ಕಾತುರ...!



ಬಹಳ ದಿನಗಳಾಯ್ತು ಬ್ಲಾಗಿಂಗ್ ಮಾಡಿ.. ನನಗೆ ಅತ್ಯಂತ ಹೆಚ್ಚು ಪ್ರಿಯವಾದ ಬ್ಲಾಗ್ ಇದು.. ಟೀವಿ ಕಾರ್ಯಕ್ರಮಗಳ ಬಗ್ಗೆ ವಿಮರ್ಶೆ ನನಗೆ ತೋಚಿದಂತೆ ಬರೆಯುವ ಹವ್ಯಾಸವು ನನಗೆ ಸಾಕಷ್ಟು ಮುದ ನೀಡಿದೆ... ಸಾಮಾನ್ಯವಾಗಿ ನನಗೆ ಯಾರ ಬಗ್ಗೆಯೂ ಕೋಪ ಅಸಹನೆ ಇಲ್ಲ, ಆ ಗಳಿಗೆಯಲ್ಲಿ ಅನ್ನಿಸಿದ್ದನ್ನು ದಾಖಲಿಸುವ ಮನಸ್ಸು ಅಷ್ಟೇ.
ಆದರು ಯಾಕೋ ಎರಡು ದಿನದಿಂದ ಮನಕ್ಕೆ ಬೇಜಾರಾಗಿದೆ.. ಸಾಮಾನ್ಯವಾಗಿ ದೊಡ್ಡ ಸಂಸ್ಥೆಗಳಿಂದ ಇಂತಹ ಅಚಾತುರ್ಯ ನಡೆದದ್ದು ಹೇಗೆ ಅಂತ.. ಟಿವಿ ನೈನ್ ನವರು ಇಬ್ಬರು ಸಾಹಸಿ ಯುವ ಪತ್ರಕರ್ತರನ್ನು ಬಾವಿಗೆ ದೂಕಿ ಆಳ ನೋಡಿದ್ರಲ್ಲ ಅತ್ಯಂತ ಖೇದಕರ  ಸಂಗತಿ ! ಸಂಸ್ಥೇನೂ ಬಚಾವ್ ಆಗುತ್ತೆ .. ಎಲ್ಲರು, ಆದರೆ ಆ ಸಾಹಸಿಗಳು... ಇರ್ಲಿ.. ಏನು ಹೇಳೋಕೆ ಆಗಲ್ಲ ಇಂತಹ ಅನಾಹುತಗಳ ಬಗ್ಗೆ !

@ ಹೆಚ್ಚು ಗೊತ್ತಿರುವ ಅಥವಾ ಗಾಡ್ ಫಾದರ್  ಗಳಿಂದ ಮೇಲೆ ಬಂದಿರುವ... ಇಂತಹ ವಿಶೇಷಣಗಳು ಇರುವಂತಹ ಯಾವುದೇ ಪ್ರತಿಭೆ ಬಗ್ಗೆಯೂ ಹೆಚ್ಚಿನ ಆಸಕ್ತಿ ಇರೋದಿಲ್ಲ, ಆದರೆ ತಮ್ಮ ಸ್ವ ಪ್ರಯತ್ನದಿಂದ  ಮೇಲೆದ್ದಿರುವ ಪ್ರತಿಭೆಗಳು ಅಂದ್ರೆ ಜಾಸ್ತಿನೇ ಪ್ರೀತಿ. ಅಂತಹ ಪಟ್ಟಿಗೆ ಸೇರ್ಪಡೆ ಆಗೋರು ಸೋನಿ ಟೀವಿಯ, ಬೂಗಿ ವೂಗಿ ಕಾರ್ಯಕ್ರಮ. ಅತಿ ಹೆಚ್ಚಿನ ಖುಷಿ ಕೊಡುತ್ತೆ ಅಲ್ಲಿನ ಜಡ್ಗಳು, ನಿರೂಪಕರು ಮತ್ತು ಅಪರೂಪದ ಪ್ರತಿಭೆಗಳ ಸಾಧನೆ ಕಂಡಾಗ.
ಅದೇ ರೀತಿ ಜೀ ವಾಹಿನಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸಹ ಅಷ್ಟೇ ಪ್ರಿಯ ನನಗೆ. ಇತ್ತೀಚೆಗಷ್ಟೇ ಹರೆಯದ ಪ್ರತಿಭೆಗಳ ಈ ಕಾರ್ಯಕ್ರಮವನ್ನು ಆಸ್ಥೆಯಿಂದ ವೀಕ್ಷಿಸ್ತಾ ಇದ್ದೆ. ಈಗ ಮಕ್ಕಳ ಕಾರುಬಾರು.. ತಪ್ಪದೆ ಸಮಯ ಮಾಡಿಕೊಂಡು ನೋಡುವ ಕಾತುರ  ಇದೆ... ಆಹಾ !   

