ಏಕಾಂಗಿ !

Image result for purple flowers
When you are alone, mind your thought.
When you are with friends, Mind your tongue.
When you are angry, mind your temper. Silence is the best remedy. 
When you are amidst a group, mind your behavior.
When you are in trouble, mind your emotions.
When God starts blessing and you are making it, Mind your Ego. Be submissive.
TO LIVE IS THE RAREST THING ON THE EARTH . MOST PEOPLE EXISTS. THAT'S THE PROOF. THAT'S ALL.

ಎಷ್ಟು ನಿಜವಾದ ಮಾತುಗಳು ಅಲ್ವೇ! ಗುರುಲಿಂಗ ಸ್ವಾಮಿ ಅವರು ಎಫ್ ಬಿ ಮಿತ್ರರು, ಪ್ರತಿದಿನ ಮುಂಜಾನೆ ನಾನು ಅವರು ಕೋಟ್ ಗಳನ್ನು ಓದಲು ಹಾಗೂ ಅವರು ಕೋಟ್ ಜೊತೆಯಲ್ಲಿ ಹಾಕಿದ ದೇವರ ಪಟವನ್ನು ನೋಡಲು ಇಷ್ಟ ಪಡ್ತೀನಿ. ಅದು ನನ್ನ ಬದುಕಿನ ಭಾಗವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ನನಗೆ ಅಪಾರವಾದ ಮಿತ್ರವಲಯ ಇದೆ. ಅವರಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಇರುವವರು, ಅದೇರೀತಿ ಸಾಮಾನ್ಯರು. ಎಲ್ಲರು.. ಪ್ರತಿಯೊಬ್ಬರೂ, ಒಳ್ಳೆಯ ಮನಸ್ಥಿತಿ, ಹಠಮಾರಿಗಳು, ವಾದಿಗಳು, ಪ್ರತಿವಾದಿಗಳು , ಅದೂ ಇದು ಎಲ್ಲರೀತಿಯ ಮನಸ್ಥಿತಿಯವರು  ಇದ್ದಾರೆ . ಇವರೆಲ್ಲರ  ಜೊತೆ ಒಂದಷ್ಟು ಜನರು ಅಸಾಮಾನ್ಯವಾದ ಹಾಸ್ಯ ಪ್ರಜ್ಞೆ ಹೊಂದಿರುವವರು. ಅವರಲ್ಲಿ ವಿನಿತ್ ಕುಲಾಲ್ ಅವರು ಒಬ್ಬರು.
ಸದಾ ಹಾಸ್ಯದ ರಸದೌತಣ ನೀಡುವ ವಿನೀತ್ ಹೆಚ್ಚು ಹಿಂದಿ ಜೋಕ್ ಹಾಕ್ತಾರೆ. ಅವರ ಪತ್ನಿ ಬೆಳಗಾಂ ಸಿನಿಯರ್     ಡಿವಿಷನ್  ಸಿವಿಲ್  ಜಡ್ಜ್ .  ಬನ್ನಿ ಮೇಡಂ ಬೆಳಗಾಂ ಗೆ ನನ್ನ ಪತ್ನಿ ಹೆಚ್ಚು ಖುಷಿ ಪಡ್ತಾಳೆ ಎಂದು ಹೇಳುವ  ವಿನೀತ್  ಆರೋಗ್ಯಕರ ಜೋಕ್ ಗಳಿಂದ  ಮನಕ್ಕೆ ಉಲ್ಲಾಸ ನೀಡುವ ಸನ್ಮಿತ್ರ .
ಅವರು ಎಲ್ಲಾ  ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಜೋಕ್ ಸುರಿಮಳೆ ಮಾಡ್ತಾ ಇರ್ತಾರೆ, ಅದರಲ್ಲಿ  ಇದು ಒಂದು  ...ಟೀವಿ ಕಾರ್ಯಕ್ರಮಗಳ ಬಗ್ಗೆ ಬರೆದರಿಂದ ಇದನ್ನು ಆಯ್ಕೆ ಮಾಡಿಕೊಂಡು ಅವರ ಅನುಮತಿ ಪಡೆದು ಇಲ್ಲಿ ಅಂಟಿಸಿದ್ದೇನೆ..
She: What are you doing?
He: Game Clash of Clans season 15, and you?
She: Balika vadhu season 10.
ತುಂಬಾ ಧಾರಾವಾಹಿಗಳು ಈ ಮಟ್ಟದಲ್ಲಿರುತ್ತೆ ಅನ್ನೋದು ಸುಳ್ಳಲ್ಲ :)
Image result for purple flowers
@ ತೆಲುಗು ಈ ಟೀವಿ ವಾಹಿಯಲ್ಲಿ ಕಳೆದವಾರ ನಾನು ಪಾಡುತ  ತೀಯಗ ಹಾಡಿನ ಕಾರ್ಯಕ್ರಮದ ಮರು ಪ್ರಸಾರನೋಡಿದೆ. ಅದು ನನ್ನ ಗಮನ ಸೆಳೆದದ್ದು ಯಾಕೇಂದ್ರೆ ಕನ್ನಡದ ಪ್ರತಿಭಾವಂತ  ಸಂಗೀತ ನಿರ್ದೇಶಕ ಮತ್ತು ಹಾಡುಗಾರ .... ಪ್ರವೀಣ್ ಡಿ ರಾವ್  ಅವರು ಅಲ್ಲಿ ಅತಿಥಿ ಆಗಿದ್ದರು. ಅಲ್ಲದೆ , ಜೊತೆಗೆ ಅವ್ರ  ಕಲೆಯನ್ನು ಅಲ್ಲಿನ  ಕಲಾಸಕ್ತರಿಗೆ  ತೋರಿಸಿ  ಮನಗೆದಿದ್ದು . ಅವರು ನೀಡಿದ ಪ್ರದರ್ಶನಕ್ಕೆ ಡಾ. ಬಾಲಸುಬ್ರಮಣ್ಯಂ ಅವರೇ ನಿಂತು ಹರ್ಷೋದ್ಘಾರ ಮಾಡಿದ್ದು ಕಂಡಾಗ ಹೆಚ್ಚು ರೋಮಾಂಚನವಾಯ್ತು. ಪ್ರತಿಭೆ ಇದ್ದರೇ ಅದಕ್ಕೆ ಗಡಿ ಅನ್ನೋದು ಇಲ್ಲ ಅನೋದದಕ್ಕೆ ಇಂತಹ ಅಂಶಗಳು ಮತ್ತೆ ಮತ್ತೆ ಸಾಬೀತು ಮಾಡುತ್ತದೆ .
Image result for purple flowers
@  ಕಲರ್ ವಾಹಿನಿಯಲ್ಲಿ  ಪ್ರಸಾರವಾಗುತ್ತಿರುವ  ಈ ಬಾರಿಯ ಹಿಂದಿ ಬಿಗ್ ಬಾಸ್ ಮಾತ್ರ ಅಬ್ಬೋ ಅನ್ನೋ ಹಾಗಿದೆ. ಒಂದರ್ಥದಲ್ಲಿ ಅದು ಸ್ಪರ್ಧಿಗಳ , ಅವರ ಬಾಯ್ ಫ್ರೆಂಡ್ ಗಳು , ಅವರ ಗರ್ಲ್ ಫ್ರೆಂಡ್ ಗಳ ಔಟಿಂಗ್ ಸ್ಪಾಟ್ ಆಗಿ ಬಿಟ್ಟಿದೆ. ಪಾಪದ ಸಲ್ಮಾನ್  ಮಾತ್ರ ಅಲ್ಲಿ  ಏಕಾಂಗಿ ;-) ಹಾಗೂ ಸೇಫರ್  boy . ಬಿಡಿ ಏಕಾಂಗಿ ಅನ್ನುವ ಪಟ್ಟ ಇದ್ರೂ   ನೆಮ್ಮದಿಯಿಂದ  ಇರಬಹುದು, ಆದರೆ ಈ ವಿಷಯದಲ್ಲಿ  ಅವರ ವಿರೋಧಿಗಳು ಕೆಂಗಣ್ಣು ಬಿಟ್ಟಿದ್ದಾರಂತೆ ಸಲ್ಮಾನ್ ಕಡೆಗೆ.. ಕ್ಯಾ ಯಾ boy  ;-)

