ದೋಸೆ ಕಥೆ

 ಟೀವಿಗಳಲ್ಲಿ ಭವಿಷ್ಯ ಪ್ರಸಾರ ಆಗದೆ ಇದ್ರೆ ಹೆಣ್ಣುಮಕ್ಕಳಿಗೆ ಕಷ್ಟ ಅನ್ನುವ ಕುಹುಕ  ಗಂಡು ಮಕ್ಕಳಲ್ಲಿ ಮನೆ ಮಾಡಿದೆ. ತಮಾಷೆ ಅಂದ್ರೆ ಆ ಗಂಡು ಮಕ್ಕಳ ಜುಟ್ಟು ಹೆಣ್ಣು ಮಕ್ಕಳ ಕೈಲಿ ಇರುವುದರಿಂದ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ್ರು ಅದ್ರ ಫಲಾಫಲ ಮೊದಲು ಅನುಭವಿಸುವುದು ಪಾಪದ ಗಂಡು ಮಕ್ಕಳೇ ..

ಏನೇ  ಆದರೂ ಅ ಗುರುಜಿ ಈ ಗುರುಜಿ ಅನ್ನುವ ಮಾತುಗಳು ಹೆಣ್ಣುಮಕ್ಕಳ ಮಾತುಗಳು ಆ ಗುರುಗಳು ಹೇಳಿದ ಕೆಲವೊಂದು ವ್ರತಗಳನ್ನು ತಮ್ಮ ಮನೆಯಲ್ಲಿ ಇರುವ ಗಂಡು ಮಕ್ಕಳ ಕೈಲಿ ಮಾಡಿಸಿ ತಾವು ದೇವರಿಗೆ ಹಾಕಿದ ಅಪ್ಲಿಕೇಶನ್ ಗೆಲ್ಲುವಂತೆ ಮಾಡಿಕೊಳ್ತಾರೆ ಎಚ್ಚರ ಗಂಡು ಮಕ್ಕಳೇ  :-)


ಆದರೂ ಒಂದು ಬಾರಿ ನೀವು ವಾಸ್ತು ಅನ್ನುವ  ತುರುಕೆಯನ್ನು  ಅಂಟಿಸಿ ಕೊಂಡರೆ ಕೊನೆಗೆ ಆಗೋದು ಹುಣ್ಣ ಷ್ಟೆ ..ಭವಿಷ್ಯವೂ ಇದಕ್ಕೆ ಹೊರತಲ್ಲ ಬಿಡಿ.ಆದರೆ ಟೀವಿ ನೈನ್  ವಾಹಿನಿಯಲ್ಲಿ ಸಂಸ್ಕಾರ ಅನ್ನುವ ಖಾರವನ್ನು ತಲೆಗೆ ಮೆತ್ತುತ್ತಾರೆ. ಅದರಲಿ ದೋಸೆ ಯಾವ ರೀತಿ ಹೆಂಚಿನ ಮೇಲೆ ಬರೆಯ ಬೇಕು ಅನ್ನುವ ಮಾಹಿತಿಯನ್ನು ಹೆಣ್ಣುಮಕ್ಕಳಿಗೆ ಹೇಳಿಕೊಡ್ತಾರೆ. ಯಾವರೀತಿ ಬರೆದರೂ ಗುಂಡಗೆ ಇರುವ ದೋಸೆ ಎಡದಿಂದ ಆಗಿರಲಿ ಬಲದಿಂದ ಆಗಿರಲಿ ಹೊಯ್ದರೆ ಕಡೆಗೆ ಕೈಗೆ ಸಿಗೋದು ದೊಸೇನೆ ವಿನಃ ದುರದೃಷ್ಟ ಅಲ್ಲ :-).. (ಈ ಸಂಗತಿ ನಾನು ಬಹಳ ಹಿಂದೆ ನೋಡಿದ್ದೆ .ಅದನ್ನು ಈಗ  ಹೇಳಿದ್ದೀನಿ ಅಷ್ಟೇ ಈ  ದೋಸೆ ಕಥೆ )