ಬಾಲ್ಯ ವಿವಾಹ !


 ನಿನ್ನೆ ಸಂಜೆ ಈ ಟೀವಿ ಕನ್ನಡ ವಾಹಿನಿಯನ್ನು ವೀಕ್ಷಿಸುವಾಗ ಮಿತ್ರ ಸುಘೋಷ್ ನಿಗಳೆ ಟಾಕ್  ಶೋನಲ್ಲಿ ಇದ್ದರು. ಈಟೀವಿ ಕನ್ನಡ ವಾಹಿನಿಯು ಯಾವಾಗ ಇಂತಹ ಟಾಕ್ ಶೋಗಳನ್ನು ಆರಂಭ ಮಾಡಿತು ಎನ್ನುವ ಆಶ್ಚರ್ಯದ ಜೊತೆಗೆ ಛಕ್ಕಂತ ನೆನಪಿಗೆ ಬ೦ತು ಅವರು ಕಳುಹಿಸಿದ್ದ ಮೆಸೇಜ್ . ಕೇವಲ ಅಶ್ವಿನಿ ನಕ್ಷತ್ರ ನೋಡಿ ಅನ್ನುವ ಸಂದೇಶ ಕಳುಹಿಸಿದ್ದರು.  ಸೂರ್ಯ ಬಿಟ್ಟು ಯಾವ ನಕ್ಷತ್ರ ವು ಕಾಣಿಸಲಿಲ್ಲ ;-)  ಸಂಜೆ ಈ ಅಶ್ವಿನಿ ನಕ್ಷತ್ರ ಧಾರಾವಾಹಿಯ ಬಗ್ಗೆ ಟಾಕ್ ಷೋ ನಡೆಯುತ್ತಿತ್ತು . ಆ ಧಾರಾವಾಹಿಯ ಹೀರೋ ಜೆಕೆ ನಾಪತ್ತೆ. ಆ ಕುರಿತು ಸಿಕ್ಕಾಪ ಟ್ಟೆ ಸೀರಿಯಸ್ ಆದ ಚರ್ಚೆ ನಡೆಯುತ್ತಿತ್ತು. ಅದು ಧಾರಾವಾಹಿಯ ಒಂದು ಭಾಗ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಸುಘೋಷ್ ಥೇಟ್ ನೇರ ಪ್ರಸಾರದ ಜರ್ನೋ ರಂತೆ ಮಾತನಾಡುತ್ತಿದ್ದರು .  ಟಿ ಎನ್ ಸೀತಾರಾಮ್ ಅವರ ಮುಕ್ತ ಮುಕ್ತ ಧಾರಾವಾಹಿಯಲ್ಲಿ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದರು.ಆ ಬಳಿಕ ಸಮಯ ಚಾನೆಲ್ ಗೆ ಹೋದವರು ಈಗ ಈ ಟೀವಿ ಕನ್ನಡದಲ್ಲಿ ಇದ್ದಾರೆ. ಕಾರ್ಯಕ್ರಮ ಚೆನ್ನಾಗಿತ್ತು. ಆ ಧಾರಾವಾಹಿಯ ಮುಖ್ಯಪಾತ್ರಧಾರಿ ಕಾರ್ತಿಕ್  ಬಾಲಿವುಡ್ ಚಿತ್ರದಲ್ಲಿ ಸೆಲೆಕ್ಟ್ ಆಗಿದ್ದಾರೆ ಅನ್ನುವ ಸುದ್ದಿ ಇದೆ. ಒಳ್ಳೆ ಗ್ಲಾಮಿ ನಟ. ಆದರೆ ಪಾಪ ಅನ್ನಿಸೋದು ಜೆಕೆ ಜೋತೆಯಾಗಿರುವಾಂದ್ರೆ ಹೆಂಡತಿ ಪಾತ್ರಧಾರಿ ಹುಡುಗಿಯನ್ನು ನೋಡಿದಾಗ ! ನಿರ್ದೇಶಕ ಆರೂರು ಜಗದೀಶ್  ಬಾಲ್ಯ ವಿವಾಹ ಮಾಡಿದ್ದಾರೆ ಅನ್ನಿಸುತ್ತೆ. ಹಿಂದಿಯ ಮಧುಬಾಲ ನೋಡಿದ್ದೀನಿ.. ಸೊ .... !



