ಡೈರಿ ನ್ಯೂಸ್ !





ಪ್ರಿಯ ವೀಕ್ಷಕರೇ ಇವನೇ ನೋಡಿ ತಂಟೆ ರಾಮ.. ಇವನು ರೌಡಿ ಆಗುವ ಮುನ್ನ ಎಲ್ಲರ ರೀತಿ ಸಾಮಾನ್ಯ ಹುಡುಗ ಆಗಿದ್ದ ಕಣ್ರೀ. ಅವನ ಬಗ್ಗೆ ನಾನು ಒಂದು ಸ್ಟೋರಿ ಹೇಳೋದಿದೆ. ಬೈದ ಬೈ  ನೋಡೋಕೆ ಒಳ್ಳೆ ರಾಜ ಕುಮಾರನ ಥರ ಇರೋ ತಂಟೆ ರಾಮಾ ಗುಣದಲ್ಲೂ ರಾಜ ಕುಮಾರನೇ ಕಣ್ರೀ.. ! ಇಂತಹ ಶೈಲಿಯಿಂದ ಮನ ಗೆದ್ದ ನಿರೂಪಕ ರವಿ ಬೆಳಗೆರೆ . ಈಗ ಜನಶ್ರೀಯ ಸಿ ಇ ಒ ಆಗಿರುವ ರವಿ ಬೆಳಗೆರೆ ಬಗ್ಗೆ ವೀಕ್ಷಕರಿಗೆ ಬಹಳಷ್ಟು ನಿರೀಕ್ಷೆಗಳಿವೆ. ಈಟೀವಿಯಲ್ಲಿ ಇದ್ದಾಗ ಜಂಟಲ್ ಮ್ಯಾನ್ಗಳ ನಡುವೆ ಗಂಟಲ್ ಮ್ಯಾನ್ ಆಗಿದ್ದರು. ಅಲ್ಲಿಗೆ ಅದು  ಸಾಕಿತ್ತು.

 
ಆದರೇ ಈಗ ಅವರು ಒಂದೊಳ್ಳೆ ಸಂಸ್ಥೆಯ ಜವಾಬ್ದಾರಿ ಹೊತ್ತಿರುವಾಗ,  ಗಂಟಲ್ ಜಾಸ್ತಿ ಕೆಲಸಕ್ಕೆ ಬರಲ್ಲ. ಅಷ್ಟೇ ಅಲ್ಲದೇ ಈಗ ಮುಖ್ಯವಾಗಿ ಬಹಳಷ್ಟು ಕನ್ನಡ ಚಾನೆಲ್ ಗಳಿವೆ. ಅಂದಂಗೆ ನಿಮಗೂ ಗೊತ್ತಿದೆ ರವಿ ಬೆಳಗೆರೆ ಅವರೇ  ಸಾಕಷ್ಟು ಕಡೆ ಜನಶ್ರೀ ವಾಹಿನಿ ಪ್ರಸಾರ ಆಗೋದೇ ಇಲ್ಲ. ಮುಖ್ಯವಾಗಿ ಬೆಂಗಳೂರು ಮಹಾನಗರದಲ್ಲಿ , ರಾಜ್ಯ ರಾಜಧಾನಿಯಲ್ಲಿ ಈ ವಾಹಿನಿ ಬರೋದೇ ಇಲ್ಲ. ಸೆಟ್ ಅಪ್ ಬಾಕ್ಸ್ಗಳ ಕಿರಿಕಿರಿಯಿಂದ  ಅದಕ್ಕಿಂತಲೂ  ಮುಖ್ಯವಾಗಿ ಕೇಬಲ್  ಹಾಕುವವರ ತಲೆಹರಟೆ ಮತ್ತು ತೊಂದರೆಯಿಂದ ದೂರ ಆಗಲು ಡಿಟಿಎಚ್ ಕಡೆಗೆ ಆದ್ಯತೆ ನೀಡಿದ್ದಾರೆ ಜನರು.


ಡಿಟಿಎ
ಡಿಟಿಎಚ್ 
ಸೌಲಭ್ಯ ಹೊಂದಿರುವ ಬಹುಸಂಖ್ಯಾತ ಕನ್ನಡಿಗರ ಮನೆಗಳಲ್ಲಿ ಕನ್ನಡ ವಾರ್ತಾವಾಹಿನಿಗಳಾದ ಜನಶ್ರೀ, ಪಬ್ಲಿಕ್ ಟಿ.ವಿ ಮತ್ತು ರಾಜ್ ವಾಹಿನಿಗಳು ಉಹೂಂ ಬರೋದೇ ಇಲ್ಲ. ಅಂತಹುದರಲ್ಲಿ ನೀವುಗಳು ನೀಡುವ ಉತ್ತಮ ಕಾರ್ಯಕ್ರಮ ಅದೆಷ್ಟರಮಟ್ಟಿಗೆ ವೀಕ್ಷಕರಿಗೆ ತಲುಪುತ್ತದೆ.. ಇದರ ಬಗ್ಗೆ ವಾಹಿನಿಯ ಚೀಫ್ಗಳು ಯೋಚಿಸೋದೇ ಇಲ್ಲ ಯಾಕೇಂತ? ನಾನು ಈ ವಾಹಿನಿಗಳನ್ನು ನಮ್ಮ ಆಫೀಸಿನಲ್ಲಿ ವೀಕ್ಷಿಸೋದು. ಯಾಕೇಂದ್ರೆ ನನ್ನ ಮನೆಯಲ್ಲಿ ಈ ವಾಹಿನಿಗಳು ಪ್ರಸಾರ ಆಗಲ್ಲ ! 

 ಮತ್ತೊಂದು ಸಂಗತಿ ರವಿ ಬೆಳಗೆರೆ ಜನಕ್ಕೆ ಹೆಚ್ಚು ಪರಿಚಿತವಾಗಿದ್ದು ಈ ಟೀವಿಯ ಕ್ರೈಂ ಡೈರಿಯಿಂದ. ಜನಶ್ರೀಯಲ್ಲಿ ಪ್ರಸಾರ ಆಗೋ ಕಾರ್ಯಕ್ರಮದ ಹೆಸರು ಕ್ರೈಂ ನ್ಯೂಸ್... ರವೀ ಕಾರ್ಯಕ್ರಮದ ಅಂತ್ಯದಲ್ಲಿ ಕ್ರೈಂ ನ್ಯೂಸ್ ಅನ್ನೋ ಬದಲು ಕ್ರೈಂ ಡೈರಿ ಎಂದು ಹೇಳಿದ್ರು... ಆಗುತ್ತೆ ಬಿಡಿ ಹಾಗೆ !

No comments: