ಕೋರ್ಟ್‌

 


ಜಿಯೊ ಹಾಸ್ಟಾರ್‌ ನಲ್ಲಿ ಕ್ರಿಮಿನಲ್‌ ಜಸ್ಟಿಸ್‌ ಎನ್ನುವ ಸೀರಿಸ್‌ ಇದೆ. ಅದರಲ್ಲಿ ಕೋರ್ಟ್‌ ಕಥಾಹಂದರ ಇರುವ ಈ ಸೀರೀಸ್‌ ನಲ್ಲಿ ಪಂಕಜ್‌ ತ್ರಿಪಾಠಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಾಲ್ಕು ಸೀಜನ್‌ ಇದೆ. ಭಿನ್ನ ಕಥೆಗಳು.

ಇದೇ ಓಟಿಟಿ ಯಲ್ಲಿ ಇಲ್ಲಿಗಲ್ ಎನ್ನುವ ಮತ್ತೊಂದು  ವೆಬ್‌ ಸೀರೀಸ್‌ ಇದೆ. ಅದೂ ಸಹ ಕೋರ್ಟ್‌ ಸಂಬಂಧಿತ ಕಥೆ. ಅದರ ಕಥೆ ಸಹ ತುಂಬಾ ಆಸಕ್ತಿದಾಯವಾಗಿದೆ. ಈ ಕೋರ್ಟ್‌ ಸೀರೀಸ್‌ ಬಗ್ಗೆ ಏಕೆ ಹೇಳೋಕೆ ಹೊರಟಿದ್ದೀನಿ ಎಂದರೆ ಮುಖ್ಯವಾಗಿ ಟೀವಿ ಧಾರವಾಹಿಗಳಲ್ಲಿ ಟಿ.ಎನ್‌ . ಸೀತಾರಾಮ್‌ ಸರ್‌ ಬಳಿಕ ಹೆಚ್ಚು ಗಮನ  ಸೆಳೆದಿರುವ ಲಾಯರ್‌ ಗಳು ಅಂದರೆ ಭಾರ್ಗವಿ  ಎಲ್‌ ಎಲ್‌ ಬಿ ಯ ಭಾರ್ಗವಿ ಮತ್ತು ಅವರ ಮಾವ ಜೆ.ಪಿ ಪಾಟೀಲ್‌  ನಟನೆ ಅದ್ಭುತ.ಯಾವುದೇ ಧಾರವಾಹಿ ಆಗಿರಲಿ ಅದರ ಪಾತ್ರಧಾರಿಗಳ ನಟನೆ ಅದ್ಭುತವಾಗಿರುತ್ತದೆ. ಭಾರ್ಗವಿಯ ಪಾತ್ರಧಾರಿಗಳು  ಇದ್ಕೆ ಹೊರತಲ್ಲ ..ಅದ್ಭುತ ನಟನೆ..

 

ಸ್ಟಾರ್ ಸುವರ್ಣ ವಾಹಿನಿಯಲ್ಲಿ  ಪ್ರಸಾರ ಆಗುವ ಸುವರ್ಣ ಗೃಹಮಂತ್ರಿ ರಿಯಾಲಿಟಿ ಶೋ ಅಂದಕಾಲತ್ತಿನಲ್ಲಿ  ಉದಯ ವಾಹಿನಿಯಲ್ಲಿ ಇದೇ ಹೋಲಿಕೆಯ ಕಾರ್ಯಕ್ರಮಗಳು ಪ್ರಸಾರ ಆಗುತ್ತಿತ್ತು. ಯಾವುದೇ ಬೇಸರ ಇಲ್ಲದೆ, ಆರಾಮವಾಗಿ ಎಲ್ಲರ ಜೊತೆ ನೋಡ ಬಹುದಾದ ಕಾರ್ಯಕ್ರಮ ಇದಾಗಿದೆ. ಸಿಲ್ಲಿ ಲಲ್ಲಿಯ ರವಿಶಂಕರ್‌ ಹೋಸ್ಟ್‌ ಮಾಡುತ್ತಿದ್ದಾರೆ .

ಶೆಫ್

ಸೋನಿ ವಾಹಿನಿಯಲ್ಲಿ ಮಾಸ್ಟರ್‌ ಶೆಫ್‌ ಶೋ ಆರಂಭ ವಾಗಿದೆ. ತುಂಬಾ ಇಷ್ಟಪಟ್ಟು ವೀಕ್ಷಣೆ ಮಾಡುವ ರಿಯಾಲಿಟಿ ಶೋಗಳಲ್ಲಿ ಇದೂ ಒಂದು. ರಣವೀರ್‌ , ವಿಕಾಸ್‌ ಮತ್ತು ಕುನಾಲ್‌ ಈ ಬಾರಿ ಜಡ್ಜ್‌  ಗಳಾಗಿದ್ದಾರೆ. ಕುನಾಲ್‌ ಕೆಲವು ಸೀಸನ್‌ ಗಳಲ್ಲಿ ಮಿಸ್ಸಿಂಗ್.‌ ಅದರಲ್ಲೂ ಇತ್ತೀಚೆಗೆ ರೀಲ್ಸ್‌ ಅದೂ ಎಂತಹದ್ದು ಅಂದರೆ ಅದನ್ನು ಅವರೇ ಹೇಳಬೇಕು. ನಾನಂತೂ ಅವರ ಈ ರೀಲ್ಸ್‌ ಪ್ರಯೋಗವನ್ನು ಸಿಕ್ಕಾಪಟ್ಟೆ ಎಂಜಾಯ್‌  ಮಾಡಿದ್ದೀನಿ. ರಣವೀರ್‌ , ವಿಕಾಸ್‌ ಮತ್ತು ಕುನಾಲ್‌ ಜೋಡಿಯ ಮಾಸ್ಟರ್‌ ಶೆಫ್‌, ಇಡೀ ಭಾರತ ಒಂದಡಿಗೆಯ  ಮನೆಯಲ್ಲಿ ಸೇರಿ  ವಿವಿಧತೆಯಲ್ಲಿ ಏಕತೆ ಎನ್ನುವುದನ್ನುಸಾಬೀತು ಮಾಡುತ್ತದೆ.ಇದರ ಹಿನ್ನಲೆ ಸಂಗಿತ ತುಂಬಾ ಮಧುರವಾಗಿದೆ. ( ಇಂಗ್ಲಿಷ್‌  ಸಿನಿಮಾಗಳಲ್ಲಿ ಇರುವಂತೆ).ಈ ಬಾರಿ ವಿಶಿಷ್ಟವಾಗಿದೆ ಶೆಫ್‌ ಗಳ ಕಲರವ..

 ಕಲರ್ಸ್‌ (ಹಿಂದಿ) Laughter Chefs – Unlimited Entertainment  ಎನ್ನುವ  ಸೆಲೆಬ್ರಿಟಿ ಅಡುಗೆ ಶೋ ಪ್ರಸಾರ ಆಗುತ್ತಿದೆ. ಹಿಂದಿ ಧಾರವಾಹಿ, ಸಿನಿಮಾ ಕಲಾವಿದರು ಇದರ ಮುಖ್ಯ ಆಕರ್ಷಣೆ ವೀಕ್ಷಕರಿಗೆ. ನನಗೆ ಹೆಚ್ಚು ಆಕರ್ಷಿತವಾಗಿರುವ ಅಂಶ ಇದರ ಮಾಸ್ಟರ್‌ ಹರ್ಪಾಲ್‌ ಸಿಂಗ್‌ ಸೊಖಿ ಮತ್ತು ಭಾರತಿ ಸಿಂಗ್.‌ಹರ್ಪಾಲ್‌ ಅವರ ಫ್ಯಾನ್‌ ದೊಡ್ಡ ಗುಂಪೇ ನಮ್ಮ ಮನೆಯಲ್ಲಿದೆ.ಭಾರತಿ ಸಿಂಗ್‌ ಟೈಮಿಂಗ್‌ ವಾಹ್‌ ಎಷ್ಟು ಪ್ರತಿಭಾವಂತೆ !

 

 

ಅಷ್ಟೇ....

 


ಮೊದಲೆಲ್ಲಾ ಯಾವುದೇ ಒಂದು ಕಾರ್ಯಕ್ರಮ ಇರಲಿ ಅದನ್ನು ವೀಕ್ಷಕರು ಆಸಕ್ತಿಯಿಂದ ವೀಕ್ಷಣೆ ಮಾಡುತ್ತಿದ್ದರು. ಆಗ ವಾಹಿನಿಗಳ  ಸಂಖ್ಯೆ ಕಡಿಮೆ ಇತ್ತು  ಅಥ್ವಾ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳು ಪ್ರಸಾರ ಆಗುತ್ತಿತ್ತು ಎಂದು  ಹೇಳಬಹುದಾದರೂ, ಎಲ್ಲಾ ಭಾಷೆಯ  ಬಹುತೇಕ ವಾಹಿನಿಗಳು ತಮ್ಮ ಕೈಲಾದಷ್ಟು ಉತ್ತಮ ಕಾರ್ಯಕ್ರಮ ನೀಡುವ ವಿಷಯದಲ್ಲಿ  ಸದಾ ಮಗ್ನವಾಗಿರುತ್ತವೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ರಿಯಲಿಟಿ ಶೋ ಗಳು , ಧಾರವಾಹಿಗಳು ಯಾವುದೇ ಇರಲಿ ಭಿನ್ನವಾಗಿರುತ್ತವೆ. ಅದೇರೀತಿ  ಕಲರ್ಸ್ ಕನ್ನಡ ವಾಹಿನಿಯಲ್ಲೂ ಸಹಿತ ( ನಾನು ಹೆಚ್ಚಾಗಿ ವೀಕ್ಷಿಸುವ ಕಾರ್ಯಕ್ರಮಗಳ  ಬಗ್ಗೆ  ಹೇಳುತ್ತಿದ್ದೀನಿ)‌

ಧಾರವಾಹಿಗಳ ವಿಷಯಕ್ಕೆ ಬರುವುದಾದರೆ  ಕೆಲವೊಂದು ಬದಲಾವಣೆಗಳು ಅವುಗಳ ವೀಕ್ಷಣೆ ಹೆಚ್ಚು ಮಾಡುವಂತೆ ಮಾಡಿದೆ. ಭಾಗ್ಯಲಕ್ಷ್ಮಿ (ಕಲರ್ಸ್‌ ) ದಿಲೀಪ್ರಾಜ್ಬಂದ ಮೇಲೆ ಅದರ ಖದರ್ಬೇರೆ  ಆಗಿದೆ..

ಅಪ್ಪನ ಪಾತ್ರಕ್ಕೆ ಜೀವ ತುಂಬಿದ್ದಾರೆ ಜೀ ಕನ್ನಡ ವಾಹಿನಿ ಲಕ್ಷ್ಮಿ ನಿವಾಸದ ಅಪ್ಪ ಮತ್ತು  ನಂದಗೋಕುಲ (ಕಲರ್ಸ್‌ ) ನಂದ  ಪಾತ್ರ ಅದ್ಭುತ. ಆದರೇ ಸ್ಟಾರ್ಸುವರ್ಣ ದಲ್ಲಿ ವಸುಧೈವ ಕುಟುಂಬ ದಲ್ಲಿ ಅವಿನಾಶ್‌  ಮಾತ್ರ ಫೋಟೊದಲ್ಲಿ ಕೂತಿದ್ದಾರೆ. ಬಹಳ ನಿರೀಕ್ಷೆ ಇತ್ತು

ಇನ್ನು ರಿಯಾಲಿಟಿ ಶೋ ಗಳು ಯಾವುದೇ ಆಗಿರಲಿ ಅದರ ತೀರ್ಪುಗಾರರು ವೀಕ್ಷಕರ ಮನದಲ್ಲಿ ನೆಲೆ ಊರಿರುತ್ತಾರೆ.   ಸ್ಪರ್ಧೆಗಳ ಸೀಜನ್‌ ಗಳಲ್ಲಿ  ಅದೇ ಜಡ್ಜ್ ಗಳು ಬರಬೇಕು ಮತ್ತು ಅವರೆಂದಿಗೂ  ಬೋರ್‌ ಹೊಡಿಸಲ್ಲ. ಒಂದು ಸೀಜನ್‌ ನಲ್ಲಿ ಹೆಚ್ಚು ಜನಪ್ರಿಯ ಆದಂತಹ ಯಾವುದೇ ಸ್ಫರ್ಧಿ ಮತ್ತೊಂದು ಸೀಜನ್‌ ನಲ್ಲಿ ಬಂದರೇ ನೋಡುವ ಉತ್ಸಾಹ ಇರುವುದಿಲ್ಲ.

ಸುದೀಪಾ ಇಲ್ದೆ ಇರುವ ಬಿಗ್‌ ಬಾಸ್‌ ಇಮ್ಯಾಜಿನೇಷನ್‌ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಸಚ್ಚಿ!