ನನಗೆ ಸಿಕ್ಕಾಪಟ್ಟೆ ಇಷ್ಟ ಆಗುವ ಕಾರ್ಯಕ್ರಮ ಅಂದ್ರೆ ಅಡುಗೇದು . ಅದು ಯಾವ ಭಾಷೆಯಲ್ಲಿಯಲ್ಲಿ ಆಗಿರಲಿ . ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗೋದು ಯಾಕೆ ಇಷ್ಟ  ಆಯ್ತು ಅಂದ್ರೆ ಅದರ ನಿರೂಪಕ ಅತಿಥಿ ಮಾಡಿದ ಅಡುಗೆಯತ್ತ ಗಾಬರಿಯಾಗಿ ನೋಡಿ ಆ ಬಳಿಕ ಸೇವಿಸುವುದು :-) ಮುಖ್ಯವಾಗಿ ನಿರೂಪಕರಿಗೆ ಅಂತಹ ಯಾವುದೇ ಚಾನ್ಸ್ ಇಲ್ಲ .. ಆದರೆ ಗೌತಂ ಮಾಚಯ್ಯ ತಮ್ಮ ಚಾನೆಲ್ ಮಂದಿಗೆ ಆ ಅವಕಾಶ ಮಾಡಿಕೊಟ್ಟಿದ್ದಾರೆ . ವಾವ್ ಯಾ :-)





ಚುಚ್ಚುತ್ತಾರೆ !