ಜಸ್ಟ್ ಎಪ್ಪತ್ತು ವರ್ಷ

Image result for pink flowers
ವಿಶೇಷವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ರೆ ಜನ ನೋಡೇ ನೋಡ್ತಾರೆ. ಅಂತಹ ವಿಶೇಷ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ಜೀ  ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಮತ್ತು ಸಂಗೀತ ಸ್ಪರ್ಧೆ ಕಾರ್ಯಕ್ರಮ. ಪ್ರತಿಬಾರಿಯಂತೆ ಪುಟ್ಟ ಮಕ್ಕಳ, ಅಥವಾ ಸ್ವಲ್ಪ ದೊಡ್ಡ ಹುಡುಗರ  ಸಂಗೀತ ಸ್ಪರ್ಧೆ ಅಲ್ಲ, ಭಿನ್ನವಾದ ಕಾರ್ಯಕ್ರಮ. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಆದ್ರೆ ಇಲ್ಲಿ ಏಳರಿಂದ ಎಪ್ಪತ್ತು ವರ್ಷ ವಯಸ್ಸಿನ ಸ್ಪರ್ಧಿಗಳು  ಇದ್ದಾರೆ. ವಯಸ್ಸಾಯ್ತು ಎಂದು ಮೂಗು ಮುರಿಯುವ ಮಂದಿಗೆ ಸೂಕ್ತ ಉತ್ತರ ನೀಡುವಂತೆ ಮಾಡಿದ ಕಾರ್ಯಕ್ರಮ ಇದಾಗಿದೆ. ಭಿನ್ನ ಅಂತ ಅನ್ನಿಸಿತು.
ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಹಾಗೋ ಅನುಶ್ರೀ ಮಾತ್ರ ಇಲ್ಲಿ ಕಾಮನ್ ಸದಸ್ಯರು :-). ಒಟ್ಟಾರೆ ಎರಡು ಚಂದದ ರಿಯಾಲಿಟಿ ಷೋ ಆರಂಭವಾಗಿದೆ ಜೀ ಯಲ್ಲಿ ..  ಹಾಡಿನ ಸ್ಪರ್ಧಾ ಕಾರ್ಯಕ್ರಮದಲ್ಲಿ ಅತಿ ದೊಡ್ಡ ಸ್ಪರ್ಧಿ ವಯಸ್ಸು ಜಸ್ಟ್ ಎಪ್ಪತ್ತು ವರ್ಷ ಹಾ ...
Image result for pink flowers
@ ಹಿಂದಿ ಜೀ ವಾಹಿನಿಯಲ್ಲಿ ಡ್ರಾಮೆ ಬಾಜ್ ಅತ್ಯಂತ ಖುಷಿ ನೀಡುವ ಕಾರ್ಯಕ್ರಮ. ಎಷ್ಟು ಪುಟ್ಟ ಮಕ್ಕಳು, ಎಷ್ಟೊಂದು ದೊಡ್ಡ ಡೈಲಾಗ್..ಸಕತ್ ಪ್ರತಿಭಾವಂತರು.  ನಿಜಕ್ಕೂ ಇದು ಇಂಡಿಯಾಸ್ ಬೆಸ್ಟ್ ಡ್ರಾಮೆ ಬಾಜ್ ಬಿಡಿ. ಇನ್ನು ಇದು ಆರಂಭಿಕ ಹಂತದಲ್ಲಿದೆ.. ನಿಜವಾದ ಫೈಟ್ ಆರಂಭ ಆಗುವ ಕಾಲ ಹತ್ತಿರದಲ್ಲಿದೆ. ಸಾಜಿದ್, ಸೊನಾಲಿ, ವಿವೇಕ್ , ಸ್ಪರ್ಧಿಗಳಲ್ಲಿ  ಪಾರ್ಥ ಮೆಹ್ತಾ, ಪ್ರೀತ್ ಜ್ಯೋತ್  ಸಿಂಗ್, ವನ್ಷ್ ಮಹೇಶ್ವರಿ ಸಧ್ಯಕ್ಕೆ ಈ ಹೆಸರುಗಳು ನೆನಪಿದೆ.. ರಿತ್ವಿಕ್ ಅವರ ನಿರೂಪಣೆ.. ಎಲ್ಲ ಚಂದ ಇದೆ.. ಅತ್ಯಂತ ಉಲ್ಲಾಸ ನೀಡುವ ಕಾರ್ಯಕ್ರಮ ಇದು.. ಪಕ್ಕ ಮನೋರಂಜನಾ   ಕಾರ್ಯಕ್ರಮ .

