ಬೀಯಿಂಗ್ ಹ್ಯೂಮನ್

ಅದ್ಯಾಕೋ ಟೀವಿ ನೋಡೋಕೆ ಬೇಜಾರು ಆಗುತ್ತೆ. ಎಂತಹ ಕರುಣೆ ಇಲ್ಲದ ಜನ .. ಎಳೆ ಮಕ್ಕಳ ಮೇಲೆ ಪೌರುಷ...ನಿನ್ನೆ ಟೀವಿಯಲ್ಲಿ ಮಕ್ಕಳ ಮಾರಣ ಹೋಮ ಕಂಡಾಗ ಧರ್ಮ, ಜಾತಿ, ಲಿಂಗ ಯಾವುದೇ ಸಂಗತಿ ಆಗಿರಲಿ  ಪೌರುಷದ ಅಂತಿಮ ರೂಪ ಈ ರೀತಿ ವ್ಯಕ್ತ ಆಗೋದು ಮಾತ್ರ ನಿಜಕ್ಕೂ ಬೇಸರದ ಸಂಗತಿ. ಚಾನೆಲ್ ಹಾಕೋಕೆ ಬೇಸರ ಅಂತ ಅನ್ನಿಸುತ್ತೆ.


ಸಲ್ಮಾನ್ boy ತಮ್ಮ ತಂಗಿ ಮದುವೆ ಆದ ಬಗ್ಗೆ ಹೇಳುತ್ತಾ  ಅಂದು (ಹಳೆಯ ಸಂಗತಿ ಕಣ್ರೀ )ತನ್ನ ಮತ್ತು ಶಾರುಖ್ ನಡುವೆ ಈಗ ಮತ್ತೆ ಸ್ನೇಹ ಆರಂಭವಾಗಿದೆ ಎಂದು ಹೇಳಿದ್ರು ಬಿಗ್ ಬಾಸ್ ಸ್ಪರ್ಧಿಗಳ ಬಳಿ. ಕರಣ್ ಅರ್ಜುನ್ ಸಿನಿಮಾದ ಈ ಜೋಡಿಯ ಜಗಳ ಬೇಸರ ಅವೆಲ್ಲಕ್ಕೂ   ಅದರದ್ದೇ ಆದ  ಕಾರಣಗಳು ಇರುತ್ತವೆ. ಆದರೆ ಬ್ರೇಕಿಂಗ್ ನ್ಯೂಸ್ ಮಾಡುವ  ಹುಮ್ಮಸ್ಸಿನಲ್ಲಿ ?  ಹರಡುವ ವಿಧಾನ ಛೆ ! ಅನ್ನಿಸುತ್ತೆ.  ನನ್ನ ಮತ್ತು ಸಲ್ಮಾನ್ ನಡುವೆ ಪ್ಯಾಚಪ್ ಆಗಿಲ್ಲ.. (ಕಸಿವಿಸಿಯಿಂದ )ನನ್ನ ಸ್ನೇಹಿತ ಆತ ಎಂದು ಕಪಿಲ್ ಕಾರ್ಯಕ್ರಮದಲ್ಲಿ ಶಾರುಖ್ ಹೇಳಿದ್ರು. ಸಾಮಾನ್ಯವಾಗಿ ಜಗಳ ಕದನ ಇದ್ದಿದ್ದೆ . ನಮ್ಮಲ್ಲೂ  ಅಷ್ಟೇ ಅಂದ್ರೆ ಸ್ಯಾಂಡಲ್ ವುಡ್  ನಲ್ಲೂ ಸದಾ ಸುದೀಪ್ ಮತ್ತು ದರ್ಶನ್ ಮೇಲೆ ಕಣ್ಣು  ;-). 
ಅದಕ್ಕೂ ಮುನ್ನ ಸಲ್ಮಾನ್ ತಂಗಿ ಮದುವೆ ಸಮಯದಲ್ಲಿ ಅರ್ಪಿತ ನನ್ನ ತಂಗಿ ನಾನು ಕರೆಯದೆ ಇದ್ರೂ ಹೋಗ್ತೀನಿ ಎಂದು ಹೇಳಿದ್ರು ಶಾರುಖ್..ಇವೆಲ್ಲ ಹೃದಯದಿಂದ ಮಾತುಗಳು. ಓರ್ವ ಸೆಲೆಬ್ರಿಟಿ ಯನ್ನು   ಮನುಷ್ಯ ಅಂತ ನೋಡಿದ್ರೆ  ಹಿಗ್ಗಾಮುಗ್ಗ ಬರೆಯಲ್ಲ ಮತ್ತು ಹೇಳಲ್ಲ. ಕಲರ್ ವಾಹಿನಿಯಲ್ಲಿ ಕಾಮಿಡಿ ವಿತ್ ಕಪಿಲ್ ನಲ್ಲಿ  ಡಿಡಿಎಲ್ಜೆ ವಿಶೇಷ ಕಾರ್ಯಕ್ರಮ ಸಕತ್ ಇತ್ತು. ಕಾಜೋಲ್ , ಶಾರುಖ್, ಕಪಿಲ್, ಸಿದ್ದು...ಆಹಾ! 
ನನಗೆ ಅತ್ಯಂತ ಇಂಪ್ರೆಸ್ ಮಾಡಿದಸಂಗತಿ ಅಂದ್ರೆ ಸಲ್ಮಾನ್  ಮತ್ತೊಬ್ಬ ತಾಯಿ ಹೆಲೆನ್ ಬಗ್ಗೆ. ಏಕೆಂದರೆ ಯಾವುದೇ ಕುಟುಂಬದಲ್ಲಿ ಆಗಲಿ ತಮ್ಮ ಎರಡನೇ ಸಂಬಂಧ ಮದುವೆ ಬಗ್ಗೆ ಒಪ್ಪಿಕೊಳ್ಳೋಲ್ಲ, ಬಚ್ಚಿಟ್ಟು, ಮುಚ್ಚಿಟ್ಟು ಕೊನೆಗೆ ವಿಧಿ ಇಲ್ಲದೆ ಹೇಳಿದವರೇ ಜಾಸ್ತಿ. ಅಂತಹುದರಲ್ಲಿ ಸಲ್ಮಾನ್ ತಂದೆ ನೊಂದ ಹೆಣ್ಣುಮಗಳಿಗೆ ಬದುಕು ಕೊಟ್ಟರು, ಪತಿಯ ನಿರ್ಣಯವನ್ನು  ಅವರ ಮೊದಲ ಪತ್ನಿ ಸ್ವೀಕರಿಸಿದರು, ಅದಕ್ಕಿಂತ ಹೆಚ್ಚಾಗಿ   ಯಾವುದೋ ತಾಯಿ ಮಡಿಲ ಮಗುವನ್ನು ಹೆತ್ತ ಕುಡಿಯಂತೆ ಸಾಕಿದರು. ಒಡಹುಟ್ಟಿದ ತಂಗಿಯಂತೆ ಪ್ರೀತಿಸಿ ಬೆಳೆಸಿ ಆಕೆಯ ಆಶಯದಂತೆ ಸಲ್ಮಾನ್ ಮದುವೆ ಮಾಡಿದರು. ಅವರ ಸಹೋದರರಾದ ಅರ್ಬಾಜ್, ಸೊಹೈಲ್, ಅಲ್ಲದೆ ಸಹೋದರಿ ಅಲ್ವಿರ... ತುಂಬಾ ವಿಶೇಷ ಅನ್ನಿಸಿತು. ಜೊತೆಗೆ ಆಕೆಯ ಇಚ್ಚೆಯಂತೆ ಗ್ರಾಂಡ್ ಮದುವೆ ಮಾಡಿದ್ದು .ಬೀಯಿಂಗ್ ಹ್ಯೂಮನ್ ಆಗಿದ್ದಾರೆ ಲೈಕ್ ಆಯ್ತು. 
ಅದೇರೀತಿ  ಒಮ್ಮೆ ಅಂದರೆ ತುಂಬಾ ವರ್ಷಗಳ ಹಿಂದೆ ನಡೆದ ಸಂಗತಿ. ಹಿಂದಿವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರ ಅಗ್ತಾ ಇತ್ತು. ಅದರಲ್ಲಿ ಪ್ರಾಯಶಃ ಆಜ್ ತಕ್ ಇರ ಬೇಕು, ಅದರಲ್ಲಿ ಭಾಗಶಃ  ಉತ್ತರ ಪ್ರದೇಶ ಇರಬೇಕು, ಅಲ್ಲಿನ ಇಬ್ಬರು ಸಯಾಮಿ ಹುಡುಗೀರು ಸಲ್ಮಾನ್ ಖಾನ್ ಗೆ ರಾಖಿ ಕಟ್ಟ ಬೇಕು ಅಂತ ಹಠ ಮಾಡಿದ್ರು, ಅವರಬಳಿ ರಾಖಿ ಕಟ್ಟಿಸಿಕೊಂಡು ಸಿಹಿ ತಿನ್ನಿಸಿದ್ದರು   ಸಲ್ಮಾನ್.. ಬದುಕಲ್ಲಿ ಹಿಂದೆ ನಡೆದ ಯಾವುದೇ ಸಂಗತಿಗಳಿರಲಿ, ಇರುವ ಸ್ವಲ್ಪ ಕಾಲ ಬೀಯಿಂಗ್  ಹ್ಯುಮನ್ ಆಗುವುದು ಬಹಳ ಮುಖ್ಯ. 



