ಬಿಡುವು ಅನ್ನೋದೇ ಆಗ್ತಾ ಇಲ್ಲ.. ಹಾಗಂತ ದುಡಿದು ದುಡಿದು ... :-) ಹಾಗೇನು ಇಲ್ಲ ಆದರೆ ಹೆಣ್ಣುಮಕ್ಕಳು ಏನೇ ಆದರು ಹೆಣ್ಣುಮಕ್ಕಳೇ. ಅವರಿಗೆ ಜವಾಬ್ದಾರಿ ಇದ್ದೆ ಇರುತ್ತದೆ. ಹಾಗೆ ನನಗೂ ಸಹ. ಸಾಮಾನ್ಯವಾಗಿ ಈವರೆಗೂ ರಂಜಾನ್ ಮಾಸದ ಸಂಭ್ರಮ ನೋಡುತ್ತಾ ಇದ್ದೆ ಅದೇ ಡಿಡಿ ಉರ್ದು, ಈ ಟೀವಿ ಉರ್ದು, ಜೀ ಟೀವಿ ಉರ್ದು.. ! ಧರ್ಮಗಳ ಬಗ್ಗೆ ನಾನು ಮಾತಾಡಲ್ಲ, ಆದರೆ ಅವರ ಜೀವನ ಶೈಲಿ ತಿಳಿಯಲು ಇಂತಹವು ಸಹಾಯಕಾರಿ. ನನ್ನ ಅಮ್ಮ ಕೇವಲ ಕೆಲವು ಚಾನೆಲ್ ಗಳಿಗೆ ಆದ್ಯತೆ ನೀಡಲ್ಲ , ಸಂಪೂರ್ಣ ಹಿಂದೂ ಹೆಣ್ಣುಮಗಳಾಗಿ ಆಚಾರ ವಿಚಾರದಲ್ಲಿ ಪರ್ಫೆಕ್ಟ್ ಆಗಿದ್ದರು ಬೇರೆ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಅಮಿತಾಸಕ್ತಿ . ಸೊ ಆದಷ್ಟು ಉರ್ದು ಚಾನೆಲ್ ನೋಡ್ತಾ ಇರೋರು ...ಜೊತೆ ನಾವು :-)
ಇವುಗಳ ಜೊತೆಗೆ ಆನ್ ಲೈನ್ ಬರಹಗಳು.. ಸೊ ಅವುಗಳನ್ನು ಬರೆಯುವಾಗ ತೆಲುಗು ಬರಹಗಳನ್ನು ಓದ್ತಾ ಇರ್ತೀನಿ.. ನಾನು ಹೆಚ್ಚು ಕನ್ನಡ, ಇಂಗ್ಲೀಶ್, ಹಿಂದಿ ಭಾಷೆಗಳ ಬರಹಗಳನ್ನು ಬಿಟ್ರೆ ತೆಲುಗು ಓದ್ತಾ ಇರ್ತೀನಿ.. ತಮಿಳು ಓದೋಕೆ ಬರಲ್ಲ ಕಲಿಯೋ ಆಸೆ ಮತ್ತು ಪ್ರಯತ್ನ ಇದೆ ಮನದಲ್ಲಿ.. ! ತೆಲುಗು ಪತ್ರಕರ್ತರು ಯಾವರೀತಿ ಬಳಸಿರ್ತಾರೆ ಅನ್ನುವ ಬಗ್ಗೆ ಸ್ವಲ್ಪ ಹೇಳ್ತೀನಿ, ಇಲ್ಲಿ ಯಾರನ್ನು ಅವಹೇಳನ ಮಾಡುತ್ತಿಲ್ಲ, ಬರೆಯುವ ಶೈಲಿ ಬಗ್ಗೆ ಸಾಮಾನ್ಯವಾಗಿ ಈಗ ಕನ್ನಡದ ಕಿಚ್ಚ ಸುದೀಪ್ ಅವರನ್ನು ಕಂಡ್ರೆ ಟಾಲಿವುಡ್, ಕಾಲಿವುಡ್, ಬಾಲಿವುಡ್ ಜನಕ್ಕೆ ಗೊತ್ತು. ಆದರೆ ತೆಲುಗು ಭಾಷಿಗರು ನಮ್ಮ 'ಈಗ' ದಿಂದ ಕನ್ನಡ ಸುದೀಪ್ ಗೆ ಹೆಚ್ಚು ಬೆಲೆ ಬಂತು ಅಂತ ಬರೀತಾ ಇರ್ತಾರೆ. ಕಿಚ್ಚ ಸ್ಟಾರ್ ಡಂ ಹೆಚ್ಚು ಮಾಡಿದ್ದು ತೆಲುಗು ಈಗ ಅನ್ನೋದನ್ನು ಪದೇಪದೇ ಹೇಳ್ತಾನೆ ಇರ್ತಾರೆ.
ಇರ್ಲಿ ಯಾರಾದ್ರು ಒಬ್ಬರಾದರು ದಾರಿ ತೋರಿದರೆ ತಾನೇ ರಸ್ತೆ ಎಲ್ಲಿದೆ ಅಂತ ಗೊತ್ತಾಗೋದು..! ಆದರು ಅತಿ ಹೆಚ್ಚು ಬರೆಸಿಕೊಳ್ಳುವ ನಟ ಕಿಚ್ಚ. ಮನೋಡು ( ನಮ್ಮವ) ಅಂತಾರೆ ಒಮ್ಮೊಮ್ಮೆ, ಸುದೀಪ್ ಅಂತಾರೆ, ಕಿಚ್ಚ ಅಂತಾನೂ ಬಳಸ್ತಾರೆ..
ನಾನು ಕಂಡಂಗೆ ಸುದೀಪ್ ಅವರ ಬಗ್ಗೆ ಹೆಚ್ಚಾಗಿ ಟೈಮ್ಸ್ ನವರು ಬರೆಯುತ್ತಾರೆ, ಕಾರಣ ಇಷ್ಟೇ ನನ್ನ ಪ್ರಕಾರ .. ಕಿಚ್ಚ ಸದಾ ಟ್ವಿಟ್ಟರ್ ಅಭಿಪ್ರಾಯ ತಿಳಿಸ್ತಾ ಇರ್ತಾರೆ :-) ಬಿಡಿ ...ಯಾರಿಗೇನು ಇಷ್ಟಾನೋ ಹಾಗೆ ಮಾಡ್ತಾರೆ...
ಆದ್ರೆ ಈ ಬಾರಿ ಸುವರ್ಣ ದಲ್ಲಿ ಪ್ರಸಾರ ಆಗ್ತಾ ಇರೋ ಬಿಗ್ ಬಾಸ್ ನಲ್ಲಿ ಮಾತ್ರ ಹೇಳಿಕೊಳ್ಳುವ ತಿರುವು ಬಂದಿಲ್ಲ ಅಂತ ಜನರ ಬೇಜಾರು.. ಆದ್ರೆ ಈಗ ಗುರುಪ್ರಸಾದ್ ಎಂಟ್ರಿ ಆಗಿದೆ ... ಸಕತ್ ಬುದ್ಧಿವಂತ ಗುರು .. ನಮ್ಮಂತಹ ಸಾಮಾನ್ಯರಿಗೆ ಅರ್ಥ ಆಗದ ಗುರು ಯಾವ ರೀತಿ ಹಂಗಾಮ ಮಾಡ್ತಾರೋ ನೋಡುವ..ಭದ್ರ ಸುದೀಪ್ ಗುರು ಅಂದ್ರೆ ಸುಮ್ಮನೆ ಅಲ್ಲ !
@@ಕಲರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕಾಮಿಡಿ ವಿತ್ ಕಪಿಲ್ ಕಾರ್ಯಕ್ರಮದಲ್ಲಿ ಗುತ್ತಿ ಪಾತ್ರಧಾರಿ ಸುನಿಲ್ ಗ್ರೋವರ್ ಅತಿ ಹೆಚ್ಚು ಆಸಕ್ತಿ ಹುಟ್ಟಿಸಿದಂತಹ ಪ್ರತಿಭೆ. ಗೆಲುವು ಸಿಕ್ಕಾಗ ಕೊಡವಿ ಹೋದ ದಡ್ಡ ! ಆದರು ಮತ್ತೆ ಕಪಿಲ್ ಮನೆಗೆ ಬಂದದ್ದು ಕಂಡು ಖುಷಿ ಆಯ್ತು.. ಆ ಮನೆಯ ಮುಖ್ಯ ಸದಸ್ಯ ಮುನಿದರೂ ಮತ್ತೇ ಆದರದಿಂದ ಕಪಿಲ್ ಮತ್ತು ಟೀಂ ಅವರು ರಿಸೀವ್ ಮಾಡಿಕೊಂಡ ರೀತಿ ಸಕತ್.. ಇನ್ನು ಹೆಚ್ಚು ಇಷ್ಟ ಆಗುತ್ತೆ..ಈ ಹಾಸ್ಯ ಕಾರ್ಯಕ್ರಮ.. ವೆಲ್ಕಂ ಬ್ಯಾಕ್ ಗುತ್ತಿ..