 ಸಲ್ಮಾನ್ ಖಾನ್ ಹುಟ್ಟು ಹಬ್ಬ ಇಂದು . ಆತನ ವೈಯುಕ್ತಿಕ  ಬದುಕಿನ   ಬಗ್ಗೆ ನನಗೆ ಆಸಕ್ತಿ ಲ್ಲ, ಆದರೆ ನಟನಾಗಿ ಬೆಳೆದ ರೀತಿ, ಸಾಕಷ್ಟು ಅಭಿಮಾನಿಗಳು ಅಭಿಮಾನಿಸುವಷ್ಟು ಅಲ್ಲದೆ ಇದ್ದರು ನನಗೆ ಸಲ್ಮಾನ್ ನಟನೆ ಅಂದ್ರೆ ತುಂಬಾ ಲೈಕ್ ನನಗೆ. ಒಂದಷ್ಟು ವಯಸ್ಸಿಗೆ ವಯಸ್ಸಾಯಿತು ಅನ್ನುವ ಹಣೆಪಟ್ಟಿ ಕಟ್ಟಿ ಬಿಡುವ ನಮ್ಮ ಸಮಾಜದಲ್ಲಿ ಸಲ್ಮಾನ್ ರಂತಹವರು ಮಾದರಿ ಆಗುತ್ತಾರೆ. ದೇಹಕ್ಕೆ ಒಂದಷ್ಟು ಕಸರತ್ತು ಮುಖಕ್ಕೆ ಒಂದಷ್ಟು ವರ್ಕು, ತಲೆಗೆ ಒಂದು ಸ್ವಲ್ಪ  ಕೆಲಸ  ಕೊಡಿ ಎಲ್ಲವು ಸರಿಯಾಗುತ್ತದೆ  ಎನ್ನುವ  ಸಂದೇಶ ನೀಡುವ ಜೀವನೋತ್ಸಾಹಿ, ಅವರು ಬಿಗ್ ಬಾಸ್ ಗೆ ಬಂದಾಗ ನಾನು ಆ ಎಲ್ಲ ಸಂಗತಿಗಳನ್ನು ಗಮನ ನೀಡಿ ನೋಡುವುದು. ನನ್ನ ಅತಿ ಹೆಚ್ಚಿನ ಪ್ರಿಯವಾದ ಸ್ಪರ್ಧಿಗಳಲ್ಲಿ ಸಂಗ್ರಾಮ್ ಸಿಂಗ್ ಗೆ ಮೊದಲ ವೋಟ್ .  ಮುಖ್ಯವಾಗಿ ಆಟ ಭಾರತೀಯ ಕ್ರೀಡಾಪಟು . ಇಂತಹವರಿಗೆ ಹೆಚ್ಚು ಪ್ರೋತ್ಸಾಹ ನೀಡಿದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಂದು ಅರ್ಥ ಸಿಗುತ್ತದೆ. ಗೌಹರ್ ಗಿಂತ ನನಗೆ ತನಿಷ ಸಹನೆ ಹೆಚ್ಚು ಇಂಪ್ರೆಸ್ ಮಾಡಿ ದೆ.. ಆದ್ರೆ ಬಿಗ್ ಬಾಸ್ ಮಂದಿ ನೋಡುವ ಅನೇಕ ಅಂಶಗಳು ಸಾಮಾನ್ಯರು ನೋಡುವಂತೆ ಇರಲ್ಲ ಅದೇ ದೊಡ್ಡ ಪ್ರಾಬ್ಲಮ್ ಅದರಲ್ಲಿ .



ಜಿ ಎಸ್  ಎಸ್  ಅವರ ಅಂತಿಮ ಸಂಸ್ಕಾರದ ವೇಳೆಯಲ್ಲಿ ಉದಯ ನ್ಯೂಸ್ ವಾಹಿನಿಯಲ್ಲಿ ಅದರ ವಿವರಣೆ ನೀಡುತ್ತಿದ್ದ ವಾರ್ತಾವಾಚಕಿ ಯ ಆಂಗಿಕ ಭಾವ ಮತ್ತು ಮಾತಿನಲ್ಲಿ, ನಿರೂಪಣೆಯಲ್ಲಿನ ಏರಿಳಿತ ತುಂಬಾ ಪ್ಲೆಸೆಂಟ್ ಆಗಿತ್ತು. ಇಂತಹ ಸಮಯಗಳಲ್ಲಿ ಮಾತ್ರವಲ್ಲ ಎಲ್ಲ ಸಂದರ್ಭಗಳಲ್ಲೂ  ಸಹ ಈ ರೀತಿಯ ಪ್ರಸೆಂಟೇಷನ್  ತುಂಬಾ  ಇಷ್ಟವಾಗುತ್ತದೆ . ಸುವರ್ಣ ನ್ಯೂಸ್ ಭಾವನ, ಟೀವಿ ನೈನ್  ರಾಧಿಕ, ಸಮಿನಾ ಈ ಲಿಸ್ಟ್ ಗೆ ಸೆರುತ್ತಾರೆ. ಕೆಲವರು ಕಿವಿಗೆ ಅದೆಂಗೆ ಚುಚ್ಚುತ್ತಾರೆ ಅಂದ್ರೆ ಯಪ್ಪಾ !



ವಾವ್ ವಾವ್ !



ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಇನ್ನಿಲ್ಲ.. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ದೊರಕಲಿ !



ಸುವರ್ಣ ವಾಹಿನಿಯಲ್ಲಿ ಸಂಪಾದಕೀಯ ಅನ್ನುವ ಪದ ಕಾಣ ಸಿಗ್ತಾ ಇತ್ತು ಕಳೆದ ವಾರ. ತುಸು ಕುತೂಹಲದಿಂದ ನಾನು ಕಾದೆ ಏನಿರ ಬಹುದು ನೋಡುವ ಅಂತ. ಅದರಲ್ಲಿ ಅನಂತ್ ಚಿನಿವಾರ್ ಸಂಪಾದಕೀಯದ ಬಗ್ಗೆ ವಿವರಣೆ ನೀಡುತ್ತ, ವಿಷಯ ವಿಶ್ಲೇಷಿಸಿದರು. ನನಗೆ ಅದರ ಬಗ್ಗೆ ಸ್ವಲ್ಪ ಗೆಸ್ ಇತ್ತು, ಆದರೆ ಆ ಕಾರ್ಯಕ್ರಮ ನೋಡುವವರೆಗೂ ಸುಮ್ಮನಿರುವ ಅಂತ ಕಾದೆ. ನಿಜಕ್ಕೂ ಖುಷಿ  ಕೊಡ್ತು. ಒಂಬತ್ತು ಗಂಟೆಯ ಕಾರ್ಯಕ್ರಮ ಕಾದು ನೋಡುವಂತೆ ಮಾಡಿದವರು ಶಶಿಧರ್ ಭಟ್. ಅವರ ಕಾರ್ಯಕ್ರಮ, ಅದರಲ್ಲೂ ನ್ಯೂಸ್ -ವ್ಯೂಸ್ ಹೆಚ್ಚು ಆಸಕ್ತಿ ಬೆಳೆಸಿತು ಸಾಮಾನ್ಯರಲ್ಲಿ. ಈಗಲೂ ಸುವರ್ಣ ನ್ಯೂಸ್ ಲ್ಲಿ ಒಳ್ಳೆಯ  ಕಾರ್ಯಕ್ರಮ ನೀಡಿದವರ ಪಟ್ಟಿಯಲ್ಲಿ ಶಶಿ ಸರ್ ಸಹ ಸೇರ್ಪಡೆಯಾಗಿದ್ದಾರೆ. ಅನಂತ್ ಅವರೀ ಕಾರ್ಯಕ್ರಮದಲ್ಲಿ ಭಿನ್ನತೆ ಇದೆ ಅನ್ನಿಸಿತು. ಒಂದು ಸಂಗತಿ ಸರ..! ನೀವು ಸಿನಿಮಾದವರ ಕಡೆಗೆ ಹೋಗ ಬೇಡಿ. ಒಮ್ಮೆ ನೀವು ಜನಶ್ರೀ ವಾಹಿನಿಯಲ್ಲಿ  ದರ್ಶನ್ ಅವರನ್ನು ಸಂದರ್ಶಿಸುವಾಗ ಸಾಕಷ್ಟು ಸಿನಿ ಜರ್ನೊಗಳು ಸಿಟ್ಟಾಗಿದ್ದರು. ಛೆ ಇವರಿಗೆ ನೆಟ್ಟಗೆ  ಸಂದರ್ಶನ ಮಾಡೋಕೂ ಬರಲ್ಲ ಅಂತ.. ನೋಡಿ ಹೇಗಿದೆ ಸುದ್ದಿಮನೆಗಳಲ್ಲಿ ಇರುವವರ ಕತೆ .ನಿಮಗೇನು ಇದು ಹೊಸದಲ್ಲ ಬಿಡಿ ಸರಾ... ನೀವು ಅದರ ಭಾಗ ತಾನೆ ;-)

@ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುವ ಎಫ್ ಐ ಆರ್ ನಿರೂಪಕ ಅಜಿತ್  ಬಗ್ಗೆ ಸಾಕಷ್ಟು ಮಂದಿಗೆ ಇಷ್ಟ ಅನ್ನುವ ಸಂಗತಿಗೆ ಗೊತ್ತಾಗಿದೆ. ಯಾಕಿಷ್ಟ ಅಂದ್ರೆ ಅವರ ಮಾತಿನ ಶೈಲಿ .. ಪದಗಳು ಬಳಸುವ ರೀತಿ.. ಒಂದೆರಡು ದಿನ ಅಜಿತ್ ಕಾಣಲಿಲ್ಲ ಆತ ಬೇರೆ ಕಡೆಗೆ ಹೊರಟರಾ ಅನ್ನುವ ಆತಂಕ ಆಗಿತ್ತು ವೀಕ್ಷಕರಿಗೆ.. ನಿರೂಪಕರಿಗೆ ಇದಕ್ಕಿಂತ ಒಳ್ಳೆಯ ಕಾಣಿಕೆ ಇನ್ನೇನಿದೆ ಅಲ್ವೇ?


ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗುವ ನಚ್ ಬಳಿಯೇ ತೀರ್ಪುಗಾರರು ಮೂರು ಜನ ಇಷ್ಟ ಆಗ್ತಾರೆ. ಶಿಲ್ಪ ಶೆಟ್ಟಿ ಕುಂದ್ರ , ಸಾಜಿದ್ ಮತ್ತು ಟೆರೆನ್ಸ್ . ಸಾಜಿದ್ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಶೈಲಿ ನನ್ನನ್ನು ತುಂಬಾ ಆಕರ್ಷಿಸಿದೆ. ತುಸು ಜಾಸ್ತಿನೇ ಹಾಸ್ಯ ಬೆರೆಸುವ ಸಾಜಿದ್ ಬಗ್ಗೆ, ಮುದ್ದಾದ ಕನ್ನಡದ ತುಳು ಚೆಲುವೆ ;-) ಶಿಲ್ಪ,ತಮ್ಮ ಯೂನಿಕ್ ಸ್ಟೈಲ್ ಗಳಿಂದ ಗಮನ ಸೆಳೆಯುವ ಟೆರೆನ್ಸ್ ... ಹೆಚ್ಚು ಹೇಳಲ್ಲ..! ಜಾಸ್ತಿ ಬರೆಯೋದಿದೆ!

* ಜೀಹಿಂದಿ ವಾಹಿನಿಯಲ್ಲಿ ಪ್ರಸಾರ ಆಗುವ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮ ಅದ್ಭುತ. ನಿನ್ನೆ ಎಪಿಸೋಡ್ ಸಿಕ್ಕಾಪಟ್ಟೆ ಚೆನ್ನಾಗಿತ್ತು. ಅದರಲ್ಲೂ ಸರ್ಕಸ್ ನ ಜೋಕರ್ ಜೋಡಿ ಮತ್ತು ಕಸರತ್ತು ಆಡಿದ ಮತ್ತೊಂದು ಜೋಡಿ ಸಕತ್ . ಪ್ರಸಾರ ಆಗುವ ಪ್ರತಿಬಾರಿಯೂ ನೋಡಲು ಇಷ್ಟ ಆಗುವಂತಹ ಎಪಿಸೋಡ್ ನಿನ್ನೆಯದು.ಸ್ಪರ್ಧಿಗಳು ಯಶಸ್ವಿಗಾಗಿ ಮಾಡುವ ಪ್ರಯತ್ನ ಅನನ್ಯ. ಈ ಕಾರ್ಯಕ್ರಮ ವಾವ್ ವಾವ್ !