 ಮಾ ವಾಹಿನಿಯಲ್ಲಿ ಮತ್ತೆ ಟಾಲಿವುಡ್ ಮನ್ಮಥ ಅಕ್ಕಿನೇನಿ ನಾಗಾರ್ಜುನ ಅವರ ಕೋಟ್ಯಾಧಿಪತಿ ಆರಂಭವಾಗಿದೆ.ಅತ್ಯಂತ ಚಂದದ ಕಾರ್ಯಕ್ರಮ ಎಂದು ಹೊಗಳುವ ಅಗತ್ಯವಿಲ್ಲ  .. ಏಕೆಂದರೆ ಚಂದದ   ಕಾರ್ಯಕ್ರಮ ಅದು. ಆದರೆ ಈ  ಕಾರ್ಯಕ್ರಮದ ಮುಖ್ಯ ಆಕರ್ಷಣೆ ಅಕ್ಕಿನೇನಿ ನಾಗಾರ್ಜುನ ಅಂತ ವಿಶೇಷವಾಗಿ ಹೇಳ ಬೇಕಿಲ್ಲ. ನಾಗ್ ಪತ್ನಿ ಅಮಲ ಅಕ್ಕಿನೇನಿ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಬಾಲಿವುಡ್ ಚಿತ್ರದಲ್ಲಿ ಎಂದು ಓದಿದಾಗ ಹಾಗೆ ಗೂಗಲ್ ಸರ್ಫ್ ಮಾಡಿದಾಗ ಯಾಕ್ ಲೇ ಪುಟ್ನಂಜ ಪುಟ್ನನ್ಜಿನ್ ಹೊಡೆದ್ಯಂತೆ ಅನ್ನುವ ಹಾಡು ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೂ .. ಹಾಡು ನೆನಪಿಗೆ ಬಂದೆ ಬಿಡ್ತು..ಅಮಲಾಗೆ ಇಷ್ಟು ದೊಡ್ಡ ಮಗ ಇದ್ದಾನೆ ಅಂದ್ರೆ ನಂಬೋಕೆ ಆಗಲ್ಲ ಅಷ್ಟು ಚಂದ ಇದ್ದಾರೆ ಇನ್ನು. 
ಕೋಟ್ಯಾ ಧಿಪತಿಯು  ಯಾವ ಭಾಷೆಯಲ್ಲೂ ಪ್ರಸಾರ ಆದರು ಅದರ ಹೋಸ್ಟ್ ಗಳು ಅದ್ಭುತವಾಗಿ ಆ ಕಾರ್ಯಕ್ರಮ ಮುನ್ನಡೆಸಿದ್ದಾರೆ. ನಾಗ್ ವಿಷಯದಲ್ಲೂ ಅಷ್ಟೇ. ನನಗೆ ಅವರ ನಿರ್ಣಯಂ ಇಷ್ಟ ಆಗಿತ್ತು. ಅದೇರೀತಿ ಹೆಚ್ಚು ಖುಷಿಕೊಟ್ಟ  ಸಿನಿಮಾ ಅನ್ನಮಯ್ಯ. ಇಷ್ಟು ವರ್ಷಗಳಾದರೂ  ನಾಗ್ ಸ್ಟೈಲ್ಸ್ ಮಾದರಿ. 
ಭದ್ರ ಅಮಲ  ನಾಗ್ ಗೆ ಲೇಡಿ ಫ್ಯಾನ್ಸ್ ಗಳು ಜಾಸ್ತಿ. ಆಮೇಲ್ ಅಬ್ರಕದಬ್ರ ಅಂತ ಮಾಯಾ ಮಾಡಿ ಬಿಟ್ಟಾರು  ;-)

ರಿಕ್ವೆಸ್ಟ್


ಕಳೆದ ಕೆಲವು ದಿನಗಳೇನು ವಾರಗಳಿಂದಲೇ ಅನಾರೋಗ್ಯ.ಜೊತೆಗೆ ಕೆಲಸ ಕೆಲಸ. ಹಾಗಂತ ಕೆಲಸದ ಬಗ್ಗೆ ನಾನು ಎಂದಿಗೂ ಬೇಜಾರಾಗಲ್ಲ. ಆದ್ರೆ ಹಲ್ಲು ನೋವೂ :-) ಅದರ ಜೊತೆ ಡಾಕ್ಟರ್ ಬೇರೆ ಹೆದರಿಸಿದ್ದಾರೆ   ಗಮ್ ಸರ್ಜರಿ ಆಗಬೇಕು ಅಂತ. ಇಲ್ಲದೆ ಇದ್ರೆ ಕಷ್ಟ ಅಂತ .. ಇಷ್ಟೆಲ್ಲಾ ಕಷ್ಟ ನನಗೆ ಬರಬೇಕಾ ಹಾಯ್ ಹಾಯ್ ;-)