ಸುದೀಪಾ ನೀವು ಆರಂಭದಲ್ಲಿ ತೋರುವ ಉತ್ಸಾಹ ಕ್ರಮೇಪಿ ಕಡಿಮೆ ಮಾಡಿಕೊಳ್ಳುತ್ತೀರಿ. ಅದರಲ್ಲು ಸೋಶಿಯಲ್‌ ಮೀಡಿಯಾದ ಮಂದಿ ಕೊಡುವ ಕಮೇಂಟ್‌ ಗಳ ಬಗ್ಗೆ ಹೆಚ್ಚು ಪರ್ಸನಲೈಜ್‌ ಆಗ್ತೀರಿ ಅಂತ ಅನ್ನಿಸಿತು.  ಪ್ರತಿಭಾವಂತ, ಆಂತ್ರಪ್ರಿನಿಯರ್‌, ಕಲಾವಿದ, ಉತ್ತಮ ಪ್ರಜೆಂಟರ್‌ ಆಗಿರುವ ನೀವು ಎಲ್ಲದಕ್ಕೂ ಉತ್ತರ ಕೊಡಬೇಕಿಲ್ಲ. ನಿಮಗಾಗಿ ಟೀವಿ ಮುಂದೆ ಕೂರುವ ಅಸಂಖ್ಯಾತ ಮಂದಿ ಇದ್ದಾರೆ.ಅವರಿಗೆ ನೀವು ನ್ಯಾಯ ಒದಗಿಸಿದರೆ ಸಾಕು ಅಲ್ವಾ?!ಪ್ರತಿವರ್ಷ  ನಿಮಗಾಗಿ ಕಾಯ್ತಾರೆ . ಈ ವರ್ಷ ಇರುವ ಟ್ರೆಂಡ್‌ ಮುಂದಿನ ವರ್ಷ ಅದೇ ಸ್ಫರ್ಧಿಗೆ ಇರಲ್ಲ. ಆದರೇ  ನೀವು, ಶಿವಣ್ಣ, ರಮೇಶ್‌,ಪ್ರೇಮ, ನಿಶ್ವಿಕ, ಅರ್ಜುನ್,ರಚಿತ, ಅನುಶ್ರೀ,ವಿಜಯ,ರಾಜೇಶ್‌,ಜಗ್ಗಣ್ಣ,ತಾರ ಅನುರಾಧ, ಭಟ್ರು,ತರುಣ್‌,ನಿರಂಜನ್…ಹೀಗೆ ನೀವು-ನಿಮ್ಮಂತಹವರು  ಬರುವುದನ್ನೇ ಕಾಯುವ ಅತಿ ದೊಡ್ಡ ಗುಂಪಿದೆ. ಅವರಿಗೆ ನ್ಯಾಯ ಒದಗಿಸುವ ಕಡೆಗಷ್ಟೇ ನಿಮ್ಮ ಆದ್ಯತೆ ಇರಲಿ.

ಹೇಳಬೇಕು ಅಂತ ಅನ್ನಿಸಿತು. .. ಅಷ್ಟೇ

 

 


ವಾಹ್

 

ಸಂಕ್ರಾಂತಿ ಹಬ್ಬದ ವಾರದಲ್ಲಿ ಕೆಚ್ಚಲು ಕತ್ತರಿಸಿಕೊಂಡ ಗೋವುಗಳದ್ದೇ ನೆನಪಲ್ಲಿ ಉಳಿದು ಮನಕ್ಕೆ  ಬೇಜಾರಾಗಿತ್ತು. ಸುಗ್ಗಿ ಹಬ್ಬದ ಹರ್ಷ ಇಲ್ಲದಂತಾಗಿತ್ತು. ಅದು ಬಿಡಿ ಮನುಷ್ಯನ ಕ್ರೌರ್ಯ ಎಲ್ಲೇ ಮೀರಿದಾಗ ಯಾವುದಾದರೊಂದು ಘಟನೆ ನಡೆಯುತ್ತಿರುತ್ತದೆ,

ಈ ಬಾರಿ ಜೀ ಕನ್ನಡ ವಾಹಿನಿ ಯ ಸರೆಗಮಪ ಕಾರ್ಯಕ್ರಮ ತುಂಬಾ ಉಲ್ಲಾಸ ಕೊಟ್ಟಿದೆ. ಅದಕ್ಕೆ ಮುಖ್ಯ ಕಾರಣ ರಾಜೇಶ್‌ ಕೃಷ್ಣನ್.‌ ಅವರ ಧ್ವನಿ, . ಜೊತೆಗೆ ಅರ್ಜುನ್‌ ಜನ್ಯ ಮತ್ತು ವಿಜಯ ಪ್ರಕಾಶ್‌, ಅನುಶ್ರೀ  ಮತ್ತು ಇಡೀ ಟೀಂ.

ಸಂಕ್ರಾಂತಿ ಹಬ್ಬದ ಸಮಯದಲ್ಲಿ ಪ್ರಸಾರವಾದ ಕಾರ್ಯಕ್ರದಲ್ಲಿ ಕರಿಮಾಯಿ ರಂಗಗೀತೆ ಹೆಚ್ಚು ಖುಷಿ ಕೊಟ್ಟಿತ್ತು. ಅದೇರೀತಿ ನನ್ನ ಮೆಚ್ಚಿನ ಗಾಯಕಿಯರಲ್ಲಿ ಒಬ್ಬರಾದ ಅನುರಾಧ ಭಟ್‌ ಅವರ ಗಾನಸುಧೆ ಈ ಬಾರಿಯ ಕಾರ್ಯಕ್ರಮ ವಾಹ್ ಅನ್ನುವಂತೆ ಮಾಡಿತು..‌

ಸಂಕ್ರಾಂತಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು ತೀರ್ಪುಗಾರರ ಮುಂದೆ ಇಟ್ಟಿದ್ದ ಮರದ ಪುಟ್ಟ ಎತ್ತಿನಗಾಡಿ.. ಬೊಂಬೆ ಹಬ್ಬದಲ್ಲಿ ನಾನು ಕನಿಷ್ಟ ಎರಡು ಗಾಡಿಯನ್ನಾದರೂ ಇಟ್ಟು ಕಾನ್ಸೆಪ್ಟ್‌ ಮಾಡಿರುತ್ತೇನೆ.. ಓಹ್‌ ಗಾಡ್ಸ್‌ ನನಗೆ ಆ ಗಾಡಿ ಸಿಕ್ಕಿದ್ದಿದ್ದರೇ ಮುಂದಿನ ಬಾರಿಯ ಹಬ್ಬಕ್ಕೆ ಇಡ್ತಾ ಇದ್ದೆ J ಆದಷ್ಟು ಜ್ಯೂರಿಗಳ ಮತ್ತು ಮೆಂಟರ್‌ ಗಳ ಹೆಸರು ವೀಕ್ಷಕರಿಗೆ ಗೊತ್ತಾಗುವಂತೆ ಅವರಿರುವ ಕಡೆ ಅವರ  ನೇಮ್‌ ಪ್ಲೇಟ್‌ ಹಾಕಿ ಪಾ..ಹೆಚ್ಚು ಜನರನ್ನು ತಲಪುತ್ತೀರಿ..




ಕಿಚ್ಚ ಸುದೀಪ ನಟನೆಯ ಮ್ಯಾಕ್ಸ್‌ ಓಟ ತುಂಬಾ ಚೆನ್ನಾಗಿದೆ.. ನನ್ನ ಕಡೆಯಿಂದಕಡೆಯಿಂದ ವಿಶ್ವಾಸಪೂರಿತ ಕಂಗ್ರಾಟ್ಸ್‌ ಸುದೀಪ ಮತ್ತು ಟೀಂ.

ಬಿಗ್‌ ಬಾಸ್‌ ೧೧ ಹೇಳಿಕೊಳ್ಳುವಷ್ಟು ಖುಷಿ ಕೊಡಲಿಲ್ಲ. ನನಗೆ. ಬಹುತೇಕ ಎಲ್ಲಾ ಸ್ಪರ್ಧಿಗಳೂ  ಜಗಳಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆ ರಂಜಿಸಲು ಕೊಡಲಿಲ್ಲ. ಹಳೆಯ ಬಹುತೇಕ ಸೀಸನ್‌ ಗಳಲ್ಲಿ ಆದಷ್ಟು ತಮ್ಮ  ಪ್ರತಿಭೆಯನ್ನು ಜನರ ಮುಂದಿಡಲು  ಪ್ರಯತ್ನ ಪಡುತ್ತಿದ್ದರು. ಮಾಸ್ಟರ್‌ ಆನಂದ್‌, ಶೃತಿ, ಸೃಜನ್‌ ಲೋಕೇಶ್‌  , ಅರುಣ್‌ ಸಾಗರ್‌ ಯಾರೇ ಆಗಲಿ ಅವರು ಬರಲಿ ಅಂತ ಕಾತುರದಿಂದ ಕಾಯುವಂತಾಗುತ್ತಿತ್ತು. ಆದರೇ ಈ ಬಾರಿ ಆ ರಜತ್‌ ಅಹಂಕಾರ, ಭವ್ಯ ಅವರ ಅತಿ ನಾಟಕೀಯತೆ ಮತ್ತು ಸೋಗಲಾಡಿತನ ದೇವುಡಾ …! ಎಲ್ಲವನ್ನೂ ದಾಷ್ಟಿಕವಾಗಿ ಹೇಳುವ ಮತ್ತು ಒರಟಾಗಿ ನಡೆದುಕೊಳ್ಳುವ ವಿಧಾನ, ತಮ್ಮಿಂದ ಮಾತ್ರ  ಬಿಗ್‌ ಬಾಸ್‌ ನಂತಹ ಕಾರ್ಯಕ್ರಮಕ್ಕೆ ಟಿಆರ್‌ಪಿ ಎನ್ನುವ ಭ್ರಮೆ.. ಇವೆಲ್ಲಾ ಭ್ರಮನಿರಸನ ಉಂಟು ಮಾಡಿದೆ. ಮೋಕ್ಷಿತ, ಮ್ಯಾಕ್ಸ್‌ ಮಂಜು,ಹಣುಮಂತು ಇವರುಗಳು ಸ್ವಲ್ಪ ಜಾಸ್ತಿ ಇಷ್ಟ ಆದ್ರು.

ಬಿಗ್‌ ಬಾಸ್‌ ನ ಈ ಸೀಜನ್‌ ನನ್ನ ಕೊನೆಯ ಸೀಜನ್‌ ಅಂತ ಸುದೀಪ ಹೇಳಿದ್ದಾರೆ. ಅವರ ಮುಂದಿನ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿ. ಸುದೀಪ ನಾನುಕಂಡ ಅತ್ಯುತ್ತಮ ನಿರೂಪಕರಲ್ಲಿ ನೀವೂ ಒಬ್ಬರು.ನಿಮ್ಮ ಜೊತೆ ನಿಮ್ಮನ್ನು ನಂಬಿರುವವರಿಗೂ ಯಶಸ್ಸು ಸಿಗಲಿ. ಸಾಮಾನ್ಯವಾಗಿ ನಾನು ಕಂಡಂತೆ ಬರೆಯುವವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗದು ಸುದೀಪ.(ನಾನು ಮತ್ತು ನನ್ನಂತ ಬರೆಯುವವರು ಸಾಮಾನ್ಯವಾಗಿ ನಿರ್ಲಕ್ಷಕ್ಕೆ ಒಳಗಾದವರೇ) ಕಳೆದ ಹದಿನೆಂಟು ವರ್ಷಗಳಿಂದ ನಾನು ಬ್ಲಾಗ್‌ ಬರೆದಿದ್ದೀನಿ ಟೀವಿ ಕಾರ್ಯಕ್ರಮಗಳ ಬಗ್ಗೆ. ಒಂದರ್ಥದಲ್ಲಿ ಗೋಸ್ಟ್‌ ರೈಟರ್.‌ ಆದರೇ ನನ್ನನ್ನು ಭೇಟಿ ಆಗಿರುವವರು ಮತ್ತು ಭೇಟಿ ಆಗಬೇಕು ಅಂತ ಇಷ್ಟ ಪಟ್ಟಿದ್ದು ಸಹ ಬೆರಳೆಣಿಕೆ. ನನ್ನ ಕೆರಿಯರ್‌ ಗ್ರಾಫ್‌ ನೆಲಕಚ್ಚಿದೆ, ಹಾಗಂತ ಬೇಜಾರಿಲ್ಲ ಯಾಕೇಂದ್ರೆ  ನಾಳೆ ಎನ್ನುವುದು ನಿಗೂಢ..

 





ಗಾಬರಿ

 


ಸಾಮಾನ್ಯವಾಗಿ ಸಿನಿಮಾ ರಿವ್ಯೂ ಗಳನ್ನು ಹೆಚ್ಚಾಗಿ ಪತ್ರಕರ್ತರು ಬರೆಯುವುದಕ್ಕಿಂತ ಮೊದಲೇ ಸಿನಿಮಾರಂಗದ ಮಂದಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದು ಇಷ್ಟೇ ಅದರ ಕಥೆ ಎಂದು ನಿರ್ಧರಿಸಿ ಬಿಡುತ್ತಾರೆ. ಉಪೇಂದ್ರ ಅವರ ಯು ಐ ಮೊದಲು ರಿವ್ಯೂ ಓದಿದ್ದು ಸಿನಿ ಕ್ಷೇತ್ರದ ಒಬ್ಬರು ಬರೆದದ್ದು. ಆನಂತರ ಸಿನಿ ಪ್ರೇಮಿ ಒಬ್ಬರು ಬರೆದ್ದು ಓದಿದೆ. ಸಿನಿಪ್ರೇಮಿ ಅವರ ಬರಹ ಚೆನ್ನಾಗಿತ್ತು. ಸದಾ ಸಿನಿ ಪತ್ರಕರ್ತರ ಬಗ್ಗೆ ಕೆಟ್ಟಕೋಪ ಇರುವ ಸಿನಿ ಮಂದಿ ಅವರ ಮನೆಯವರೇ ಅಂದರೆ ಸಿನಿಮಾ ಮಂದಿ ಬರೆಯುವ ವಿಮರ್ಶೆ ತಡೆದರೆ ಸಿನಿಮಾ ಬಹುತೇಕ ಹಿಟ್‌ ಆದಂತೆ. ಹಾಗೇ ಮಾಡೋಕೆ ಸಾಧ್ಯವೇ ಇಲ್ಲ..ಅಲ್ವೇ!

