ಈ ಬಾರಿ ಬಿಗ್ ಬಾಸ್ ಕನ್ನಡ ಸ್ವಲ್ಪ ಜಾಸ್ತೀ ಇಷ್ಟ ಆಗಿದೆ.ಮುಖ್ಯವಾಗಿ ಸುದೀಪಾ ನಿರೂಪಣೆ ಮತ್ತು ಮನೆಯ ವಿನ್ಯಾಸದಲ್ಲಿ ಹೊಸತನ ಸುದೀಪಾ dandy mannerism..! ಮಾಧ್ಯಮಮಿತ್ರರಲ್ಲಿ ಕೆಲವರ ನಂಬರ್ ಮಾತ್ರ ಇದೆ. ಅದರಲ್ಲಿ ಬಿಗ್ ಬಾಸ್ ಮುಖ್ಯ ಹಿನ್ನಲೆ ಧ್ವನಿ ಬಡಕ್ಕಿಲ ಪ್ರದೀಪ್ ದೂ ಒಂದು. ಅವರು ವಾಟ್ಸ್ ಅಪ್ ನಲ್ಲಿ ಹಾಕುವ ಸ್ಟೇಟಸ್ ನೋಡ್ತಾ ಇರ್ತಿನಿ. ಸುದೀಪಾ ಗೆ ಒಂದು ಹಾಯ್ ಹೇಳಿ ಮಾರ್ರೆ ಅಂತ ಹೇಳೋಣ ಅಂತ ಅಂದುಕೊಂಡವಳು ಬ್ಲಾಗ್ ಮೂಲಕವೇ ಹೇಳಿಬಿಡೋಣ ಅಂತ ನಿರ್ಧರಿಸಿ ಹಾಯ್ ಹೇಳ್ತಾ ಇದ್ದೀನಿ ಸುದೀಪಾ.
ಈ ಬಾರಿಯ ಸ್ಫರ್ಧಿಗಳು.ಎಲ್ಲರೂ ಆಟಕ್ಕೆ ನೀಡಿರುವ ಪ್ರಾಮುಖ್ಯತೆ ಜೊತೆಗೆ ಅದರಲ್ಲಿರುವ
ಮಗ್ನತೆ ಇಷ್ಟ ಆಗಿದೆ ನನಗೆ. ತಾಂಡವ್ ರಾಮ್ ಮತ್ತು ಸೌಂದರ್ಯ ಶೆಟ್ಟಿ ಸ್ವಲ್ಪ
ಇಷ್ಟ ಜಾಸ್ತಿ ಆಗಿದ್ದಾರೆ. ಗಗನ್, ಜಗ್ಗ,ಆಸಿಯ, ಗಾನವಿ, ಶಾಸ್ತ್ರಿ,
ಧನುಷ್ ಯಶಸ್, ಪ್ರಶಾಂತ್ ಬಗ್ಗೆ ಸಹ ಅಂಕ ಕಡಿಮೆ ಇಲ್ಲ. ಕಳೆದೆರಡು ಸೀಸನ್
ಗಳಿಗೆ ಕಂಪೇರ್ ಮಾಡಿದರೆ ಹಾಸ್ಯ ಕಲಾವಿದ ಅಂತ ಪ್ರಶಾಂತ್ ಹೇಳಬಹುದು. ಇರುವ
ಸ್ಥಳವನ್ನು ಬಳಸಿ ಸ್ವಲ್ಪವಾದರೂ ಹಾಸ್ಯದ ವಾತಾವರಣ ತರ್ತಾ ಇದ್ದಾರೆ.
*ಮುಖ್ಯ ಸಂಗತಿ ನನ್ನ ಇಂಪ್ರೆಸ್ ಮಾಡಿದ್ದು ಎಲ್ಲರೂ ಸ್ಫರ್ಧಿಗಳು…!. ಯಾರೂ ಯಾರ ಅಮ್ಮ
, ಅಕ್ಕ ಅಣ್ಣ, ತಮ್ಮ ಅಲ್ಲ. ಆಟಕ್ಕೆ ಬಂದಿದ್ದಾರೆ ಆಡ್ತಾ ಇದ್ದಾರೆ. ಟೋಟಲಿ ಇಷ್ಟ ಆಯ್ತು
ಅನ್ನತಕ್ಕಹ ಮಾತು ಈ ಸಮಯದಲ್ಲಿ ಹೇಳೋಕೆ ಇಷ್ಟ ಪಡ್ತೀನಿ.
ಬಿಗ್ ಬಿ ಕೌನ್ ಬನೇಗಾ ಕರೋಡ್ ಪತಿ ಒಂದರ್ಥ ದಲ್ಲಿ
ಎವರ್ ಗ್ರೀನ್ ಕಾರ್ಯಕ್ರಮ ಅವರಂತೆ! ಸಾಮಾನ್ಯವಾಗಿ ಇಷ್ಟಪಟ್ಟು ನೋಡುವ ಕಾರ್ಯಕ್ರಮಗಳಲ್ಲಿ ಇದೂ
ಒಂದು.ಅವರ ಮಾತಿನ ಶೈಲಿ ಮಾತ್ರವಲ್ಲ,ನಗು, ಪ್ರಶಂಸೆ ಸ್ವೀಕರಿಸುವ ಬಗೆ ಎಲ್ಲವೂ ಅವರ ಸಿನಿಮಾಗಳಂತೆ
ವಿನೂತನ.



No comments:
Post a Comment