@ ಸ್ಟಾರ್ ವಾಹಿನಿಯಲ್ಲಿ ಪ್ರತಿದಿನ ಹತ್ತು ಗಂಟೆಗೆ ಒಂದು ಧಾರಾವಾಹಿ ಬರುತ್ತದೆ. ಅದರ ಹೆಸರು ಎವರೆಸ್ಟ್ . ಆ ಧಾರಾವಾಹಿಯಲ್ಲಿ ಮಾಡಿರುವ ಕಲಾವಿದರು ಚಿತ್ರವಿಚಿತ್ರವಾದ ಅಲಂಕಾರ ಮಾಡಿಕೊಂಡಿರುವ ಕಲಾವಿದರು ಥರ ಇಲ್ಲ. ಹಳೆಯ ಚಿತ್ರಗಳು ಅಂದ್ರೆ ಎಂಬತ್ತರ ದಶಕದ  ಪ್ರಶಸ್ತಿ ಸಿನಿಮಾಗಳಂತೆ. ಆದರೆ ಆ ಧಾರವಾಹಿ ತುಂಬಾ ಭಿನ್ನವಾಗಿದೆ. ತಪ್ಪದೆ ನೋಡುವಂತೆ ಇದೆ. ಆಕಾಶ್, ಅರ್ಜುನ್, ಅಂಜಲಿ ಪಾತ್ರಗಳು ಸಕತ್ತಾಗಿದೆ. ನೋಡ್ರಿ ಸಚ್ಚಿಮುಚ್ಚಿ ಚಂದ ಇದೆ. 

@ ಕಳೆದವಾರ ಒಂದು ವಿಷಯದಲ್ಲಿ ಅತ್ಯಂತ ಖೇದ ಆಯ್ತು, ಮತ್ತೊಂದು ಸಂಗತಿ ಬಗ್ಗೆ ಖುಷಿ ಆಯ್ತು. ಪಾಪದ ಹೆಣ್ಣುಮಗಳು ಗೌಹರ್ ಗೆ  ಕೆನ್ನೆಗೆ ಹೊಡೆ ದದ್ದು ಕಂಡಾಗ ಸಕತ್ ಬೇಜಾರಾಯ್ತು.ಈಟೀವಿ ಕನ್ನಡದಲ್ಲಿ ಬಂದ ನ್ಯೂಸ್  ನೋಡಿದ ತಕ್ಷಣ ಹಿಂದಿ ವಾಹಿನಿಗಳತ್ತ ಹೋಗಿ ನೋಡಿದಾಗ ಮತ್ತಷ್ಟು ವಿವರ ಬರ್ತಾ ಇತ್ತು. ಛೆ ಎಂತಹ ಅನ್ಯಾಯ ! ಆಕೆಯನ್ನು ಫ್ಯಾನ್ಸ್ ನೋಡೋದು ಧರ್ಮದ ಕಾರಣದಿಂದ ಅಲ್ಲವೇ ಅಲ್ಲ , ಆಕೆಯ ಮ್ಯೂಸಿಕ್ ಚಾನೆಲ್ ನಲ್ಲಿ  ಇದ್ದಾಗಿನಿಂದ ಕಂಡ ವೀಕ್ಷಕರಿಗೆ ಆಕೆ ಪ್ರತಿಭೆ ಇಷ್ಟ ಆಗಿದೆಯೇ ವಿನಃ ...ಆಕೆ ಎಷ್ಟು ಬಟ್ಟೆ ಧರಿಸುತ್ತಾಳೆ, ಅವಳ ವಯಕ್ತಿಕವಲ್ಲ.  ಏನೇ ಹೇಳಿ ಇದಂತೂ ಅತ್ಯಂತ ಖೇದಕರ ಸಂಗತಿ.
ಆದರೆ ಅದೇ ದಿನ ಬಸ್ ನಲ್ಲಿ ಉತ್ತರ ಭಾರತದ ಹುಡುಗಿಯರು, ಇಲ್ಲಿ  ನಮ್ಮ ಮಂಗಳೂರಿನ   ಬಾಲೆಯರು ರಸ್ತೆಯಲ್ಲಿ  ಪುಂಡು ಪೋಕರಿಗಳಿಗೆ  ಸರಿಯಾಗಿ ಬುದ್ಧಿ ಕಲಿಸಿದ್ದು ... ಆಹಾಹಾ !

@ಕಲರ್ ವಾಹಿನಿಯಲ್ಲಿ ಕಾಮಿಡಿ ವಿತ್ ಕಪಿಲ್ , ಅದರಲ್ಲಿ ಕಪಿಲ್, ದಾದಿ, ಸಿದ್ದು, ಗುತ್ತಿ,ಪಲಕ್, ಅಡುಗೆಯಾತ ಜೊತೆಗೆ   ಜೊತೆ ಸಂಗೀತದ  ಎಲ್ಲ ಎಪಿಸೋಡ್ಗಳು  ಇಷ್ಟ ಆಯ್ತು. ಪ್ರತಿವಾರ  ಕಪಿಲ್ ಯಾರನ್ನು  ಕರಿಸ್ತಾರೆ  ಅನ್ನೋ  ಕುತೂಹಲ  ನನಗೆ. ಆದ್ರೆ ಕಪಿಲ್ ಒಂದು ಎಪಿಸೋಡಲ್ಲು   ಸಿದ್ದು ಅವರ  ವೈಫಿ, ಲೈಫಿಯನ್ನು ಕರಿಸೇ ಇಲ್ಲ ಯಾಕೆ?  ವೈ ದಿಸ್ ಕೊಲವರಿ ಸಿದ್ದು ಜೀ ;-)