ಇಂಕಾ ಇಂಕಾ


ಡಿಸ್ಕವರಿ ಚಾನೆಲ್ ನಲ್ಲಿ ಅತಿ ಹೆಚ್ಚು ಮುಜುಗರ ಮತ್ತು ಆಶ್ಚರ್ಯ ಉಂಟು ಮಾಡುವ ಕಾರ್ಯಕ್ರಮ ಅಂದ್ರೆ ಮ್ಯಾನ್ vs ವೈಲ್ದ್. ಮನುಷ್ಯ ಏನು ಬೇಕಾದ್ರೂ ತಿಂದು ಬದುಕಿರ ಬಲ್ಲ ಅನ್ನೋದಕ್ಕೆ ಸಾಕ್ಷಿ ಈ ಕಾರ್ಯಕ್ರಮ. ನಿಜ ಹೇಳಬೇಕು ಅಂತ ಅಂದ್ರೆ ನಮಗೆ ತಿನ್ನುವ ಆಸೇನೆ ಹೊರತು ಹೊಗುತ್ತದೆ. ನನಗೆ ಆತನಿಗಿಂತ ಆತನ ಆಟಗಳನ್ನು ಶೂಟ್ ಮಾಡ್ತಾರಲ್ಲ ಅವರ ಬಗ್ಗೆ ಹೆಚ್ಚು ಆಸಕ್ತಿ. ಒಂದು ಜೋಕ್ ಇದೆಯಲ್ಲ ಚಂದ್ರಗ್ರಹಕ್ಕೆ ಯುರಿಗಗಾರಿನ್ ಹೋದಾಗ ಅಲ್ಲಿ ಉಡುಪಿ ಹೋಟಲ್ ಭಟ್ಟರ ಟೀ  ಅಂಗಡಿ ಅಲ್ಲಿ ಇತ್ತು  ಅನ್ನುವಂತೆ  ಈತನ ಹಿಂದೆ ಹಿಂದೆ ಕ್ಯಾಮರ ಹಿಡಿದು ಹೋಗ್ತಾರಲ್ಲ ಅವರೇ ಹೆಚ್ಚು ಗ್ರೇಟ್ ಅಂತ ಅನ್ನಿಸೋದು .

ಸೋನಿ ವಾಹಿನಿಯಲ್ಲಿ ಪ್ರಸಾರ ಆಗುವ ಸಿಐಡಿ ಸಕತ್ ಮಜಾ ಕೊಡುವ ಕಾರ್ಯಕ್ರಮ. ಅಷ್ಟೊಂದು ವರ್ಷಗಳಿಂದ ಪ್ರಸಾರ ಆಗುತ್ತಿದ್ದರು ಜನರಿಗೆ ಬೋರ್ ಆಗಿಲ್ಲ. ನನಗೂ ಇಷ್ಟ ಕಣ್ರೀ . ಇನ್ಫ್ಯಾಕ್ಟ್ ಮಜಾ ಯಾಕೆಂದ್ರೆ ಸಾಮಾನ್ಯವಾಗಿ ನಾನು ಕಥೆಗಳಲ್ಲಿ ಓದಿರುವ ಪ್ರಕಾರ ಸಿ ಐಡಿ ಗಳು ಒಟ್ಟಿಗೆ ಹೋಗಿ ಕಂಡು ಹಿಡಿಯಲ್ಲ. ಆದರೆ ಸೋನಿ ಸಿಐಡಿ ಗುಂಪುಗುಂಪಾಗಿ ಹೋಗ್ತಾರೆ ಕಂಡು ಹಿಡಿಯಲು. ಆ ದೃಶ್ಯಗಳು ಮಜಾ ಕೊಡುತ್ತೆ ನನಗೆ. ಇಂತಹ ಕಡೆ ಕೆಲಸ ಸಿಕ್ರೆ ಆರಾಮವಾಗಿ ಸೇರ  ಬಹುದು ;-)

