ಹೆಚ್ಚು ಜನರು ನೋಡುವ ಕಾರ್ಯಕ್ರಮಗಳು ಅಂದ್ರೆ ಒಂದಷ್ಟು ಮಾತ್ರ ಇವೆ. ಅದರಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚು ಮಂದಿ ವೀಕ್ಷಿಸುವ ಕಾರ್ಯಕ್ರಮ ಥಟ್ ಅಂತ ಹೇಳಿ. ಚಂದನ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕಾರ್ಯಕ್ರಮ ಎವರ್ ಗ್ರೀನ್ ಅಂತಾನೆ ಹೇಳ ಬಹುದು. ಇದೆ ಕಾರ್ಯಕ್ರಮ ಬೇರೆ ವಾಹಿನಿಗಳಲ್ಲಿ ಪ್ರಸಾರ ಆಗ್ತಾ ಇದ್ದಿದ್ದರೆ ಸೀಸನ್ ಒಂದು ಎರಡು ಅಂತ ಮಾಡಿ ತಮ್ಮ ಬೆನ್ನು ತಾವು ತಟ್ಟಿ ಕೊಳ್ತಾ ಇದ್ರು, ಆದರೆ ಚಂದನ ವಾಹಿನಿ ತಂಗಾಳಿಯಂತೆ, ಅದು ತನ್ನ ಪ್ರಸಾರದ ಕಾರ್ಯಕ್ರಮದಲ್ಲಿ ಇಂತಹ ಯಾವುದೇ ಬಗೆಯ ಅಬ್ಬರಕ್ಕೆ ಆದ್ಯತೆ ನೀಡದು.ಆದ್ದರಿಂದಲೇ ಈ ವಾಹಿನಿಯು ತನ್ನದೇ ಆದ ರೀತಿಯಲ್ಲಿ ಜನಪ್ರಿಯತೆ ಪಡೆದಿದೆ. ಡಾ. ನಾ ಸೋಮೇಶ್ವರ್ ಅವರ ನಿರೂಪಣೆ ಸಹ ಹೆಚ್ಚು ಖುಷಿ ಕೊಡುತ್ತದೆ. ಈಗ ಪ್ರಾಯಶ 2500 ಸಂಚಿಕೆ ಪೂರೈಸಿದೆ ಅಂತಾ ಕಾಣುತ್ತೆ. ಅದಕ್ಕೆಂದು ವಿಶೇಷ ಕಾರ್ಯಕ್ರಮ ಪ್ರಸಾರ ಆಗ್ತಾ ಇದೆ. ತುಂಬಾ ವಿಶೇಷವಾಗಿದೆ..
@ ಇದೆ ವಾಹಿನಿಯಲ್ಲಿ ಪ್ರಸಾರ ಆಗುವ ಅಡಚಣೆಗಾಗಿ ಕ್ಷಮಿಸಿ ಒಂದೊಳ್ಳೆ ಹಾಸ್ಯ ಕಾರ್ಯಕ್ರಮ. ಇಲ್ಲಿ ಇರುವವರು ಅತಿಯಾದ ಅಲಂಕಾರ , ಅತಿ ಮಾತುಕತೆ ಇರುವ ಪಾತ್ರಗಳು ಅಲ್ಲ, ಗಂಡ ಹೆಂಡತಿ ಅವರಿಬ್ಬರಿಗೆ ಸಂಬಂಧ ಪಟ್ಟವರು, ಕಡಿಮೆ ಅವಧಿಯಲ್ಲಿ ಇದು ಪ್ರಸಾರ ಆದರು ಪ್ರತಿದಿನ ಒಂದೊಂದು ಹೊಸ ವಿಷಯವನ್ನು ಹಾಸ್ಯದ ಮುಖಾಂತರ ಪ್ರಸಾರಿಸುತ್ತದೆ..ಇಲ್ಲಿ ಗ್ಲಾಮಿಯಾಗಿರೋ ಕಲಾವಿದರು ಇಲ್ಲ, ಪ್ರತಿಭಾವಂತ ಹಿರಿಯ ಕಲಾವಿದರ ದಂಡೆ ಇದೆ.. ವೀಕ್ಷಕರಿಗೆ ಅದರಲ್ಲೂ ಹಿರಿಯ ವೀಕ್ಷಕ ವೃಂದಕ್ಕೆ ಇಷ್ಟ ಆಗೋ ಟೀಮ್ ಇದೆ. ನೋಡಿ ಖುಷಿ ಪಡೋ ವಿಷಯಗಳು ಆ ಧಾರವಾಹಿಯಲ್ಲಿದೆ..!
@@ ಹಾಸ್ಯ ಎಂದೊಡನೆ ನೆನಪಿಗೆ ಬರುವ ಕಾರ್ಯಕ್ರಮಗಳಲ್ಲಿ ಈ ಟೀವಿ ಕನ್ನಡ ವಾಹಿನಿಯಲ್ಲಿ ಮರು ಪ್ರಸಾರ ಆಗುತ್ತಿರುವಂತಹ ಸಿಲ್ಲಿ ಲಲ್ಲಿ. ಹಾಸ್ಯವನ್ನು ಭಿನ್ನವಾಗಿ ತೋರಿಸುವ , ಪಾತ್ರಗಳ ಇನ್ವಾಲ್ ಮೆಂಟ್ ಹೆಚ್ಚು ಖುಷಿ ಕೊಡುತ್ತದೆ. ಇದು ಮರು ಪ್ರಸಾರದ ಧಾರವಾಹಿ ಗಳಾದರೂ ಬೇಸರ ಅನ್ನಿಸಲ್ಲ ವೀಕ್ಷಣೆ ಮಾಡಲು..ಸಂಜೆ ಖುಷಿಯಾಗಿ ಕಳೆಯೋಕೆ ಈ ಕಾರ್ಯಕ್ರಮ ಸಹಾಯ ಮಾಡುತ್ತದೆ ಟೀವಿ ಆಸಕ್ತರಿಗೆ.. ನಾನು ಸಮಯ ಸಿಕ್ರೆ ನೋಡ್ತೀನಿ ಈದನ್ನು ಇಷ್ಟ ಪಟ್ಟು.. ನಗೋದು ಮುಖ್ಯ.. ನಗುವಿಂದ ಆರೋಗ್ಯಾ.. :-)
No comments:
Post a Comment