sudeep.. bigg bosssss

ಪ್ರತಿದಿನ ಮುಂಜಾನೆ  ಪ್ರತಿಯೊಂದು ವಾಹಿನಿಗಳು ವೀಕ್ಷಕರ ದಿನ ಚೆನ್ನಾಗಿ ಆರಂಭ ಆಗಲಿ ಎಂದು ಒಳ್ಳೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ . ಕೆಲವು ಮನಕ್ಕೆ ಆಪ್ತ ಅನ್ನಿಸಿದರೆ, ಒಂದಷ್ಟು ಸಾಕಪ್ಪ ಅನ್ನಿಸುವಂತೆ ಇರುತ್ತದೆ. ಜನಶ್ರೀ ವಾಹಿನಿಯಲ್ಲಿ ಬೆಳಗಿನ ಕಾರ್ಯಕ್ರಮದಲ್ಲಿ ತುಂಬಾ ಖುಷಿ ಕೊಟ್ಟಿದ್ದು ಸುಧಾಕರ ಶರ್ಮ ಅವರ ಜೀವನ ದರ್ಶನ . ಅಂದ್ರೆ ನಾವು ಕಲಿತ ವಿದ್ಯೆಯು ನಮ್ಮ ಬದುಕನ್ನು ಹೇಗೆ ಸಾಕಾರ ಮಾಡುತ್ತಿಲ್ಲ ಅನ್ನುವ ಸಂಗತಿಯನ್ನು ಮೆಕಾಲೆಯ ವಿದ್ಯಾ  ನೀತಿ ಎಲ್ಲದರ ಬಗ್ಗೆ ಅದ್ಭುತವಾಗಿ ಮಾಹಿತಿ ನೀಡಿ ದರು.ಅತ್ಯಂತ ಉಪಯುಕ್ತ ಮಾಹಿತಿ ನೀಡುವ, ಇತಿಹಾಸದ ಬಗ್ಗೆ ನಮಗಿರುವ ದೃಷ್ಟಿಕೋನವನ್ನು ಬದಲಾಯಿಸಿ, ವಿಷಯವನ್ನು ಭಿನ್ನ ರೀತಿಯಲ್ಲಿ ಯೋಚಿಸುವಂತೆ ಮಾಡುವಲ್ಲಿ ಸುಧಾಕರ ಶರ್ಮ ಅವರು ವಾವ್  ಅನ್ನಿಸುವಷ್ಟು ಅದ್ಭುತ . ಚಂದನ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ (ಈಗ ಪ್ರಸಾರ ಆಗ್ತಾ ಇದ್ಯಾ?)ಪ್ರತಿ ಭಾನುವಾರ ಇವರ ಕಾರ್ಯಕ್ರಮ  ಮನಸ್ಸಿಗೆ ಖುಷಿ  ಕೊಡ್ತಾ ಇತ್ತು. ಒಂದೇ ವಿಷಯವನ್ನು ಹೇಳಿ ಹೇಳಿ ತಲೆ ಕೆಡಿಸೋ ಮಂದಿ ಇರುವ ಈ ಕಾಲದಲ್ಲಿ ಸುಧಾರ ಶರ್ಮರಂತಹ ಭಿನ್ನ ಇತಿಹಾಸ ತಜ್ಞರು  ಇದ್ದಾರಲ್ಲ ಅದೇ ಹೆಮ್ಮೆ . 
ಈಗ ಮತ್ತೆ ರಿಯಾಲಿಟಿ ಶೋಗಳ ಕಾಲ ನಮ್ಮ ಕನ್ನಡ ವಾಹಿನಿಗಳಲ್ಲಿ ಆರಂಭ ಆಯ್ತು. ಸುವರ್ಣ  ವಾಹಿನಿಯಲ್ಲಿ ಕನ್ನಡದ ಕೋಟ್ಯಧಿಪತಿ  ಕಾರ್ಯಕ್ರಮ ಮತ್ತೆ ಪ್ರಸಾರ ಆಗಿದೆ. ಧಾರಾವಾಹಿಗಳನ್ನು ಕಂಡು-ವೀಕ್ಷಿಸಿ ಸುಸ್ತಾದ ವೀಕ್ಷಕರಿಗೆ ಸ್ವಲ್ಪ ಬದಲಾವಣೆ ನೀಡುವ ಕಾರ್ಯಕ್ರಮ ಇದು.ಪುನೀತ್ ರಾಜ್ ಕುಮಾರ್ ಅವರಿಗೆ ಜನರೊಂದಿಗೆ ಬೆರೆಯುವ ಸದವಕಾಶ. ಉತ್ತಮ ಪ್ರೆಸೆ೦ಟರ್  ಆಗಿರುವ ಪುನೀತ್ಗೆ ಈ ಕಾರ್ಯಕ್ರಮ ಎಷ್ಟು ಇಷ್ಟಾನೋ ಅಷ್ಟೇ ಪ್ರೀತಿ ವೀಕ್ಷಕರಿಗೆ . ಆದರೆ  ಬೇರೆಯವರು ದುಡ್ಡು ತಗೊಂಡು ಹೋಗೋದನ್ನು ನಾವು ನೋಡ್ತಾ ಕೂರಬೇಕು ಅದೇ ದುಃಖದ ಸಂಗತಿ   



ಕನ್ನಡದಲ್ಲಿ ಬಿಗ್  ಬಾಸ್  ಆರಂಭ ಆಗ್ತಾ ಇದೆ. ಈ ಟೀವಿಯಲ್ಲಿ ಇದು ಪ್ರತಿದಿನ ಪ್ರಸಾರ ಆಗುತ್ತೆ. ಹಿಂದಿಯಲ್ಲಿ  ಈಗಾಗಲೇ ಆರು ಸೀಸನ್ ಕಂಡಿರುವ ಈ ರಿಯಾಲಿಟಿ ಷೋ ಕನ್ನಡಕ್ಕೆ ಬಂದಿದೆ . ಅಲ್ಲಿ ಸಾಧಕರದ್ದೆ ಕಾರುಬಾರು. ಅವರ ಜಗಳ ಗಲಾಟೆ ಅಳು, ಪ್ರೇಮ ಆಕ್ರೋಶ ನೋಡುವ ಸೌಭಾಗ್ಯ ಕನ್ನಡ ವೀಕ್ಷಕರಿಗೆ. ಮುಖ್ಯವಾಗಿ ಇದಕ್ಕೆ ಸುದೀಪ್  ಪ್ರೆಸೆ೦ಟರ್  ಅದೇ ಮುಖ್ಯ ಆಕರ್ಷಣೆ . ಕನ್ನಡ ಚಿತ್ರ ದರ್ಶಕರಲ್ಲಿ ಪುನೀತ್ , ಸುದೀಪ್,ದರ್ಶನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಕಾರ್ಯಕ್ರಮ ಅಭಿಮಾನಿಗಳಿಂದ ಗೆಲ್ಲುತ್ತೆ ಅನ್ನುವುದಕ್ಕಿಂತ  ಸುದೀಪು ಯಾವ್ ರೀತಿ ತಮ್ಮ ಶೈಲಿಯಿಂದ ಗೆಲ್ಲಿಸುತ್ತಾರೆ ಅನ್ನುವುದು ಮುಖ್ಯ. ಯಾಕೆಂದ್ರೆ ಒಬ್ಬ ನಿರೂಪಕ ಕೆಲವು ಮಂದಿಯನ್ನು ಮಾತ್ರ ಗಮನದಲ್ಲಿ ಇಟ್ಟುಕೊಳ್ಳ ಬಾರದು. ಕಿಚ್ಚ  ನಾವೆಲ್ಲಾ ವೀಕ್ಷಿಸ್ತೀವಿ ಜ್ಞಾಪಕ ಇರ್ಲಿ . 