@@ ಸಲ್ಮಾನ್ boy ಸಲ್ಮಾನ್ boy  ;-) ಪ್ರತಿವಾರ ಶನಿವಾರ ಬಂದಗಾ ನಮ್ಮ ಅಮ್ಮ ಅಂತೂ ಇವತ್ತು ನಮ್ಮ ಸಲ್ಮಾನ್ ಬರೋ ದಿನ ಅಲ್ವ ಇಷ್ಟ ಪಟ್ಟು ಟೀವಿ ನೋಡ್ತಾರೆ. ಅಮ್ಮಂದಿರೆ ಹಾಗೆ.. ಅವರು ಇಷ್ಟ ಮನದಿಂದ ಇರುತ್ತದೆ.
ನನಗೆ   ಬಿಗ್ ಬಾಸ್ ಪ್ರತಿದಿನದ  ಎಪಿಸೋಡ್  ಗಳನ್ನು ನೋಡೋಕೆ ಸಮಯ ಇಲ್ಲದೆ ಇದ್ರೂ ಶನಿವಾರ- ಭಾನುವಾರ ತಪ್ಪದೆ ನೋಡ್ತೀನಿ. 
ಸಲ್ಮಾನ್ ತಂಗಿ ಅರ್ಪಿತ ಮದುವೆ ಫಿಕ್ಸ್ ಆದ ದಿನದಿಂದ, ಅವರು ಹೈದರಾಬಾದ್ ನಲ್ಲಿ  ಫಲಕ್ ನುಮ ದಲ್ಲಿ ಆಗುವ ಬಗ್ಗೆ ಹೀಗೆ ಸಾಕಷ್ಟು ಸಂಗತಿಗಳನ್ನು ಬರೀತಾನೆ ಇದ್ದೆ ನನ್ನ ಕನ್ನಡ ಪೋರ್ಟಲ್ ನಲ್ಲಿ. ಆ ಮದುವೆ   ಇನ್ನೇನು ಮುಂದಿನವಾರ ಇದೆ ಅನ್ನುವಾಗ ಕನ್ನಡದ ಚಾನೆಲ್ ಸುವರ್ಣ ನ್ಯೂಸ್ ನಲ್ಲಿ ಈ ಮದುವೆ ಬಗ್ಗೆ ಹೇಳುತ್ತಾ.. ಸಲ್ಮಾನ್ ಖಾನ್ ಮದುವೆ ಬಗ್ಗೆ ಸಹ ನಿರೂಪಕಿ ವಿವರಣೆ ಮಾಡ್ತಾ ಇದ್ರೂ.  ನಿರೂಪಣೆಯಲ್ಲಿ   ಸಲ್ಮಾನ್ ಖಾನ್ ಹಿಂದೆ ಸಾವಿರಾರು ಫ್ಯಾನ್ಸ್ ;)  ಇದ್ದಾರೆ  ಮದುವೆ ಆಗೋಕೆ ಎಂದು ಹೇಳಿದ್ರು. ಆ ಫ್ಯಾನ್ಸ್ ಇರುವ ಬಗ್ಗೆ ವಿವರಿಸ್ತಾ ಇದ್ರೂ.. ಸಲ್ಮಾನ್ ಒಂದು ರಿಕ್ವೆಸ್ಟ್ ಆ ಸಾವಿರಾರು ಹುಡುಗೀರ   ಜೊತೆ ಇರುವ ಸೆಲ್ಫಿ ಯನ್ನು ಬಿಗ್ ಬಾಸ್ ನಲ್ಲಿ ತೋರಿಸಪ್ಪ... ನಾವು ನೋಡ್ತೀವಿ ;-)

ರಂಗಣ್ಣ ಅಂದ್ರೆ !!