ಹಗ್ ಡೇ

Image result for pink flowers
ಕೆಲವು ಕಾರ್ಯಕ್ರಮಗಳು  ಹಳೆಯದಾದರೂ ಸಹ ಮತ್ತೆ ಮತ್ತೆ ನೋಡುವ ಆಸೆ ಆಗುತ್ತೆ. ಪ್ರಸಾರ ಆದಾಗ ತಪ್ಪದೆ ನೋಡುವಂತೆ ಮಾಡುತ್ತದೆ. ಶಂಕರ ವಾಹಿನಿಯ ಭಜನ್ ಸಾಮ್ರಾಟ್ ಅಂತಹ ಒಂದು ಕಾರ್ಯಕ್ರಮ. ಇತ್ತೀಚಿಗೆ ನಾನು ಆ ಕಾರ್ಯಕ್ರಮದ ಆಯ್ದ ಭಾಗಗಳನ್ನು ವೀಕ್ಷಿಸಿದೆ.  ಬೆಸ್ಟ್ ಆಫ್ ಭಜನ್ ಸಾಮ್ರಾಟ್ ಎನ್ನುವ ಹೆಸರಲ್ಲಿ ಹಿರಿಯ ಕಿರಿಯ ಕಲಾವಿದರು ಹಾಗೆನ್ನುವುದಕ್ಕಿಂತ ಸ್ಪರ್ಧಿಗಳು ಭಾಗವಹಿಸಿದ್ದ ಕಾರ್ಯಕ್ರಮ ವೀಕ್ಷಿಸಿದೆ. ಖುಷಿ ಕೊಡ್ತು. ಸ್ವಲ್ಪ ಜಾಸ್ತಿ  ಇಂತಹ  ಹಾಡುಗಳು, ಆಧ್ಯಾತ್ಮಿಕ ಅಂಶಗಳು, ಈ ರೀತಿಯ ಗ್ರೂಪ್ ಹಾಡುಗಳು ಯಾವ ಭಾಷೆ, ಧರ್ಮ ಆಗಿರಲಿ ಇಷ್ಟ ಆಗುತ್ತೆ. ಅದರಲ್ಲಿ ಅಡಗಿರುವ  ಮಾಧುರ್ಯ, ಆ ಭಕ್ತಿ ಪ್ರಾಯಶಃ ಈ ರೀತಿ ಆಕರ್ಷಿಸುವಂತೆ ಮಾಡುತ್ತದೆ. ಒಟ್ಟಾರೆ ಮತ್ತೆ ವಾಹಿನಿಯವರು ಆ  ಕಾರ್ಯಕ್ರಮ ಪ್ರಸಾರ ಮಾಡಿದರೆ ತಪ್ಪದೆ ವೀಕ್ಷಿಸಿ.

@ ಮಾ ತೆಲುಗು ವಾಹಿನಿಯಲ್ಲಿ ಮೀಲೋ ಎವರು ಕೋಟಿಶ್ವರುಡು ರಿಯಾಲಿಟಿ ಷೋ  ನಾಗಾರ್ಜುನ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ನಾನು ಎರಡು ವಾರಗಳ ಹಿಂದೆ ನಾಗ್ ಅವರ ಕಾರ್ಯಕ್ರಮದ ಬಗ್ಗೆ ಬರೆದಿದ್ದೆ. ಅದಾದ ಬಳಿಕ ನನ್ನ ಎಫ್ ಬಿ ವಾಲ್ ನಲ್ಲಿ  ಈ ಕಾರ್ಯಕ್ರಮದ ಬಗ್ಗೆ ಸ್ವಲ್ಪ ಬರೆದಿದ್ದೆ. ಅಲ್ಲಿ ಸಹ ನಾಗ್ ಎಂದೇ ಬರೆದಿದ್ದೆ. ಅದನ್ನು ಓದಿದ ಅನೇಕರು ನಾಗ್ ಅಂದ್ರೆ ಶಂಕರ್ ನಾಗ್ ಅಂತ ಭಾವಿಸಿದ್ದರು. ಎಲ್ಲರಿಗೂ ಖುದ್ದು ಉತ್ತರ ಹೇಳಿದ್ದಾಯ್ತು.
ಕಳೆದ ವಾರದಲ್ಲಿ ಪ್ರಸಾರವಾದ ಈ ಕಾರ್ಯಕ್ರಮದಲ್ಲಿ ಓರ್ವ ಸ್ಪರ್ಧಿ ಬಂದಿದ್ದರು. ಅವರು ಸಾಫ್ಟ್ ವೇರ್  ಇಂಜಿನಿಯರ್ . ಆ ಸ್ಪರ್ಧಿ  ಕಾಗದದ ಮೇಲೆ  ಒಂದು ಚಿತ್ರ ಬರೆದು  ಅದರ ಮೂಲಕ ಮಾತಾಡಿದರು. ಈ ವಿಷಯ ಹೇಗೆ ವಿವರಿಸ ಬೇಕು ಅಂತ ನನಗೆ ಗೊತ್ತಾಗ್ತಾ ಇಲ್ಲ . ಆದರೆ ಆ ಪ್ರತಿಭಾವಂತ ಯುವಕ  ಒಂದು ಮನುಷ್ಯನ ಮುಖ ಬರೆದು, ಅದರ ತುಟಿ ಅಲುಗಾಡಿಸುತ್ತಾ, ಹಲ್ಲು ಬಿಟ್ಟು ಉತ್ತರ ಕೊಡಿಸುತ್ತಿದ್ದ ಟೆಕ್ನಿಕ್, ಅದನ್ನು ಸಿದ್ಧ ಮಾಡಿದ ಆ ವ್ಯಕ್ತಿ ಎಲ್ಲವೂ  ಸುಪರ್ಬ್.. ಅದನ್ನು ವೀಕ್ಷಿಸಿದಾಗ ಮಾತ್ರ ಅರ್ಥ ಆಗುತ್ತೆ..
Image result for pink flowers
@ ಕನ್ನಡ ಬಿಗ್ ಬಾಸ್ ನಲ್ಲಿ   ನಮ್ಮ ಕ್ವಾಟ್ಲೆ  ಸುನಾಮಿ ಸುತಿ ಅಕ್ಕನಿಗೆ ಸಬಾಸ್ ಅಂತ ಹೇಳಿ ಒಳ್ಳೆ ವ್ಯಾಯಾಮ ಮಾಡಿಸಿದ್ದು ಖುಷಿ ಹಾಗು ಮಜಾ ಕೊಡ್ತು..ಸ್ಪೋರ್ಟ್ಸ್  ಟಾಸ್ಕ್ ಗಳು ಭಿನ್ನ ಅಲ್ಲದೆ ಇದ್ರೂ ವೀಕ್ಷಕರಿಗೆ ಮಜಾ ನೀಡ್ತು.. ಪೂzaa  ಮೊದ್ದುತನ, ಹೊಟ್ಟೆಕಿಚ್ಚು ಜನರಿಗೆ ಅರ್ಥ ಆಗಿ ಅಯ್ಯೋ  ಪೂzaa ಎಂದುಕೊಳ್ಳುವಂತೆ ಮಾಡಿದೆ. ನಮ್ಮ ಕನ್ನಡದ ಹುಡುಗಿ- ಹುಡುಗರಿಗೆ ಮಾತೀನಿ, ಹೇತೀನಿ ಅಂತ ಹೆದರಿಸಿ  ಹೆದರಿಸಿ ಕಂಗಾಲು ಮಾಡ್ತಾ ಇರೋದು ಕಂಡ್ರೆ ನಂಗ್ಯಾಕೋ ಹೆದರಿಕೆ ಆಗ್ತಾ ಉಂಟು :-)
ಅಯ್ಯಪ್ಪ ಅವರ ಈ ವಾರದ ಹೆಣ್ಣು ಉಡುಗೆಗಳು  ವಾಹ್  ಲೈಕ್ ಇಟ್ .. ಏನೇ ಹೇಳಿ ಅಯ್ಯಪ್ಪ ಟಾಸ್ಕ್ ವಿಷಯದಲ್ಲಿ ಪಕ್ಕ ಪರ್ಫೆಕ್ಟ್ . ಬಿಗ್ ಬಾಸ್ ಮನೆಯಲ್ಲಿ ಸುಷ್ಮಾ ನೀಟಾಗಿ ಡಿವೈಡ್ ಅಂಡ್ ರೂಲ್ ಮಾಡ್ತಾ, ಕಂಡ ಪುಟ್ಟ ಅಂತ ಹೇಳ್ತಾ ಅಹಹ ಜಾಣೆ  ಎನ್ನುವಂತೆ ಕಾಣ್ತಾರೆ.. ಭದ್ರ ಸುದೀಪ್ ಆಕೆಗೆ ಕೋಪ ತರಿಸದಿರಿ, ಸುಷ್ಮಾ ಹೊಸದಾದ ಒಂದು ಕುಸ್ತಿ ಕಲಿತಿದ್ದಾರೆ ಅಷ್ಟೇ ಆಮೇಲೆ..!!
Image result for question mark icon
 ವೆಲ್ ಸುದೀಪ್ ನನಗೊಂದು ಸಂದೇಹ  ವರ್ಲ್ಡ್ ಸ್ ಬಿಗ್ಗೆಸ್ಟ್ ಹಗ್  ಡೇ  ಜನವರಿ 21 , ಆದರೆ ನೀವು  ಸುಂದರಿ ಸುಧಾರಾಣಿ  ಬಂದಾಗ  ಕಳೆದ ವಾರವೇ ಹಗ್ ಡೇ ಮಾಡಿ ಬಿಟ್ಟಿರಿ ... ? ಹೀಗೂ  ಉಂಟೆ ;-)  ಯಾಕೆ ಹೀಗೆ ಮಾಡಿದಿರಿ  ಎಂದು ಬೇಜಾರಾಗಿದ್ದಾರೆ ನಿಮ್ಮ ಲೇಡಿ ಫ್ಯಾನ್ ಗಳು .. ಹೌದು  ಯಾಕೆ ಯಾಕೆ :-)