@@ ಅದ್ಯಾಕೋ ಗೊತ್ತಿಲ್ಲ ಇತ್ತೀಚಿಗೆ ಸ್ವಲ್ಪ ಜಾಸ್ತಿನೆ ವೀಕ್ಷಿಸೋ ಕಾರ್ಯಕ್ರಮದಲ್ಲಿ ತೆಲುಗು ಕೋಟ್ಯಾಧಿಪತಿ ಕಾರ್ಯಕ್ರಮ ವೀಕ್ಷಿಸುತ್ತಾ ಇರ್ತೀನಿ.. ನಿರೂಪಕರು ಯಾವ ರೀತಿ ಪ್ರಸೆಂಟ್ ಮಾಡ್ತಾರೆ ಅನ್ನೋದನ್ನು ನಾನು ಗಮನಿಸ್ತಿನಿ .. ನಾಗಾರ್ಜುನ ಸ್ಟೈಲ್ಸ್ ಸಹ ಮೋಸ್ಟ್ ಇಂಪ್ರೆಸಿವ್. ಅವರ ತಂದೆ ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಬಗ್ಗೆ ಹೇಳೋಷ್ಟೇ ಬೇಡ.. ನನ್ನ ಮೂಲ ಕೋಲಾರ.. ಸೊ ಅಲ್ಲಿ ಕನ್ನಡದ ಜೊತೆಗೆ ತೆಲುಗು ಭಾಷೆಯ ಪ್ರಭಾವ. ನಾವು ಬೆಂಗಳೂರಿನವರು ಆಗಾಗ ಅಲ್ಲಿಗೆ ಹೋದಾಗ ತೆಲುಗು ಸ್ಟಾರ್ಸ್ ಬಗ್ಗೆ ಹೇಳುವಾಗ ಆಶ್ಚರ್ಯ ಮತ್ತು ಅಸೂಯೆ :-) ಮದುವೆಗಳಲ್ಲಿ ನಾಗೇಶ್ವರ್ ರಾವ್ ಅವರ ಸಿನಿಮಾದ ಹಾಡುಗಳನ್ನು ಹಾಡ್ತಾ ಇದ್ರೆ ನಾವು ಅಣ್ಣಾವರ ಹಾಡುಗಳು ... :-)
ನಮ್ಮ ಅಮ್ಮ ಸುದೀಪ್ ಮತ್ತು ನಾಗ್ ಕಾರ್ಯಕ್ರಮಗಳನ್ನು ತಪ್ಪದೆ ಮತ್ತು ಇಷ್ಟಪಟ್ಟು ನೋಡ್ತಾರೆ ..
ನಾಳೆ ಬಂದ್ ಅಂತ ರಜ ಸಿಕ್ಕಿದೆ. ಒಂದಷ್ಟು ಟೀವಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶ.. ನನ್ನ ಬ್ಲಾಗ್ ಗೆ ಯಾರು ಸಿಕ್ತಾರೋ ನೋಡೋಣ !!
1 comment:
ರಂಜಾನ್ ಹಬ್ಬದ ದಿನ ನಮ್ಮ ವಾಹಿನಿಯಲೊಂದು ಉರ್ದೂ ಭಕ್ತಿ ಗೀತೆ ಬಂತು. ಭಾಷೆ ನನಗೆ ಬರದಿದ್ದರೂ ಆ ಗೀತೆಯು ಬಹಳ ಮೋಡಿ ಮಾಡಿತು.
ಈಗ ಸುದೀಪರ ನಡೆಯಲ್ಲಿ ಮೈಲುಗಲ್ಲು ನಿಜ. ಆದರೆ ಅದರಿಂದಲೇ ಅವರಿಗೆ ಸ್ಟಾರ್ಡಂ ಸಿಕ್ಕಿತು ಎನ್ನುವುದು ಅವರ ಕೆಟ್ಟ ವಿಮರ್ಷೆ!
ನೋಡೋಣ ಡೈರೆಕ್ಟರ್ ಸ್ಪೆಷಲ್ ಎಷ್ಟರಮಟ್ಟಿಗೆ ಕೆಲಸಮಾಡುತ್ತೇಂತ!
ನನಗೆ ಅಕ್ಕಿನೇನಿ ಎಂದರೆ : ’ಚಿಟ ಪಟ ಚಿನುಕುಲ ಮೇಳಂ - ತಟಿಪೊಡಿ ತಮಟಲ ತಾಳಂ’
ಸರಿ ಬಂದ್ ಯಶಸ್ವಿಯಾಯಿತೇ?
Post a Comment