ಹೀಗೆ ವಾಹಿನಿಗಳನ್ನು ಬದಲಾಯಿಸುವಾಗ ಮೇಘಾಲಯ, ಅಸ್ಸಾಂ,ಮಿಜೋರಾಮ್‌, ತ್ರಿಪುರ ಹೀಗೆ ಒಟ್ರಾಶಿ ಬೇರೇ ಬೇರೆ ಭಾಷೆಗಳ ದೂರದರ್ಶನ ನೋಡಿದೆ.ಕಾಶ್ಮೀರ್‌ ದೂರದರ್ಶನದಲ್ಲಿ ಪಾಕಿಸ್ತಾನ್‌ ರಿಪೋರ್ಟರ್‌ ಎನ್ನುವ ಅರ್ಧಗಂಟೆ ನ್ಯೂಸ್‌ ನೋಡಿದೆ. ಪಾಕಿಸ್ತಾನದ ವಿದ್ಯಮಾನಗಳ ಬಗ್ಗೆ ತಿಳಿಸುತ್ತಾರೆ ಸುದ್ದಿಯಲ್ಲಿ ಅರ್ಧದಷ್ಟು ಸಾವಿನ ಸುದ್ದಿ, ಆದರೂ ವಾರ್ತೆಯನ್ನು ಓದುವ ಹೆಣ್ಣುಮಗಳ ಕಾನ್ಫಿಡೆನ್ಸ್‌ ಇಷ್ಟ ಆಯಿತು. ಅದಾದ ಬಳಿಕ ಲಡಕ್‌ ನ್ಯೂಸ್‌ ಬಂತು ಸ್ವಲ್ಪ ಬೆಚ್ಚಿಬೀಳುವಂತೆ ಗಾಬರಿ ಗಾಬರಿ ಮುಖ..

ಮೇಘಾಲಯ ಮತ್ತು ಅಸ್ಸಾಂ ದೂರದರ್ಶನ ಲೋಗೊ ಥೇಟ್‌ ಜೀ ನ್ಯೂಸ್‌ ನಂತೆ ಇತ್ತು. ಆ ವಾಹಿನಿಗಳ ಫ್ಯಾನ್‌ ಆದೆ .. ಆಗಾಗ ನೋಡೋಕೆ ಸಿಕ್ತು ಒಂದಷ್ಟು ಬೇರೆ ಬೇರೆ ಭಾಷೆಗಳ ದೂರದರ್ಶನ..

 




ಘನತೆ

 

ಜಗ್ಗೇಶ್‌ ಕನ್ನಡದ ಅಪರೂಪದ ಕಲಾವಿದರು. ಹೆಚ್ಚಾಗಿ ತಮ್ಮ ಲೂಸ್‌ ಟಾಕ್‌ ನಿಂದ ಹೆಚ್ಚು ಜನರ ಗಮನ ಸೆಳೆದವರು.ಜಗ್ಗಣ್ಣನ ಬಗ್ಗೆ ಹೇಳುವಾಗ  ಸಾಮಾನ್ಯವಾಗಿ  ನೆನಪಿಗೆ ಬರುವ ಅಂಶಗಳು.. ಗುರು ರಾಘವೇಂದ್ರ ಸ್ವಾಮಿ, ಹಾಸ್ಯ, ಅಪರೂಪದ ನಟ, ಯಾವುದನ್ನು ಯಾವಾಗ ಹೇಗೆ ಹೇಳಬೇಕೆಂದು ತಿಳಿಯದ ವ್ಯಕ್ತಿತ್ವ ಮತ್ತು ರೀಲ್ಸ್..‌

ಅವರು  ಬಿಗ್‌ ಬಾಸ್‌ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ವರ್ತೂರ್ ಸಂತೋಷ್‌ ಅವರ ಒಂದು ಹುಲಿಯುಗುರಿನ ಕಥೆಯ ಬಗ್ಗೆ ಹೇಳುತ್ತಾ ಯಾವೋನೋ ಕಿತ್ತೊದವನು ರೀಲ್ಸ್‌ ಮಾಡಿಕೊಂಡು ಇದ್ದವ ಅದ್ಯಾವುದೋ ಚಾನಲ್‌ ಪ್ರೋಗ್ರಾಂ ಅದರಿಂದ ತನಗೆ ಎದುರಾದ ಕಷ್ಟ , ಜನರ ಕೆಟ್ಟ ಕಮೆಂಟ್‌ ಹೀಗೆ ತಮ್ಮ ಮಾತಿನ ಝರಿ ಹರಿದು ಬಿಟ್ಟಿದ್ದರು‌ ಸಿನಿಮಾ ಪ್ರಮೋಷನ್‌ ಕಾರ್ಯಕ್ರಮದಲ್ಲಿ. . ಅದನ್ನು ಆಗ ವೀಕ್ಷಿಸಿದಾಗ ನನಗೆ ಸಿಕ್ಕಾಪಟ್ಟೆ ನಗು ಬಂದಿತ್ತು,

ನಿಮ್ಮ ಮಾತಿನ ಶೈಲಿಗಲ್ಲ… ವರ್ತೂರ್‌ ಸಂತೋಷ್‌ ಎನ್ನುವ ಸ್ಪರ್ಧಿಯೊಂದಿಗೆ ನಿಮ್ಮನ್ನು ಹೋಲಿಸಿಕೊಂಡಿದ್ದಕ್ಕೆ. ಆತನ ರೀಲ್ಸ್‌ ಬಗ್ಗೆ ನೀವು ಕೆಂಡ ಕಾರಿದ್ದಕ್ಕೆ.. ನೀವು ನೋಡಿದ್ದೀರೋ ಇಲ್ಲವೋ ವರ್ತೂರ್‌ ರೀಲ್ಸ್‌ ನಾನಂತೂ ನೋಡಿದ್ದೀನಿ. ಒಂದು ಹೋಟೆಲ್‌ ನಲ್ಲಿ ಕುಳಿತು ಈ ಚಿಕನ್‌ ಗೆ ಪೆಪ್ಪರ್‌ ಕಡಿಮೆ ಹಾಕಿದಾರೆ, ಉಪ್ಪು ಇನ್ನೂ ಸ್ವಲ್ಪಾ ಬೇಕಾಗಿತ್ತು.. ಇಂತಹ ಮಾತುಗಳಿರುವ ಪುಟ್ಟ ರೀಲ್ಸ್. ಇಲ್ಲಂದ್ರೆ ತಮ್ಮ ಹಳ್ಳಿಕೇರಿ ದನದ ಬಗ್ಗೆ ಇಂತಹ ವಿಷಯಗಳಷ್ಟೇ.. ಆದರೇ ಸಿನಿಮಾ ಕ್ಷೇತ್ರದಲ್ಲಿ ನಿಮ್ಮದೇ ಆದಂತಹ ಛಾಪು ಇದೆ.,ಈ ಕ್ಷೇತ್ರದಲ್ಲಿ  ಗೆಲುವು- ಸೋಲು ಕಂಡಿದ್ದು ಅದೊಂದು ಭಾಗವಷ್ಟೇ , ರಾಜಕೀಯದಲ್ಲಿ ಸಹ ರಾಯರ ದಯೆಯಿಂದ ಉತ್ತಮ ಭವಿಷ್ಯ ಕಂಡಿರುವ ನೀವು ಟೀಕೆಗಳನ್ನು ನೆಗೆಲೆಕ್ಟ್‌ ಮಾಡಿ ವರ್ತೂರ್‌ ಸಂತೋಷನ್ನು ನಿರ್ಲಕ್ಷಿಸಿದ್ದರೆ  ಹೆಚ್ಚು ಘನತೆಯಿಂದ ಕೂಡಿರುತ್ತಿತ್ತು.

ರಾಘವೇಂದ್ರ ರಾಯರ ಪರಮ ಭಕ್ತರಾದ ನಿಮ್ಮ ಬಗ್ಗೆ ಜಾತಿ, ಪಕ್ಷ ಅನ್ನದೇ ಅನೇಕಾನೇಕ ರಾಯರ ಭಕ್ತರು ಇಷ್ಟ ಪಡುತ್ತಾರೆ. ಆದರ್ಶ ಮಾಡಿಕೊಂಡಿದ್ದಾರೆ ಜಗ್ಗಣ್ಣ.ನೀವು ಯಾವಾಗ ಪಕ್ಷ ಬದಲಿಸಿ ಆ ಪಕ್ಷದಿಂದ ಉತ್ತಮ ಭವಿಷ್ಯ ಪಡೆದುಕೊಂಡಿರೋ ಅಂದಿನಿಂದ ನಿಮ್ಮ ಶತ್ರುಪಡೆ ಹೆಚ್ಚಾಯಿತು. ಗೆದ್ದವರು ಇರುವ  ಕಡೆ  ಅಸೂಯೆ ಪಡುವವರು ಇದ್ದೇ ಇರುತ್ತಾರೆ. ಜೀಕನ್ನಡ ದಲ್ಲಿ ಇನ್ನೂ ಉತ್ತಮ ಪ್ರತಿಭೆಗಳು ಹಾಸ್ಯಕ್ಕಷ್ಟೇ ಮಹತ್ವ ಕೊಡುವ ಕಾರ್ಯಕ್ರಮ ನೀಡಿ ಸದಭಿರುಚಿಯ ವೀಕ್ಷಕರ ಹತ್ತಿರ ಆಗಿ.. ಆದಷ್ಟು ಬೇಗ..

ಯಾವುದೇ ಕಾರ್ಯಕ್ರಮ ಇರಲಿ ಅದನ್ನು ನಡೆಸಿಕೊಡುವವರು, ಹಿನ್ನಲೇ ಧ್ವನಿ , ನಿರೂಪಣೆ ಹೀಗೆ ಕೆಲವೊಂದು ಅಂಶಗಳ ಅಡಿಯಲ್ಲಿ ವೀಕ್ಷಕರನ್ನು ಸೆಳೆಯುತ್ತದೆ. ನಿರ್ದಿಷ್ಟ ಕಾರ್ಯಕ್ರಮದಲ್ಲಿ ನಿರ್ದಿಷ್ಟ ವ್ಯಕ್ತಿತ್ವನ್ನು ಬಯಸುವುದು ಸಾಮಾನ್ಯ. ಸರೆಗಮಪ ದಲ್ಲಿ ರಾಜೇಶ್‌ ಕೃಷ್ನ್‌, ಅರ್ಜುನ್‌ ಜನ್ಯ, ವಿಜಯ ಪ್ರಕಾಶ್‌, ಚಂದನದ ಥಟ್‌ ಅಂತ ಹೇಳಿ ಯಲ್ಲಿ ಡಾ. ನಾ. ಸೋಮೇಶ್ವರ್‌, ಬಿಗ್‌ ಬಾಸ್‌ ನಲ್ಲಿ ಸುದೀಪ, ವೀಕೆಂಡ್‌ ನಲ್ಲಿ ರಮೇಶ್‌ ಹೀಗೆ…..!

ಸರೆಗಮಪ ಜೀ ಕನ್ನಡ ವಾಹಿನಿಯ ಪ್ರತಿಷ್ಠಿತ ಸುಂದರ ಕಾರ್ಯಕ್ರಮ. ಅದರ ಬಗ್ಗೆ ಅನೇಕಾನೇಕ ಪಾಜಿಟಿವ್‌, ನೆಗೆಟಿವ್‌ ಅಭಿಪ್ರಾಯಗಳು ಕೇಳಿಬಂದರೂ ಒಟ್ಟಾರೆಯಾಗಿ ಹೇಳುವುದಾದರೆ ಇಷ್ಟ ಆಗುವ ರಿಯಾಲಿಟಿ ಷೋ. ಈ ಬಾರಿ ಜಡ್ಜ್ ಗಳಾಗಿ ರಾಜೇಶ್‌ ಕೃಷ್ಣನ್‌ ಮತ್ತೇ ಸ್ಥಾನ ಅಲಂಕರಿಸಿದ್ದಾರೆ. ಸುಮಧುರ ಕಂಠಸಿರಿ ಅವರ ಹಾಡುಗಳು ಅಹ್‌ ..! ಅರ್ಜುನ್‌ ಜನ್ಯ ರಂತಹ ಅಪರೂಪದ ಸಂಗೀತ ನಿರ್ದೇಶಕ ಮತ್ತು ವಿಜಯ್‌ ಪ್ರಕಾಶ್‌ ರಂತಹ ಬಹುಮುಖ ಪ್ರತಿಭೆ ಸಮ್ಮಿಳನದಿಂದ  ವೀಕೆಂಡ್‌ ಚೆನ್ನಾಗಿ ಕಳೆಯುವಂತೆ ಮಾಡುತ್ತದೆ. ಈ ಕಾರ್ಯಕ್ರಮದ ಮುಖ್ಯ ಸಾರಥಿ ರಾಜೇಶ್‌ .. ಆರಂಭಿಕ ದಿನಗಳಲ್ಲಿ ಈ ಟೀವಿ ಕನ್ನಡ ವಾಹಿನಿಯಲ್ಲಿ ಎಸ್‌ ಪಿ ಬಿ ಅವರ  ಸಂಗೀತ ರಿಯಾಲಿಟಿ ಷೋ ಎದುರು ಜೀ ವಾಹಿನಿಯ ಸರೆಗಮಪ ಫಾಮ್‌ ಗೆ ಬರುವಂತೆ ರಾಜೇಶ್‌  ಮತ್ತು ಟೀಂ ಮಾಡಿದ ಪ್ರಯತ್ನ ನೆನಪಲ್ಲಿದೆ. ಮತ್ತೇ ಆ  ಜಾಗಕ್ಕೆ ಬಂದಿದ್ದು ಖುಷಿ ಆಯ್ತು. 



ಕಂಡ ಸತ್ಯ

 

ನಿನ್ನೆ ಒಂದು ರೀಲ್‌ ನೋಡಿದೆ, ಐಶ್ವರ್ಯ ರೈ ಬಚ್ಚನ್‌, ಆರಾಧ್ಯ ಮತ್ತು ಅಭಿಷೇಕ್‌ ಬಚ್ಚನ್‌ ಇವರು ಅದೆಲ್ಲಿಂದಲೋ ಬರ್ತಾ ಇದ್ದರು. ಅವನ್ನು ತಮ್ಮ ಕ್ಯಾಮರಾ ಗಳಿಂದ ಸೆರೆ  ಹಿಡಿಯುತ್ತಿದ್ದರು ಮಂದಿ. ಐಶ್‌ ತನ್ನ ಮಗಳನ್ನು ಪಕ್ಕಕ್ಕೆ ಎಳೆದು ಕೊಂಡರು.ಅದೂ ತಾಯಿ ತನ್ನ ಕಂದನ ಬಗ್ಗೆ ತೋರಿದ ಕಾಳಜಿ.(ಏನೇನೋ ಟ್ರೋಲ್‌ ಮಾಡಿದ್ದರು ವರ್ಷದ ಹಿಂದೆ ಈ ಮಗುವಿನ ಬಗ್ಗೆ..)  ಆ ಮಗು ತಲೆವಾಲಿಸಿಕೊಂಡು ನಸುನಗುತ್ತಾ ನಡೆಯುತಿದ್ದಳು. ಸಾಮಾನ್ಯವಾಗಿ ಆರಾಧ್ಯ ಳನ್ನು ರೀಲ್‌ ಗಳಲ್ಲಿ ಹೀಗೆ ನೋಡಿರುವುದು ಆ ವಿಷಯ ಬೇರೆ. ಆ ಮಗುವಿನ ಬಗ್ಗೆ ಬರೆಯುವ ಕಮೆಂಟ್‌ ಗಳು, ಅಸೂಯೆ ಮಾತುಗಳು ಬೇಡವೇ ಬೇಡ ಅನ್ನಿಸುವಂತೆ ಇರುತ್ತದೆ. ಇದು ಈಗಿನ ಮನಸ್ಥಿತಿಗಳ ಅನಾವರಣ.

ಕನ್ನಡದ ಸ್ಟೈಲೀಷ್‌ , ಸ್ಫುರದ್ರೂಪಿ ಹಾಗೂ ಅಪರೂಪದ ಪ್ರತಿಭೆ ಕಿಚ್ಚ ಸುದೀಪ ಮಗಳು ಸಾನ್ವಿ ಸುದೀಪ ಕನ್ನಡ ಮಾತನಾಡದೆ ಇದ್ದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ, ಟ್ರೋಲು ಅದೂ ಇದೂ ಎಲ್ಲಾ ಆಯಿತು. ಸಾನ್ವಿ ಕನ್ನಡ ಮಾತನಾಡದೇ ಇರುವ ಅಂಶ ನನಗೇನೂ ವಿಶೇಷಅನ್ನಿಸಲಿಲ್ಲ. ಬಹುತೇಕ ಮನೆಗಳಲ್ಲಿ ಮಕ್ಕಳು ಹೆಚ್ಚು ಮಾತನಾಡುವುದು ಇಂಗ್ಲೀಷ್.‌ ಕನ್ನಡವನ್ನೇ ಓದಬೇಕು, ಕನ್ನಡದಲ್ಲೇ ಬರೆಯಬೇಕು ಅದೂ ಇದೂ ಎಂದು ಜೋರಾಗಿ ಮಾತನಾಡುವ ಮತ್ತು ಸಿಕ್ಕಾಪಟ್ಟೆ ಬರೆಯುವ ಬಹುತೇಕ ದೃಶ್ಯ ಮತ್ತು ಎಲ್ಲಾ ಮಾಧ್ಯಮಗಳ ಮಂದಿಯ ಬಹುತೇಕ ಮಕ್ಕಳು ಹೀಗೆ ಇರುತ್ತಾರೆ. ಇದು ನಾನು ಮತ್ತು ನನ್ನಂತಹವರು ಕಂಡ ಸತ್ಯ. ನನ್ನ ಕಸಿನ್‌ ಒಬ್ಬ ಅತ್ಯತ್ತಮವಾಗಿ ಕನ್ನಡ ಸಾಹಿತ್ಯ, ವಚನ, ಪುರಾಣ ಬಲ್ಲಂತಹವನು,. ವೃತ್ತಿಯಲ್ಲಿ ವಕೀಲ ಅವನಿಗೊಬ್ಬ ಮಗಳು ಅವಳು ಕನ್ನಡದಲ್ಲಿ ಮಾತನಾಡಿದ್ದು ಕೇಳೇ ಇಲ್ಲ. ಸೆಲೆಬ್ರಿಟಿ  ವಕೀಲ,( ದರ್ಶನ್‌ ಕೇಸ್‌ ನಲ್ಲಿ ಟಿವಿ ನೈನ್‌ ಮಂದಿ ಅವನ ಮುಂದೆ ಮೈಕ್‌ ಹಿಡಿದು ಅಭಿಪ್ರಾಯ ಕೇಳುತ್ತಿದ್ದರು. ಆ ವಿಷ್ಯ ಬಿಡಿ!)ಕನ್ನಡ ಪ್ರೇಮಿ ಆದರೆ..! ಇದೇನು ಅಸಹಜ ಅಲ್ಲವೇ ಅಲ್ಲ ಈಗಿರುವ ಪರಿಸ್ಥಿತಿಯಲ್ಲಿ. ನಿಜ ಹೇಳಬೇಕೆಂದರೆ ಅಂತಹ ಮಕ್ಕಳಿಗೆ ಕನ್ನಡ ಜ್ಞಾನ ತುಂಬಾ ಚೆನ್ನಾಗಿ ಇರುತ್ತದೆ. ಸಮಯ ಬಂದಾಗ ಅದು ಅನಾವರಣ ಆಗುತ್ತದೆ. ಸಾನ್ವಿ ಇದಕ್ಕೆ ಹೊರತಲ್ಲ.ಸುದೀಪನನ್ನು ಕಂಡ್ರೆ ನನಗೆ ಇಷ್ಟ ಅಂತ ಈ ಮಾತು ಹೇಳ್ತಾ ಇಲ್ಲ. ಇದು ನಿಚ್ಚಳ ಸತ್ಯ. ಆತ ಸೂಪರ್‌ ಮ್ಯಾಕ್ಸ್‌ ಸ್ಟಾರ್‌ ಆಗಿದ್ದಕ್ಕೆ ಜನ ಆ ಅಂಶವನ್ನು ಹೈಲೈಟ್‌ ಮಾಡ್ತಾ ಇದ್ದಾರೆ.














ಉಡುಪು

 

 ಸುದೀಪ ..

ಹಿಂದೀ ದೂರದರ್ಶನದಲ್ಲಿ ಆಗಿನ್ನೂ ಧಾರವಾಹಿಗಳ ಆರಂಭಕಾಲ. ಸಣ್ಣಪುಟ್ಟ ಧಾರವಾಹಿಗಳು, ಕಥೆಗಳು ಪ್ರಸಾರ ಆಗುತ್ತಿತ್ತು. ಒಂದು ಹೆಚ್ಚು ಮನದಾಳದಲ್ಲಿ ನಿಂತಿದೆ. ಸಿನಿಮಾ ತೆಗೆಯುವ ಟೀಮ್‌ ಒಂದು ಸ್ಲಂ ನಲ್ಲಿ ವಾಸಿಸುವವರ ಬಗ್ಗೆ ಸಿನಿಮಾ ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡಿದರು. ಸರಿ ಅದಕ್ಕಾಗಿ ನಿಗದಿತ ಸ್ಲಂ ಒಂದನ್ನು ಹುಡುಕಿದರು. ಅಲ್ಲಿ ಪುಟ್ಟ ಸುಂದರಿ ಇದ್ಲು. ಮುದ್ದಾದ ಬಾಲಕಿ ಆ ಸಿನಿಮಾ ಮುಖ್ಯಪಾತ್ರ ಎಂದು ಟೀಂ ನಿರ್ಧಾರ ಮಾಡಿದರು. ಅವಳ ಬಳಿ ತಮ್ಮ ಮನದ ಮಾತನ್ನು ಹೇಳಿದರು. ಆ ಹುಡುಗಿಗೆ ಸ್ವರ್ಗ ಕಾಲಡಿ!! ಸರಿ ಆಕೆ ಬಾಲಿವುಡ್‌ ಪ್ರಸಿದ್ಧ ನಟಿಯರಂತೆ ನಟಿಸುವುದರ ತಾಲೀಮು ಶುರು ಮಾಡಿದಳು. ಯಾವಾಗ ಶೂಟಿಂಗ್‌ ಆಗುತ್ತದೆಯೋ ಎನ್ನುವ ಕಾತುರ ಆಕೆಗೆ. ಇನ್ನೇನು ಆ ದಿನ ಸಮೀಪಕ್ಕೆ ಬಂತು. ಆಗ ನಿರ್ದೇಶಕಿ ಆಕೆಯ ಪಾತ್ರದ ಬಗ್ಗೆ ವಿವರಿಸಿದಳು. ಅದರಲ್ಲಿ ಆ ಹುಡುಗಿ ಸ್ಲಂ ವಾಸಿ ಚಿಂದಿ ಆಯುವ ಹುಡುಗಿ. ಇಷ್ಟು ದಿನ ಖುಷಿಯಿಂದ ಇದ್ದ ಆ ಹುಡುಗಿ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದಳು. ಆಗ ಅವಳು ಹೇಳಿದ್ದಿಷ್ಟೇ. ನಾವಿರುವುದು ಸ್ಲಂ ನಲ್ಲಿ ಹಾಗೆಂದು ಅದನ್ನು ಜನರ ಮುಂದೆ ತರಲು ನನಗೆ ಇಷ್ಟ ಇಲ್ಲ. ನೀವು ನೈಜವಾಗಿ ತರುವ ಪ್ರಯತ್ನದಲ್ಲಿ ಇದ್ದೀರಿ, ಆದರೇ ನಮಗೆ ಈ ಬದುಕಿನ ಮೂಲಕವೇ ತೆರೆಯ ಮೇಲೆ ಕಾಣುವುದು ಇಷ್ಟ ಇಲ್ಲ!

ಇದನ್ನು ಬರೆದದ್ದು ಯಾಕೆ ಅಂದ್ರೆ ,ಬಿಗ್ ಬಾಸ್‌ ಸ್ಫರ್ಧಿ ಅನುಮಂತ(ಶೋಭಾ ಶೆಟ್ಟಿ  ಕರೆಯುವಂತೆ ಬರೆದಿದ್ದೀನಿ ಅಷ್ಟೇ !) ಡ್ರೆಸ್‌ ಕೋಡ್‌ ಲುಂಗಿ ಮತ್ತು ಶರ್ಟ್‌ ಅಂತ ಜಗತ್ತಿಗೆ ತೋರಿಸಿ ಆತನ ಬದಲಾವಣೆಗೆ ಅವಕಾಶ ಕೊಡದ  ಒಂದು ವಾಹಿನಿಯ ಕಾರ್ಯಕ್ರಮ.ಆ ನಿಯಮ ಮುರಿದು ಬಿಗ್‌ ಬಾಸ್‌ ನಲ್ಲಿ ಮಾಡ್ರನ್‌ ಡ್ರೆಸ್ನಲ್ಲಿ ಅವರನ್ನು ಜಗತ್ತಿನ ಮಂದೆ ತಂದ್ರಿ. ಆ ಅಂಶ ನನಗೆ  ತುಂಬಾ ಇಷ್ಟ ಆಯಿತು.ಹನುಮಂತ ಅವರನ್ನು ನೋಡುವ ಪ್ರತಿಬಾರಿಯೂ ನನಗೆ ಮೇಲೆ ಹೇಳಿದ ಕಥೆ ನೆನಪಿಗೆ ಬರುತ್ತಿತ್ತು. ನಾನು ತಪ್ಪದೇ ವೀಕ್ಷಿಸುವ ಕಾರ್ಯಕ್ರಮ  ಬಿಗ್‌ ಬಾಸ್.‌ ಅದರಲ್ಲೂ ಶನಿವಾರ-ಭಾನುವಾರ….ಯಾವುದೇ ಕಾರ್ಯಕ್ರಮ ಇರಲಿ ಅದನ್ನು ಮುನ್ನಡೆಸುವ ಪ್ರಸೆಂಟರ್‌ ಆ ಇಡೀ ಕಾರ್ಯಕ್ರಮದ ಜೀವಾಳ. ಜಾಸ್ತಿ ಹೊಗಳಿಕೆ ಬೇಡ ಅಲ್ವಾ ಸುದೀಪ.