ಅನೇಕ ಸರ್ತಿ ಪ್ರಸಾರ ಆಗಿತ್ತು,ಆದರೆ ಪುನಃ ಈ  ಕಾರ್ಯಕ್ರಮ ನಿನ್ನೆ ಮತ್ತೊಮ್ಮೆ ಪ್ರಸಾರ ಆಯ್ತು.ನಿನ್ನೆ ವೀಕ್ಷಿಸಿದೆ..ಯಾವುದು ಅಂತೀರ  ಜೀ ವಾಹಿನಿಯ ಜೀ ಕುಟುಂಬ ಅವಾರ್ಡ್ಸ್ .
ಅದರಲ್ಲಿ ಮುಖ್ಯ ಆಕರ್ಷಣೆ ಆಗಿದ್ದು  ಪಾಂಡುರಂಗ ವಿಠಲ  ಧಾರಾವಾಹಿಯ ಜಹಂಗೀರ್ ಮತ್ತು ಪಾರ್ವತಿ ಪರಮೇಶ್ವರ ಧಾರಾವಾಹಿಯ ಲಾಯರ್ ಗುಂಡಣ್ಣ ಪಾತ್ರಧಾರಿ ಲೋಕೇಶ್ ಅವರ ನಿರೂಪಣೆ .ಇವರಿಬ್ಬರು ಜನ್ಮಜಾತ ಕಲಾವಿದರು. ಲೋಕೇಶ್  ಅವರನ್ನು ನಾನು ಸಂದರ್ಶಿಸಿದಾಗ ಭಾವುಕರಾಗಿ ಮಾತಾಡಿದ್ದರು.ಆನಂತರ ಇಬ್ಬರ ಮಧ್ಯೆ ವಿಶ್ವಾಸ ಮನೆ ಮಾಡಿದೆ. ನಟನ ರಮೇಶ್ ಶಿಷ್ಯ ಈತ. ತನ್ನ ಬಣ್ಣದ ಬದುಕಿಗಾಗಿ ಮಾಡಿದ ಸಾಧನೆ, ಅದಕ್ಕಾಗಿ ಬೆನ್ನೆಲುಬಾಗಿ ನಿಂತ ರಮೇಶ್ ಹಾಗೂ ಅವರ ಪತ್ನಿ ..ಈಗ ಫೈನಲ್ ಕಟ್ ಎಲ್ಲವೂ ಕೇಳ್ತಾ ಇದ್ರೆ ಗ್ರೇಟ್ ಅನ್ನಿಸುತ್ತೆ. ಎಲ್ಲೋ ಚಾಮರಾಜ ನಗರದ ಹುಡುಗ ಬೆಂಗಳೂರಿಗೆ ಬಂದು ಈ ಪರಿ ಜನಮನ ಗೆದ್ದಿರುವುದು ನಿಜಕ್ಕೂ ಶ್ಲಾಘನೀಯ.
ಹಿರಿಯ ಕಲಾವಿದರಾದ ಬಿ.ಜಯಮ್ಮ ಸೇರಿದಂತೆ ಅನೇಕ ಹಿರಿಯ ಕಲಾವಿದರು ಮಾಡಿದ ಡ್ಯಾನ್ಸ್ ..:-)
ತಲೆ ಕೆಟ್ಟ ಸಂಗತಿ ಅಂದ್ರೆ ಸೃಜನ್ ಲೋಕೇಶ್ ಮತ್ತು ನೀತು ಅವರ ನಿರೂಪಣೆ .

1 comment:

Badarinath Palavalli said...

ಒಳ್ಳೆ ದೋಸೆ ಪುರಾಣ ಕಣ್ರೀ. ಇರಿ ಯಾವುದಾದರೂ ಜ್ಯೋತಿಷಿಗೆ ಹೇಳಿ ನಿಮಗೆ ಮಸಾಲೆ ದೋಸೆ ಪ್ರಾಪ್ತಿ ಯಂತ್ರ ಕಟ್ಟಿಸ್ತೀನಿ!!! :-D