ಪ್ರಶ್ನೆ ಪ್ರಶ್ನೆ

Image result for orange flower
ನಿರ್ಭಯ ಕೇಸ್ ನ ಒಬ್ಬ ಅಪರಾಧಿ ಹೊರ ಬರುತ್ತಿರುವ ಸಂಗತಿ ಸಾಕಷ್ಟು ದುಃಖ ನೀಡಿದೆ. 20  ವರ್ಷದ ಅತ್ಯಾಚಾರಿ, ಅಮಾಯಕ ಹೆಣ್ಣು ಮಗಳ  ಸಾವಿಗೆ ಕಾರಣವಾದವ, ಒಂದು ಕುಟುಂಬವನ್ನು ಶಾಶ್ವತವಾಗಿ ದುಃಖಕ್ಕೆ ಈಡು ಮಾಡಿದವರ ಗುಂಪಿಗೆ ಸೇರಿದವ ಈಗ ಆರಾಮವಾಗಿ ಹೊರ ಬರುತ್ತಿದ್ದಾನೆ..!! ಅತ್ಯಂತ ನೋವಿನ ಸಂಗತಿ..ಆ ತಾಯಿಯ ಕಣ್ಣೀರಿಗೆ ಬೆಲೆ ಇಲ್ಲ ..ಛೇ !
ನನ್ನ ಈ ಬ್ಲಾಗ್ ಸಂಪೂರ್ಣವಾಗಿ ಟೀವಿ ಕಾರ್ಯಕ್ರಮಗಳಿಗೆ ಸಂಬಂಧ ಪಟ್ಟಿದುದಾಗಿದೆ. ಅದರಲ್ಲಿ ನಾನು ನೋಡಿದ ಕಾರ್ಯಕ್ರಮಗಳ ಬಗ್ಗೆ ಬರೀತೀನಿ, ಜೊತೆಗೆ ಒಂದಷ್ಟು ಪೂರಕ ಅಂಶಗಳನ್ನು ಬರೆಯುವ ಒಂದು ಅಭ್ಯಾಸ. ಯಾವುದೇ ಕಾರ್ಯಕ್ರಮ ನೋಡಿದ ಬಳಿಕ ಇಷ್ಟ ಆಗ ಬಹುದು, ಆಗದೆ ಇರ ಬಹುದು, ಆದರೆ  ನೋಡಿದ್ದನ್ನು  ಬರೆಯುವ ಅಭ್ಯಾಸ ಇದೆ. ಏನ್ ಮಾಡೋಕು ಆಗಲ್ಲ  :)
ಇತ್ತೀಚಿಗೆ ನಾನು ಸುವರ್ಣ ನ್ಯೂಸ್ ನಲ್ಲಿ ನೇತಾಜಿ ಸುಭಾಶ್ ಚಂದ್ರ ಭೋಸ್ ಅವರು ಅರವತ್ತರ ದಶಕದ ತನಕ ಬದುಕಿದ್ದರು ಎನ್ನುವ  ಅಂಶ  ಅನ್ವಯ ಆಗುವಂತೆ ಕಾರ್ಯಕ್ರಮ ಪ್ರಸಾರವಾಗಿತ್ತು. ಅದನ್ನು ವೀಕ್ಷಿಸಿದ ಬಳಿಕ ಆ ರೀತಿಯ ಅಂಶಗಳನ್ನು ಹೋಲುವಂತಹ ಒಂದು ಲೇಖನವನ್ನು ಓದಿದ್ದರ ಬಗ್ಗೆ ಲಿಂಕ್ ಕೊಟ್ಟು ಹೇಳಿದ್ದೆ. ಸಾಕಷ್ಟು ಓದುಗರಿಗೆ ಈ ಪೋಸ್ಟ್  ಇಷ್ಟ ಆಗಿಲ್ಲ. ಅದು ಸಹಜ. ಕೆಲವು ಅಂಶಗಳ ಬಗ್ಗೆ ಒಪ್ಪಲಾಗದು. ಆ ಸಮಯದಲ್ಲಿ   ಆ ಕಾರ್ಯಕ್ರಮ ಹೀಗಿತ್ತು, ಆ ಲೇಖನ ಈ ರೀತಿ ಬರೆದಿತ್ತು ಅಂತ ಹೇಳಿದ್ದೆ..ಹೀಗೆಲ್ಲ ಉಂಟೆ ಎಂಬ ನೋವು ಬೇಸರ ಅಂತಹ ಸಮಯದಲ್ಲಿ ಆಗುವುದನ್ನು ನಾನು ಮೆನ್ಶನ್ ಮಾಡಿದ್ದೆ..
 ಬರೆಯುವವರಿಗೆ, ಓದುವವರಿಗೆ ಯಾವುದೇ  ಒಬ್ಬರ ಬಗ್ಗೆ ಪ್ರೀತಿ ಅಭಿಮಾನ ಇದ್ದರೆ ಅದರಿಂದ ಎದುರಾಗುವ ಅನಾಹುತಗಳು ಏನು ಅಂತ  ನನಗೆ ಗೊತ್ತು. ಮುಖ್ಯವಾಗಿ ಅಂತಹ ಯಾವುದೇ ಪೂರ್ವಾಗ್ರಹಪೀಡಿತಳು ನಾನಲ್ಲ.
 ನರೇಂದ್ರ ಮೋದಿ ಅವರು ಮಾಡಿದ ಒಳ್ಳೆಯ ಕೆಲಸಗಳು ಇಷ್ಟವಾಗುವಂತೆ ಅವರಿಂದ ತಪ್ಪು ನಡೆದಾಗ ಬೇಜಾರಾಗುತ್ತೆ.. ಯಾಕೆ ಅಧಿಕಾರ ಹೀಗೆ ಮಾಡಿಸುತ್ತೆ ಅಂತ.. ಅದೇರೀತಿ ಸಿದ್ದರಾಮಯ್ಯನವರು ಮಾಡಿದ ಒಳ್ಳೆಯ ಕೆಲಸಗಳು, ಅವರ ನಿರ್ಧಾರಗಳು  ಎರಡರ  ಬಗ್ಗೆ ಓಪನ್ ಆಗಿ ನೋಡುವ ಅಭ್ಯಾಸ. ನೆರೆಯ ರಾಜ್ಯ ತಮಿಳು ನಾಡಿನಲ್ಲಿ ಜಯಲಲಿತಾ ಅವರನ್ನು ದುರಹಂಕಾರಿ ಎಂದು ಮಂದಿ ಕರೆದರೂ ಆಕೆ ತನ್ನ ರಾಜ್ಯದ ಜನತೆಗೆ ಮಾಡಿರುವ  - ನೀಡಿರುವ ಸವಲತ್ತುಗಳ ಬಗ್ಗೆ ಅಪಾರ ಗೌರವವಿದೆ.
ಇತ್ತೀಚೆಗೆ ನನ್ನ ಅಣ್ಣ ರವಿ ಪಕ್ಕದ ರಾಜ್ಯ  ವಿಭಜಿತ ಆಂಧ್ರಕ್ಕೆ ಸೆಮಿನಾರ್ ಗೆ  ಹೋದಾಗ ಅಲ್ಲಿ ನೀರಿನ ಸಮಸ್ಯೆಗಳ  ಬಗ್ಗೆ , ಸೂಕ್ತ ಕ್ರಮಗಳಿಲ್ಲದೆ ಸೊರಗುತ್ತಿರುವ ಸಾಮಾನ್ಯನ ಬದುಕಿನ ಬಗ್ಗೆ ಹೇಳುತ್ತಾ ಅಲ್ಲಿನ ತಜ್ಞರು ನೆರೆಯ ಕರ್ನಾಟಕ ಮತ್ತು ತಮಿಳು ನಾಡಿನಲ್ಲಿ ಈ ರೀತಿ ಕ್ರಮ ಕೈಗೊಂಡಿದ್ದಾರೆ, ನಮ್ಮವರು ಅಲ್ಲಿ ಹೋಗಿ ಅಭ್ಯಾಸಿಸಿ ಬಂದು ಸೂಕ್ತ ಕ್ರಮ, ಬದಲಾವಣೆಗೆ ಆದ್ಯತೆ ನೀಡಬೇಕು ಎಂದು  ಅವರು ಅಂದರಂತೆ .. ನಮ್ಮ ರಾಜ್ಯದ ಬಗ್ಗೆ  ಖುಷಿ ಆಗುತ್ತೆ ಇವೆಲ್ಲ ಕೇಳಿದಾಗ ..
ನನಗೆ ಹಿಸ್ಟರಿ ನೆಹರುಅವರ ಬಗ್ಗೆ ಮಾತ್ರ ಹೇಳಿಲ್ಲ...! ಬಿಡಿ ಆ ವಿಷ್ಯ :) ಯಾಕೇಂದ್ರೆ ಸುಳ್ಳನ್ನು ನಿಭಾಯಿಸುವುದೆಷ್ಟು ಕಷ್ಟವೋ ಅಷ್ಟೇ ಕಷ್ಟ ನಿಜವನ್ನು ಮರೆ ಮಾಚುವುದು ಅಲ್ವೇ !!
Image result for orange flower