 



ಮಿನುಗುತಾರೆ

 

ಜೀ ಕನ್ನಡ ದಲ್ಲಿ ಪ್ರಸಾರ ಆಗುವ ಎಲ್ಲಾ ಧಾರವಾಹಿಗಳನ್ನು ನ್ನ ಆಂಟಿ ಒಬ್ಬರು ತಪ್ಪದೇ ನೋಡ್ತಾ ಇದ್ದರು. ಎರಡು ತಿಂಗಳ ಹಿಂದೆ ಅವರು ಇಹಲೋಕ ತ್ಯಾಜಿಸಿದರು. ಅವರ ವಿಷಯ ಗೊತ್ತಾದಾಗ ಅಯ್ಯೋ ಜೀ ಕನ್ನಡ.. ಅಂದಿದ್ದೇ ಎಲ್ರೂ.. ಆ ವಾಹಿನಿಯನ್ನು ಮಾತ್ರ ಅವರು ನೋಡ್ತಾ ಇದ್ದದ್ದು.. ಮಗಳು- ಅಳಿಯ ಇಬ್ಬರೂ ಸರ್ಜನ್‌ ಗಳು..ಅವರ ಡಾಕ್ಟ್ರು ಮಗಳು ತಪ್ಪದೇ ನೋಡುವ ಸೀ ರಿಯಲ್‌ ಸೀತಾರಾಮ. ಅದು ಬಿಟ್ಟು ಮತ್ತಿನ್ಯಾವುದೂ ನೋಡಲ್ಲ. ಹೀಗೆ ಇರ್ತಾರೆ ಅಭಿಮಾನಿಗಳು..
ಇದರಲ್ಲಿ ಪ್ರಸಾರ ಆಗುವ ಅಮೃತಧಾರೆ ಧಾರವಾಹಿಯ ಮುಖ್ಯಪಾತ್ರಧಾರಿ ರಾಜೇಶ್‌ ಮತ್ತು ಛಾಯಾ ಸಿಂಗ್‌ ಅಲ್ಲದೇ ಇಡೀ ಟೀಮ್‌ ಬಗ್ಗೆ ಹೇಳುವಷ್ಟಿಲ್ಲ. ಛಾಯಾ ಸಿಂಗ್‌ ಅವರ ನಟನೆ ನೋಡ್ತಾ ಇದ್ದರೆ ನನಗೆ ಮಿನುಗುತಾರೆ ಕಲ್ಪನಾ ಅವರ ನೆನಪಾಗುತ್ತದೆ. ಆ ಹಾವಭಾವ, ನಗು, ಪಾತ್ರದಲ್ಲಿ ಇನ್ವಾಲ್‌ ಆಗುವ ಅಂಶ ಎಲ್ಲವೂ ಅದ್ಭುತ. ಕೆಟ್ಟ ಕನ್ನಡದಲ್ಲಿ ಮಾತನಾಡುವ, ಅ ಕಾರ ಹ ಕಾರ, ಅಲ್ಪಪ್ರಾಣ ಮಹಾಪ್ರಾಣದ ಬಗ್ಗೆ  ವ್ಯತ್ಯಾಸ ತಿಳಿಯದವರ ಮಧ್ಯೆ ಸ್ಪಷ್ಟ ಕನ್ನಡದ ಸುಂದರ ನಟಿಯ ಬಗ್ಗೆ ಖುಷಿ ಆಗುತ್ತದೆ..
ವನಿತಾವಾಸು, ಚಿತ್ರಾ ಶೆಣೈ, ಸಿಹಿಕಹಿ ಚಂದ್ರು, ಆನಂದ್‌ ಅವರ ನಟನೆ ಅದ್ಭುತ. ಆದರೆ ಚಿತ್ರಾ ಅವರ ದ್ದು ತುಂಬಾ ಉಲ್ಲಾಸ ಹಾಗೂ ವಿಶೇಷ.... ಪರ್ಫೆಕ್ಟ್ ಮಾಡ್ರನ್‌ ಅಮ್ಮ

ಪಾಪ

 


ಜೀ ಕನ್ನಡವಾಹಿನಿಯಲ್ಲಿ ಪ್ರಸಾರ ಆಗುವ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌  ರಿಯಾಲಿಟಿ ಶೋ ಬಗ್ಗೆ

ಹೇಳುವಷ್ಟಿಲ್ಲ. ಹೊಸ ಪ್ರತಿಭೆಗಳು ಹಳೆಯ ಪ್ರತಿಭೆಗಳ ಜೊತೆ ಮಾಡುವ ಡ್ಯಾನ್ಸ್‌ ಇರಲಿ, ಅವರ ಪ್ರಯತ್ನ ,  ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅದ್ಬುತವಾಗಿ ಪ್ರಸಾರ  ಆಗುತ್ತಿದೆ. ಮುಖ್ಯವಾಗಿ  ಈ ಕಾರ್ಯಕ್ರಮದ  ಮುಖ್ಯ ಆಕರ್ಷಣೆಯಾದ  ಶಿವರಾಜ್‌ ಕುಮಾರ, ರಕ್ಷಿತ, ಚಿನ್ನಿ ಮಾಸ್ಟರ್‌ , ವಿಜಯ್‌ ರಾಘವೇಂದ್ರ, ಅನುಶ್ರೀ ಹಾಗೂ ತರಬೇತಿ ಮಾಸ್ಟರ್‌ ಗಳು ಮತ್ತು ತಾಂತ್ರಿಕ ವರ್ಗ .

ಶಿವಣ್ಣನವರ ಎನರ್ಜಿ , ಅವರ ಉಲ್ಲಾಸ ಅನನ್ಯ. ಅವರಿಗೆ ಐವತ್ತನೆಯ ವರ್ಷದ ಹುಟ್ಟುಹಬ್ಬದ ಸಂದ‍ರ್ಭ ..ಜೋಗಯ್ಯ ಸಿನಿಮಾ ಶೂಟಿಂಗ್‌  ಆಗ್ತಾ ಇದ್ದಂತಹ ಸಮಯ.ಪತ್ರಿಕೆಗೆ ಲೆಖನ ಸಿದ್ಧ ಮಾಡುವಾಗ  ಹಿರಿಯ ಪತ್ರಕರ್ತೆ ಒಬ್ಬರು ಶಿವಣ್ಣನಿಗೆ ಐವತ್ತಾಯಿತು. ಈಗ ಸಹ ಲಾಂಗ್ ಕೊಟ್ಟು ಕುಣಿಸ್ತಾ ಅವ್ರೆ.. ಪಾಪ ..!!ವಯಸ್ಸಾಯಿತು ಇನ್ನೆಲ್ಲಿ ಮಾಡಾರು ಡ್ಯಾನ್ಸಾ .. ಅಂದಿದ್ದರು.ಉಲ್ಲಾಸದ ಶಿವಣ್ಣನ ಡ್ಯಾನ್ಸ್‌ ನಾವಂತೂ ಈಗಲೂ ನೋಡ್ತಾ ಇದ್ದೀವಿ.. ಅಣ್ಣ ನಿಮ್‌ ಏಜ್‌  ಮುಂದೇ ಹೋಗಲೇ ಇಲ್ಲ.. ನಮಗೂ ಅದು ಮುಂದೆ ಹೋಗೋದು ಇಷ್ಟ ಇಲ್ಲ..

ಈ ಕಾರ್ಯಕ್ರಮದಲ್ಲಿ ನನಗೆ ತುಂಬಾ ಇಷ್ಟ ಆದ ಸ್ಪರ್ಧಿ ಪುಟ್ಟಕ್ಕನ ಮಕ್ಕಳು ಕಂಠಿ, ಹಾಗೂ ಆರ್ಯವರ್ಧನ್...

ಕಿಲಾಡಿ ಅಮಾಯಕ!!

 

ಕೆಲವು ವಿಷಯಗಳ ಬಗ್ಗೆ ಹೇಳೋಕೆ , ಮಾತನಾಡೋಕೆ, ಬರೆಯುವುದಕ್ಕೆ ಬಹಳ ಕಷ್ಟ ಎನ್ನಿಸುತ್ತದೆ. ಅದರಲ್ಲೂ ಸಾವಿಗೆ ಸಂಬಂಧ ಪಟ್ಟಂತೆ…..!

ನಾನು ಇದ್ದ ಮಾಸಪತ್ರಿಕೆ ಒಂದರಲ್ಲಿ  ಕೆಲಸ ಮಾಡುತ್ತಿದ್ದಾಗ ದೇಹದಾನದ ಬಗ್ಗೆ ಒಂದು ಲೇಖನ ತಿದ್ದುಪಡಿ ಮಾಡುವಾಗ ತುಂಬಾ ಅಳು ಬಂದಿತ್ತು. ಸಾವಿನ ವಿಷಯ ಹಾಗೇ.. ಸಾರಿ ಸುದೀಪಾ ನಿಮ್ಮ ಮನೆಯ ಮುಖ್ಯ ದೀಪ ನಂದಿದ್ದು.. ನೀವು ಅಳುತ್ತಾ ಬೀಳ್ಕೊಟ್ಟಿದ್ದು,  ಕಲರ್ಸ್‌ ವಾಹಿನಿಯಲ್ಲಿ ನಿಮ್ಮ ತಾಯಿ ಬಗ್ಗೆ ಪ್ರಸ್ತುತ ಪಡಿಸಿದ ಬಳಿಕ ಗಾಢವಾಗಿ ನಿಟ್ಟಿಸಿರು ಬಿಡುತ್ತಾ ಕಾರ್ಯಕ್ರಮವನ್ನು ಸರಾಗವಾಗಿ ನಡೆಸಲು ಪ್ರಯತ್ನ ಪಟ್ಟಿದ್ದು  ಮೆರಯಲಾಗದ್ದು. ದೇವರು ನಮ್ಮ ಸ್ಥೈರ್ಯ ಹೆಚ್ಚಿಸಲಿ..

ಈ ಸಮಯದಲ್ಲಿ ನನಗೊಂದು ಸಂಗತಿ ನೆನಪಿಗೆ ಬರುತ್ತದೆ. ಅಂಬರೀಷ್‌ ಅವರ ಬಗ್ಗೆ ಬರೆದ ಪುಸ್ತಕ ಒಂದಕ್ಕೆ ನಾನು ಅಳಿಲು ಸೇವೆ ಮಾಡಿದ್ದೆ. ಒಂದಷ್ಟು ಭಾಗದ ಹೊಣೆ ನನಗೆ ನೀಡಿದ್ದರು.ಅದರಲ್ಲಿ ಒಂದು ಪ್ರಸಂಗ   ಹೀಗೆ ಒಂದು ಸಿನಿಮಾ ಬಹುಶಃ ಮೃಗಾಲಯ ಇರಬೇಕು. ಶೂಟಿಂಗ್‌ ಆದ ಮಾರನೆಯದಿನ ಅಂಬಿ ಮಾಮನಿಗೆ ಸಿಕ್ಕಾಪಟ್ಟೆ ಮೈಕೈ ನೋವು. ಇವರಷ್ಟೇ ದುಡಿದಿದ್ದ ಪ್ರಣಯರಾಜ ಶ್ರೀನಾಥ್‌ ನಗುನಗುತ್ತಾ ಎಲ್ಲರ ಜೊತೆ ಉಲ್ಲಾಸವಾಗಿ ಇರುವುದನ್ನು ಕಂಡ ಅಂಬಿಗೆ ಆಶ್ಚರ್ಯ. ಸರಿ ಅವರ ಹತ್ತಿರ ನೀವು ಸಹ ನನ್ನಷ್ಟೇ ದುಡಿದು ದಣಿದರೂ ಇಷ್ಟು ಆರಾಮವಾಗಿ ಇದ್ದೀರಲ್ಲ ನಿಮಗೇನು ಮೈಕೈ ನೋವಿಲ್ಲವೇ ..? ಆಗ ಶ್ರೀ ಸರ್‌ ಪಬ್ಲಿಕ್‌ ನಮ್ಮ ನೋವು ನೋಡೋಲ್ಲ ನಮ್ಮ ಖುಷಿಯ ಮುಖವನ್ನು ಮಾತ್ರ ಬಯಸೋದು. ಎಷ್ಟೇ ಬೇಸರ ಇದ್ದರೂ ಅದನ್ನು ಅಭಿಮಾನಿಗಳು, ಜನರ ಮುಂದೆ ತೋರಿಸಿಕೊಳ್ಳಬಾರದು ಎಂದು ಹೇಳಿದರಂತೆ.  