ಕಿಲಕಿಲ

ನೀವು ಕೇಳಿದ್ದು ನಾವು ಹೇಳಿದ್ದು ಒಂದೊಳ್ಳೆಯ ವಿಡಂಬನೆಯ ಕಾರ್ಯಕ್ರಮ. ಪ್ರಸಾರ ಆಗೋದು ಟೀವಿ ನೈನ್  ವಾಹಿನಿಯಲ್ಲಿ ಮಾತ್ರ. ಬೇರೆ ವಾಹಿನಿಗಳು ಬೇರೆ ಹೆಸರು ಕೊಟ್ಟು ಇಂತಹುದ್ದೆ  ಕಾರ್ಯಕ್ರಮ ಪ್ರಸಾರ ಮಾಡಿದರೂ , ಇದರ ಶೈಲಿ ಹೆಚ್ಚು ಖುಷಿ ಕೊಡುತ್ತದೆ. 
ಮಾತಿನ ನಡುವೆ ಅವ್  ನೋ  ಅನ್ನುವ ಧ್ವನಿ ಉಲ್ಲಾಸ ನೀಡುತ್ತ ದೆ. ಸದಾ ರಾಜಕೀಯ ಜನರ ಬಗ್ಗೆ ಆಡಿಕೊಂಡು-ಪಾಡಿಕೊಂಡು ಇರುವ ವಾಹಿನಿಗಳು ಸಿನಿಮಾದವರ ಬಗ್ಗೆ ಹೆಚ್ಚು ಇಂತಹ ವಿಡಂಬನೆ ಮಾಡೋಕೆ ಹೋಗಲ್ಲ .ಸಿನಿಮಾದವರು ರಾಜಕೀಯದತ್ತ ಹೊರಟರೆ ಅವ್ .. ಬಿಡೋದೇ ಇಲ್ಲ. ಪೂಜಾ ಗಾಂಧೀ ಅನ್ನುವ ಸಂಜನಾ ಗಾಂಧೀ  ಅಕ್ಕೋರು ನದಿ ದಡ  ನದಿ ದಡ  ನದಿ ದಡ ಅಮ್ತ ಒಂದು ಪಾರ್ಟಿ ಬಿಟ್ಟು ಮತ್ತೊಂದಕ್ಕೆ, ಮತ್ತೊಂದು ಬಿಟ್ಟು ಮಗದೊಂದಕ್ಕೆ ಜಂಪಿಂಗ್ ಜಂಪಿಂಗ್ ಮಾಡಿದ ಕಥನ ನೀವು ಕೇಳಿದ್ದು ಕಾರ್ಯಕ್ರಮದಲ್ಲಿ ಪ್ರಸಾರ ಆಯ್ತು .. ಸಧ್ಯಕ್ಕೆ ಅವರ ಬಿಟ್ ಇವರ ಬಿಟ್ಟು, ಇನ್ನೊಬ್ಬರ ಬಿಟ್ಟು ... ಯಾರು ಯಾರು ಅಂತ ನಾವೆಲ್ಲಾ ಅಂದ್ರೆ ಕಾಮನ್ ಜನರು ವೈಟಿಂಗ್  ವೈಟಿಂಗ್ ... ನೋಡುಮ ಪೂಜಾ ಅಂಬೋ ಸಂಜನಾ ಗಾಂಧೀ ನೆಕ್ಟ್ ಪಾರ್ಟಿ ಪ್ಲಾನಿಂಗ್..
ಈ ಕಾರ್ಯಕ್ರಮದ ಸ್ಕ್ರಿಪ್ಟ್ , ಹಿನ್ನೆಲೆ ಧ್ವನಿ ಎಲ್ಲವೂ ಅವ್.. ಅವ್  :-)

ಸುವರ್ಣ ನ್ಯೂಸ್ ನಲ್ಲಿ  ಪ್ರಸಾರ  ಆಗುವ ಬೆಳಗಿನ ಕಾರ್ಯಕ್ರಮ .. ಅಂದ್ರೆ ಪ್ಯಾಕೇಜ್ ಚೆನ್ನಾಗಿದೆ. ಇಲ್ಲಿ ಏನೇನು ಇಲ್ಲ..! ಎಲ್ಲವೂ ಇದೆ..! ಅಡುಗೆ ,ನ್ಯಾಯ-ಕಾನೂನು ,ಹಣ-ಪಾಲಿಸಿ ..  ಆರೋಗ್ಯ, ... ನಿಜ ಹೇಳ ಬೇಕೂಂದ್ರೆ ಕೇವಲ ಒಂದು ನಿಮಿಷದಲ್ಲಿ ಲಾಯರ್ ಸಾಹೇಬರು ಕಾನೂನನ್ನು ಬಿಚ್ಚಿಟ್ಟರೆ, ಪತ್ರಕರ್ತ ರು ಹಣ ಮಾಡೋದು, ಪಾಲಿಸಿ ಪ್ರಯೋಜನ ಅದಕ್ಕೆ ಪೂರಕ ಸಂಗತಿ ತಿಳಿಸಿ ಬಿಡ್ತಾ ರೆ. ವೆರಿ ಇಂಟರೆಸ್ಟಿಂಗ್ . 
ಲಾಯರ್ -ಜರ್ನಲಿಸ್ಟ್ ಇಬ್ರು ಒಂದು ಗಳಿಗೆಯಲ್ಲಿ ಪ್ರಪಂಚ ಕಟ್ಟಬಲ್ಲರು,ಅರ್ಧ ಗಳಿಗೆಯಲ್ಲಿ  ...... :-)! 
ಒಟ್ಟಾರೆ ಎಲ್ಲ ಸಂಗತಿಗಳು ಬೆಳಗಿನ ಪ್ಯಾಕೇಜ್ನಲ್ಲಿ ಖುಷಿ ಕೊಡು ವಂತಹದ್ದು . ಸುಂದರ ನಿರೂಪಕಿಯರ ಕಿಲಕಿಲ ನಗು ಸಹ ವೀಕ್ಷಕರಿಗೆ  ಮುಫಾತ್ತಾಗಿ ಸಿಗುತ್ತೆ ;-) 
ನೇರವಾಗಿ ಹೇಳುವುದಾದರೆ ಒಂದೊಳ್ಳೆಯ ಪ್ಯಾಕೆಜ್ ಹೆಣ್ಣುಮಕ್ಕಳಿಗೆ ..!