ಕೆಲವು ಸಂಗತಿಗಳು ಮನದಲ್ಲಿ ಒಂಥರಾ ಭಾವನೆಗಳನ್ನು ಹೊರ ಹೊಮ್ಮಿಸ್ತಾ ಇರುತ್ತದೆ. ಅದನ್ನು ಯಾವ ರೀತಿ ವ್ಯಕ್ತ ಮಾಡ ಬೇಕೋ ಗೊತ್ತೇ ಆಗಲ್ಲ. ಆದರು ಎಲ್ಲ ಭಾವನೆಗಳನ್ನು ಹುದುಗಿಸಿಕೊಂಡು ಬದುಕ್ತೀವಿ.. ಲೈಫ್ ಅಂದ್ರೆ ಇಷ್ಟೇ ಅನ್ನಿಸುತ್ತೆ.
ಕಿರುತೆರೆಯಲ್ಲಿ ತಮ್ಮ ಧ್ವನಿ ಮೂಲಕ ಬಾಲಕೃಷ್ಣ ಕಾಕತ್ಕರ್ ಎಲ್ಲರ ಗಮನ ಸೆಳೆದಿದ್ದರು. ವಯಕ್ತಿವಾಗಿ ಏನೇ ಇರಲಿ ಆದರೆ ಬದುಕಲ್ಲಿ ಅವರು ಪಟ್ಟ ಪಾಡು ಕೇಳಿ, ಓದಿ ತುಂಬಾ ಒಂಥರಾ  ಆಯ್ತು. ಹೀಗೆ ಅವರು ಸಾಯುವ ದಿನ ನನ್ನ ಪಾಡಿಗೆ ನಾನು ಆಫೀಸಲ್ಲಿ ಬರೀತಾ ಇದ್ದೆ. ಮೆಸೇಜ್ ಬಂತು ಹಿರಿಯ ಜರ್ನಲಿಸ್ಟ್ ಒಬ್ಬರಿಂದ. ಕಾಕತ್ಕರ್ ಸತ್ತು ಹೋದನಂತೆ...! ಒಂದು ಕ್ಷಣ ಯಾವ ರೀತಿ ರಿಸೀವ್ ಮಾಡಿಕೊಳ್ಳ ಬೇಕೋ ಗೊತ್ತೇ ಆಗಲಿಲ್ಲ. 
ಆಗ ನಾನು ಛೆ ಅಯ್ಯೋ ಪಾಪ ಅಂತ ಮೆಸೇಜ್ ಮಾಡಿದೆ. ತಕ್ಷಣ ನೀ ನೋಬ್ಬಳೆ ಪಾಪ ಅಂತಾ ಇರೋದು ಬೇರೆಯವರೆಲ್ಲ ನಿನ್ನ ರೀತಿ ಅನ್ನಲಿಲ್ಲ, ಬಿಡು ಅದು ನಿನ್ನ ಒಳ್ಳೆ ಗುಣ ಅಂದ್ರು.  ಅದು ಸಹ ಮನದಲ್ಲಿ ಕೊರಿತಾ ಇತ್ತು. ಸತ್ತ ಬಳಿಕವು ಆ ವ್ಯಕ್ತಿಯನ್ನು ದ್ವೇಷಿಸುವುದಾದರೆ ಆ ವ್ಯಕ್ತಿ ನಿಜಕ್ಕೂ ಎಂತಹ ಗುಣ ಅಥವಾ ವರ್ತನೆ ಹೊಂದಿರ ಬಹುದು ಅಂತ ಅನ್ನಿಸಿತ್ತು. ಆದರೆ ಆ ಸತ್ತ ಜೀವದ ಬಗ್ಗೆ ಪತ್ರಕರ್ತ ಮಿತ್ರರು ತುಂಬಾ ಚಂದ ಬರೆದಿದ್ದರು. ಅವರ ಮೆಚ್ಚಿನ ಕಾಕಗೆ ಸರಿಯಾದ ರೀತಿಯಲ್ಲಿ ನಮನ ಸಲ್ಲಿಸಿದ್ದರು. 
ಸಾವಿನ ಮುಂಚೆ ಏನೇ ಇರಲಿ ಸತ್ತ ಬಳಿಕ ಕನಿಷ್ಠ ಒಂದು ಒಳ್ಳೆ ಮಾತು ಹೇಳಿದರೆ ಸಾಕು ಎನ್ನುವ ಮಂದಿ ಬದುಕಿರುವಾಗ ಒಂದಷ್ಟು ಒಳ್ಳೆ ಮಾತು ಹೇಳಿದರೆ  ? ಅದೇ ನಾವು ಮಾಡಲ್ಲ. 
@ ಲೈಫ್ ಸೂಪರ್ ಗುರು ರಿಯಾಲಿಟಿ ಷೋ ಪ್ರಸಾರ ಆಗ್ತಾ ಇದೆ ಜೀ ಕನ್ನಡ ವಾಹಿನಿಯಲ್ಲಿ ಗುರು ಮತ್ತು ಲೂಸ್ ಮಾದ ಜೋಡಿ ಜೊತೆಯಲ್ಲಿ ಸೀನಿಯರ್ ಮತ್ತು ಜೂನಿಯರ್ ಸಿಟಿಜನ್ ಇಂಡಿಯಾ ಆಟಗಳು ಹೆಚ್ಚು ಗಮನ ಸೆಳೆಯದೆ ಇದ್ರೂ ಕಳೆದ ವಾರದ  ಎಪಿಸೋಡ್ ಸ್ವಲ್ಪ  ಖುಷಿ ಕೊಡ್ತು. ಸ್ಪರ್ಧಿಗಳಾಗಿರುವ ಹಿರಿಯ ನಾಗರೀಕರು ಈಗಿನವರಂತೆ ಡೈನಮಿಕ್ ಆಗಿ ಡ್ರಸ್ ಧರಿಸಿ.. ತುಂಟತನದ ಮಾತುಗಳನ್ನು ಆಡುತ್ತ.. :-) 
ಈ ಕಾರ್ಯಕ್ರಮವನ್ನು ಕೇವಲ ಎಂಜಾಯ್ ಮಾಡುವ ದೃಷ್ಟಿಯಿಂದ ವೀಕ್ಷಿಸಿದರೆ ಒಳಿತು. ಇತ್ತೀಚಿಗೆ ಪ್ರಸಾರವಾದ ಷೋ ನಲ್ಲಿ ಒಂದು ಜೋಕ್ ಸೆಳೆಯಿತು. ಮೇಸ್ಟ್ರು ಕೇಳ್ತಾರೆ ಕೈ ಕೆಸರಾದರೆ  ಬಾಯಿ ಮೊಸರು ಎಂದು ಹೇಳ್ತಾರೆ ಆಗ ತಕ್ಷಣ ಉತ್ತರ ನೀಡಿದ ಹಿರಿಯ ನಾಗರೀಕ ಸ್ಟೂಡೆಂಟ್  ಕೈ ಕೆಸರಾದರೆ ತೊಳೋಕೋ ಬೇಕು  ಕೈ  ಕೊಳೆಯಾಗಿರುತ್ತೆ ಎಂದು ಉತ್ರ ನೀಡಿದರು!
ಇಂತಹ ಬಿಂದಾಸ್ ಉತ್ರಗಳು ಕನ್ನಡದಲ್ಲಿ ಸಾಧು ಕೋಕಿಲ, ತೆಲುಗಲ್ಲಿ ಬ್ರಹ್ಮಾನಂದಂ  ಮತ್ತು ಅಲಿ ನೀಡೋದು.. ಖುಷಿ ಆಯ್ತು.  ಇನ್ನು ನನಗೆ ಆ ಕಾರ್ಯಕ್ರಮ ಅರ್ಥ ಆಗಿಲ್ಲ, ಆದರು ಸಹಿತ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಇದ್ದೇನೆ..
@@ ಥಟ್ ಅಂತ ಹೇಳಿ ಕನ್ನಡದ ಕಿರುತೆರೆಯಲ್ಲಿ ಅತ್ಯದ್ಭುತವಾದ ಕಾರ್ಯಕ್ರಮ. ಪುಸ್ತಕಗಳು, ಮಾಹಿತಿಗಳು ಮತ್ತು ನಾ . ಸೋಮೇಶ್ವರ ಮೇಸ್ಟ್ರು ಎಲ್ಲವು ಚಂದನ ವಾಹಿನಿಯ ಆ ಸಮಯವನ್ನು ಸುಂದರವಾಗಿಡುತ್ತದೆ. ನನಗೆ ಇನ್ನು ವಿಸ್ಮಯ ಆಗಿರುವ ಸಂಗತಿ ಎಂದರೆ ಗೃಹಿಣಿಯರು ಅಂದ್ರೆ ಕೇವಲ ಕೆಲವೇ ಬಗೆಯ ಧಾರಾವಾಹಿಗಳಿಗೆ ಆದ್ಯತೆ ನೀಡುತ್ತಾರೆ ಎನ್ನುವ ಕೆಟ್ಟ ಹೆಸರನ್ನು ಹೊಂದಿದ್ದಾರೆ. ಆದರೆ ಬಹುತೇಕರು ಇಷ್ಟ ಪಡುವ ಕಾರ್ಯಕ್ರಮ ಥಟ್ ಅಂತ ಹೇಳಿ. 
ಮುಖ್ಯವಾಗಿ ಕೆಲವು ಬಾರಿ ಬರುವ ಸ್ಪರ್ಧಿಗಳನ್ನು ಕಂಡಾಗ ಮೇಸ್ಟ್ರ ಸ್ಥಿತಿಗೆ ಅಯ್ಯೋ ಅಂತ ಅನ್ನಿಸಿಬಿಡುತ್ತದೆ. :-)

ಸಾಮಾನ್ಯವಾಗಿ ನಾನು ಮುಖ್ಯವಾಗಿ ನಮ್ಮ ಅಮ್ಮ ಶುಕ್ರವಾರ ಥಟ್ ಅಂತ ಹೇಳಿ ಕಾರ್ಯಕ್ರಮ ವೀಕ್ಷಿಸುತ್ತಾರೆ. ಅಂದು ವಿಶೇಷ ಅತಿಥಿಗಳು   ಯಾರು ಎನ್ನುವ ಕುತೂಹಲ ಅವರಿಗೆ.  ನಿಜವಾಗಿ ಎಷ್ಟೊಂದು ಒಳ್ಳೊಳ್ಳೆ ಪ್ರತಿಭೆಗಳು ಕಂಡು ಬರ್ತಾರೆ. ಈ ವಿಷಯದಲ್ಲಿ ಖಂಡಿತ ಚಂದನ ವಾಹಿನಿಗೆ ಧನ್ಯವಾದ. 
@ ದುನಿಯಾ ವಿಜಯ್ ದಾಂಪತ್ಯ ಮುರಿಯದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆದಾಗ ಹೆಚ್ಚು ಖುಷಿ ಅನ್ನಿಸಿತ್ತು. ಯಾಕೇಂದ್ರೆ ಆ ಹೆಣ್ಣುಮಗಳ ಅತಂತ್ರತೆ, ಆ ಸುದ್ದಿ ಬರೆಯುವಾಗ ಪ್ರತಿಬಾರಿ ನನಗೆ ಬೇಸರ ಆಗ್ತಾ ಇತ್ತು. ವಿಜಯ್ ಸಂಸಾರ ಉಳಿಸುವಲ್ಲಿ ಪಬ್ಲಿಕ್ ಟೀವಿ ರಂಗಣ್ಣ ನ ಪಾತ್ರ ಜಾಸ್ತಿ ಇತ್ತು ಅನ್ನೋ ಸುದ್ದಿ ಕೇಳಿದಾಗ ಸಕತ್ ಖುಷಿ ಆಯ್ತು.. ರಂಗಣ್ಣ  ಅಂದ್ರೆ ಸೂಪರ್ ರಂಗ :-)

ಕಸ ಗುಡಿಸಿ


ಪೂರ್ಣ ವಿರಾಮ ಇಲ್ಲದ  ಒಂದು  ವಾಕ್ಯವನ್ನು  ನಾವು ಹೇಗೆ  ಊಹಿಸಲಾರೆವೋ,  ಅದೇ ರೀತಿ ಸಾವು ಸಹ ಬದುಕಲ್ಲಿ ಅತ್ಯಗತ್ಯ. ಕಮಲ್ ಹಾಸನ್ ಹಾಗಂತ ಕಮಲ್ ಹಾಸನ್ ಹೇಳಿದ್ದಾರೆ. ಅವರ ಪಾಪನಾಸನಂ ಸಿನಿಮಾ ಶೂಟಿಂಗ್ ಸಮಯದಲ್ಲಿ ತುಂಬಾ ನ್ಯಾಚುರಲ್ ಆಗಿ ಬರ ಬೇಕೆಂದು ಮಾಡಿಕೊಂಡ ಅವಾಂತರದಿಂದ ಅವರ ಉಸಿರಾಟಕ್ಕೆ ತೊಂದರೆ ಆಗಿತ್ತಂತೆ. ಹಾಗಂತ ಓದಿದ್ದೆ. ಬಿಡಿ ಆ ವಿಷ್ಯ
ಈ ಸಾವಿನ ಬಗ್ಗೆ ಕುತೂಹಲ ಇದ್ದೆ ಇರುತ್ತದೆ ಎಲ್ಲರಿಗು. ಆದರೆ ಅದು ಬರುವಂತೆ ಬಂದರೆ ಚಂದ ಅಷ್ಟೇ. ಸ್ಟಾರ್ ವಾಹಿನಿಯ ಅತ್ಯದ್ಭುತ ಕಾರ್ಯಕ್ರಮಗಳಲ್ಲಿ ಒಂದಾದ ಸತ್ಯಮೇವ ಜಯತೆಯಲ್ಲಿ ಆತ್ಮಹತ್ಯೆ ಬಗ್ಗೆ ಮಾತನಾಡಿದ ಆಮೀರ್ ಖಾನ್ , ಅದರಿಂದ ನೊಂದ ಕುಟುಂಬಗಳ ಬಗ್ಗೆ ಹೇಳುತ್ತಾ ರಸ್ತೆ ಅಪಘಾತದಲ್ಲಿ ಮರಣಿಸುವವರ ನಂತರದ ಸ್ಥಾನ ಈ ಹರೆಯದ ಆತ್ಮಹತ್ಯೆಯ ಪ್ರಕರಣಗಳು ಇವೆ ಎನ್ನುವ ಮಾತು ಸಕತ್ ಬೇಜಾರು ಅನ್ನಿಸಿತು. ಆಮೀರ್  ಇಂತಹ ಕಾರ್ಯಕ್ರಮಕ್ಕೆ ಸೂಕ್ತ ನಿರೂಪಕ ಸಚ್ಚಿ !

ನಾನು ಕಳೆದ ವರ್ಷ ಒಂದು ಲೇಖನ ಓದಿದ್ದೆ. ಅದರಲ್ಲಿ ಹೀಗೆ ಒಬ್ಬ ಹರೆಯದ ಹುಡುಗ ಆತ್ಮಹತ್ಯೆ  ಮಾಡಿಕೊಳ್ಳಲು ನಿರ್ಧಾರ ಮಾಡಿದನಂತೆ. ಆದರೆ ಆತ ತಾನು ಸಾಯುವ ಸಂಗತಿಯನ್ನು ತನ್ನ ಎಲ್ಲ ಮಿತ್ರರಿಗೆ ಎಸೆಮೆಸ್ ಮೂಲಕ ಹೇಳಿದನಂತೆ. ಯಾರಿಗೂ ಆತನನ್ನು ಉಳಿಸಲು ಸಾಧ್ಯವಾಗದ ಪರಿಸ್ಥಿತಿ. ಆಗ  ಸಾಯುವುದಕ್ಕಿಂತ ಬದುಕು ಸಾಧಿಸು ಎನ್ನುವ ಅರ್ಥ ಹೊಂದಿರುವ   ಒಂದು ಎಸೆಮೆಸ್  ಈತನ ಬದುಕಿನ ಚಿತ್ರ ಬದಲಾಯಿಸುತ್ತದೆ. ಸಾರಿ ಆ    ಲೇಖನ ಅರ್ಧಂಬರ್ಧ ನೆನಪಿದೆ.. ಆದರೆ ಆಮೀರ್ ಈ ಸಂಗತಿ  ಹೇಳುವಾಗ ನನಗೆ ಪದೇಪದೇ ನೆನಪಿಗೆ ಬಂತು.. ತುಂಬಾ ಚಂದದ ಕಾರ್ಯಕ್ರಮ ಪೀಕೆ ಆಮೀರ್ :-) .

@ ಶಾರುಖ್ ಖಾನ್ ಬಗ್ಗೆ ಬರೆಯುವಾಗ ನನಗೆ ಸದಾ ಅವರು ಬೆಳೆದ   ಪರಿ ನೆನಪಿಗೆ ಬರುತ್ತದೆ. ಈಗ ಜೀ ಹಿಂದಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಡ್ಯಾನ್ಸ್ ಕಾರ್ಯಕ್ರಮದ ಶಾರುಖ್, ಫೌಜಿ , ಚಮತ್ಕಾರ್ ....ಅನೇಕ ಸಂಗತಿಗಳು ಶಾರುಖ್ ಬಗ್ಗೆ ಓದುವಾಗ ಆಗೆಲ್ಲ ಸಾಧಕರ  ಬದುಕೆಷ್ಟು ಕಷ್ಟಕರ ಅನ್ನಿಸಿತ್ತು. ಆಗ ಅಷ್ಟೇ ನನ್ನ ಯೋಚನಾ ಮಟ್ಟ  ಇದ್ದುದು..ಇತ್ತೀಚೆಗೆ ಅಂದ್ರೆ ಹ್ಯಾಪಿ ನ್ಯೂ ಇಯರ್ ನಲ್ಲಿ ಶಾರುಖ್ ತಮ್ಮ  ಬದುಕನ್ನು ಹಂಚಿಕೊಂಡಿದ್ದರು ಮಾಧ್ಯಮಗಳ ಮುಂದೆ..ಅದರಲ್ಲಿ ತಮ್ಮ ಮಕ್ಕಳು ಯಾವರೀತಿ ಆರಂಭಿಕ ಹಂತದಲ್ಲಿ ತಮ್ಮ ಫ್ಯಾನ್ಸ್ ಪ್ರೀತಿ ಕಂಡು ಹೆದರುತ್ತಿದ್ದರು. ತಮ್ಮ ವಿರಾಮದ ವೇಳೆಯಲ್ಲಿ ಶಾರುಖ್  ಬುಕ್ ಓದುವ ವಿಷಯ ಎಲ್ಲ ಎಲ್ಲ...! ನಮ್ಮ ಮನೆಯಲ್ಲಿ ಶಾರುಖ್ ಫ್ಯಾನ್ ಕ್ಲಬ್ ಸಹ ಇದೆ :-) ಅದರ ಮೆಂಬರ್ ಗಳು ಒಂದಷ್ಟು ಚಂದದ ಬಾಲಕಿಯರು :-)

 ನನಗೆ ಶಾರುಖ್ ಅವರ ಬದುಕಲ್ಲಿ ಅಬ್ರಾಂ ಹುಟ್ಟಿದಾಗ ಆದ ಗಲಾಟೆ ನೆನಪಿಸಿಕೊಂಡರೆ ಬೇಸರ ಎಂದೆನಿಸುತ್ತದೆ. ಸೂಪರ್ಸ್ಟಾರ್ ಆದ ಮಾತ್ರಕ್ಕೆ ಅವರು ತಂದೆ ಅಲ್ವೇ .. ಅವರಿಗೂ ಭಾವನೆಗಳು ಇರಲ್ವೆ.. !
ಎನಿವೆಸ್ ಮಗು ಮಾತ್ರ ಸಕತ್ ಇದೆ  :-)


@  ಕಲರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ನಲ್ಲಿ ಹಿರಿಯ ಕಲಾವಿದ ಪುನೀತ್ ಇಸ್ಸಾರ್ ದುರ್ಯೋಧನನಂತೆ ಆ ಷೋ ಅರ್ಧದಲ್ಲಿ ಹೋದದ್ದು ಬೇಸರ ಅನ್ನಿಸಿತು. ಸಾಮಾನ್ಯವಾಗಿ ಇಂತಹ ಹಿರಿಯ ಕಲಾವಿದರ ಬಗ್ಗೆ ಹೆಚ್ಚಿನ ಗಮನ ಇರುತ್ತದೆ. ಆದರೆ ಅವರೇ ತಪ್ಪು ಮಾಡಿ ಹೀಗೆ ಹೋಗ್ತಾರೆ. ಅದು ಬಿಡಿ ಕಳೆದವಾರ ಅತಿ ಹೆಚ್ಚು ಜನರು ಪೊರಕೆ ತೆಗೆದುಕೊಂಡಿದ್ದರು. ಸಲ್ಮಾನ್ BOY  ನೀವು ಸಹ ಕಸ ಗುಡಿಸಿ ಬಿಟ್ಟಿರೆ....  ಆಹಾ ಆಹಾ ಮತ್ತು ಆಹಾ.. ಆದರು  ಮೋದಿಜಿ ಅವರು ಸ್ವಚ್ಛ ಭಾರತ ಕನಸು ನನಸು ಮಾಡುವ ಮಂದಿ ಹೀಗೆ ಒಟ್ಟಾಗಿ ಕಸ ಗುಡಿಸುವುದು  ನನಗೆ ಸಕತ್ ಮಜಾ ನೀಡಿದೆ. ನಾನು ಕಂಡಂಗೆ ಯಾರೇ ಆಗಲಿ ಹೀಗೆ ಒಟ್ಟಿಗೆ ಕಸ ಗುಡಿಸಲ್ಲ . ಆ ರಸ್ತೆ, ಅಥವಾ ಒಂದು ಭವನ ಅಥವಾ ಪಾರ್ಕ್ ಅಥವಾ .. ಅಥವಾ ರಾಜಕಾರಣಿಗಳು ಬರ್ತಾರೆ ಅಂದಾಗ ಹೀಗೆ ಒಟ್ಟಿಗೆ ಕಸ ಗುಡಿಸಿ ತಾವು ಕೆಲಸ ಮಾಡಿದ್ದೀವಿ ಅಂತ ತೋರಿಸುತ್ತಾರೆ  ಬೀದಿ ಕಸ ಗುಡಿಸುವ ಮಂದಿ.. ಆದರೂ ಕಸದ ಬಗ್ಗೆ ನಿಮಗೆಲ್ಲರಿಗೂ  ಗಮನ ಬಂದಿದ್ದು ಖುಷಿ ಕೊಡ್ತು. ಅದೇರೀತಿ ಅಕ್ಕಿನೇನಿ ನಾಗಾರ್ಜುನ, ಕನ್ನಡದ ಕಿಚ್ಚ ಸುದೀಪ್ ಈ ಕೆಲ್ಸಕ್ಕೆ ಮುಂದಾಗಿದ್ದಾರೆ.ಒಳ್ಳೆಯ  ಕೆಲಸ .. ಆದರೆ  ಮತ್ತೆ ಯಾವಾಗ ಸಲ್ಮಾನ್ Boy  ಕಸ ಗುಡಿಸೋದು ;-)