ನಮ್ಮ ಅಮ್ಮ ಹೇಳ್ತಾರೆ ಜಗತ್ತಿನಲ್ಲಿ ತಾಯಿ ಬಹಳ ಮುಖ್ಯ . ಆಕೆಯ ಅಂತಿಮವಿದಾಯ ಮಕ್ಕಳಿಗೆ  ಸದಾ ಸರ್ವದಾ ಅತಿ ಹೆಚ್ಚು ನೋವು ನೀಡುವ ಅಂಶ. ತಾಯಿ ಇಲ್ಲದೇ ಇದ್ದರೆ ಮಕ್ಕಳಿಗಾಗುವ ನಷ್ಟ ಅಪಾರ . ನಿಮ್‌ ಬಗ್ಗೆ  ಸೋಷಿಯಲ್‌ ಮೀಡಿಯಾಗಳಲ್ಲಿ  ಬರೆದ ನೆಗೆಟಿವ್‌ ಕಮೆಂಟ್‌ ಗಳು, ಹಣದ ಆಸೆಗಾಗಿ ತಾಯಿಯ ಕೊನೆಯ ಕ್ಷಣದಲ್ಲಿ ನಿಮ್ಮ ಆಬ್ಸೆನ್ಸ್‌  ಹೀಗೆ ಹಲವಾರು ಸಂಗತಿಗಳು. ಇವೆಲ್ಲವೂ ಬರೆದವರ ಮಾನಸಿಕ ಸ್ಥಿತಿ ಎತ್ತಿ ತೋರುತ್ತದೆ..  

ಈ ಬಾರಿ ಬಿಗ್‌  ಬಾಸ್ ನಲ್ಲಿ ಭವ್ಯ, ಮೋಕ್ಷಿತ, ಸೌಂದರ್ಯ,ಅನುಷ ಚೈಲ್ಡ್‌ ಗಳು. ಅತಿ ಕಿಲಾಡಿ ಅಮಾಯಕ ಹನುಮಂತ.. ಜೀ ಯಂತಹ ವಾಹಿನಿಯ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಗೆದ್ದ  ಬಳಿಕ ಪದೇಪದೇ ಅವಕಾಶ ಪಡೆದ ಜಾಣ ಅಮಾಯಕ.ಧನರಾಜ್‌ ನಿಜವಾದ ಮುಗ್ಧ.. ಪ್ರತಿ ಸೀಜನ್‌ ನಲ್ಲಿ ಒಬ್ಬರ ಮೇಲೆ ಕೆಂಗಣ್ಣು ಬೀಳುತ್ತೇ ಮನೆಯವರದ್ದು. ಈ ಸರ್ತಿ ಪಾಪ ಗೋಲ್ಡ್‌ ಸೂರಿ ಕಥೇ ಹೀಗೆ ಆಗಿದೆ.

ಈ ಬಾರಿ ನನಗೆ ಹೆಚ್ಚು ಇಷ್ಟ ಆಗಿರುವುದು ಭವ್ಯ, ಮೋಕ್ಷಿತ, ಸೌಂದರ್ಯ,ಅನುಷ ಚೈಲ್ಡ್‌. ಹನ್ನೊಂದರಲ್ಲಿ ಹೆಣ್ಣು ಮಕ್ಕಳು ಗೆದ್ದು ಟ್ರೋಫಿ ತಮ್ಮದಾಗಿಸಿ ಕೊಳ್ಳಲಿ..ಈ ಬಾರಿಯಾದರೂ ಹೆಣ್ಣುಮಕ್ಕಳನ್ನು ಗೆಲ್ಲಿಸಿ..!




ಸೀರಿಯಲ್ಸ್

 

ಕನ್ನಡ ಧಾರವಾಹಿಗಳಲ್ಲಿ ನಾನು ಸ್ವಲ್ಪ ಜಾಸ್ತೀ ನೋಡಿರುವುದು ಮತ್ತು ನೋಡ್ತಾ ಇರೋದು ಜೀ ಮತ್ತು ಕಲರ್ಸ್‌  ವಾಹಿನಿಗಳಲ್ಲಿ ಪ್ರಸಾರ ಆಗುವಂತಹದ್ದು.ನಮ್ಮ ಫ್ಯಾಮಿಲಿಯಲ್ಲಿ  ಹಿರಿಯರಿಂದ ಕಿರಿಯರ ಲಿಸ್ಟ್‌ ನಲ್ಲಿಅತಿ ಹೆಚ್ಚು ಸೀರಿಯಲ್‌ ಗಳನ್ನು ವೀಕ್ಷಿಸುವುದು ಜೀ ಕನ್ನಡವಾಹಿನಿಯಲ್ಲಿ. ಆದರೆ ನಮ್ಮ ಮನೆಯಲ್ಲಿಕಲರ್ಸ್‌ ಮತ್ತು ಜೀ ವಾಹಿನಿಯಲ್ಲಿ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಗುಳಿಗಲ್ಲದ ಚೆಲುವೆ ಶಾಲಿನಿಯ ನಿರೂಪಣೆಯ ಸ್ಟಾರ್‌ ಸುವರ್ಣ ಸೂಪರ್‌ ಸ್ಟಾರ್‌ (ಈಗ ಪ್ರಸಾರ ಆಗುತ್ತಿಲ್ಲ.. ಶೀಘ್ರದಲ್ಲಿ ಶುರು ಆಗಬಹುದು ಎನ್ನುವ ನಿರೀಕ್ಷೆಯಲ್ಲಿ)ಮತ್ತು ಸಿಹಿಕಹಿ ಚಂದ್ರ ಅವರ  ಬೊಂಬಾಟ್‌ ಭೋಜನ ಸ್ವಲ್ಪ ಜಾಸ್ತಿ ಇಷ್ಟ ಪಟ್ಟು ನೋಡುವ ರಿಯಾಲಿಟಿ ಶೋ .  ಇದರಲ್ಲಿ ೧೯ ಮತ್ತು ೨೦೨೦ರ ಸಮಯದಲ್ಲಿ    ವರಲಕ್ಷ್ಮಿ ಸ್ಟೋರ್ಸ್ ಎನ್ನುವ  ಸೀರಿಯಲ್‌ ಪ್ರಸಾರ ಆಗುತ್ತಿತ್ತು. ಅದೇನು ಕಾರಣವೋ ಹಂಗೇ ಪಾಚಿಕೊಂಡು ಬಿಡ್ತು. ಕಥಾಹಂದರ ಚೆನ್ನಾಗೇ ಇತ್ತು. ಬಿಡಿ ನಮಗ್ಯಾಕೆ ಚಾನಲ್‌  ಗಲಾಟೆ ಇಚಾರ

·         ಅದೇ ರೀತಿ ಕಲರ್ಸ್‌ ವಾಹಿನಿಯಲ್ಲಿ ನನ್ನದೇವರು ಸಹ ಹೀಗೆ ಕೊನೆ ಆಯ್ತ ಶೃತಿ ನಾಯ್ಡು ಅವರ ನೇತೃತ್ವದ ಈ ಧಾರವಾಹಿ  ಸಹ ತುಂಬಾ ಆಸಕ್ತಿಕರವಾಗಿತ್ತು. ದಿ. ಹಾಸ್ಯನಟ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್‌ ಅವರ ಮುಖ್ಯಭೂಮಿಕೆ ಇದರ ಆಕರ್ಷಣೆ. ಹಿರಿಯಕಲಾವಿದರಾದ ಮಾಲತಿ ಸುಧೀರ್‌, ರೇಖಾದಾಸ್‌ ಸೇರಿದಂತೆ  ಉತ್ತಮ ಕಲಾವಿದರ ದಂಡು ಇತ್ತು.ಆದರೇ ಅಯ್ಯೋ ಯಾಕೋ ಕಾಣೆನು..!

·         ದೃಷ್ಟಿ ಬೊಟ್ಟು, ರಾಮಾಚಾರಿ, ಭಾಗ್ಯಲಕ್ಷ್ಮಿ, ಅಮೂಲ್ಯ ಗೌಡ ನಟನೆಯ ಶ್ರೀ ಗೌರಿ.. ಇವಲ್ಲದರ ಜೊತೆ ನಿನಗಾಗಿ..ಒಟ್‌ಮೆ ಸೀರಿಯಲ್‌ ನೋಡುವ ಕಾಲ ನನ್ನದು. ನಿನಗಾಗಿ ಸಕತ್‌ ಇದೆ. ದಿವ್ಯ ಉರುಡುಗ, ರಿತ್ವಿಕ್‌ , ವಜ್ರೇಶ್ವರಿ, ಕಿಶನ್‌  ವಾಹ್..‌

·         ಜೀ ಯಲ್ಲಿ ಬ್ರಹ್ಮಗಂಟು,ಪುಟ್ಟಕ್ಕನ ಮಕ್ಕಳು,ಅಣ್ಣಯ್ಯ,  ಮತ್ತು ಲಕ್ಷ್ಮಿ ನಿವಾಸ. ಆಗಾಗ ನೋಡೋದು 


ಮಹಾನಟಿ




ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ರಿಯಾಲಿಟಿ ಷೋ ಗಳು ತುಂಬಾ ವಿಶಿಷ್ಟ ವಾಗಿರುತ್ತದೆ. ತಾವು ವೀಕ್ಷಕರಿಗೆ ವಿಶೇಷವಾಗಿರುವ ಮನೋರಂಜನಾ  ಕಾರ್ಯಕ್ರಮಗಳನ್ನು ನೀಡಬೇಕು ಎನ್ನುವ ಮನೋಭಾವ ಆ ಚಾನಲ್  ಮುಖ್ಯಸ್ಥರದ್ದಾಗಿದೆ ಎಂದು ಕಾಣುತ್ತೆ ಅದಕ್ಕಾಗಿಯೇ ವಿನೂತನವಾದ ಕಾರ್ಯಕ್ರಮಗಳು ಪ್ರಸಾರ  ಆಗುತ್ತಿರುತ್ತದೆ..

ಯಾಕೆ ಹೀಗೆ ಹೇಳ್ತಾ ಇದ್ದೀನಿ ಎಂದರೆ ಈಗ ಕಳೆದ ಕೆಲವು ವಾರಗಳಿಂದ ಇದರಲ್ಲಿ ಮಹಾನಟಿ ಎನ್ನುವ ರಿಯಾಲಿಟಿ- ಪ್ರತಿಭಾ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಚಂದದ  ಮತ್ತು ಅಪರೂಪದ ಕಾನ್ಸೆಪ್ಟ್ ಇದು. ಸುಂದರಿ ಪ್ರೇಮ, ಚಲುವೆ ನಿಶ್ವಿಕ,ಗುಳಿಗಲ್ಲದ ತರುಣ್ ಸುಧೀರ್, ಯಾವುದೇ ರಿಯಾಲಿಟಿ ಷೋ ಆಗಿರಲಿ ಎಲ್ಲದಕ್ಕೂ ಹೊಂದಿಕೆಯಾಗುವ ಅಪರೂಪದ ಪ್ರತಿಭೆ ರಮೇಶ್ ಅರವಿಂದ್  ಮತ್ತು ಅತ್ಯುತ್ತಮ ನಿರೂಪಕಿ ಅನುಶ್ರೀ ಗಟ್ಟಿ. 

ನಾನು ಈ ಕಾರ್ಯಕ್ರಮವನ್ನು ಆರಂಭದಿಂದಲೂ ವೀಕ್ಷಿಸುತ್ತಾ ಬಂದಿದ್ದೀನಿ. ತುಂಬಾ ಭಿನ್ನವಾಗಿದೆ.ಇಂತಹದ್ದೇ ಒಂದು ರಿಯಾಲಿಟಿ ಷೋ ಬಹಳ ಹಿಂದೆ ದೂರದರ್ಶನದ ಮೆಟ್ರೋ ಚಾನಲ್ ನಲ್ಲಿ ಪ್ರಸಾರ ಆಗಿತ್ತು. ಅದರಲ್ಲಿ ಡ್ಯಾನ್ಸ್, ಡ್ರಾಮಾ ಮತ್ತು ಹಾಡು ಮೂರರ  ಮಿಶ್ರಣ ಇತ್ತು. 

ಕಾಟೇರ ತರುಣ್ ಗೆ ಇದು ವಿಭಿನ್ನ ವೇದಿಕೆ. ಟಿವಿ ಪ್ರಪಂಚದಲ್ಲಿ ಸಿಗುವಷ್ಟು ಅನುಭವ, ಫ್ಯಾನ್  ಗಳು ಮತ್ತೆಲ್ಲೂ ಸಿಗಲ್ಲ.. 

ಎನಿವೇಸ್ ಚಂದದ ಕಾರ್ಯಕ್ರಮ... ವಿಭಿನ್ನ ಪ್ರಯತ್ನ.


ದೇಸಿ ಪ್ರತಿಭೆ

 

ಸ ರಿ ಗ ಮ ಪ - ಸೀಜನ್ ನಲ್ಲಿ ಹೊಸಹೊಸ ಅಂಶಗಳು ಮನ ಸೆಳೆಯುತ್ತಿವೆ. ಎಸ್ ಪಿ  ಬಾಲಸುಬ್ರಹ್ಮಣ್ಯಂ ಸರ್ ಹೇಳುತ್ತಿದ್ದ  ರಾಕ್ಷಸ ಪ್ರತಿಭೆಗಳು ಎನ್ನುವ ಪದ ಇಲ್ಲಿ ಸೂಕ್ತ. ಡ್ರಮ್ ಅರುಣ್ (ಹಾಗೆನ್ನಬಹುದಾ ?) ಎಂಥ ಅಪರೂಪದ ಪ್ರತಿಭೆ. ಇಂಥವರಿಗೆ ಕೈಗೆ  ಏನು ಸಿಕ್ಕರರು ಅವುಗಳಿಗೆ ಜೀವ ಕೊಡುವ ಶಕ್ತಿ ಬಹುಶಃ ದೇವರು ನೀಡಿರಬೇಕು. ಅವರ ವಾದ್ಯ ಸಂಗಾತಿಗಳು ಸಹ ಪ್ರತಿಭೆಯಲ್ಲಿ ಕಡಿಮೆ ಇಲ್ಲ.ಸಾಮಾನ್ಯವಾಗಿ ಹೊಸತನಕ್ಕಾಗಿ ವೀಕ್ಷಕ   ತುಡಿಯುತ್ತಾನೆ. ಅಂತಹ ಹೊಸತನ ನೀಡುವ ಅಪ್ಪಟ ದೇಸಿ ಪ್ರತಿಭೆ ಇವರು. 
ಈ ಕಾರ್ಯಕ್ರಮದ ಬಹು ಸಂಖ್ಯೆಯ ತೀರ್ಪುಗಾರರಜೊತೆಗೆ ಅವರ ಹೆಸರು ತೋರಿಸಿದರೆ ಒಳಿತು. ನಮ್ಮಂಥ ಅತಿ ಸಾಮಾನ್ಯ ವೀಕ್ಷಕರು ಅಡ್ಡ ಹೆಸರಿಂದ ಕರೆದು ನಮ್ಮ ಪ್ರತಿಭೆ ತೋರಿಸುತ್ತಿರುತ್ತೀವಿ. ಒಂದು ಸಂಗತಿ ಖುಷಿ ಅಂದರೆ ಈ ಮೊದಲು ತೀರ್ಪುಗಾರಾಗಿದ್ದ  ನಂದಿತಾ ಅವರನ್ನು ಮೆಚ್ಚುಗೆ ಗಳಿಸಿ ಗೆದ್ದು  ಅವರ ಜೊತೆ ತೀರ್ಪುಗಾರ್ತಿಯರಾಗಿ ಕುಳಿತುಕೊಳ್ಳುವ೦ತಹ  ಸಾಧನೆ ಮಾಡಿರುವ ಲಕ್ಷ್ಮಿ ನಾಗರಾಜ್ ಮತ್ತು ಇಂದು ನಾಗರಾಜ್ , ಅತಿ ಮಧುರ ಕಂಠ ಸಿರಿಯ ಅನುರಾಧ ಭಟ್ , ಹೇಮಂತ್ ..ಬಹಳಷ್ಟು  ಪ್ರತಿಭೆಗಳ ಹೆಸರು ಗೊತ್ತಿದೆ-ಗೊತ್ತಿಲ್ಲ...!
ಮಾಗಡಿಯಲ್ಲಿ ನಡೆದ ಡ್ರಾಮ ಜೂನಿಯರ್ಸ್ ಮತ್ತು ಸರಿಗಮಪ ಕಾರ್ಯಕ್ರಮದ ಮಿಶ್ರಣದಲ್ಲಿ ಶಿಶುನಾಳ ಷರೀಫ್ ಸಾಹೇಬರ  ಒಂದು ಪುಟ್ಟ ನಾಟಕ ಮತ್ತು ರಚನೆ  ಮನಕ್ಕೆ ಖುಷಿ ನೀಡಿತು. ಅಂದು ತಕ್ಷಣ ನಾನು ಶಿಶುನಾಳರ ಗೀತೆಯನ್ನು ನನ್ನ ಎಫ್ಭಿ ವಾಲ್ ನಲ್ಲಿ ಹಾಕಿ ಖುಷಿಪಟ್ಟೆ. ಈ ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬರಾದ   ದರ್ಶನ್ ವಾಹ್ ಏನ್ ಪ್ರತಿಭೆ..ವಾಹ್ 


ಜಾಕ್ ಪಾಟ್

 


ಸ್ಟಾರ್ ಸುವರ್ಣ ಮನೋರಂಜನಾ ವಾಹಿನಿಯನ್ನು ಬಹಳ ದಿನಗಳ ಬಳಿಕ ನಾನು ಮುಖ್ಯವಾಗಿ ಬಿ ಆರ್ ಛಾಯ ಮೇಡಂ ಮತ್ತು ಪದ್ಮಪಾಣಿ ಸರ್ ಕಾರಣದಿಂದ ವೀಕ್ಷಿಸಿದೆ. ಅದರಲ್ಲಿ ಪ್ರಸಾರ ಆಗುವ ಜಾಕ್ ಪಾಟ್ ಎನ್ನುವ ಕಾರ್ಯಕ್ರಮದಲ್ಲಿ ಈ ದಂಪತಿಗಳಿಗೆ  ಹಾಗೆನ್ನುವುದಕ್ಕಿಂತ ಛಾಯ ಮೇಡಂ ಗೆ ಸನ್ಮಾನ ಆಗುವ ಕಾರ್ಯಕ್ರಮ ಇತ್ತು ಪ್ರೇಮದಿನದ ಸಲುವಾಗಿ... ! 

ಅಲ್ಲಿ ಬಹಳ ದಿನಗಳ ನಂತರ ನಿರೂಪಕಿ ಅನುಪಮಾ ಗೌಡ ರನ್ನು ನೋಡಿ ಖುಷಿ ಆಯ್ತು. ಕನ್ನಡದ ಕೆಲವು ಉತ್ತಮ ನಿರೂಪಕ/ಕಿ ಯಾರ ಸಾಲಿಗೆ ಸೇರಿರುವ ಅನುಪಮಾ ಭಾಷೆ ಹಾಗು ಅವರ ಸುವರ್ತನೆ ಇಷ್ಟ ಆಗುತ್ತದೆ. ಬಿಗ್ ಬಾಸ್ ಗೆ ಎರಡನೇ ಬಾರಿ ಬಂದ ಅನುಪಮಾ ಅನೇಕರೀತಿಯಲ್ಲಿ ತಮ್ಮನ್ನು ಪಾಲಿಶ್ ಮಾಡಿಕೊಂಡಿದ್ದರು. ಅದು ಒಳ್ಳೆಯ ಬೆಳವಣಿಗೆ. ಪದ್ಮಪಾಣಿ ಸರ್ ನನಗೆ ಫೇಸ್ ಬುಕ್ ಮಿತ್ರರು. ನನ್ನ ಪೋಸ್ಟ್ ಗಳಿಗೆ ಲೈಕ್ ಒತ್ತುವ ಮತ್ತು ಕಾಮೆಂಟ್ ಹಾಕುವ ಹೃದಯ ವಿಶಾಲಿಗಳು.. ತಿಳಿಹಾಸ್ಯದ ಮನಸ್ಸು ಇರುವ ಪದ್ಮಪಾಣಿ ಸರ್ ಮತ್ತು ನನ್ನ ಮೆಚ್ಚಿನ ಗಾಯಕಿ ಛಾಯಾ ಮೇಡಂ ಅವರನ್ನು ಜಾಕ್ ಪಾಟ್ ವೇದಿಕೆಯ ಮೂಲಕ ನೋಡಿ ಖುಷಿ ಆಯಿತು. ಈ ಕಾರ್ಯಕ್ರಮದಲ್ಲಿ ತುಂಬಾ ಇಂಪ್ರೆಸ್ ಮಾಡಿದ ಮತ್ತೊಂದು ಸಂಗತಿ ಅಂದರೆ  ವಿವಿಧ ಪ್ರಕಾರಗಳ ಸಂಗೀತ.ಅದು ಗಾಯನ, ವಾದನ.. ಹೀಗೆ ಹತ್ತು ಹಲವಾರು ಇರಬಹುದು. ತುಂಬಾ ಚೆನ್ನಾಗಿತ್ತು.ತಾರಾ ದಂಪತಿಗಳಾದ ಸಿಹಿಕಹಿ ಚಂದ್ರು ಮತ್ತು ಗೀತಾ ಮೇಡಂ ಅವರಿಗೆ ನಡೆದ ಸನ್ಮಾನ ಮತ್ತು ಮಾತುಕತೆ ಚಹಾದ ಅಲ್ಲಲ್ಲ  ಕಾಫಿ ಜೊತೆಯ ಚೂಡಾ ಇದ್ದಂಗೆ ಇತ್ತು.. 

ಲಾಸ್ಟ್ ರೆಸಿಪೀಸ್

 


ಎಪಿಕ್ ಚಾನಲ್ ನಲ್ಲಿ ಒಂದೊಳ್ಳೆಯ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಲಾಸ್ಟ್ ರೆಸಿಪೀಸ್  ಅಂತ ಅದರ ಹೆಸರು.ಆದಿತ್ಯಬಲ್ ಅದರ ನಿರೂಪಕ. ಈ ಕಾರ್ಯಕ್ರಮದ ವಿಶೇಷ ಅಂದ್ರೆ ಮರೆಯುತ್ತಿರುವ, ಅಥವಾ ಬಹಳ ಹಿಂದೆ ಬಳಸುತ್ತಿದ್ದ ಪಾಕ ವಿಧಾನ. ನಾನು ಆ ಚಾನಲ್ ವೀಕ್ಷಣೆ ಮಾಡುವಾಗ  ನಮ್ ಕರ್ನಾಟಕದ ಹೆಮ್ಮೆಯ ಮಹಾರಾಜ ರಾಜಾಧಿರಾಜ ಶ್ರೀ ಕೃಷ್ಣದೇವ ರಾಯರ ವಂಶಕ್ಕೆ ಸೇರಿದ ರಾಜಮಾತೆ ಮತ್ತು ಅವರ ಸೊಸೆ 500 ವರ್ಷದಷ್ಟು ಹಳೆಯ ರೆಸಿಪಿ ಮಾಡಿ ತೋರಿಸಿದರು. ರಾಜಮಾತೆ ಹೆಸರು ಚಂದ್ರಕಾಂತ ದೇವಿ.  ಮೊಟ್ಟೆ ಯಿಂದ ಮಾಡಿದ  ಒಂದು ಸರಳವಾದ ತಿನಿಸನ್ನು ತೋರಿಸಿಕೊಟ್ಟರು. ನಮ್ಮಲ್ಲಿ ಬಳಸುವ ಮರಾಠಿ ಮೊಗ್ಗು, ಕಲ್ಲುಹೂವನ್ನು ಉಪಯೋಗಿಸಿ ಮಾಡಿದ ಆಹಾರವನ್ನು ಆಂಕರ್ ಚಪ್ಪರಿಸಿಕೊಂಡು ತಿಂದದ್ದು ಬೇರೆ ವಿಷ್ಯ. 

ನಾನು ಸಾಮಾನ್ಯವಾಗಿ   ವೆಜ್ ಅಥವಾ ನಾನ್ವೆಜ್ ಅಡುಗೆ ನೋಡುತ್ತೇನೆ.. ನಾನು ಶಾಕಾಹಾರಿ ಆಗಿದ್ದರು ಸಹ .. ಯಾಕೆಂದ್ರೆ ಯಾವುದೇ ದೇಶ, ಸಂಸ್ಕೃತಿಯವರು ಅಡುಗೆ ಮಾಡುವ ವಿಧಾನ,ಅವರು ಬಳಸುವ ಸಾಂಬಾರ ಪದಾರ್ಥಗಳು ..ನನಗೆ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ ಅದಕ್ಕಷ್ಟೇ..!

ಫುಡ್ ಫ್ಯಾಕ್ಟರಿ

 



ಡಿಸ್ಕವರಿ ಚಾನಲ್ ನೋಡುವುದು ತುಂಬಾ ಪ್ರತಿಷ್ಠೆ ಸಂಕೇತ ಆಗಿತ್ತು. ಆದರೆ ಈಗ ಬಹಳಷ್ಟು ಚಾನಲ್ ಗಳು, ಒಂದೇ ರೀತಿಯ ಕಾರ್ಯಕ್ರಮಗಳು .. ಎಲ್ಲವು.. ಎಲ್ಲೆಡೆ  ಪ್ರಸಾರ ಆಗುತ್ತಿದೆ. ಜೊತೆಗೆ ಸ್ಥಳೀಯ ಭಾಷೆಗಳಲ್ಲಿ ಸಹ ಕಾರ್ಯಕ್ರಮ ಪ್ರಸಾರ ಆಗ್ತಾ ಇದೆ. ಇಂದು ಬಹಳ ಸಮಯದ ನಂತರ ಡಿಸ್ಕವರಿ ಚಾನಲ್ ನೋಡಿದಾಗ ಆಗ ಫುಡ್ ಫ್ಯಾಕ್ಟರಿ  ಎನ್ನುವ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಬೃಹತ್ ಯಂತ್ರಗಳು, ಬೃಹತ್ ಚಾಕೊಲೇಟ್ ಜೊತೆಗೆ ಆನಿಯನ್ ರಿಂಗ್ಸ್ ಎನ್ನುವ ಕುರ್ಕುರೆ ಬಗ್ಗೆ ಪ್ರಸಾರ ಮಾಡ್ತಾ ಇದ್ರು .. ಎಷ್ಟು ಪ್ರಮಾಣದಲ್ಲಿ ಈರುಳ್ಳಿ  ರಿಂಗ್ಸ್ ಗಳು ಇರುತ್ತವೆ, ಜೊತೆಗೆ  ಅದನ್ನು ಕರಿಯಲು ಇದ್ದ ಬೃಹತ್ ಎಣ್ಣೆ ಪಾತ್ರೆ.. ಅದರ ಪ್ಯಾಕಿಂಗ್.. ವೆಲ್ ಇದು ವಿದೇಶದ ಪ್ಯಾಕ್ಟ್ರಿ ಕಥೆ.. ಒಟ್ಮೆ ಚನ್ನಾಗಿತ್ತು ಈರುಳ್ಳಿ ಸಂಡಿಗೆ ಅಥವಾ ಕುರ್ಕುರೆ ಅಥ್ವಾ ಆನಿಯನ್ ರಿಂಗ್ಸ್  .....!

