ಕ್ಷಮೆ ಇರಲಿ ಪ್ಲೀಸ್ !





ಪ್ರೀತಿಯ ಗೆಳೆಯ ಬದರಿನಾಥ  ಪಲವಳ್ಳಿ  ವಾಹಿನಿಯ ಕ್ಯಾಮರಾಮನ್. ಸುಂದರ-ಅಸುಂದರ ದೃಶ್ಯಗಳನ್ನು ಸೆರೆ ಹಿಡಿಯುವ ಈತ ಅದ್ಭುತ ರೀತಿಯಲ್ಲಿ ಅಕ್ಷರಗಳ ಮೂಲಕ ಎಲ್ಲರ ಮನವನ್ನು  ಸೆರೆ ಹಿಡಿಯುವುದರಲ್ಲಿ ನಿಸ್ಸೀಮ. ಈಗ ಸುವರ್ಣ ನ್ಯೂಸ್ ನಲ್ಲಿ ಬದುಕನ್ನು ಕಾಣುತ್ತಿರುವ ಬದರಿನಾಥ್ ತುಸು ಹೆಚ್ಚೇ ಭಾವುಕ. ಅತಿ ಅನ್ನಿಸುವಷ್ಟು ಅದರ ಪ್ರಕಟ . ಪ್ರಾಯಶಃ ಆತನ ಬದುಕಲ್ಲಿ ಅತಿ ಸಿಟ್ಟಿಗೆದ್ದ ಗೆಳತಿ ನಾನೇ ಅಂತ ಕಾ ಣು ತ್ತೆ. ಒಳ್ಳೆ ಮನದ ಗೆಳೆಯನ ಕವನ ಸಂಕಲನ ಇತ್ತೀಚಿಗೆ ಬಿಡುಗಡೆ ಆಯಿತು. ಮೊದಲಿನಿಂದಲೂ ನಾನು ಆತನ ಕವನ ಓದುಗಳು . ಫೇಸ್  ಬುಕ್  ನಲ್ಲಿ ಲಿಂಕ್ ಅಂಟಿಸಿ ನೋಡಮ್ಮ ವಸಿ ಎ೦ದೋ .. ನಿಮ್ಮ ಅಭಿಪ್ರಾಯ  ನಮಗೆ   ಬಹಳ  ಮುಖ್ಯ ಎಂದೋ ಒಟ್ಟಿನಲ್ಲಿ  ಓದುವಂತೆ ಮಾಡುತ್ತಿದ್ದ  ಭೂಪ !
 ಪ್ರೀತಿ ಹೆಚ್ಚಾದಾಗ ಸ್ವಲ್ಪ ತೆಲುಗು, ಬೇಜಾರಾದಾಗ ಕನ್ನಡ,  ಹಾಗೆ ಸುಮ್ಮನೆ ಸ್ವಲ್ಪ ಇಂಗ್ಲೀಷು ಇದು ನಮ್ಮ  ಲೈಫು.

ಮೊದಲೇ ತಿಳಿಸಿದಂತೆ ಆತ  ತೀರಾ  ಭಾವುಕ. ಅನೇಕ ಬಾರಿ ನಾವಿಬ್ಬರು ಕವನಗಳ ಮೂಲಕ ಜಗಳ ಆಡಿ  ಸಿಟ್ಟು ತೋರಿಸಿದ್ದೇವೆ ಅದರಲ್ಲೂ ನಾನು ಬಿಡಿ :-) ಆದರೆ ಎಲ್ಲವನ್ನು ಮೀರಿದ ಸಂತೋಷ ಅಂದ್ರೆ ಬದರಿ ಕವನ ಸಂಕಲನ ಬಿಡುಗಡೆ ಆಗಿರೋ ದು. ಯಾಕೆ ಅಂದ್ರೆ ಬದರಿಯ ಈ ಆಸೆ ಇಂದು ನಿನ್ನೆಯದಲ್ಲ. ಒಂದು ಕವನ ಸಂಕಲನ ಬಿಡುಗಡೆ ಆಗ ಬೇಕು ಕಣಮ್ಮ ಎಂದು ಪ್ರತಿಬಾರಿ ಸಿಕ್ಕಾಗಲು  .. ಫೋನಿಸಿದಾಗಲು  ತಪ್ಪದೆ ಹೇಳುತ್ತಿದ್ದ ಭಾವುಕ. ಯಾಕಿಷ್ಟು ಆತುರ ಕಾತುರ ಅಂದ್ರೆ ಮತ್ತದೇ ಸಾವಿನ ವಿಷಯ. ಏನು ಹಾಗಂದ್ರೆ ಅನ್ನುವುದು ಸಹಜ. ಆದರೆ ಆತನ ಭಾವದಲ್ಲಿ ಅಡಗಿರುವ ಆ ಅಂಶಗಳು ಬಿಡಿಸಿ ಹೇಳೋಕೆ ಆಗಲ್ಲ. ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡ ಬದರಿ ಕವನಗಳಲ್ಲಿ ಸಾವಿನ ಬಗ್ಗೆ ಒಂದಷ್ಟು- ತಿಳಿದಷ್ಟು ಬರೆಯುವ ಜೀವ. ಚಿಕ್ಕಂದಿನಲ್ಲಿ ತಂದೆಯನ್ನು ಕಳೆದು ಕೊಂಡ  ನನಗೂ ಅದ್ಯಾಕೋ ಈತನ ಕವನಗಳು ಆಪ್ತ.