ಪ್ರಾಪರ್ಟಿ



ಅತ್ಯಂತ ಖೇದ ಅನ್ನಿಸುವ ಸುದ್ದಿ ಮಕ್ಕಳ ಮೇಲೆ ಮಾಡುವ ಅತ್ಯಾಚಾರ. ಅದರಲ್ಲೂ ರೆಪ್ಯು ಟೆಡ್ ಶಾಲೆಗಳಲ್ಲಿ ಆ ರೀತಿಯ ವಾತಾವರಣ ಇದ್ದಾರೆ ಕೆಳಸ್ತರದ ಮಕ್ಕಳು ಯಾವರೀತಿ ಬದುಕಲು ಸಾಧ್ಯ ಅನ್ನುವ ಪ್ರಶ್ನೆ ಉದ್ಭವ ಆಗುತ್ತದೆ  . ಮುಖ್ಯವಾಗಿ ಇಂತಹ ಪ್ರಕರಣಗಳನ್ನು ಆ ಗಳಿಗೆ ತೋರಿ ಸುಮ್ಮನಾಗುವ ಮಾಧ್ಯಮಗಳು ಆನಂತರ ಮತ್ತೊಂದು ಪ್ರಕರಣ ಆಗುವ ತನಕ ಇಂತಹ ಸಮಸ್ಯೆಗಳು ನಮ್ಮ ಸಮಾಜದಲ್ಲಿ ಕಳೆಯಂತೆ  ಬೇರೂರಿದೆ ಕಿತ್ತು ಬಿಸಾಡ ಬೇಕು ಎನ್ನುವ ಅಂಶದ ಕಡೆಗೆ ಗಮನ ನೀಡ ಬೇಕು.ಪೂರಕ ವಾತಾವರಣದ ಸೃಷ್ಟಿ ಆಗ ಬೇಕು. ಆದರೆ ಮಾಧ್ಯಮವನ್ನು ನಡೆಸುವವರು ಮನುಷ್ಯರೆ ಅಲ್ವೆ ? ಅವರು ತಮ್ಮ ಲಿಮಿಟ್ ನಲ್ಲಿ ಏನಾಗುತ್ತದೆಯೋ ಅದನ್ನು ಮಾಡುತ್ತಾರೆ.


@ ಸಾಮಾನ್ಯವಾಗಿ ಟೀವಿ ಟಾಕ್  ಷೋ ಗಳನ್ನೂ ಪ್ರಸಿದ್ಧರು ಮಾಡುತ್ತಾರೆ. ಆಗ ಎಲ್ಲರು ಅವರೆಷ್ಟೇ ತಪ್ಪು ಮಾಡಲಿ ಒಪ್ಪಿಕೊಂಡು ಬಿಡ್ತಾರೆ. ಅದು ಸಾಮಾನ್ಯ ಸಂಗತಿ. ಆದರೆ ಪ್ರಸಿದ್ಧರ ಮಕ್ಕಳು ಇಂತಹ ಸಾಹಸಕ್ಕೆ ಕೈ ಹಾಕಿದಾಗ ಜನರು ಅವರ ಬಗ್ಗೆ ಅಭಿಪ್ರಾಯ ಹೇಳೋಕೆ ಹಿಂದೇಟು ಹಾಕ್ತಾರೆ. ಅದು ಅವರ ಬೆಳವಣಿಗೆಗೆ ಅಡ್ಡಗಾಲು ಅಂತ ನಾನು ನಂಬುತ್ತೀನಿ. ಭಾವನ ಬೆಳಗೆರೆ ವಿಷಯದಲ್ಲೂ ಸಹಿತ ಹಾಗೆ ಆಗಿದೆ. ಆಕೆಯ ಪ್ರತಿಭೆ ಹೊರ ಬರಲು ಇನ್ನು ಪ್ರಯತ್ನ ಮಾಡ ಬೇಕು. ಯಾಕೇಂದ್ರೆ ಸೋಫಾ ಇದ್ದ ಕಡೆ ಹೋಗಿ ಮಾತಾಡಿ ಬರುವ ಪರಿಪಾಠ ಹೊಂದಿದ್ದಾರೆ ಅದೇ ದೊಡ್ಡ ಸಮಸ್ಯೆ. ನಿರೂಪಣೆಗೆ ಪ್ರಾಪರ್ಟಿ ಸಹ ಹೆಚ್ಚು ಪ್ರಾಮುಖ್ಯತೆ ಗಳಿಸುತ್ತದೆ.. ಉತ್ತಮ ನಿರೂಪಕರಿಗೆ  ಕ್ರೇಜಿ ಸ್ಟಾರ್ ರವಿಚಂದ್ರನ್  ಮನಸ್ಥಿತಿ ಇರಬೇಕು. ಹಾಗೆ ಆದಾಗ ಮಾತ್ರ ಎಲ್ಲವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳ ಬಹುದು. ರವಿಮಾಮ ಅವರ ಹೊಸ ಸಿನಿಮಾದಲ್ಲಿ ಲಿಫ್ಟ್ ಮುಖ್ಯ ಪಾತ್ರಧಾರಿಯಂತೆ.. ನನಗೆ ಆ ಸಂಗತಿ ತಿಳಿದೇ ರೋಮಾಂಚನ ಆಗಿ ಹೋಯ್ತು. ಅವರು ಸಂದರ್ಶನ ಒಂದರಲ್ಲಿ ತನ್ನ ಕಣ್ಣಿಗೆ ಯಾವ ವಸ್ತು ಕಂಡರು ಅದನ್ನು ಹೇಗೆ ಬಳಸಿಕೊಳ್ಳ ಬೇಕು ಎನ್ನುವ ಯೋಚನೆ ಬಂದು ಅದನ್ನು ಕಾರ್ಯರೂಪಕ್ಕೆ ತರುವ ಮನಸ್ಥಿತಿ ಉಂಟಾಗುತ್ತದೆಯಂತೆ. .ಈ ಸಂಗತಿಯನ್ನು ಭಾವನಾಗೆ ಹೇಳ್ತಾ ಇರೋದು ಯಾಕೆ ಅಂದ್ರೆ ಆಕೆಯ ಖಾಸಬಾತ್ ವಿತ್ ಭಾವನ ಬೆಳಗೆರೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳ ಬೇಕಾಗುತ್ತದೆ..ಅಂದಂಗೆ ಈ ಕಾರ್ಯಕ್ರಮ ಕಸ್ತೂರಿ ವಾಹಿನಿಯಲ್ಲಿ ಪ್ರಸಾರ ಆಗುತ್ತದೆ. ಭಾವನ ಅಕ್ಕ ಚೇತನ ನನ್ನ ಎಫ್ಬಿ ಗೆಳತಿ..ಆಗಾಗ ತನ್ನ ಮನದ ಭಾವನೆಗಳನ್ನು ಬರೀತಾ ಇರ್ತಾರೆ ಸಕತ್ ಇಷ್ಟ ಆಗುತ್ತೆ ಓದೋಕೆ  ನನಗೆ.ಮತ್ತೊಂದು ವಿಷ್ಯ ಭಾವನ ಇದು ನನ್ನ ಅಭಿಪ್ರಾಯ ಮಾತ್ರವಲ್ಲ ಬಹುತೇಕರದ್ದು! ಮತ್ತೊಂದು ಸಂಗತಿ ದೊಡ್ಡಣ್ಣನಂತಹ   ಹಿರಿಯರ ಮುಂದೆ ಕಾಲು ಮೇಲೆ ಕಾಲು ಹಾಕಿಕೊಂಡು ಮಾತಾಡೋದು ಕಂಡಾಗ ಯಾರಿಗೂ ಆಪ್ತ ಆಗಲ್ಲ !!