ಬಿಗ್ ಬಾಸ್ ಕಲರ್ ವಾಹಿನಿ ಜಾನ್. ಅದರಲ್ಲುಸಲ್ಮಾನ್ ಖಾನ್ ಮಾತುಗಳು ಎಲ್ಲರಿಗೂ ಇಷ್ಟ . ಆದರೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಈ ಸೀಸನ್ ಮಾತ್ರ ಸಾಡೇ ಸಾತಿ ತೊಂದರೆ ಅನುಭವಿಸ್ತಾ ಇದೆ. ಅದಕ್ಕಿಂತ ಹೆಚ್ಚಾಗಿ ಜೋಡಿಗಳ ಹನಿಮೂನ್ ಸ್ಪಾಟ್ ಆಗಿದೆ. ಕನಿಷ್ಠ ಇಂತಹ ಸಂಗತಿಗಳಿಗೆ ಬಿಗ್ ಬಾಸ್ ಮಂದಿ ಆದ್ಯತೆ  ನೀಡ  ಬಾರದು.. ಆದರೆ ಹಾಗೆ ಆಗಿಲ್ಲ. ಈ ಸೀಸನ್ ನಲ್ಲಿ ಹೆಚ್ಚು ಇಷ್ಟ ಆಗುವ ಸ್ಪರ್ಧಿ ಸಂಗ್ರಾಮ್ ಸಿಂಗ್ .
ಈ ಸೀಸನ್ ನಲ್ಲಿ ನನ್ನನ್ನು ಹೆಚ್ಚು ಇಂಪ್ರೆಸ್ ಮಾಡಿದ  ಚೆಲುವೆ ಎಲ್ಲಿ ಅವ್ರನ್. ಯಾಕೆ ಆಕೆ ಇಷ್ಟ ಆದಳು  ಅಂದ್ರೆ ಎಲ್ಲಿ ಹಿಂದಿ ಯನ್ನು ಆಕೆ ಸಮರ್ಥವಾಗಿ ಆಡುತ್ತಿದ್ದುದು .ಸ್ವೀಡನ್ ಸುಂದರಿ  ಎಲ್ಲಿ ಯನ್ನು ನೋಡುತ್ತಿದ್ದಾಗ  ನನಗೆ ಕನ್ನಡದಲ್ಲಿ ಭಾಗವಹಿಸಿದ್ದ ನಿಕಿತ ನೆನಪು ಬರುತ್ತಿತ್ತು . ಆಕೆ ಹೇಳ್ತಾ ಇದ್ದುದು ಇಂಕಾ ಇಂಕಾ ಅನ್ನೋ ತೆಲುಗು ಪದ. ಕನ್ನಡ ಚಿತ್ರರಂಗದಲ್ಲಿ    ಒಳ್ಳೆ ಸ್ಥಾನ ಗಳಿಸಿದ್ದರು ಆಕೆ ಕಲಿತ ಪದ ಇಂಕಾ ಇಂಕಾ !

ಸಲ್ಮಾನ್ ಖಾನ್ ಹೊಸ ಸಿನೆಮ ಜೈ ಹೊ ಬಗ್ಗೆ ದಿನಕ್ಕೊಂದು ಸಂಗತಿಗಳು ಹೊರ ಬರ್ತಾ ಇವೆ. ಬಿಡಿ ಸಲ್ಮಾನ್ ಬಗ್ಗೆ ಪ್ರೀತಿ ಇರುವವರು ತಪ್ಪದೆ ನೋಡ್ತಾರೆ . ಈ ಚಿತ್ರ ಅಭಿಮಾನ ಇರೋರು ಖಂಡಿತಾ ನೋಡೇ ನೋಡ್ತಾರೆ . ಸಲ್ಮಾನ್ ಖಾನ್  ಬಿಗ್ ಬಾಸ್ ನಲ್ಲಿ ಹಾಕಿಕೊಳ್ಳುವ ಟೋಪಿಯನ್ನು ಅಮೀರ್ ಖಾನ್ ಕೊಟ್ಟಿದಂತೆ . ಅದನ್ನು ಧರಿಸಿದಾಗ  ಸಲ್ಮಾನ್ ಗೆ ಹೊಸ ಹೊಸ ಐ ಡಿ ಯ ಗಳು ಬರುತ್ತವೆಯ೦ತೆ .. ವಾವ್ ಧೂಮ್ ಮಚಾಲೆ  ಧೂಮ್ !