ಪಾತ್ರ ಅನ್ವೇಷಣಾ  ನಮ್ಮ ಪ್ರೀತಿಯ ಬದರಿಯ ಕವನಸಂಕಲನ. ಬೆಲೆ ಕೇವಲ 100ರೂ. ಹೆಚ್ಚಿಗೆ ಹೇಳಲಾರೆ ಕವನಗಳ ಬಗ್ಗೆ ಒಂದೊ೦ದು  ಅಮೂಲ್ಯ, ಅಮೋಘ  ಹಾಗೂ ಅನರ್ಘ್ಯ . ಎಲ್ಲವೂ ಇದೆ ಈ ಕವನ ಹೂ  ತೋಟದಲ್ಲಿ . ಸಂಭ್ರಮ, ಹಳೆಯ ನೆನಪುಗಳ ಸಮಾಗಮ, ಜಾಗತೀಕರಣದ ಅಂಧ ಸರಿಗಮ  , ಪ್ರೀತಿಯ ಮಧುರಿಮ, ಸೋತ ಕ್ಷಣದ ಪರಿಣಾಮ. ಪ್ರೀತಿಯ ಗೆಳೆಯ ಇನ್ನು ಹೆಚ್ಚು ಬರೆಯಲಿ. ಅಂದಿನ ಕಾರ್ಯಕ್ರಮ ಸುಮಧುರ. ಮುಖ್ಯವಾಗಿ ಈ ಭಾವುಕನ ಕನಸಿಗೆ ಜೀವ ಕೊಟ್ಟವರಿಗೆ ನಮೋನ್ನಮಃ . ಅಂದು ಇನ್ನು ಮೂರು ಪುಸ್ತಕಗಳು ಬಿಡುಗಡೆ ಆಯಿತು. ಅದರಲ್ಲಿ ದಿನಕರ ಮೊಗೆರ ನನ್ನ ಬ್ಲಾಗ್ ಓ ದುಗರು. ಅವರ ಸಣ್ಣ ಕಥೆಗಳು ಹೆಚ್ಚು ಮಜಾ ಕೊಡ್ತು . ಉಳಿದಿಬ್ಬರದ್ದು ಅಷ್ಟೇ  ಖುಷಿ  ನೀಡಿದೆ  ಹೆಚ್ಚು ಇಂದಿನ ಬರಹ ಬದರಿ ಪುಸ್ತಕಕ್ಕೆ ಅರ್ಪಿತ.. ಸೊ ಬೇರೆಯರ  ಬಗ್ಗೆ ಬರೆಯಲಾರೆ ಕ್ಷಮೆ ಇರಲಿ ಪ್ಲೀಸ್ ! 

2 comments:

Srikanth Manjunath said...

ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು.. ಅನ್ನುವ ಹಾಡಿನ ಹಾಗೆ ಬದರಿ ಸರ್ ಅವರ (ಅಥವಾ ಸಾಮಾನ್ಯ ಎಲ್ಲ ಬರಹಗಾರರ) ಬಯಕೆ ಈಡೇರಿದೆ. ಇನ್ನು ತಮ್ಮನ್ನು ಅಜ್ಜಾತ, ಶಾಪಗ್ರಸ್ತ ಎನ್ನುವ ಪದವನ್ನು ಅವರು ಕವನಗಳಲ್ಲಿ ಬಳಸಬಹುದೇ ವಿನಃ ತಮಗೆ ತಾವೇ ಹೇಳಿಕೊಳ್ಳುವ ವಿಶೇಷಣಗಳಾಗಿ ಉಳಿದಿಲ್ಲ. ತಮ್ಮ ಚಿಪ್ಪಿನಿಂದ ಹೊರಗೆ ಬರಲು ಈ ಚಿಕ್ಕ ಚೊಕ್ಕ ಸಮಾರಂಭ ಸಹಾಯ ಮಾಡಿದೆ. ಹಾಗೆಯೇ ಅವರ ಗೆಳೆಯರ, ನಲ್ಮೆಯ ಓದುಗರ ಪ್ರೋತ್ಸಾಹದ ಕಿರೀಟ ಅವರ ಭಾವುಕತೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುತ್ತದೆ. ಸಹ ಓದುಗ ಮಿತ್ರರ ಏಳಿಗೆಯಲ್ಲಿ ಸಂತಸ ಮತ್ತು Joy ಕಾಣುವ ಮಿತ್ರರರನ್ನು ಪಡೆದ ಬದರಿ ಸರ್ ನಿಜಕ್ಕೂ ಧನ್ಯ. ತುಂಬಾ ಸುಂದರ ಸರಳ ಬರಹ. ಸ್ನೇಹದ ಭಾವುಕತನ ಎದ್ದು ಕಾಣುತ್ತಿದೆ. ಸುಂದರ ಸ್ನೇಹಕ್ಕೆ ಮಹೋನ್ನತ ಕೊಡುಗೆ ನಮ್ಮ ಬದರಿ ಸರ್. ಇಷ್ಟವಾಯಿತು ಮೇಡಂ ನಿಮ್ಮ ಬರಹ

Badarinath Palavalli said...

it is a heat touching post.

ಒಬ್ಬ ಪತ್ರಕರ್ತೆಯಾಗಿ ಅದಕಿಂತಲೂ ಹೆಚ್ಚಾಗಿ ನನ್ನ ಕವಿತೆಗಳನ್ನು ಮೊದಲಿಂದಲೂ ಗಮನಿಸಿಕೊಂಡು ಬಂದವರಾಗಿ ಸಮರ್ಥವಾಗಿ ವಿಶ್ಲೇಷಿಸಿದ್ದೀರಾ.

ನಿಮ್ಮ ಈ ಒಲುಮೆಗೆ ನಾನು ಎಂದಿಗೂ ಚಿರರುಣಿ.

ಮಂಚೋಳ್ಳು ನಮ್ಮ ಜಯಶ್ರೀ.