ಕಥೆಗಾರ..


ವೀರಪ್ಪನ್   ಕನ್ನಡ ವಾಹಿನಿಗಳ ಹೈಲೈಟ್ .. ಕೆಲವರು ಸತ್ತರೂ ಹೀಗೆ ಬದುಕಿಬಿಡ್ತಾರೆ. ಮುಖ್ಯವಾಗಿ ವೀರಪ್ಪನ್ ಬಗ್ಗೆ ,ಆತನ ಸಹಚರರು ಗಲ್ಲಿಗೇರುವ ಬಗ್ಗೆ ವಾದಗಳು -ಚರ್ಚೆಗಳು ಅನುಭಗಳು ವಾಹಿನಿಗಳಲ್ಲಿ ಪ್ರಸಾರ ಆದರೂ ಅತಿ ಹೆಚ್ಚು ಗಮನ ಸೆಳೆದದ್ದು ಅಂದ್ರೆ ಜನಶ್ರೀ ವಾಹಿನಿಯಲ್ಲಿ ಬಿದರಿ ಸಾಹೇಬರ ಜೊತೆಗಿನ ಅನುಭವ ಕಥನ ಮತ್ತು ಟೀವಿ ನೈನ್ ನಲ್ಲಿ ಆಗ ವೀರಪ್ಪನ್-ಆತನ ಸಹಚರರಿಂದ ಮರಣ ಹೊಂದಿದ ಪೊಲೀಸ್ -ಪೇದೆಗಳ ಕುಟುಂಬವನ್ನು ಸಂದರ್ಶಿಸಿದ ಕಾರ್ಯಕ್ರಮ ಮನಸ್ಪರ್ಶಿ ಆಗಿತ್ತು.

ಏನೇ ಹೇಳಿ ದೊಡ್ದವರಿಗಿಂತ ಸಣ್ಣ ಕೆಲಸದಲ್ಲಿ ಇರುವವರ ಪರಿಸ್ಥಿತಿ ಕೆಟ್ಟದಾಗಿರುತ್ತದೆ... ಆ ಹೆಣ್ಣುಮಕ್ಕಳು ತಮ್ಮ  ಬಗ್ಗೆ ಹೇಳುತ್ತಾ.. ಅತಂತ್ರ ಬದುಕಿನ ಬಗ್ಗೆ ತಿಳಿಸುವಾಗ ಬದಲಾಗದ ಈ ಜಗತ್ತನ್ನು ಕುರಿತು ದುಃಖ ಅನ್ನಿಸುತ್ತೆ.
ಮತ್ತೊಮ್ಮೆ ವೀರಪ್ಪನ್ ಚಾನೆಲ್ಗಳ ಸರದಾರ...! ಮುತ್ತುಲಕ್ಷ್ಮಿ ಸಹ ...! 