@ಜೀ ಹಿಂದಿವಾಹಿನಿಯಲ್ಲಿ  ಡ್ರಾಮೆ ಬಾಜ್ ಆರಂಭವಾಗಿದೆ ಮತ್ತೆ. ಕ್ಯೂಟಿ ಕ್ಯೂಟ್ ಮಕ್ಕಳು.ಮುಗ್ಧ ಪ್ರಪಂಚದಲ್ಲಿ ನಾವು ಸಹ ಸದಸ್ಯರಾಗುವುದು ಅತ್ಯಂತ ಖುಷಿ ಕೊಡುವ ಸಂಗತಿ..ಪತ್ರಿಕೆಗಳು ಬರೆಯುವಂತೆ  ಕರ್ನಾಟಕದ ಅಳಿಯ  ವಿವೇಕ್ ಒಬೆರಾಯ್ , ನಮ್ಮ ಉಪ್ಪಿ - ಉಪೇಂದ್ರ ಅವರಲ್ಲಿ ಪ್ರಶ್ನೆಗಳನ್ನು ಮೂಡಿಸಿದ ಚೆಲುವೆ ಸೊನಾಲಿ ಬೇಂದ್ರೆ  (ಯಾರಿಟ್ಟರು ಚುಕ್ಕಿ?.. ಯಾಕಿಟ್ಟರು ಚುಕ್ಕಿ  ?? ;-)  ).ದೊಡ್ಡವರಿಗೆ ಡ್ಯಾನ್ಸ್ ಹೇಳಿ ಕೊಟ್ಟು ಅವರ ಬಳಿ ಸೈ ಎನಿಸಿಕೊಂಡು , ದೊಡ್ಡವರನ್ನು ನಗಿಸುತ್ತಾ , ಸಿನಿಮಾ ನಿರ್ದೇಶನ ಮಾಡುತ್ತಾ ಎಲ್ಲ ಕ್ಷೇತ್ರದಲ್ಲಿ ಇದ್ದರೂ ಈಗ ಮಕ್ಕಳ ಬಳಿ ಶಿಷ್ಯರಾಗಿದ್ದಾರೆ  ಸಾಜಿದ್ ಖಾನ್.
ಈ ಕಾರ್ಯಕ್ರಮದ ಬಗ್ಗೆ ಹೇಳುವುದಕ್ಕಿಂತ ನೋಡಿದರೆ ಮಜಾ ಸಿಗುವುದು.. ಪುಟ್ಟ ಪುಟ್ಟ ಪುಟಾಣಿಗಳು .. ಪ್ರತಿ ಶನಿವಾರ - ಭಾನುವಾರ ಪ್ರಸಾರ ಆಗುತ್ತೆ .
@ ತುಂಬಾ ವಿನೂತನವಾಗಿ  ಪ್ರಸಾರ ಆಗ್ತಾ ಇರುವ ಧಾರವಾಹಿ ಸಿಯಾ ಕೆ ರಾಮ್ . ಸ್ಟಾರ್ ವಾಹಿನಿಯ ಈ ಧಾರವಾಹಿ ಹೆಚ್ಚು ಮನಸೆಳೆದಿದೆ  ನನಗೆ. ಬೇರೆಯ  ರಾಮಾಯಣದ ಸೀರಿಯಲ್ ಗಳಿಗಿಂತ ಇದರಲ್ಲಿ ವಾಸ್ತವ ಅಂಶಗಳನ್ನು ಜೋಡಿಸಿ ನಿರ್ಮಿಸಿದ್ದಾರೆ.
ರಾಮನ ಪಾತ್ರಧಾರಿ ಆಶಿಶ್ ಶರ್ಮ,  ಸೀತೆಯಾಗಿ ಮದಿರಾಕ್ಷಿ ಮುಂದ್ಲೆ, ಜನಕನ ಪಾತ್ರಧಾರಿ ಬಿಜಯ್  ಆನಂದ್  ಸೇರಿದಂತೆ  ಎಲ್ಲರೂ ಖುಷಿ ಕೊಡುವ ಅದ್ಭುತ ಪ್ರತಿಭೆಗಳು.
ಆದರೆ ಒಂದು ಸಂಗತಿ ಅಂದ್ರೆ ಈ ಧಾರವಾಹಿ  ನಿರ್ದೇಶಕ, ಕಥೆಗಾರ ಇಂಗ್ಲೀಷ್, ಫ್ರೆಂಚ್, ಸ್ಪಾನಿಶ್ ನಂತಹ  ವಿದೇಶಿ ಭಾಷೆಗಳ ಸಿನಿಮಾ  ಹೆಚ್ಚು ನೋಡುವ ಅಭ್ಯಾಸ ಇದೆ ಅಂತ ಕಾಣುತ್ತೆ.. ಅದರ ಅನೇಕ ಕಾನ್ಸೆಪ್ಟ್ ಇದರಲ್ಲಿ  ಎದ್ದು ಕಾಣುತ್ತೆ. ಎನಿವೆಸ್ ತುಂಬಾ  ವಿಭಿನ್ನವಾಗಿದೆ. 

ಗಂಡನಾ ?

Image result for purple flowers
ತುಂಬಾ ಪರಿಚಿತರು, ಮನೆಯವರು, ಸ್ನೇಹಿತರು ಹೀಗೆ ಸ್ವಲ್ಪ ಗೊತ್ತಿರುವವರು , ಅವರ ಸಾಧನೆ ಬಗ್ಗೆ, ಅವರನ್ನು ಹುಡುಕಿಕೊಂಡು ಬರುವಂತಹ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ತಿಳಿದಾಗ ಹೆಚ್ಚು ಸಂತೋಷ ಆಗುತ್ತೆ. ಎಫ್ ಬಿ , ಟ್ವಿಟರ್, ವಾಟ್ಸ್ ಅಪ್ , ಹೈಕ್  ಹೀಗೆ ಹಲವಾರು ಸೋಶಿಯಲ್ ನೆಟ್ ವರ್ಕ್ ಮೂಲಕ ಪರಿಚಿತರಾದವರು , ಒಳ್ಳೆಯ ಸ್ನೇಹಿತ ರಾದವರ ಯಶಸ್ಸಿನಿಂದಲೂ  ಖುಷಿ ಆಗುತ್ತೆ ನನಗೆ, ಸೋತವರ ಬಗ್ಗೆ ಸಹ ಗೌರವ , ಪ್ರಯತ್ನ ಮುಖ್ಯ ಬದುಕಲ್ಲಿ. ಅಂತಹುದರಲ್ಲಿ ನಮಗೆ ಸಂಬಂಧಪಟ್ಟವರು ಯಶಸ್ವಿ ಆದಾಗ ಖುಷಿ ಆಗದೆ ಇರುತ್ತಾ ?
ರಂಗಿತರಂಗ ಚಿತ್ರ ಈಗ ಆಸ್ಕರ್ ಬಾಗಿಲು ತಟ್ಟಿದೆ. ಅದು ಕನ್ನಡ ಚಿತ್ರ, ಒಂದೊಳ್ಳೆಯ ಚಿತ್ರ, ವಿಶೇಷವಾದ ಹೆಸರು ಪಡೆದ ಚಿತ್ರ.. ಇವೆಲ್ಲವನ್ನೂ ಮೀರಿದಂತೆ ನನಗೆ ಆ ಚಿತ್ರದ ಜೊತೆ ಒಂದು ಅವಿನಾಭಾವ ಸಂಬಂಧವಿದೆ. ಅದರಲ್ಲಿ ನನ್ನ ಅಕ್ಕನ ಅಳಿಯ ಗೋಕುಲ್ ಅಭಿಷೇಕ್ ಬೇಸಿಕಲಿ ಸೌಂಡ್ ಇಂಜಿನಿಯರ್. ಅವರು ರಂಗಿತರಂಗ ಚಿತ್ರಕ್ಕೆ ಮ್ಯುಸಿಕ್  ಅರೆನ್ಜ್ಮೆಂಟ್ ಮಾಡಿದ್ದಾರೆ. ಆ ಮೂಲಕ ಆಸ್ಕರ್ ಬಾಗಿಲು ತಟ್ಟಿದ ಚಿತ್ರದ ಯಶಸ್ಸಿನ ಹಿಂದೆ ಗೋಕುಲ್  ಪಾತ್ರ ಸಹ ಇದೆ  ಸೊ ನೈಸ್. ಗೋಕುಲ್  ಅನೇಕ ಕನ್ಸರ್ಟ್  ಗಳಲ್ಲಿ  ತಮ್ಮ ಪ್ರತಿಭೆ ತೋರಿದ್ದಾರೆ  .... ನಮ್ಮ ಮನೆಯಲ್ಲಿ ಕಸಿನ್ ಗಳಲ್ಲಿ ಕೊನೆಯ ಕೊನೆಯ ಹೆಣ್ಣುಮಕ್ಕಳಲ್ಲಿ  ನಾನು ಒಬ್ಬಳು, ಅಕ್ಕಂದಿರ ಅಳಿಯಂದಿರು, ಮಕ್ಕಳು ನನಗೆ ತಮ್ಮ, ತಂಗಿ ಆಗುವಷ್ಟೇ ವಯಸ್ಸು, ಸೊ ಈ ಕಾರಣದಿಂದ ಅವರೆಲ್ಲಾ  ನನ್ನನ್ನು ಜಯಕ್ಕ ಅಂತ ಕರೆಯೋದು . ಆ ವಿಷ್ಯ ಬಿಡಿ ಆದರೆ ಇಷ್ಟೆಲ್ಲಾ ಸಾಧನೆ ಮಾಡಿರುವ ಟೀಮ್ಗೆ ನನ್ನ ಕಡೆಯಿಂದ ಕಂಗ್ರಾಟ್ಸ್.. ಈಗಾಗಲೇ ವಾಟ್ಸ್ ಅಪ್ ನಲ್ಲಿರುವ ನಮ್ಮ ಕುಟುಂಬಕ್ಕೆ ಸಂಬಂಧಿಸಿದ ಗ್ರೂಪ್ ನಲ್ಲಿ ಗೋಕುಲ್ ಹಾಗೂ ಅಕ್ಕನ ಮಗಳು ರಂಜನಿಗೆ  ವಿಶ್ ಮಾಡಿ  ಖುಷಿ ಪಟ್ಟೆವು ಎಲ್ಲರು.. ನನ್ನ ಬ್ಲಾಗ್ ಮೂಲಕವೂ ರಂಗಿತರಂಗ  ತಂಡವನ್ನು ಅಭಿನಂದಿಸುತ್ತಾ ... :-)

