಂಪೇ ನಮ್ಮ ಮನೆಯಲ್ಲಿದೆ.ಭಾರತಿ ಸಿಂಗ್ ಟೈಮಿಂಗ್ ವಾಹ್ ಎಷ್ಟು ಪ್ರತಿಭಾವಂತೆ !
No comments:
Post a Comment