 ಜನಶ್ರೀ ವಾಹಿನಿಯಲ್ಲಿ ಕಥೆಗಾರ ಅನ್ನುವ ಕಥಾ ಮಾಲಿಕೆ ಪ್ರತಿದಿನ ಪ್ರಸಾರ ಆಗುತ್ತಿದೆ.. ಇದು ಕನ್ನಡ ಮೊದಲ ಮೆಗಾ ಸೀರಿಯಲ್..ಕನ್ನಡದ ಎಲ್ಲ (ಸಾಧ್ಯವಾದಷ್ಟು ) ಕಥೆಗಾರರ ದೃಶ್ಯ ರೂಪ ಇಲ್ಲಿದೆ. ಟಿ.ಎನ್ . ಸೀತಾರಾಮ್ ಅವರ ಜೊತೆ,ಪಿ.ಶೇಷಾದ್ರಿ ,ನಾಗೇಂದ್ರ ಶಾ ಯಂತಹ ದೈತ್ಯ ಪ್ರತಿಭೆಗಳು ಈ ಮಾಲಿಕೆಯ ತಮ್ಮ ನಿರ್ದೇಶನ, ನಟನೆಯ ರುಚಿ ವೀಕ್ಷಕರಿಗೆ ನೀಡಿದ್ದಾರೆ .ಅನಂತ್ ಚಿನಿವಾರ್ ಮತ್ತು ಅವರ  ಸಹೋದ್ಯೋಗಿ ಪುನೀತ್ ಬಾರ್ಕೂರ್ ಅವರ ಮತ್ತೊಂದು ಸಾಧನೆ ಈ ಮಾಲಿಕೆಯ ಪ್ರಸಾರ.ಯಾರು ಈ ಮಾಲಿಕೆ ಮಿಸ್ ಮಾಡಿಕೊಂಡಿದ್ದಾರೋ ಅವರಿಗೆ ಸದವಕಾಶ ವೀಕ್ಷಿಸುವುದಕ್ಕೆ.
ಟಿ .ಎನ್ . ಸೀತಾರಾಮ್ ಮತ್ತು ಅವರ ಗ್ರೂಪ್ ಅಂದ್ರೆ ಸ್ವಲ್ಪ ಜಾಸ್ತಿನೆ ವಿಶೇಷ.. ಕಥೆಗಾರ್ ಸಹ ಅಂತಹ ಪಟ್ಟಿಗೆ ಸೇರುತ್ತದೆ.. ಪ್ರತಿದಿನ ರಾತ್ರಿ ಹತ್ತಕ್ಕೆ ....ತುಂಬಾ ಖುಷಿಕೊಡುವ ಕಥೆಗಾರ!

ಕಾರ್ಟೂನ್ಗಳು

ಒಂದಷ್ಟು ಕಾರ್ಟೂನ್ಗಳು .. ರಾಜಕೀಯ...ವಿಶ್ವರೂಪಂ .. ಕಾರ್ಟೂನಿಸ್ಟ್ ಗಳಾದ ಸತೀಶ್ ಆಚಾರ್ಯ,ರಘುಪತಿ ಶೃಂಗೇರಿ ಮತ್ತು ಕುಶಾಲ್  ಭಟ್ಟಾಚಾರ್ಯ ಅವರ ಕೈಗೆರೆ  ಹೀಗಿದೆ..!








ಬಿ ಟೌನ್ ನಲ್ಲಿ ಇದ್ದೀದ್ದರೆ..

ಸುವರ್ಣ ನ್ಯೂಸ್ ನಲ್ಲಿ ಚಿದಂಬರ ರಹಸ್ಯ ಅನ್ನುವ ಕಾರ್ಯಕ್ರಮದ ನಿರೂಪಕನ ಬಗ್ಗೆ ಒಮ್ಮೆ ಬರೆಯುತ್ತ ನಾನು ಈತ ಹೆಚ್ಚು ಟೀವಿ ನೈನ್  ಹೀಗೂ ಉಂಟೆ ನಾರಾಯಣ ಸ್ವಾಮಿ ಯನ್ನು ಅನುಸರಿಸುತ್ತಾರೆ ಎಂದು ಬರೆದಿದ್ದೆ ಒಮ್ಮೆ. ಅದಾದ ಬಳಿಕ ಈ ನಿರೂಪಕ ನನ್ನ ಜೊತೆಯಲ್ಲಿ ಮಾತಾಡ  ಬಯಸಿದ್ದು ,ಆ ಬಳಿಕ ತಾನು ನ್ಯಾನ್ಸಿಯನ್ನು ಯಾಕೆ ಅನುಸರಿಸಿರ ಬಹುದು ಎಂದು ಕ್ಲಾರಿಫೈ ಮಾಡಿದ್ದು ಹಳೆಯ ಕಥೆ. ಹೀಗೆ ಸಾಫ್ಟಾಗಿ ಬೆಳೆದ ನಮ್ಮಿಬ್ಬರ ವಿಶ್ವಾಸದ ಸ್ನೇಹ ದಿನೇ ದಿನೇ  ಹೆಚ್ಚಾಗಿದೆ .ಆತನ ಹೆಸರು ಪ್ರದೀಪ್ ಬಡೆಕ್ಕಿಲ .
ಒಂದೊಳ್ಳೆಯ ಪ್ರಯತ್ನದಿಂದ ಸಾಧನೆ ಮಾಡಿದರೆ ಯಶಸ್ಸು ಗಟ್ಟಿ ಅನ್ನುವ ನಂಬಿಕೆ ಎಲ್ಲರಲ್ಲೂ ಇದ್ದೆ ಇದೆ,ಅ ರೀತಿಯ ಸಾಧನೆಯನ್ನು ಮಾಡಿರುವ ಪ್ರದೀಪ್  ಮಾಡಿರುವ ಸಾಧನೆಯನ್ನು ನಾನು ಗಮನಿಸುತ್ತಾ ಬಂದಿದ್ದೆ.. ಖುಷಿ ಅನ್ನಿಸುತ್ತೆ.