                                                    ####

Image result for purple flowers
ಬಿಗ್ ಬಾಸ್ ಬಿಗ್ ಬಾಸ್ ಎಸ್ ಬಾಸ್... ಈ ವಾರದಲ್ಲಿ  ಇದ್ದ -ನೀಡಿದ ಟಾಸ್ಕ್ ಗಳು ಖುಷಿಕೊಡ್ತು. ಆದರೆ ಚೇರ್ ಟಾಸ್ಕ್ ಬಿಟ್ಟು. ತುಂಬಾ ಮುಜುಗರ ತರ್ತಾ ಇತ್ತು ನೋಡುವಾಗ.. ಬಿಗ್ ಬಾಸ್ ಕಾರ್ಯಕ್ರಮವನ್ನು ಹಿರಿಯರು, ಕಿರಿಯರು ಅನ್ನದೆ ಎಲ್ಲರೂ ನೋಡುತ್ತಿರುತ್ತಾರೆ. ಈ ರೀತಿಯ ಟಾಸ್ಕ್ ಗಳು ಮಾಡುವಾಗ ಎಲ್ಲ ಅಂಶಗಳ ಬಗ್ಗೆ ಅದ್ಯಾಕೆ ಚಾನೆಲ್ ಮಂದಿ ಗಮನದಲ್ಲಿ ಇಟ್ಟು ಕೊಳ್ತಾ ಇಲ್ಲವೋ ನಾ ಕಾಣೆ.. ಟಾಸ್ಕ್ ನಲ್ಲಿ ಭಾಗವಹಿಸದೆ ಇರುವವರನ್ನು ಡೈರೆಕ್ಟ್ ನಾಮಿನೇಟ್ ಮಾಡ ಬಹುದು ಮತ್ತು ಹೊರಗೆ ಗೌರವಪೂರ್ವಕವಾಗಿ ಕಳುಹಿಸ ಬಹುದು.. ಈ ರೀತಿಯ ಅಂಶಗಳು ಈಗಾಗಲೇ ಹಿಂದಿ  ಬಿಗ್ ಬಾಸ್ ಮಂದಿ ಮಾಡಿದ್ದಾರೆ. ಸುಮ್ಮನೆ ಬಾ, ಕೂರು , ಸಾಧ್ಯವಾದರೆ ಅಲ್ಲಿಂದು ಇಲ್ಲಿಗೆ ಇಲ್ಲಿನದು ಅಲ್ಲಿಗೆ ಹೇಳುವುದರಲ್ಲಿ ಏನಿದೆ ವಿಶೇಷ ? ಕಷ್ಟಪಟ್ಟು ಟಾಸ್ಕ್ ಮಾಡುವವರನ್ನು ಕಳಿಸಿ  ಮಾಡದೇ ಇರುವವರನ್ನು ಇಟ್ಟು ಕೊಳ್ಳುವುದು ಅನ್ಫೇರ್ !

ಆ ವಿಷಯ ಬಿಡಿ, ಆದರೆ ಟಾಸ್ಕ್ ಗಳಲ್ಲಿ ಟೀವಿ ಧಾರವಾಹಿ ಮತ್ತು ಸಿನಿಮಾ ಕಥೆಯ ಟಾಸ್ಕ್ ಗಳಲ್ಲಿ ಮತ್ತೆ ಮೊದಲ ಸ್ಥಾನದಲ್ಲಿ ನಿಂತವರು ಶ್ರುತಿ, ಮಿತ್ರ , ಆನಂದ್, ನಂತರದ ಸ್ಥಾನ ರೆಹಮಾನ್, ಚಂದನ್..ಖುಷಿ ಕೊಟ್ಟ ಕಲಾವಿದರು ಅವರು. ರೆಹಮಾನ್ ಅವರ ಪ್ರತಿಭೆಗೆ ಅಂತೂ ಇಂತೂ ಈಗ ಅವಕಾಶ ಸಿಗ್ತಾ  ಇದೆ. ಅದೇ  ಸಂತೋಷದ ಸಂಗತಿ. ಅತ್ಯುತ್ತಮ ನಿರೂಪಕ ರೆಹಮಾನ್ ಅವರು ಹೊಸ ರೂಪದಲ್ಲಿ ಮನೆಯಿಂದ ಹೊರಗೆ ಬರ್ತಾರೆ ಅನ್ನೋದು  ಸಹ ಅತ್ಯಂತ ಖುಷಿಯ ಸಂಗತಿ.ಆನಂದ್, ಶ್ರುತಿ, ಮಿತ್ರ ಎಷ್ಟು ಅದ್ಭುತವಾದ ಕಲಾವಿದರು.. ವಾಹ್ ವಾಹ್ !
ಅಬ್ಬ ಸುಷ್ಮಾ ! ಏನೇ ಆದರು ಮನೆ ವಾತಾವರಣ  ಸುಷ್ಮಾ ಯಿಂದ ಕೆಡುತ್ತೆ ಬಿಡಿ .. ಇತ್ತೀಚಿಗೆ ಅಯ್ಯಪ್ಪ ಜೊತೆ ಮಾತಾಡುವಾಗ ಆಕೆ ,  ನನಗೇನು ಗಂಡನಾ - ಪಿಂಡನಾ ಅಂತ ಹೇಳ್ತಾ ಶ್ರುತಿ ಬಗ್ಗೆ ಅಸೂಯೆ ತೋರಿಸಿದ್ದು.. ಬೇಸರ ಅನ್ನಿಸಿದರು ಆ ಪಿಂಡದಂತಹ  ಮಾತಿಗೆ ನಗು ಬಂದೇ  ಬಂತು..
ಶ್ರುತಿ ಬಗ್ಗೆ ಸಾಕಷ್ಟು ಜನರಿಗೆ ಸಾಫ್ಟ್ ಕಾರ್ನರ್ ಇದೆ.. ಅದು  ಬಹಳ ಮುಖ್ಯ. ನಮ್ಮ ಭಾವ ಒಬ್ರು ಸದಾ ವಿದೇಶದಲ್ಲಿರುವ ಇಂಜಿನಿಯರ್ ವಿದ್ಯಾರ್ಥಿಗಳಿಗೆ, ಟೀಮ್ ಗಳಿಗೆ ಪಾಠ ಹೇಳೋ ಮೇಷ್ಟ್ರು.. ಅವರಿಗೆ ಬಿಗ್ ಬಾಸ್, ಶ್ರುತಿ, ಕಿಚ್ಚ, ಆನಂದ್ ಜಾಸ್ತಿ ಲೈಕ್..
Image result for purple flowers
ಪ್ರಿಯ ಸುದೀಪ್ ಸಾಮಾನ್ಯವಾಗಿ ನಾನು ನಿಮ್ಮನ್ನು ಕೀಟಲೆ ಮಾಡುವುದು ಅಭಿಮಾನಂದಿಂದ,ಅದರ ಬಗ್ಗೆ ನಿಮಗೆ ಬೇಸರ ಆಗುತ್ತೇನೋ ಎನ್ನುವ ಒಂದು ಗೊಂದಲ ನನ್ನನ್ನು ಕಾಡುತ್ತಿರುತ್ತದೆ. ಆದರೂ ಸಹ ನಾನು ನಿಮ್ಮನ್ನು ರೇಗಿಸುವುದು ಬಿಟ್ಟಿಲ್ಲ..ಪತ್ರಿಕೆಗಳು, ಚಾನೆಲ್ಗಳು ಅದರ ಪ್ರತಿನಿಧಿಗಳು, ಅದರಲ್ಲಿ ಬರೆದವರು, ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದವರು ಎಲ್ಲರಿಗಿಂತ ನಾನು ಹಾಗೂ ನನ್ನಂತಹ ಅತಿ ಸಾಮಾನ್ಯ ವೀಕ್ಷಕರು ಬಹಳ ಮುಖ್ಯ ಸುದೀಪ್, ಯಾಕೇಂದ್ರೆ ನಾವು ಮೆಚ್ಚುಗೆ ತೋರಲು, ಇಷ್ಟಪಟ್ಟು ಹೇಳಲು, ಮನಕ್ಕೆ ತೋರಿದ ಒಳ್ಳೆಯ ಮಾತನ್ನು ವ್ಯಕ್ತ ಪಡಿಸಲು ಯಾವ  ಪ್ರಭಾವಳಿ, ಅದು ಇದು ಪಡೆದಿರಲ್ಲ.. ನಮಗೆ ಗೊತ್ತಿರುವುದು ಪ್ರಾಮಾಣಿಕವಾಗಿ ಮನಕ್ಕೆ ಅನ್ನಿಸಿದ್ದನ್ನು ಹೇಳೋದಷ್ಟೇ.. ನಿಮ್ಮ ಕಡೆಯಿಂದ ಮರ್ಯಾದೆ ಸಿಗಬೇಕು, ನಮ್ಮನ್ನು ಗುರುತಿಸಿ ಹೊಗಳ ಬೇಕು ಎನ್ನುವ ಯಾವ ಒಂದು ಪೂರ್ವಾಗ್ರಹ ಪೀಡಿತರು ನಾವಲ್ಲ.. ತುಂಬಾ ಸರಳ ಮನದವರು.. ಸಾಮಾನ್ಯರು ಹಾಗಿದ್ದುದರಿಂದಲೇ ಎಲ್ಲವೂ ಚಂದ ಚಂದವಾಗಿರುವುದು..
ಏನೇ ಇದ್ದರು  ಕಳೆದ ಬಾರಿ ನಾನು ನಿಮಗೆ ಮಾಡಿದ ಕೀಟಲೆಗೆ ಸಾಕಷ್ಟು ಅನಂತ್ ಹಾಗೂ  ನಿಮ್ಮ ಅಭಿಮಾನಿಗಳು ಪುಳಕಿತರಾಗಿದ್ದಾರೆ. ಕೆಲವು ಹೆಣ್ಣು ಮಕ್ಕಳು ಕೆಂಪು ಕೆಂಪಾಗಿ ನನ್ನ ಬಳಿ ಭಾವನೆ ವ್ಯಕ್ತಪಡಿಸಿದ್ದಾರೆ. ಖುಷಿ ಆಯ್ತು ನನಗೆ ಅವೆಲ್ಲ  ಓದಿ.. :)
ಮತ್ತೊಂದು ಸಂಗತಿ ಹೇಳ್ತೀನಿ ಸಾಮಾನ್ಯವಾಗಿ ನೀವು  ಆರಂಭದಲ್ಲಿ ಪುಟ್ಟ ಪುಟ್ಟ ರಸ್ತೆ, ದೊಡ್ಡ ದೊಡ್ಡ ಮನೆ, ಪುಟ್ಟ ಪುಟ್ಟ ಕಂಗಳು ಎಂದು ಹೇಳ್ತೀರಿ, ಅದರ ಜೊತೆ ಕರ್ನಾಟಕದ ಸಮಸ್ತ ಗ್ರಾಮೀಣ ವೀಕ್ಷಕರನ್ನು ಸಹ ನಿಮ್ಮ ಸ್ವಾಗತದ ಸಾಲಿನಲ್ಲಿ ಸೇರಿಸಿಕೊಳ್ಳಿ.. ಅವರಷ್ಟು ಖುಷಿ ಪಡೋರು ಮತ್ತೊಬ್ಬರಿಲ್ಲ..ಬೆಂಗಳೂರಿನಂತಹ ಮಹಾನಗರಕ್ಕಿಂತ ಪುಟ್ಟ ಹಳ್ಳಿಗಳು, ಎಲ್ಲೋ ಇರುವ ವಿಕ್ಷಕರೇ ನಿಮ್ಮನ್ನು - ನಿಮ್ಮ  ಮಾತನ್ನು  ಹೆಚ್ಚು ಹೆಚ್ಚು ಮೆಚ್ಚಿರೋದು ...