ಸಿಗುತ್ತಾ ?!

 


ಕೋವಿಡ್  ಸಮಯದಲ್ಲಿ ವಾರ್ತಾ ವಾಹಿನಿಗಳನ್ನು ಹೆಚ್ಚು ನೋಡ್ತಾ ಇದ್ದೆ. ಸೋಷಿಯಲ್ ಮೀಡಿಯಾದಲ್ಲಿದ್ದ ಅನೇಕ ಸ್ನೇಹಿತರ ಸಾವು, ಪ್ರಪಂಚದಲ್ಲಿ ಆದ ಸಾವುಗಳು ಮನಕ್ಕೆ ಖೇದ ಉಂಟು ಮಾಡಿತ್ತು. ಆದ ಕಾರಣ ಆದಷ್ಟು ಮನಕ್ಕೆ ಬೇಸರ, ನೋವು ಉಂಟಾಗುವ ವಿಷಯಗಳನ್ನು ನಾನು ವೀಕ್ಷಿಸಬಾರದು ಎಂದು ನಿರ್ಧಾರ ಮಾಡಿದ್ದೆ. ಆದರೂ ಬಹಳ ಸಮಯದ ನಂತರ ಸಾಮಾನ್ಯವಾಗಿ ವೀಕ್ಷಿಸುವ ವಾರ್ತಾ ವಾಹಿನಿಗಳನ್ನು ಹೊರೆತು ಪಡಿಸಿ ಹಾಗೆ ಪ್ರಜಾ ಮತ್ತು ರಾಜ್ ನ್ಯೂಸ್ ಕಡೆ ಬಂದೆ. ಆಯೋ ಎಂಥ ಅನ್ಯಾಯ .. !!!! ರಾಜ್ ನ್ಯೂಸ್ ನಲ್ಲಿ  beauty   ಟಿಪ್ಸ್ ಅನ್ನುವ ಕಾರ್ಯಕ್ರಮದ ಹೆಡ್ಡಿಂಗ್ ತೋರಿಸ್ತಾ ಇದ್ರೂ.. ಆದರೆ ಅಲ್ಲಿ ಪ್ರಸಾರ ಆಗ್ತಾ ಇದ್ದುದು ನ್ಯೂಸೂ... ಇನ್ನು ಪ್ರಜಾ ದಲ್ಲಿ ಸಾಂತ್ವಾನ ಅನ್ನುವ ಪ್ರೋಗ್ರಾಮ್ ಇತ್ತು ಪಟ್ಟಿಯಲ್ಲಿ ಆದರೆ ಅಲ್ಲೂ ಸಹ ಪ್ರಸಾರ ಆಗ್ತಾ ಇದ್ದುದ್ದು ನ್ಯೂಸು.. ದೇವುಡಾ ನ್ಯೂಸ್ ನೋಡುವುದರಿಂದ  ಸಾಂತ್ವಾನ ಸಿಗುತ್ತಾ ?!

ಗುಡ್ ಲಕ್

 

ಬಿಗ್ ಬಾಸ್ ಇನ್ನು ನಿನ್ನೆ ಮೊನ್ನೆಯಷ್ಟೇ ಶುರು ಆದಂಗೆ ಇದೆ. ಆಗಲೇ  ಫಿನಾಲೆ  ಹತ್ರ ಬಂತು.ಯಾರು ಯಾವುದೇ ರೀತಿಯ ಅಭಿಪ್ರಾಯ ಹೊಂದಿರಲಿ ನಾನು ತಪ್ಪದೆ ನೋಡಿದ, ನೋಡುವ, ನೋಡುತ್ತಿದ್ದ ಶೋಗಳಲ್ಲಿ ಇದು ಒಂದು. ಕಿಚ್ಚ ಸುದೀಪ ಬಗ್ಗೆ ಸಾಕಷ್ಟು ಸರ್ತಿ ಬರೆದು ಅಭಿಮಾನಿಸಿದ್ದೀನಿ.. ಆ ಗೌರವ ಇದ್ದೆ ಇದೆ. ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಬಗ್ಗೆ ಒಳ್ಳೆಯದನ್ನು ಹೇಳುವುದಕ್ಕಿಂತ ಕೆಟ್ಟದ್ದನ್ನು ಹರಡುವ ಮಂದಿ  ಹೆಚ್ಚು. ಅದು ಅವರ ಖುಷಿ ಬಿಡಿ..! ಒಳ್ಳೆ ಮಾತು ಹೇಳಿದರೆ ನಮಗೆ ಅವರಿಂದ ಲಾಭ ಆಗ್ತಾ ಇದೆ ಅಂತ ತಿಯೋ ಮಂದಿ ಸಹ ಹೆಚ್ಚು...!

ಬಿಗ್ ಬಾಸ್ ನಲ್ಲಿ  ಆದಿ ಹೊರಗೆ ಬಂದ ನಂತರ ಯಾರನ್ನು ಭೇಟಿ ಮಾಡ್ತೀರಿ.. ಯಾರ ಜೊತೆ ಸ್ನೇಹ ಇಟ್ಟು ಕೊಳ್ತಿರಿ ಎಂದು ಸಾಮಾನ್ಯವಾಗಿ  ಪ್ರತಿಬಾರಿ ಬಿಗ್ ಬಾಸ್ ಮನೆಯಲ್ಲಿ ಕೇಳಿಬರುತ್ತೆ. ಆದರೆ ಹೊರ  ಬದುಕು ಹೆಚ್ಚು ದಿನ ಅಂತಹ ಸ್ನೇಹ ಉಳಿಸಲ್ಲ.. ಆದರೂ ಕೆಲವೊಂದಷ್ಟು ಸ್ನೇಹ ಉಳಿದಿದೆ.. ನಮ್ಮ ವರ್ತೂರು ಸಂತೋಷ್  ಮುಗ್ಧತೆ ಬಗ್ಗೆ ಎರಡು ಮಾತಿಲ್ಲ, ಕೋಲಾರದ ಗ್ರೂಪ್ ಗಳಲ್ಲಿ ಜೈ ಹಳ್ಳಿಕಾರ್, ಜೈ ವರ್ತೂರ್  ಅನ್ನುವ ಪೋಸ್ಟರ್ ಗಳು ಸಾಮಾನ್ಯವಾಗಿ ಕಂಡು ಬರ್ತಾ ಇದೆ. ವರ್ತೂರು ಸಂತೋಷ್ ಬಗ್ಗೆ ಕೋಲಾರದವರು ಅಭಿಮಾನಿಸುವುದು ವಿಶೇಷವೇನಲ್ಲ .. ಆದರೆ ಇತ್ತೀಚಿಗೆ ಒಂದು ಸುದ್ದಿ ಕೇಳಿದ್ದು ಅಂದ್ರೆ ಚಿಕ್ಕಮಗಳೂರಿನ  ಒಂದಷ್ಟು ಯೂತ್ಸ್ ಬಂದು ಬೆಟ್ಟದ ತಾಯಿ  ಚಾಮುಂಡಿ ಹತ್ರ ಕೇಳಿಕೊಂಡಿದ್ದು   ಹಳ್ಳಿಕಾರ್ ವರ್ತೂರ್ ಸಂತೋಷ್ ಗೆಲ್ಲಬೇಕು..

ಎನಿವೇಸ್ ಡಿಯರ್  ಸುದೀಪ ನಾವಂತೂ ಮುಖಾಮುಖಿ ಭೇಟಿ ಆಗಲ್ಲ . ನಿಮ್ಮಂತಹ ಮೇರುಶಿಖರವನ್ನು ದೂರದಿಂದ ನೋಡಿ ಗೌರವಿಸುವುದೇ ನಮ್ಮಂತಹವರು ಮಾಡುವ ಕೆಲಸ. ಹೊಗಳಿಕೆ ಅಲ್ಲ ಮನದಾಳದ ಮಾತು. ಮುಂದೆ ಎಂದಾದರೂ  ದೇವರು ಅವಕಾಶ ಕೊಟ್ಟರೆ ನಿಮ್ಮನ್ನು ... ?!

ವೆಲ್ ಎಲ್ಲ ಸ್ಪರ್ಧಿಗಳಿಗೂ ಒಳ್ಳೆಯದಾಗಲಿ. ಸೋತವರು -ಗೆದ್ದವರು ಅನ್ನುವುದು ಫಿನಾಲೆ ವೀಕ್ ನಲ್ಲಿ ಆದ್ಯತೆ  ಪಡೆಯಲ್ಲ.. ಮತ್ತೊಮ್ಮೆ ಗುಡ್ ಲಕ್ 

ಖುಷಿ ಕೊಡ್ತು.

 

ನನಗಂತೂ ಬಾಲಕ ರಾಮ ಪ್ರಾಣ ಪ್ರತಿಷ್ಠಾಪನೆ ಸಖತ್  ರೋಮಾಂಚನ ನೀಡಿದೆ. ರಾಮನ ಮುದ್ದುಮೊಗ ಉಡುಪಿಯ ಕಿಟ್ಟಪ್ಪನ  ಮುದ್ದು ಮುಖದಂತೆ ಕಂಡಿದೆ ಮತ್ತು ಕಾಣಿಸ್ತಾ ಇದೆ. ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಸಮರ್ಥ ಹೋರಾಟದ ಫಲ  ಬಾಲಕ ರಾಮ ಕೃಷ್ಣನಂತೆ ಕಾಣುತ್ತಿರಬೇಕು. ಒಬ್ಬರಿಗೆ ಶ್ರೀನಿವಾಸ ಗೋವಿಂದ , ಒಂದಷ್ಟು ಮಂದಿಗೆ  ಶಂಭುಕುಮಾರ ವಡಿವೇಲ ಅಂದ್ರೆ ಬಾಲಸುಬ್ರಮಣ್ಯ ಸ್ವಾಮಿಯಂತೆ ಕಂಡು ಬರ್ತಾ ಇದ್ದಾರೆ ಅಂದ್ರೆ ಅನೇಕರೂಪ ಏಕದೇವ ಎನ್ನುವ ಅಂಶ  ಸ್ಪಷ್ಟವಾಗಿದೆ. ಜೈ ಶ್ರೀ ರಾಮ್  
 ಜೀ ಕನ್ನಡ ವಾಹಿನಿಯ ಸರಿಗಮಪ ಸೀಜನ್  20  ಸಂಕ್ರಾಂತಿ ಸಮಯದ ಎಪಿಸೋಡ್ ನಲ್ಲಿ ಅಯ್ಯಪ್ಪ ಸ್ವಾಮಿ ಹಾಡುಗಳು  ಖುಷಿ ಕೊಡ್ತು. ಚಿಕ್ಕಂದಿನಲ್ಲಿ ನಾವು ಅಯ್ಯಪ್ಪ ಸ್ವಾಮಿ ದೀಪ ಹೊತ್ತಿದ್ದೆ ಮೆರವಣಿಗೆ ಸಮಯದಲ್ಲಿ.. ಆಗ  ವೀರಮಣಿ ರಾಜು ಅವರು ಹಾಡಿರುವ ಪಳ್ಳಿಕಟ್ಟು  ಶಬರಿ  ಮಲೈ ಕ್ಕೂ ಕಲ್ಲುಮ  ಮುಳ್ಳುಮ  ಕಾಲುಕ್ಕು  ಮೆಥೈ ಸ್ವಾಮಿಯೇ  ಅಯ್ಯಪ್ಪೋ  ಅಯ್ಯಪ್ಪೋ  ಸ್ವಾಮಿಯೇ ನೆಯ್ಯ್ಯಭಿಷೇಕಂ  ಸ್ವಾಮಿಕ್ಕೆ ಕರ್ಪೂರ  ದೀಪಂ  ಸ್ವಾಮಿಕ್ಕೆ ತಪ್ಪದೆ ಕೇಳುತ್ತಾ ತಪ್ಪುತಪ್ಪಾಗಿ ತಮಿಳಿನಲ್ಲಿ ಹಾಡುತ್ತಾ ಸಾಗುತ್ತಿದ್ದೆವು    ವಿಜಯಪ್ರಕಾಶ ಅಲ್ಲದೆ  ಸ್ಪರ್ಧಿಗಳು ಅಯ್ಯಪ್ಪ ದೇವನ ಹಾಡು ಹಾಡಿ  ಮನಕ್ಕೆ ಮುದ ನೀಡಿದರು. ಕರ್ನಾಟಕದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಹೆಚ್ಚು.. ಅದೇರೀತಿ ಶ್ರೀರಾಮದೇವನ ಹಾಡು ಖುಷಿ ಕೊಡ್ತು. ಡಿವೋಷನಲ್, ಎಮೋಷನಲ್  ಹಾಡು .. ನಾವು ಸಹ ಬಾಲಕ ರಾಮ ಪ್ರಾಣಪ್ರತಿಷ್ಠಾಪನೆ ದಿನವಾದ ನಿನ್ನೆ ರಾಮದೇವನಿಗೆ ಪೂಜಿಸಿ ನಮ್ಮ ಮನೆಯಲ್ಲಿ ಹಾಡಿನ ಮೂಲಕ ಭಕ್ತಿ ಸಮರ್ಪಣೆ ಮಾಡಿದೆವು ಮಹಾಗುರು ಹಂಸಲೇಖ ಸರ್.. :-)