ಈತ ತನ್ನ ಧ್ವನಿಯ ಮೂಲಕ ಹೆಚ್ಚು ಪರಿಚಿತ. ಈ ಧ್ವನಿಗೆ ಮರುಳಾದವರು  ಕೇವಲ ಹೆಣ್ಣುಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಮತ್ತು ಎಲ್ಲ ವಯೋಮಿತಿಯವರು. ಟೀವಿ ನೈನ್ , ಸುವರ್ಣ , ಸುವರ್ಣ ನ್ಯೂಸ್,...! ವ್ಯಾಪ್ತಿ ದೊಡ್ಡದು ಪುತ್ತೂರಿನ ಪ್ರದೀಪ್ ದು.

ಸುವರ್ಣ ವಾಹಿನಿಯಲ್ಲಿ ಪ್ರಸಾರ ಆದ ರಿಯಾಲಿಟಿ ಶೋಗಳಿಗೆ ಧ್ವನಿ ನೀಡುತ್ತಿದ್ದ ಪ್ರದೀಪ್  ತಮ್ಮ ವ್ಯಾಪ್ತಿಯನ್ನು ನಟನೆಯತ್ತ ತಿರುಗಿಸಿ ಕೊಂಡರು,ರಾಜಕುಮಾರಿ  ಲಕುಮಿ, ಕೃಷ್ಣ ರುಕ್ಮಿಣಿ ಯಲ್ಲಿ ನಟಿಸಿದ ಬಳಿಕ  ಪ್ರದೀಪ  ಈಗ ತಮಿಳು ಧಾರವಾಹಿ ಸೊಂದ ಬಂಧಂ ನಲ್ಲಿ(ಸನ್ ಟೀವಿಯಲ್ಲಿ ಪ್ರಸಾರ ಆಗುತ್ತಿದೆ) ಮುಖ್ಯ ಪಾತ್ರಧಾರಿ. ಈಗ ಆತ  ತಮಿಳು ಕಲಿತು ಅದೂ ಓದುವುದನ್ನು.., ಮಾತಾಡುವುದನ್ನು .. ತಾನುಎಂತಹ ಚಾಲೆಂಜ್ ಗೆ ಬೇಕಾದರೂ  ಗೆಲ್ಲ ಬಲ್ಲೆ ಅನ್ನುವುದನ್ನು ಪ್ರೂವ್ ಮಾಡಿದ್ದಾರೆ.ಈಗ ಈ ಟೀವಿಯಲ್ಲಿ ಅವರ ಧ್ವನಿ ಕೇಳಿ ಬರ್ತಾ ಇದೆ..

ನನ್ನ ಫ್ರೆಂಡ್ ಎಂದು ನಾನುಹೊಗಳ್ತಾ ಇಲ್ಲ .. ಇರುವ ಸಂಗತಿ ಹೇಳ್ತಾ ಇದ್ದೀನಿ.
ಮತ್ತೊಂದು ಸಂಗತಿ ಈತ ಒಳ್ಳೆಯ ಹಾಡುಗಾರ .. ತನ್ನ ಮಿತ್ರರೊಡನೆ ಸೇರಿ ಒಂದು ಹಾಡಿನ ಸೀಡಿ ರೆಡಿ ಮಾಡಿದ್ದಾರೆ..ತುಂಬಾ ಚನ್ನಾಗಿದೆ,ಥೇಟ್  ಬಾಲಿವುಡ್  ರೀತಿಯಲ್ಲಿ. ಇದೆ ಹಾಡು , ಇಂತಹ ಹುಡುಗ ಬಿ ಟೌನ್ ನಲ್ಲಿ ಇದ್ದೀದ್ದರೆ..
ಲಿಂಕ್ ಕೆಳಗಿದೆ.ಹರಿಸಿ ಹಾರೈಸಿ ಕನ್ನಡದ ಕುಡಿಯನ್ನು ...