ಉಲ್ಲಾಸ



ಮನೆಯ ವಿಷಯ ಬೀದಿ ರಂಪ ಆಗ ಬಾರದು.ಅದರಲ್ಲೂ ಮಧ್ಯಮ ವರ್ಗದ ಹೆಣ್ಣುಮಗಳಿಗೆ  ಇಂಥ ಪರಿಸ್ಥಿತಿ ಮಾತ್ರ ಬರಲೇ ಬಾರದು.ಎರಡು ದಿನದಿಂದ ಕನ್ನಡ ವಾಹಿನಿಗಳಲ್ಲಿ ಪ್ರಸಾರ ಆಗ್ತಾ ಇರುವ ಸಂಗತಿ ಕಂಡಾಗ ಆ ಹೆಣ್ಣುಮಗಳ ಬಗ್ಗೆ ನನಗೆ ಅನ್ನಿಸಿದ್ದು ಮೇಲೆ ತಿಳಿಸಿದಂತೆ.
ಆಕೆಯ ಬದುಕಲ್ಲಿ ಬಗವಂತ ನೆಮ್ಮದಿ ಕೊಡಲಿ.. ಆ ಮಕ್ಕಳ ಬದುಕಿಗೆ ಒಳ್ಳೆಯ ನೆಲೆ ದೊರಕಲಿ.

ಸಾಮಾನ್ಯವಾಗಿ ನಾನು ಅಡುಗೆ ಕಾರ್ಯಕ್ರಮಗಳನ್ನು ಸಹ ಹೆಚ್ಚು ಆಸ್ಥೆಯಿಂದ ವೀಕ್ಷಿಸುತ್ತೇನೆ.
 ಫಾಕ್ಸ್ ಟ್ರಾವೆಲರ್ಅನ್ನೋ ವಾಹಿನಿ ಭರಪೂರ ಅಡುಗೆ ಕಾರ್ಯಕ್ರಮಗಳನ್ನು ನೀಡುತ್ತದೆ.ಅದರಲ್ಲಿ ಎಲ್ಲ ಆಹಾರ ಪ್ರಿಯರಿಗೂ ಇಷ್ಟ ಆಗುವಂತಹ ಅಡುಗೆಗಳು ಸಿದ್ಧ ಆಗ್ತಾ ಇರುತ್ತೆ.
ನಾನು ವಿದೇಶಿ ಅಡುಗೆ ಮಾಡೋದೇ ಇಲ್ಲ ,ಆದರೆ ಅವರು ತರಕಾರಿ ಕತ್ತರಿಸುವ,ಜೋಡಿಸುವಂತಹ ಕೆಲಸಗಳನ್ನು ಭಿನ್ನವಾಗಿ ಮಾಡ್ತಾರೆ.ಸಮ್ತಿಂಗ್  ಸ್ಪೆಶಲ್ .ಅದರ ಕಲಿಕೆಗೆ ಸುಲಭ ಆಗುತ್ತೆ.

ಅದೇ ರೀತಿಯಲ್ಲಿ ಟೀವಿ ನೈನ್ ವಾಹಿನಿಯಲ್ಲಿ ಪ್ರಸಾರ ಆಗುವ ಲೇಡಿಸ್ ಕ್ಲಬ್ ನಲ್ಲಿ ಅಡುಗೆ ಪ್ರೊಫೆಸರ್ ತರಕಾರಿ ಸಲಾಡ್ ಹೇಳಿಕೊಟ್ರು,ಅಲ್ಲಿ ನನ್ನನ್ನು ಆಕರ್ಷಿಸಿದ್ದು ಅವರು ತರಕಾರಿ ಹಚ್ಚಿದ ರೀತಿ.. ಈಗ ನಾನು ಅದೇ ರೀತಿ ಕತ್ತರಿಸ್ತಾ ಇದ್ದೀನಿ :-).

ಉದಯ ವಾಹಿನಿ ಮತ್ತೊಮ್ಮೆ ತನ್ನ ಹಳೆಯ ಕಾರ್ಯಕ್ರಮದೊಂದಿಗೆ ವೀಕ್ಷಕರ ಮುಂದೆ ಬಂದಿದೆ.ಹೆಣ್ಣುಮಕ್ಕಳಿಗೆ ಇಷ್ಟ ಆಗುವ ಕುಶಲ ಕಲೆ,ಸೌಂದರ್ಯ ದಂತಹ ಅಂಶಗಳನ್ನು ಒಳಗೊಂಡ ಕಾರ್ಯಕ್ರಮಗಳು. ಸದಾ ಕ್ರೈಮ್,ಜಗಳ, ನ್ಯಾಯ..! ಇಂತಹ ವಿಷಯಗಳನ್ನೇ ಕಾಣುತ್ತಿರುವ ನಮಗೆ, ಉದಯದಲ್ಲಿ ಪ್ರಸಾರ ಆಗುವ ಸ್ಟಾರ್ ಪಾಕ ಮತ್ತು ಹೆಣ್ಣುಮಕ್ಕಳಿಗೆ  ಆಪ್ತ ಅನ್ನಿಸುವ  ಕುಶಲಕಲೆ ಯಂತಹ (ಕಾರ್ಯಕ್ರಮದ ಹೆಸರು ತಿಳಿದಿಲ್ಲ.ಪ್ರಾಯಶಃ ಬೆಳಗಿನ ಹೊತ್ತು ಹನ್ನೊಂದು ಅಥವಾ ಹನ್ನೊಂದು  ಪ್ರಸಾರ ಆಗು ತ್ತದೆ.) ಸಂಗತಿಗಳು ಚೇತೋಹಾರಿ .

ಅಡುಗೆ ಕಾರ್ಯಕ್ರಮ ಅಂದ ತಕ್ಷಣ ಈಟೀವಿ  ಸ್ಟಾರ್ ಸವಿರುಚಿ ನಿರೂಪಕಿ ರುಚಿತ (ಸರಿಯಾಗಿದೆಯ ಹೆಸರು ?)ಸಖತ್ತಾಗಿ ನಡೆಸಿಕೊಡ್ತಾರೆ. ತುಂಬಾ ಲವಲವಿಕೆ.ಆಕೆ ಮಾತು ಕೇಳೋದಕ್ಕೊಸ್ಕರ  ಆ ಕಾರ್ಯಕ್ರಮ ವೀಕ್ಷಿಸ ಬೇಕು ಅಷ್ಟೊಂದು ಮುದ್ದು ಮುದ್ದಾಗಿ..ಉಲ್ಲಾಸವಾಗಿರುತ್ತೆ.

No comments: