ಹೆಡ್ಡಿಂಗ್




ನವರಾತ್ರಿ ಹಬ್ಬದ ಆಚರಣೆಯು ನಮ್ಮ ಚಾನೆಲ್ ಗಳು ತುಂಬಾ ಚೆನ್ನಾಗಿ ಮಾಡ್ತಾ ಇವೆ. ಅದರಲ್ಲೂ ಆರಂಭಿಕ ದಿನದಲ್ಲಿ ನನಗೆ ಹೆಚ್ಚು ಖುಷಿಕೊಟ್ಟ ಚಾನೆಲ್ ಅಂದ್ರೆ ಉದಯ ನ್ಯೂಸ್ .  ಮೈಸೂರು ದಸರಾದ ಬಗ್ಗೆ ಸವಿಸ್ತಾರವಾಗಿ ಅಲ್ಲಿ ತಿಳಿಸ್ತಾ ಇದ್ರು, ನಮ್ಮ ನಾಡಹಬ್ಬದ ಬಗ್ಗೆ ಎಷ್ಟು ಕೇಳಿದರೂ ಓದಿದರೂ ಬೇಸರ ಅನ್ನಿಸಲ್ಲ.ಸದಾ ಕ್ರೈಂ, ಭಯ ಹುಟ್ಟಿಸುವ ಸಂಗತಿಗಳ ನಡುವೆ ಇದು ಮನಕ್ಕೆ ಚೇತೋಹಾರಿ.
ಜೀ ಹಿಂದಿ ವಾಹಿನಿಯಲ್ಲಿ ಸೂಪರ್ ಮದರ್ಸ್ ಎನ್ನುವ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಈಗ ಅದು ಫೈನಲ್ ಆಗಿದ್ದಾಯ್ತು. ಸೂಪರ್ ಮದರ್ಸ್ ಅನ್ನೋ ಗೃಹಿಣಿಯರು, ಅವರ ಪತಿ, ಅತ್ತೆ ಮಾವ ಹೀಗೆ ಎಲ್ಲರ ಭಾಗವಹಿಸುವಿಕೆ ಸಕತ್ ಚೆನ್ನಾಗಿತ್ತು. ಈಗ ಅಲ್ಲಿ ಲಿಲ್ ಮಾಸ್ಟರ್ಸ್ ಅಮ್ಮಂದಿರ ಜೊತೆಯಾಗಿದ್ದಾರೆ. ಡ್ರಾಮೆ ಬಾಜ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಮಗು ಹೋಸ್ಟ್ ಆಗಿದೆ. ಒಟ್ಟಾರೆ ತುಂಬಾ ಚೆನ್ನಾಗಿದೆ. ತನಯ್, ಫೈಸಲ್, ಓಂ ಹೀಗೆ ಹಳೆಯ ಹುಲಿಗಳು ಗೀತಾಮಾ ಮುಂದೆ ತಮ್ಮ ಪ್ರತಿಭೆ ತೋರಲು ಹೊರಟಿದ್ದಾರೆ ಪುನಃ. ಮಿಥುನ್ ದಾದಾ ಸಹ ಪ್ರಮುಖ ಆಕರ್ಷಣೆ.

ಏನೇ ಹೇಳ್ರಿ ನಮ್ಮಲ್ಲಿ ಬರುವ ಕ್ರೈಂ ಕಾರ್ಯಕ್ರಮಗಳು ಪಕ್ಕಕ್ಕೆ ಇಡಿ ಅದರ ಹೆಡ್ಡಿಂಗ್ ಗಳು ವಾರೆವ್ವಾ!  ಪಾಪದ ವೀಕ್ಷಕ ಹೆದರಿ ನಡಗಿ ಬಿಡಬೇಕು ಆ ಹೆಡ್ಡಿಂಗ್ ಗಳ ನೋಡಿ ! ಸಾಮಾನ್ಯವಾಗಿ ನಾನು ಯಾವುದೇ ವಿಷಯ ಆಗಿರಲಿ ಹೆಚ್ಚು ಇಷ್ಟ ಪಡೋದು ಹೆಡ್ಡಿಂಗ್ ಗಳ ಬಗ್ಗೆ.  ನಿಜ ಏನ್ ಗೊತ್ತ ಇದರ ಕ್ರೆಡಿಟ್ ಹೋಗೋದು ಕಾಪಿ ಎಡಿಟರ್ ಗಳಿಗೆ. ಜಾಣ ತುಂಟ ಮನಸ್ಸುಗಳು ಅಲ್ಲಿದ್ದರೆ  ಬರಹ ಸಕತ್ತಾಗಿರುತ್ತೆ ! ಆದರೇ ಅವರನ್ನು ಗುರುತಿಸುವ ಮಂದಿ ಮಾತ್ರ ತುಂಬಾ ಕಡಿಮೆ !!

No comments: