ಅಡುಗೆ ಕಾರ್ಯಕ್ರಮ ಎಲ್ಲ ಚಾನೆಲ್ ಗಳಲ್ಲೂ ಬರುತ್ತದೆ. ಅದು ಎಲ್ಲರಿಗು ಗೊತ್ತೇ ಇದೆ.. ಅಡುಗೆ ಮಾಡುವವರಿಗಿಂತ ಆ ಕಾರ್ಯಕ್ರಮದ ನಿರೂಪಕರಿಂದ ಕಾರ್ಯಕ್ರಮ ಜೀವಂತ ಆಗಿರುತ್ತದೆ. ಜೀವಂತಿಕೆ ಇರುವಂತೆ ಮಾಡುವುದರಲ್ಲಿ ಜೀ ಕನ್ನಡ ವಾಹಿನಿ ಮುರಳಿ ಸೇರ್ತಾರೆ.. ತಿಳಿ ಹಾಸ್ಯದ ಶೈಲಿ ಆಕರ್ಷಕವಾಗಿರುತ್ತದೆ .ಸಾಮಾನ್ಯವಾಗಿ ಅಡುಗೆ ಕಾರ್ಯಕ್ರಮಗಳಲ್ಲಿ ಹೆಣ್ಣು ಮಕ್ಕಳು ನಿರೂಪಣೆ ಮಾಡುತ್ತಾರೆ. ನಮ್ಮ ಪುರಾಣ ಇತಿಹಾಸದಲ್ಲಿ ಗಂಡುಮಕ್ಕಳೇ ಉತ್ತಮ ಅಡುಗೆ ಮಾಡುವವರು,ಅದೇ ರೀತಿ ನಮ್ಮಲ್ಲಿ ಈಗ ಬೃಹತ್ ಕಾರ್ಯಕ್ರಮದಲ್ಲಿ ಏನೇ ಆದರೂ ಅಡುಗೆಯವರು ಗಂಡಸರೇ. ಹಾಗಿದ್ದರು ಛೆ! ಅಡುಗೆ ಕಾರ್ಯಕ್ರಮ ನೋಡ ಬೇಕಾಗಿರೋದು ಮತ್ತು ನಡೆಸಿಕೊಡ ಬೇಕಾಗಿ ಇರುವವರು ಹೆಂಗಸರು ! ಆದರೆ ಮುರಳಿ ಸಕತ್ತಾಗಿ ನಡೆಸಿಕೊಡ್ತಾರೆ... ಮಾತಿನ ಶೈಲಿ , ಮಾತನಾಡುವ ರೀತಿ ಇಷ್ಟ ಆಗುವಂತೆ ಇರುತ್ತದೆ..ಅತಿಯಾಗಿ ಮಾತುಕತೆ ಆಡಲ್ಲ !
ಅಲ್ಲದೆ ಈ ಕಾರ್ಯಕ್ರಮಕ್ಕೆ ಬರುವವರಿಗೆ ಅನೇಕ ಸೌಲಭ್ಯಗಳನ್ನು ಸಹ ನೀಡುತ್ತಾರೆ. ಭಾಗವಹಿಸುವ ಸ್ಪರ್ಧಿಗಳಿಗೆ...!
@@ಕಲರ್ ವಾಹಿನಿಯಲ್ಲಿ ಪ್ರಸಾರ ಆಗುವ ಸುಂದರ ಕಾರ್ಯಕ್ರಮಗಳಲ್ಲಿ ಜಾಲಕ್ ದಿಕ್ಲಾಜ ಸಹ ಒಂದಾಗಿದೆ. ಬಾಲಿವುಡ್ ನ ಮಹಾನ್ ತಾರೆಯರಾದ ಅಂದ್ರೆ ಅವರದ್ದೇ ಆದ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪ್ರತಿಭೆಗಳಾದ ಮಾಧುರಿ ದೀಕ್ಷಿತ್ ನೆನೆ, ರೆಮೋ ಡಿಸೋಜ ಮತ್ತು ಕರಣ್ ಜೋಹರ್ ಮೂರು ಜನ. ಸಾಮಾನ್ಯವಾಗಿ ಕೆಲವು ರಿಯಾಲಿಟಿ ಶೋಗಳಲ್ಲಿ ಬರುವ ಜಡ್ಜ್ ಗಳು ಸ್ವಲ್ಪ ಹೆಚ್ಚೇ ಕೋಪದಿಂದ ಹೇಳುತ್ತಾರೆ, ಅಥವಾ ವ್ಯಂಗ್ಯ ಇದ್ದೆ ಇರುತ್ತದೆ . ಆದರೆ ಈ ಪ್ರತಿಭಾವಂತ ತ್ರಿಮೂರ್ತಿಗಳು ಎಂದಿಗೂ ಸ್ಪರ್ಧಿಗಳಿಗೆ ಬೇಜಾರಾಗುವಂತೆ ಮಾಡಿಲ್ಲ. ಭಾಗವಹಿಸಿದಂತಹ ಸ್ಪರ್ಧಿಗಳ ಬಗ್ಗೆ ಸಕತ್ತಾಗಿ ಜಡ್ಜ್ ಮಾಡುತ್ತಾರೆ. ಅಲ್ಲದೆ ಹರ್ಟ್ ಆಗೋ ಹಾಗೆ ಪ್ರತಿಕ್ರಿಯೆ ಮಾಡಲ್ಲ , ರೂಢಾಗಿ ಹೇಳಲ್ಲ , ಫ್ರೆಂಡ್ಲಿಯಾಗಿ ಇರ್ತಾರೆ ...ತುಂಬಿದ ಕೊಡ ತುಳುಕೋಲ್ಲ ಅನ್ನೋದೇ ಇದಕ್ಕೆ ಅಲ್ವೇ!
1 comment:
ಈ ಮುರಳಿ ಇದಾರಲ್ಲ ಇವರು ಟೀವಿ ನಿರೂಪಕರಾಗಿ ತುಂಬ ಹಳೇ ಘಟ. ಇವರು ಸಿಟಿ ಕೇಬಲ್ ಕಾಲದಿಂದ ಒಳ್ಳೆಯ ನಿರೂಪಕ.
ಕಲರ್ಸ ವಾಹಿನಿ ಉತ್ತಮ ದೃಶ್ಯ ಮಾದ್ಯಮ.
Post a Comment